ಹಸುವಿನ ಬಗ್ಗೆ ಸರಳ ಪ್ರಬಂಧ ಬರೆಯಲಾಗದ ಶಿಕ್ಷಕ: ಜಮ್ಮು -ಕಾಶ್ಮೀರ ಹೈಕೋರ್ಟಗೆ ನಿರಾಶೆ

ಹಸುವಿನ ಬಗ್ಗೆ ಸರಳ ಪ್ರಬಂಧ ಬರೆಯಲಾಗದ ಶಿಕ್ಷಕ:
ಜಮ್ಮು ಕಾಶ್ಮೀರ ಹೈಕೋರ್ಟ್ಗೆ ನಿರಾಸೆ
ಏಜೆನ್ಸೀಸ್ | May 16, 2015, 01.01PM IST
ಲೇಖನ
ಅನಿಸಿಕೆಗಳು (1)
1
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ
ಹೈಕೋರ್ಟ್ನಲ್ಲಿ ಅಪರೂಪದ
ಪ್ರಕರಣವೊಂದು ನಡೆದಿದ್ದು, ಶಿಕ್ಷಕನೊಬ್ಬ
ಹಸುವಿನ ಬಗ್ಗೆ ಸಂಕ್ಷಿಪ್ತ ಪ್ರಬಂಧ ಬರೆಯಲೂ
ವಿಫಲನಾಗಿ ಪೀಠಕ್ಕೆ ನಿರಾಸೆ, ಜುಗುಪ್ಸೆ
ಮೂಡಿಸಿದ್ದಾನೆ.
ಶಿಕ್ಷಕನ ಸಾಮರ್ಥ್ಯದ ಬಗ್ಗೆ ಸವಾಲು ಹಾಕಿ
ದೂರು ನೀಡಿದ್ದನ್ನು ಗಂಭೀರವಾಗಿ
ಪರಿಗಣಿಸಿದ ಹೈಕೋರ್ಟ್ ಆತನಿಗೆ ಸರಳ
ಪರೀಕ್ಷೆಗಳನ್ನು ಶುಕ್ರವಾರ ನೀಡಿತ್ತು.
ಅವೆಲ್ಲದರಲ್ಲೂ ಪರೀಕ್ಷಾರ್ಥಿ ಶಿಕ್ಷಕ
ವಿಫಲನಾಗಿದ್ದು ಕಂಡು ರಾಜ್ಯದ ಶಿಕ್ಷಣ
ವಲಯದಲ್ಲಿ ಬದಲಾವಣೆಗಳು
ಆಗಬೇಕಿರುವುದನ್ನು ಸಾಬೀತು ಪಡಿಸಿತು.
ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ
ಮುಝಫರ್ ಹುಸೇನ್ ಅತ್ತರ್ ಈ ಸಂಬಂಧ ರಾಜ್ಯ
ಸರಕಾರಕ್ಕೆ ಕೆಲವು ನಿರ್ದೇಶನಗಳನ್ನು
ನೀಡಿದ್ದಾರೆ.
ಆಗಿದ್ದಿಷ್ಟು:
ದಕ್ಷಿಣ ಕಾಶ್ಮೀರದ ಶಾಲೆಯೊಂದರಲ್ಲಿ
ರೆಹಬಾರ್ ತಾಲೀಮ್ ಎಂಬ ಹೆಸರಿನ ಶಿಕ್ಷಣ
ಮಾರ್ಗದರ್ಶಕ ಹುದ್ದೆಗೆ ಮೊಹಮ್ಮದ್ ಇಮ್ರಾನ್
ಖಾನ್ ಆಯ್ಕೆಯಾಗಿದ್ದ. ಆದರೆ ಆತನಿಗೆ ಆ ಹುದ್ದೆ
ನಿಭಾಯಿಸುವ ಯಾವುದೇ ಸಾಮರ್ಥ್ಯ ಇಲ್ಲ
ಎಂದು ಅರ್ಜಿದಾರನಿಗೆ ಅರಿವಾಗಿದೆ. ಆತ ನೌಕರಿ
ಗಿಟ್ಟಿಸಿಕೊಂಡಾಗ ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದ
ದಿಲ್ಲಿಯ ಪ್ರೌಢಶಿಕ್ಷಣ ಮಂಡಳಿ ಮತ್ತು
ನಾಗಾಲ್ಯಾಂಡ್ನ ಜಾಗತಿಕ ಮುಕ್ತ
ವಿಶ್ವವಿದ್ಯಾಲಯದ ಪ್ರಮಾಣಪತ್ರಗಳು ಖೊಟ್ಟಿ
ಎನ್ನುವುದು ಅರ್ಜಿದಾರನ ವಾದವಾಗಿತ್ತು.
