ಶತಮಾನದ ಬಳಿಕ ಸಿಂಧದುರ್ಗ ಬಳಿ ಕಂಡ ನೀಲಿ ತಿಮಿಂಗಿಲ(1914-2015)
ಮುಂಬೈ (ಪಿಟಿಐ): ಮಹಾರಾಷ್ಟ್ರದ ಸಿಂಧದುರ್ಗ
ಕರಾವಳಿಯಲ್ಲಿ ಅಪರೂಪದ ಜೋಡಿ ನೀಲಿ
ತಿಮಿಂಗಿಲಗಳನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.
ಕಳೆದೊಂದು ಶತಮಾನದಲ್ಲಿ ಇದೇ
ಮೊದಲ ಬಾರಿಗೆ ಈ ಬಗೆಯ ತಿಮಿಂಗಿಲಗಳು
ಇಲ್ಲಿ ಕಂಡುಬಂದಿವೆ. ಇದು ತಾಯಿ ಮತ್ತು ಮರಿ ಇರುವ
ನೀಲಿ ತಿಮಿಂಗಿಲಗಳಾಗಿವೆ ಎಂದು ಅರಣ್ಯ
ಮುಖ್ಯ ಸಂರಕ್ಷಕ ಎನ್. ವಾಸುದೇವನ್ ತಿಳಿಸಿದ್ದಾರೆ.
ಮಹಾರಾಷ್ಟ್ರ ಕರಾವಳಿಯಲ್ಲಿ ಕಳೆದ ನೂರು ವರ್ಷಗಳಲ್ಲಿ ಇದೇ
ಮೊದಲ ಬಾರಿಗೆ ಈ ಜಾತಿ ತಿಮಿಂಗಿಲ
ಪತ್ತೆಯಾಗಿವೆ. 1914ರಲ್ಲಿ ನೀಲಿ ತಿಮಿಂಗಿಲಗಳು ಈ
ಪ್ರದೇಶದಲ್ಲಿ ಕೊನೆಯ ಬಾರಿ
ಕಂಡುಬಂದಿದ್ದವು.
ಮಾರ್ಚ್ನಿಂದ ಮೇ ತಿಂಗಳ ಅವಧಿಯಲ್ಲಿ
ಸಿಂಧುದುರ್ಗ ಕರಾವಳಿಯ ಮೂರು ಕಿ.ಮೀ.
ವ್ಯಾಪ್ತಿಯಲ್ಲಿ ಸಂಶೋಧಕರ ತಂಡಕ್ಕೆ
ತಿಮಿಂಗಿಲಗಳು ಗೋಚರಿಸಿವೆ. ಈ ಸಮಯದಲ್ಲಿ ನಾಲ್ಕು ಬ್ರೂಡಸ್
ಜಾತಿಯ ತಿಮಿಂಗಿಲಗಳೂ ಪತ್ತೆಯಾಗಿವೆ. ಸಿಂಧುದುರ್ಗ
ಕರಾವಳಿಯಲ್ಲಿ ಆರು ತಿಂಗಳಿನಿಂದ ತಿಮಿಂಗಿಲ
ಸಂಖ್ಯೆಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ
ತಂಡವು ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ
ಸಂಶೋಧನೆ ನಡೆಸುತ್ತಿದೆ.
Comments
Post a Comment