Water source found on MARS:-


ಮಂಗಳನ ಅಂಗಳದಲ್ಲಿ ನೀರಿನ ಅಂಶ ಪತ್ತೆ

Posted by: Madhusoodhan Hegde

Updated: Tuesday, April 14, 2015, 17:46 [IST]

ಲಂಡನ್‌ ಏ. 14: ಮಂಗಳನ ಮೇಲ್ಪದರದಲ್ಲಿ ನೀರಿನ ಅಂಶ ಪತ್ತೆಯಾಗಿದೆ ಎಂದು ನಾಸಾದ ಕ್ಯೂರಿಯಾಸಿಟಿರೋವರ್ ಹೇಳಿದೆ. ಮಾನವನ ವಾಸದ ಸಾಧ್ಯತೆ ಬಗ್ಗೆ ಸಮಗ್ರ ಅಧ್ಯಯನ ನಡೆಸುತ್ತಿರುವ ಕ್ಯೂರಿಯಾಸಿಟಿ ಮಹತ್ವದ ಅಂಶ ಬಹಿರಂಗ ಮಾಡಿದೆ.

ಮೊದಲು ಮಂಗಳ ಗ್ರಹದಲ್ಲಿ ಅಪಾರ ಪ್ರಮಾಣದ ಮಂಜುಗಡ್ಡೆ ಪದರಗಳಿವೆ ಎಂದು ವಿಜ್ಞಾನಿಗಳು ತಿಳಿಸಿದ್ದರು. ಆದರೆ ಇದೀಗ ದ್ರವ ರೂಪದಲ್ಲಿಯೇ ನೀರು ಪತ್ತೆಯಾಗಿದೆ. ಮಣ್ಣಿನಲ್ಲಿ ನೀರಿನ ಅಂಶ ಪತ್ತೆಯಾಗಿದ್ದು ಇದು ಅಪಾರ ಪ್ರಮಾಣದ ಲವಣಾಂಶದಿಂದ ಕೂಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.[ಸೆಲ್ಫಿ ಕ್ಲಿಕ್ಕಿಸಿಕೊಂಡ ಕ್ಯೂರಿಯಾಸಿಟಿ]

ಮಂಗಳನಲ್ಲಿರುವ ಮಂಜುಗಡ್ಡೆ ಪ್ರಮಾಣ 15 ಸಾವಿರ ಕೋಟಿ ಕ್ಯುಬಿಕ್‌ ಮೀಟರ್‌ಗಳಷ್ಟಾಗಬಹುದು. ಮಂಗಳ ಮೇಲ್ಮೈಯಲ್ಲಿ ಇದನ್ನು ಹರಡಿದರೆ ಹೊಸ ಪದರವನ್ನೇ ಸೃಷ್ಟಿಸಬಹುದು ಎಂದು ಹೇಳಿದ್ದಾರೆ.[ಮಂಗಳನ ಅಂಗಳದಲ್ಲಿ ಕೆರೆ ಕಂಡ ಕ್ಯೂರಿಯಾಸಿಟಿ]

ಮಂಜುಗಡ್ಡೆ ಪದರಗಳ ಮೇಲೆ ದಪ್ಪ ಧೂಳಿನ ಪದರ ಇದೆ. ಈ ಪದರ ಮೇಲಿನಿಂದ ನಮಗೆ ಕಾಣುತ್ತಿದೆ. ಆದರೆ ಕೆಳಭಾಗದಲ್ಲಿ ಮಂಜುಗಡ್ಡೆಯಿದೆ. ಮಣ್ಣಿನಲ್ಲೂ ನೀರಿನ ಅಂಶ ಹೇರಳವಾಗಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ದೊಡ್ಡ ಸರೋವರವೊಂದು ಮಂಗಳನ ಮೇಲ್ಮೈ ಮೇಲಿತ್ತು ಎಂಬ ಕುರಿತಾಗಿಯೂ ದಾಖಲೆಗಳು ಲಭ್ಯವಾಗಿವೆ.[ರ್ರಿ.. ನಂಗೂ ಮಂಗಳ ಗ್ರಹಕ್ಕ ಕರಕೊಂಡ ಹೋಗರಿ]

  Read in English: Mars may hold liquid water: NASA

Story first published: Tuesday, April 14, 2015, 17:22 [IST]

English Summary

Mars may have liquid water close to its surface, according to new data from NASA's Curiosity rover which raises the chance of finding life on the red planet. Researchers have long known that there was water in the form of ice on Mars. Now, new research on data from Curiosity shows that it is possible that there is liquid water close to the surface of Mars.

Comments

Popular posts from this blog

KARNATAK STATE SSLC RESULT 2024

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*