ದಿಲ್ಲಿಯ ಪ್ರೌಢಶಿಕ್ಷಣ ಮಂಡಳಿ ಆತನಿಗೆ ಉರ್ದುವಿನಲ್ಲಿ
ಶೇ.74, ಇಂಗ್ಲಿಷ್ನಲ್ಲಿ ಶೇ.73, ಗಣಿತದಲ್ಲಿ ಶೇ.
66ರಷ್ಟು ಅಂಕಗಳನ್ನು ನೀಡಿತ್ತು.
ಅರ್ಜಿದಾರನ ವಾದ, ಸಾಕ್ಷಿಗಳನ್ನು ಗಮನಿಸಿದ
ಕೋರ್ಟ್ ಶಿಕ್ಷಕ ಖಾನ್ಗೆ ಕೋರ್ಟ್ನಲ್ಲೇ
ಸರಳವಾದ ಪರೀಕ್ಷೆ ನಡೆಸುವ ಹೊಣೆಯನ್ನು
ಹಿರಿಯ ನ್ಯಾಯವಾದಿಗೆ ವಹಿಸಿದರು. ಆರಂಭದಲ್ಲಿ
ಶಿಕ್ಷಕನಿಗೆ ಇಂಗ್ಲಿಷ್ನಿಂದ ಉರ್ದುವಿಗೆ, ಉರ್ದು
ಭಾಷೆಯಿಂದ ಇಂಗ್ಲಿಷ್ಗೆ ಭಾಷಾಂತರ
ಮಾಡಲು ಒಂದು ವಾಕ್ಯವನ್ನು
ನೀಡಲಾಯಿತು. ಅದರಲ್ಲಿ ಶಿಕ್ಷಕ
ಫೇಲಾಗಿದ್ದನ್ನು ಕಂಡು ಹಸುವಿನ ಬಗ್ಗೆ
ಉರ್ದುವಿನಲ್ಲಿ ಸಂಕ್ಷಿಪ್ತ ಪ್ರಬಂಧ ಬರೆಯಲು
ಸೂಚಿಸಲಾಯಿತು. ಶಿಕ್ಷಕನಿಗೂ ಅದೂ
ಸಾಧ್ಯವಾಗಲಿಲ್ಲ. ಆಗ ಆತ ತಮಗೆ ಕೋರ್ಟ್
ಹೊರಗೆ ಪರೀಕ್ಷೆ ಬರೆಯಲು ಅವಕಾಶ
ಕೋರಿದರು. ಅದಕ್ಕೂ ಕೋರ್ಟ್ ಅಸ್ತು
ಎಂದಿತು. ಶಿಕ್ಷಕ ಅಲ್ಲೂ ಸೋತಾಗ, ತಾನು
ಗಣಿತದಲ್ಲಿ ಚೆನ್ನಾಗಿದೆ ಎಂದು ವಾದಿಸಿದರು.
ಆತ ಕೋರ್ಟ್, ಶಿಕ್ಷಕನ ಗಣಿತ ಜ್ಞಾನ ಪರೀಕ್ಷೆಗೆ
ಅನುಮತಿ ನೀಡಿತು. ನಾಲ್ಕನೇ ತರಗತಿಯ ಗಣಿತ
ಸಮಸ್ಯೆಯೊಂದನ್ನು ನೀಡಲಾಯಿತು.
ಮೇಸ್ಟ್ರು ಮತ್ತೆ ಅನುತ್ತೀರ್ಣನಾಗಬೇಕೆ?
ಈ ಬೆಳವಣಿಗೆಯಿಂದ ನಿರಾಸೆ, ಜುಗುಪ್ಸೆಗೊಳಗಾದ
ಕೋರ್ಟ್, ಇಂಥ ಶಿಕ್ಷಕರಿಂದ ಕಲಿತ ವಿದ್ಯಾರ್ಥಿಗಳ
ಗತಿಯೇನು ಎಂದು ಆ ಶಿಕ್ಷಕನನ್ನು ನೇಮಕ
ಮಾಡಿದ ಶಿಕ್ಷಣ ಇಲಾಖೆಯನ್ನು ತರಾಟೆಗೆ
ತೆಗೆದುಕೊಂಡಿತು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು