Mandya ZP CEO Rohini Sindhuri launches M-Aasthi android app to issue land records and to put and end to delay in providing land records to rural areas. M aasthi is an Android-based mobile application in the district.

ಎಂ- ಆಸ್ತಿ ಅಪ್ ಮೂಲಕ ಇ ಖಾತಾ
ಪಡೆಯಿರಿ: ರೋಹಿಣಿ
Posted by: Mahesh
| Fri, Jul 24, 2015, 17:24 [IST]
ಮಂಡ್ಯ, ಜುಲೈ 24: ಮಂಡ್ಯ
ಜಿಲ್ಲಾ ಪಂಚಾಯತ್ ಮುಖ್ಯ
ಕಾರ್ಯನಿರ್ವಹಣಾಧಿಕಾರಿ ರೋಹಿಣಿ
ಸಿಂಧೂರಿ ಅವರು ಗ್ರಾಮೀಣ
ಭಾಗದಲ್ಲಿ ಆಸ್ತಿ ಪತ್ರ ಪಡೆಯಲು ಈಗ
ಸುಲಭ ಹಾಗೂ ಸರಳ ವಿಧಾನವನ್ನು
ಪರಿಚಯಿಸಿದ್ದಾರೆ. ಮೊಬೈಲ್
ಅಪ್ಲಿಕೇಷನ್ ಮೂಲಕ ಆಸ್ತಿ ಪಾಸ್ತಿಗೆ
ಸಂಬಂಧಿಸಿದ ದಾಖಲೆಗಳನ್ನು
ಪಡೆದುಕೊಳ್ಳಬಹುದಾಗಿದೆ.
ಎಂ ಆಸ್ತಿ ಎಂಬ ಹೆಸರಿನ ಮೊಬೈಲ್
ಅಪ್ಲಿಕೇಷನ್ ಸದ್ಯಕ್ಕೆ ಆಂಡ್ರಾಯ್ಡ್
ಮೊಬೈಲ್ ಫೋನಿನಲ್ಲಿ
ಲಭ್ಯವಿದ್ದು, ಸುಲಭವಾಗಿ ಆಸ್ತಿ
ಪಾಸ್ತಿ ದಾಖಲೆಗಳನ್ನು ಸಂಬಂಧಿಸಿದ
ಇಲಾಖೆಗಳಿಂದ
ಪಡೆದುಕೊಳ್ಳಬಹುದಾಗಿದೆ ಎಂದು
ರೋಹಿಣಿ ಹೇಳಿದ್ದಾರೆ.

ರಾಜ್ಯದಲ್ಲಿ ಇದೇ ಮೊದಲ
ಬಾರಿಗೆ ಭೂ ದಾಖಲೆಗಳ ಕುರಿತಂತೆ
ವಿನ್ಯಾಸಗೊಂಡಿರುವ
ಅಪ್ಲಿಕೇಷನ್ ಇದಾಗಿದೆ. ಈ ಎಂ -ಆಸ್ತಿ
ಅಪ್ಲಿಕೇಷನ್ ಬಳಸಿಕೊಂಡು
ಸುಲಭವಾಗಿ ಇ ಖಾತಾವನ್ನು
ಪಡೆದುಕೊಳ್ಳಬಹುದು ಎಂದು
ರೋಹಿಣಿ ವಿವರಿಸಿದರು.
ಮಂಡ್ಯ ಜಿಲ್ಲೆಯಲ್ಲಿ ಶೌಚಾಲಯ
ನಿರ್ಮಾಣದಲ್ಲಿ ಹೊಸ ಯಶಸ್ಸು
ಸಾಧಿಸಿ ರಾಷ್ಟ್ರಮಟ್ಟದಲ್ಲಿ ಸಿಇಒ
ರೋಹಿಣಿ ಅವರು ಮಾನ್ಯತೆ
ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಎಂ-ಆಸ್ತಿ ಅಪ್ಲಿಕೇಷನ್ ಡೌನ್ ಲೋಡ್
ಮಾಡಿಕೊಳ್ಳಿ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

INCOME TAX CALCULATION 2022-23 IN A CLICK