ನೈಜೀರಿಯಾ ಅಧ್ಯಕ್ಷರಾಗಿ ಬುಹಾರ
ಅಬುಜಾ (ಎಎಪ್ಪಿ): ಸೇನಾ ಗೌರವದೊಂದಿಗೆ
ನೈಜೀರಿಯಾದ ನೂತನ ಅಧ್ಯಕ್ಷರಾಗಿ
ಮುಹಮ್ಮದ್ ಬುಹಾರಿ ಅವರು ಪ್ರಮಾಣ ವಚನ
ಸ್ವೀಕರಿಸಿದರು.
ಅಧ್ಯಕ್ಷೀಯ ಚುನಾವಣೆಯಲ್ಲಿ ಮೊದಲ
ಬಾರಿಗೆ ಆಡಳಿತ ಪಕ್ಷದ ಅಭ್ಯರ್ಥಿ ಸೋಲು
ಅನುಭವಿಸಿದ್ದು, ವಿರೋಧ ಪಕ್ಷದ ಅಭ್ಯರ್ಥಿ
ಬುಹರಿ ಜಯಗಳಿಸುವ ಮೂಲಕ
ಅಧ್ಯಕ್ಷರಾಗಿದ್ದಾರೆ.
72 ವರ್ಷದ ಬುಹಾರಿ ಅವರಿಗೆ ನೈಜಿರಿಯಾ
ಸುಪ್ರೀಂಕೋರ್ಟ್ನ ಮುಖ್ಯ
ನ್ಯಾಯಮೂರ್ತಿ ಪ್ರಮಾಣ ವಚನ
ಬೋಧಿಸಿದರು. ಆರ್ಥಿಕ ಸಂಕಷ್ಟ ಮತ್ತು
ಬೊಕೊ ಹರಮ್ ಉಗ್ರಗಾಮಿಗಳ ಉಪಟಳದಿಂದ
ದೇಶ ತತ್ತರಿಸಿದ್ದು, ನೂತನ ಅಧ್ಯಕ್ಷರಿಗೆ ಈ
ಎರಡೂ ಸಮಸ್ಯೆಗಳು ಸವಾಲಾಗಿವೆ.
Comments
Post a Comment