ಗಿನ್ನಿಸ್ ದಾಖಲೆ ಮುರಿದ ಒಬಾಮಾ ಟ್ವಿಟರ್ ಖಾತೆ
ಏಜೆನ್ಸೀಸ್ | May 20, 2015, 12.52Pm
ವಾಷಿಂಗ್ಟನ್: ಅತಿ ಕಡಿಮೆ ಅವಧಿಯಲ್ಲಿ ಟ್ವಿಟರ್ನಲ್ಲಿ
10ಲಕ್ಷಕ್ಕೂ ಹೆಚ್ಚು ಫಾಲೋಯರ್ಗಳನ್ನು
ಹೊಂದುವ ಮೂಲಕ ಅಮೆರಿಕ ಅಧ್ಯಕ್ಷ ಬರಾಕ್
ಒಬಾಮಾ ಗಿನ್ನಿಸ್ ದಾಖಲೆ ಸೃಷ್ಟಿಸಿದ್ದಾರೆ.
ಸ್ವಂತ ಟ್ವಿಟರ್ ಖಾತೆ ತೆರೆದ ಐದು ತಾಸಿನೊಳಗೆ
ಅವರ ಫಾಲೋಯರ್ಗಳ ಸಂಖ್ಯೆ 10 ಲಕ್ಷ ದಾಟಿದ್ದು,
ಪ್ರೆಸಿಡೆಂಟ್ ಆಫ್ ದಿ ಯುನೈಟೆಡ್ ಸ್ಟೇಟ್ಸ್ ಬರಾಕ್ ಒಬಾಮಾ ಅಥವಾ
@POTUS ಖಾತೆ ಮೂಲಕ ಒಬಾಮಾ ಜನರೊಂದಿಗೆ
ನೇರವಾಗಿ ಸಂಪರ್ಕದಲ್ಲಿರಲಿದ್ದಾರೆ ಎಂದು ಗಿನ್ನಿಸ್ ವಿಶ್ವ
ದಾಖಲೆ ತಿಳಿಸಿದೆ. 2016ರಲ್ಲಿ ಮುಂದಿನ ಅಧ್ಯಕ್ಷರಿಗೆ ಈ
ಖಾತೆ ವರ್ಗಾವಣೆ ಆಗಲಿದೆ.
ಟ್ವಿಟರ್ ಖಾತೆ ತೆರೆದ ಕೆಲವೇ ತಾಸುಗಳಲ್ಲಿ ವಿಶ್ವದ ನಾನಾ ಭಾಗಗಳ ಜನರು
ಒಬಾಮಾ ಅವರನ್ನು ಫಾಲೋ ಮಾಡಲು ಆರಂಭಿಸಿದ ಗ್ರಾಫಿಕ್ಅನ್ನು
ಟ್ವಿಟರ್ ಬಿಡುಗಡೆ ಮಾಡಿದೆ.
2014 ಏಪ್ರಿಲ್ನಲ್ಲಿ ಟ್ವಿಟರ್ಗೆ ಎಂಟ್ರಿ ನೀಡಿದ
ನಟ ರಾಬರ್ಟ್ ಡೌನಿ ಜೂನಿಯರ್ 24 ತಾಸಿಗೂ ಕಡಿಮೆ ಅವಧಿಯಲ್ಲಿ 10
ಲಕ್ಷ ಫಾಲೋಯರ್ಗಳನ್ನು ಹೊಂದುವ ಮೂಲಕ ಈ
ಮೊದಲು ಗಿನ್ನಿಸ್ ದಾಖಲೆ ಮಾಡಿದ್ದರು. ಒಬಾಮಾ ಈಗ
ಹಿಂದಿನ ದಾಖಲೆ ಮುರಿದಿದ್ದಾರೆ.
Comments
Post a Comment