ಐಸಿಎಸ್ ಸಿ: ದೇಶದಲ್ಲಿ ಕರ್ನಾಟಕದ ವಿದ್ಯಾರ್ಥಿಗಳೇ ಬೆಸ್ಟ್.
ಐಸಿಎಸ್ ಸಿ: ದೇಶದಲ್ಲಿ ಕರ್ನಾಟಕದ ವಿದ್ಯಾರ್ಥಿಗಳೇ ಬೆಸ್ಟ್.
(PSGadyal Teacher Vijayapur )
ಬೆಂಗಳೂರು, ಮೇ 18: ಕರ್ನಾಟಕದ ವಿದ್ಯಾರ್ಥಿಗಳು ಐಸಿಎಸ್ ಸಿ(10 ನೇ ತರಗತಿ) ಐಸಿಎಸ್(12 ನೇ ತರಗತಿ) ವಿಭಾಗದಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ. ಇಡೀ ದೇಶಕ್ಕೆ ಹೋಲಿಸಿದರೆ ರಾಜ್ಯದ ವಿದ್ಯಾರ್ಥಿಗಳ ಶೇಕಡಾವಾರು ಸಾಧನೆಯೇ ಅಧಿಕವಾಗಿದೆ. ರಾಜ್ಯದ 99.67 ವಿದ್ಯಾರ್ಥಿಗಳು ಐಸಿಎಸ್ ಸಿಯಲ್ಲಿ ತೇರ್ಗಡೆಯಾಗಿದ್ದು ಇದು ದೇಶದ ಶೇ. 98.49 ಕ್ಕೂ ಅಧಿಕವಾಗಿದೆ.
ಇನ್ನು ಐಸಿಎಸ್ ವಿಭಾಗದಲ್ಲಿ ಶೇ. 98.61 ಸಾಧನೆ ಮಾಡಿದ್ದು ದೇಶದಲ್ಲಿ ಶೇ. 96.28 ಜನ ಪಾಸಾಗಿದ್ದಾರೆ. ಇಲ್ಲೂ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ರಾಜ್ಯದ ಶೇ. 99.75 ಬಾಲಕಿರು ಪಾಸ್ ಆಗಿದ್ದರೆ, ಪರೀಕ್ಷೆ ಬರೆದ ಶೇ. 99.59 ಬಾಲಕರು ಉತ್ತೀರ್ಣರಾಗಿದ್ದಾರೆ. ಬೆಂಗಳೂರಿನ ಗ್ರೀನ್ ವುಡ್ ವಿದ್ಯಾಲಯದ ಅನುರಾಗ್ ಆದಿತ್ಯ ಶರ್ಮಾ ಮತ್ತು ಪಲ್ಲವಿ ವಿ ಮೆನನ್ ಶೇ. 98.80 ಸ್ಕೋರ್ ಮಾಡಿ ದೇಶದಲ್ಲೇ ಐಸಿಎಸ್ ಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಹೆಬ್ಬಾಳದ ವಿದ್ಯಾನಿಕೇತನ ಶಾಲೆ ವಿದ್ಯಾರ್ಥಿನಿ ಎಸ್. ಕಾವ್ಯಾ ಶೇ.99.50 ಸಾಧನೆ ಮಾಡಿದ್ದು ಐಎಸ್ ಸಿ ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.
Comments
Post a Comment