ಜಾರ್ಖಂಡ್‌ ಮೊದಲ ಮಹಿಳಾ ರಾಜ್ಯಪಾಲರಾಗಿ ದ್ರೌಪದಿ ಮುರ್ಮು. (PSG)

ಜಾರ್ಖಂಡ್‌ ಮೊದಲ ಮಹಿಳಾ ರಾಜ್ಯಪಾಲರಾಗಿ ದ್ರೌಪದಿ ಮುರ್ಮು. (PSG)

ರಾಂಚಿ: ದ್ರೌಪದಿ ಮುರ್ಮು ಅವರು ಜಾರ್ಖಂಡ್‌ನ‌ ಮೊದಲ ಮಹಿಳಾ ರಾಜ್ಯಪಾಲರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮುರ್ಮು ಅವರು ಸೈಯದ್‌ ಅಹ್ಮದ್‌ ಅವರ ಉತ್ತರಾಧಿಕಾರಿಯಾಗಿದ್ದಾರೆ. ಸೈಯದ್‌ ಅಹ್ಮದ್‌ ಅವರು ಮಣಿಪುರ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಒಡಿಶಾದ ಎರಡು ಬಾರಿಯ ಬಿಜೆಪಿ ಶಾಸಕಿಯಾಗಿರುವ ಮುರ್ಮು ಅವರು ನವೀನ್‌ ಪಟ್ನಾಯಕ್‌ ಅವರ ಸಚಿವ ಸಂಪುಟದಲ್ಲಿ ಸಚಿವೆಯಾಗಿದ್ದರು. ಆಗ ಬಿಜೆಪಿಯ ಬೆಂಬಲದಲ್ಲಿ ಬಿಜು ಜನತಾ ದಳವು ರಾಜ್ಯವನ್ನು ಆಳುತ್ತಿತ್ತು.

ಮುರ್ಮು ಅವರು ಒಡಿಶಾದ ಮಯೂರ್‌ಭಂಜ್‌ ಜಿಲ್ಲೆಯ ಬಿಜೆಪಿ ಘಟಕದ ಅಧ್ಯಕ್ಷೆಯಾಗಿದ್ದರಲ್ಲದೆ ಒಡಿಶಾ ವಿಧಾನಸಭೆಯ ರಾಯಿರಂಗಪುರ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಜಾರ್ಖಂಡ್‌ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ವೀರೇಂದ್ರ ಸಿಂಗ್‌ ಅವರು ಜಾರ್ಖಂಡ್‌ ರಾಜ್ಯಪಾಲೆಯಾಗಿರುವ ಮುರ್ಮು ಅವರಿಗೆ ಪ್ರಮಾಣ ವಚನ ಬೋಧಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಜಾರ್ಖಂಡ್‌ ಮುಖ್ಯಮಂತ್ರಿ ರಘುವರದಾಸ್‌, ಅವರ ಸಂಪುಟ ಸದಸ್ಯರು, ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್‌ ಮತ್ತು ಅರ್ಜುನ್‌ ಮುಂಡಾ ಹಾಗೂ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದರು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು