ಬೆಂಗಳೂರು ಶಿಕ್ಷಕರಿಗೆ ಅಮೆರಿಕದದಲ್ಲಿ ಬಾಹ್ಯಾಕಾಶ ತರಬೇತಿ

ಬೆಂಗಳೂರು ಶಿಕ್ಷಕರಿಗೆ ಅಮೆರಿಕದದಲ್ಲಿ ಬಾಹ್ಯಾಕಾಶ ತರಬೇತಿ
(PSGadyal Teacher Vijayapur ).

ಬೆಂಗಳೂರು, ಜು, 22: ನಗರದ ನಾಲ್ಕು ಜನ ಶಿಕ್ಷಕರು ಅಮೆರಿಕಕ್ಕೆ ತೆರಳಿ ಬಾಹ್ಯಾಕಾಶ ವಿಜ್ಞಾನದಲ್ಲಿ ಅನುಭವ ಮತ್ತು ತರಬೇತಿ ಪಡೆದು ಹಿಂದಿರುಗಿದ್ದಾರೆ. ಅಮೆರಿಕದ ಅಲಬಾಮಾದ ಹಂಟ್ಸ್ ವಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಯುಎಸ್ ಅಂತರಿಕ್ಷ ಕಾರ್ಯಾಗಾರದಲ್ಲಿ ಭಾಗವಹಿಸಿ ಹಿಂದಿರುಗಿದ್ದಾರೆ,
ಕೇವಲ ಬಾಹ್ಯಾಕಾಶದ ಬಗ್ಗೆ ತಿಳಿವಳಿಕೆ ಮಾತ್ರವಲ್ಲದೇ, ಚಂದ್ರನ ಮೇಲೆ ಕಾಲಿಟ್ಟರೆ ಯಾವ ರೀತಿಯಾಗುತ್ತದೆ ಎಂಬ ಅನುಭವವನ್ನು ಪಡೆದುಕೊಂಡು ಬಂದಿದ್ದಾರೆ.

ಕಾರ್ಯಾಗಾರದಲ್ಲಿ 200 ಜನ ಶಿಕ್ಷಕರು ಭಾಗವಹಿಸಿದ್ದರು.

ಜೂನ್ 10 ರಂದು ಕಾರ್ಯಾಗಾರ ಆರಂಭಗೊಂಡಿತ್ತು. ವಿಜ್ಞಾನ ಮತ್ತು ಗಣಿತಕ್ಕೆ ಸಂಬಂಧಿಸಿ ಇಲ್ಲಿ ಕಲಿತ ಹೊಸ ಸಂಗತಿಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರೆ ಗುಣಮಟ್ಟದ ಶಿಕ್ಷಣಕ್ಕೆ ಮತ್ತೊಂದು ಅಂಕ ಸಿಕ್ಕ ಹಾಗೆ ಆಗುತ್ತದೆ ಎಂದು ಹಿಂದಿರುಗಿದ ಶಿಕ್ಷಕರು ಅಭಿಪ್ರಾಯ ಹಂಚಿಕೊಂಡರು.

ಹನಿ ವೆಲ್ ಸಂಸ್ಥೆ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಂತರಿಕ್ಷಯಾನದ ಘಟನಾವಳಿಗಳು, ಬದಲಾವಣೆ, ರಾಕೆಟ್ ತಂತ್ರಜ್ಞಾನ ಹೀಗೆ ಹತ್ತು ಹಲವು ಸಂಗತಿಗಳ ಬಗ್ಗೆ ಮಾಹಿತಿ ನೀಡಲಾಯಿತು.
ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗೆ ವಿಜ್ಞಾನದ ಬೆಳವಣಿಗೆಗಳ ಸೂಕ್ತ ಪರಿಕಲ್ಪನೆ ಇದ್ದರೆ ಮಾತ್ರ ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ಹೇಳಲು ಸಾಧ್ಯ. ನಾವು ಪಡೆದುಕೊಂಡು ಬಂದಿರುವ ಜ್ಞಾನವನ್ನು ಮಕ್ಕಳಿಗೆ ಹಂಚುತ್ತೇವೆ ಎಂದು ತರಬೇತಿ ಪಡೆದು ಆಗಮಿಸಿದ ವಾಣಿ ಇಂಟರ್ ನ್ಯಾಶನಲ್ ಶಾಲೆಯ ಗಣಿತ ಶಿಕ್ಷಕಿ ಸುಭಾಶ್ರೀ ಚಂದ್ರಶೇಖರನ್ ತಿಳಿಸಿದರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

INCOME TAX CALCULATION 2022-23 IN A CLICK