ಭಾರತೀಯ ಬಾಲಕನಿಗೆ ಸಿಕ್ತು 11 ವರ್ಷಕ್ಕೆ ಪದವಿ !

ಭಾರತೀಯ ಬಾಲಕನಿಗೆ ಸಿಕ್ತು 11 ವರ್ಷಕ್ಕೆ ಪದವಿ !
(PSGadyal Teacher Vijayapur)

ಲಾಸ್‌ ಎಂಜಲೀಸ್ (ಪಿಟಿಐ): ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ 11 ವರ್ಷದ ಬಾಲಕ ಅಮೆರಿಕದ ವಿಶ್ವವಿದ್ಯಾಲಯವೊಂದರಿಂದ ಪದವಿ ಪಡೆದಿದ್ದಾರೆ.

ಕ್ಯಾಲಿಪೊರ್ನಿಯಾದ ತಾನಿಷ್ಕ್‌ ಅಬ್ರಹಾಂ ಅತಿ ಕಿರಿಯ ವಯಸ್ಸಿಗೆ ಪದವಿ ಪಡೆದ ಬಾಲಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಲ್ಲಿನ ಅಮೆರಿಕನ್‌ ರಿವರ್‌ ಕಾಲೇಜಿನಲ್ಲಿ ಅಬ್ರಹಾಂ ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು 1800 ವಿದ್ಯಾರ್ಥಿಗಳ ಜತೆ ಅಬ್ರಹಾಂ ತೇರ್ಗಡೆಯಾಗಿದ್ದಾರೆ.

ಓದಿನಲ್ಲಿ ಸದಾ ಮುಂದಿರುವ ಅಬ್ರಹಾಂ ಗಣಿತ, ವಿಜ್ಞಾನ ಮತ್ತು ವಿದೇಶಿ ಭಾಷೆಗಳ ಅಧ್ಯಯನ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಅಮೆರಿಕನ್‌ ರಿವರ್‌ ಕಾಲೇಜಿನ ಇತಿಹಾಸದಲ್ಲೇ ಅಬ್ರಹಾಂ ಅತಿ ಕಿರಿಯ ವಯಸ್ಸಿಗೆ ಪದವಿ ಪಡೆದಿರುವ ಕೀರ್ತಿಗೆ ಪಾತ್ರರಾಗಿದ್ದಾರೆ. ಅಬ್ರಹಾಂ ಅವರ ಸಾಧನೆಗೆ  ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈದ್ಯ ಅಥವಾ ವೈದ್ಯಕೀಯ ಸಂಶೋಧಕನಾಗುವ ಗುರಿಯನ್ನು ಹೊಂದಿರುವ ಅಬ್ರಹಾಂ ಅಮೆರಿಕದ ಅಧ್ಯಕ್ಷನಾಗುವ ಕನಸು ಕಟ್ಟಿಕೊಂಡಿದ್ದಾರೆ.

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

INCOME TAX CALCULATION 2025-26 for JAMAKHANDI BLOCK