E-SIMCARD:Samsung and others look to create a single e - SIM card for all carriers

ಶೀಘ್ರವೇ ಸಿಮ್ ಕಾರ್ಡ್ ಜಾಗಕ್ಕೆ ಇ-ಸಿಮ್?
ಲಂಡನ್: ಪೇಜರ್, ಕಾರ್ ಫೋನ್ ನಂತೆಯೇ ಸಿಮ್
ಕಾರ್ಡ್ ಕೂಡ ಶೀಘ್ರದಲ್ಲೇ ಇತಿಹಾಸದ ಪುಟ
ಸೇರಲಿದೆ.
ಸಿಮ್ ಕಾರ್ಡ್ಗಳ ಜಾಗದಲ್ಲಿ ಇ-ಸಿಮ್ ಗಳನ್ನು ತರಲು
ಆ್ಯಪಲ್ ಮತ್ತು ಸ್ಯಾಮ್ ಸಂಗ್ ಚಿಂತನೆ
ನಡೆಸುತ್ತಿದೆ. ಮೊಬೈಲ್ ಟೆಲಿಕಾಂ
ಇಂಡಸ್ಟ್ರಿಯನ್ನು ಪ್ರತಿನಿಧಿಸುತ್ತಿರುವ
ಜಿಎಸ್ಎಂಎ ಜತೆ ಈ ಎರಡೂ
ಮೊಬೈಲ್ ಸಂಸ್ಥೆಗಳು ಈ ಬಗ್ಗೆ
ಮಾತುಕತೆ ನಡೆಸುತ್ತಿದೆ ಎಂದು ಡೈಲಿ ಮೇಲ್ ವರದಿ
ಮಾಡಿದೆ.
ಎಲೆಕ್ಟ್ರಾನಿಕ್ ಸಿಮ್ ಕಾರ್ಡ್ಗಳ ಬಳಕೆಯು ಬಹಳ
ಸರಳವಾಗಿದ್ದು, ಗ್ರಾಹಕರು ಸುಲಭವಾಗಿ
ಮೊಬೈಲ್ ನೆಟ್ ವರ್ಕ್ಗಳನ್ನು ಅದಲು
ಬದಲು ಮಾಡಬಹುದು. ಐಪ್ಯಾಡ್ ಏರ್ 2
ಜೊತೆಗೆ ಬಿಡುಗಡೆಯಾದ ಆ್ಯಪಲ್
ಸಿಮ್ ನಲ್ಲಿ ಬಳಸಲಾದ ತಂತ್ರಜ್ಞಾನದ
ಮಾದರಿಯನ್ನೇ ಇ-ಸಿಮ್ ನಲ್ಲೂ ಬಳಸಲಾಗುತ್ತದೆ.
ಹೀಗಾಗಿ ಗ್ರಾಹಕರು ಡಾಟಾ ನೆಟ್ವರ್ಕ್ ಅನ್ನು
ಸುಲಭವಾಗಿ ವಿನಿಮಯ ಮಾಡಿಕೊಳ್ಳ
ಬಹುದು. ಇ-ಸಿಮ್ ಅನ್ನು ಸ್ಮಾರ್ಟ್ ಫೋನ್ ಅಥವಾ
ಟ್ಯಾಬ್ಲೆಟ್ನಲ್ಲೂ ಬಳಸಬಹುದಾಗಿದೆ. ಮುಂದಿನ
ತಲೆಮಾರಿನ ಎಲ್ಲ ಫೋನುಗಳೂ ಇ-ಸಿಮ್ಅನ್ನು
ಒಳಗೊಂಡಿರಲಿದೆ. 2016ರ
ವೇಳೆಗೆ ಹೊಸ ಸಿಮ್ ಚಾಲ್ತಿಗೆ ಬರಬಹುದು
ಎಂದು ಜಿಎಸ್ಎಂಎ ತಿಳಿಸಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

INCOME TAX CALCULATION 2022-23 IN A CLICK