ಬ್ಯಾಂಕ್ ಹುದ್ದೆ ಆಕಾಂಕ್ಷಿಗಳಿಗೆ ಸೈಕೊಮೆಟ್ರಿಕ್ ಪರೀಕ್ಷೆ
ಬ್ಯಾಂಕ್ ಹುದ್ದೆ ಆಕಾಂಕ್ಷಿಗಳಿಗೆ
ಸೈಕೊಮೆಟ್ರಿಕ್ ಪರೀಕ್ಷೆ
May 26,2015, 04.59am
ಹೊಸದಿಲ್ಲಿ: ಸಾರ್ವಜನಿಕ ಬ್ಯಾಂಕ್ಗಳ ಉನ್ನತ
ಮಟ್ಟದ ಹುದ್ದೆಗಳ ಆಕಾಂಕ್ಷಿಗಳಿಗೆ ಎರಡು ವಿಧದ
ಸೈಕೊ ಮೆಟ್ರಿಕ್ ಪರೀಕ್ಷೆಗಳನ್ನು ನಡೆಸಲು
ಸರಕಾರ ನಿರ್ಧರಿಸಿದೆ. ವಸೂಲಾಗದ ಸಾಲಗಳ
(ಅನುತ್ಪಾದಕ ಸಾಲ) ಹೊರೆಯಿಂದ
ಬಳಲುತ್ತಿರುವ ಬ್ಯಾಂಕ್ಗಳ ನಾಯಕತ್ವವನ್ನು
ಅಭ್ಯರ್ಥಿಗಳು ವಹಿಸಲು ಶಕ್ತರೇ ಎಂಬುದನ್ನು
ಪರಿಶೀಲಿಸುವುದು ಇದರ ಉದ್ದೇಶ ಎಂದು
ಮೂಲಗಳು ತಿಳಿಸಿವೆ.
ಅಭ್ಯರ್ಥಿಯ ಹಿನ್ನೆಲೆ ತಪಾಸಣೆ, ವೈಯಕ್ತಿಕ
ಸಂದರ್ಶನ, ವಿಷಯ ಪರಿಣತಿಯ ಪರೀಕ್ಷೆಯ
ಭಾಗವಾಗಿ ಸೈಕೊಮೆಟ್ರಿಕ್ ಕೂಡ ಇರಲಿದೆ.
ಪಂಜಾಬ್ ನ್ಯಾಶನಲ್ ಬ್ಯಾಂಕಚ ಮತ್ತು
ಬ್ಯಾಂಕ್ ಆಫ್ ಬರೋಡಾ ಸೇರಿದಂತೆ 5
ಪಿಎಸ್ಯು ಬ್ಯಾಂಕ್ಗಳ ವ್ಯವಸ್ಥಾಪಕ
ನಿರ್ದೇಶಕ ಮತ್ತು ಸಿಇಒ ಹುದ್ದೆಗಳಿಗೆ ನೇಮಕ
ಪ್ರಕ್ರಿಯೆ ನಡೆಯುತ್ತಿದ್ದು, ಸುಮಾರು 50
ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಸೈಕೊಮೆಟ್ರಿಕ್ ಪರೀಕ್ಷೆಯಲ್ಲಿ ಅಭ್ಯರ್ಥಿಯ
ನಾಯಕತ್ವ ಗುಣ, ಸಾಂದರ್ಭಿಕ ನಿರ್ಣಯ
ತೆಗೆದುಕೊಳ್ಳುವ ಸಾಮರ್ಥ್ಯ, ಒಟ್ಟಾರೆ
ವ್ಯಕ್ತಿತ್ವದ ಪರೀಕ್ಷೆ ನಡೆಯಲಿದೆ.
Comments
Post a Comment