ಬೆಂಗಳೂರಿನ ಛಾಯಾಚಿತ್ರಗಾರ ಹ ಸ ಬ್ಯಾಕೋಡರಿಗೆ ರಾಷ್ಟ್ರೀಯ ಪ್ರಶಸ್ತಿ
ಕೆ.ಆರ್.ಪುರ,ಮೇ23-ಪಶ್ಚಿಮ ಬಂಗಾಳದ
ಬರೊಬಿಶಾದಲ್ಲಿನ ನಡೆದ ರಾಷ್ಟ್ರೀಯ
ಛಾಯಾಚಿತ್ರ ಸ್ಪರ್ಧೆಯಲ್ಲಿ ಬೆಂಗಳೂರಿನ ಹ.ಸ.
ಬ್ಯಾಕೋಡ ಅವರಿಗೆ ಎರಡು ಪ್ರಶಸ್ತಿಗಳು ಲಭಿಸಿವೆ.
ವನ್ಯಜೀವಿ ವಿಭಾಗದಲ್ಲಿ ಬೆಸ್ಟ್ ಬರ್ಡ್ ಅವಾರ್ಡ್
ಜೇನುಕುಟುಕ ಹಕ್ಕಿಗಳ ಮಿಲನ ಚಿತ್ರಕ್ಕೆ ವಿಶೇಷ
ಪ್ರಶಸ್ತಿ ಲಭಿಸಿದೆ.
ಕಪ್ಪುಬಿಳುಪು (ಬ್ಲ್ಯಾಕ್ ಆಂಡ್ ವೈಟ್)
ವಿಭಾಗದ ಮತ್ತೊಂದು ಸ್ಪರ್ಧೆಯಲ್ಲಿ ಅಂತಿಮ
ಸ್ಪರ್ಶ ಶೀರ್ಷಿಕೆಯ ಚಿತ್ರಕ್ಕೆ ಸರ್ಟಿಫಿಕೇಟ್ ಆಫ್ ಮೆರಿಟ್
ಪ್ರಶಸ್ತಿ ಲಭಿಸಿದೆ. ಬರೊಬಿಶಾದ ಷಟರ್ ಸ್ಪೀಡ್
ಫೋಟೋ ಕ್ಲಬ್ ಸಂಸ್ಥೆ ಏರ್ಪಡಿಸಿದ್ದ
ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಗೆ ಎರಡು
ಸಾವಿರಕ್ಕೂ ಹೆಚ್ಚು ಛಾಯಾಚಿತ್ರಗಳು
ಬಂದಿದ್ದವು. ಅದರಲ್ಲಿ ಹ.ಸ. ಬ್ಯಾಕೋಡ ಅವರ
ಒಟ್ಟು ಹತ್ತು ಛಾಯಾಚಿತ್ರಗಳು
ರಾಷ್ಟ್ರೀಯ ಪ್ರದರ್ಶನಕ್ಕೆ ಆಯ್ಕೆಯಾಗಿವೆ.
ಮುಂದಿನ ಜೂನ್ ತಿಂಗಳ ಮೊದಲ ವಾರದಲ್ಲಿ
ಬರೊಬಿಶಾದಲ್ಲಿ ಪ್ರಶಸ್ತಿ ವಿಜೇತ
ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ.
ಅಂತಾರಾಷ್ಟ್ರೀಯ ಛಾಯಾಗ್ರಾಹಕರಾದ
ಸುಬ್ರತಾ ದಾಸ್, ಅಭಿಜೀತ್ ದೇ, ಸಂತೋಷ
ಕುಮಾರ್ ಜಾನಾ ಹಾಗೂ ಅಮಿಥಾಬ್ ಸಿಲ್
ಸ್ಪರ್ಧೆಯ ನಿರ್ಣಾಯಕರಾಗಿದ್ದರು.
Comments
Post a Comment