ಮಂಗಳನಲ್ಲಿನ ಕಣಿವೆಯ 3ಡಿ ಫೋಟೋಗಳನ್ನು ಇಸ್ರೋಗೆ ಕಳಿಸಿದ ಮಾಮ್: ಮಂಗಳನಲ್ಲಿನ 5 ಸಾವಿರ ಕಿಮೀ ಉದ್ದದ ಕಣಿವೆಯ ಫೋಟೋಗಳನ್ನು ಭೂಮಿಗೆ ರವಾನಿಸಿದೆ

: ನವದೆಹಲಿ: ಭಾರತೀಯ ಬಾಹ್ಯಾಕಾಶ
ಸಂಶೋಧನಾ ಕೇಂದ್ರದ
ಮಹತ್ವಾಕಾಂಕ್ಷಿಯ ಮಾರ್ಸ್ ಆರ್ಬಿಟರ್ ಮಿಷನ್
ಅಥವಾ ಮಂಗಳಯಾನ, ಮಂಗಳನಲ್ಲಿನ
ಕೆಲವೊಂದು 3ಡಿ ಚಿತ್ರಗಳನ್ನು
ಇಸ್ರೋ ಸಂಸ್ಥೆಗೆ ಕಳುಹಿಸಿದೆ.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ
ಮಂಗಳಯಾನ ಮಂಗಳನಲ್ಲಿನ 5 ಸಾವಿರ
ಕಿಮೀ ಉದ್ದದ ಕಣಿವೆಯ ಫೋಟೋವನ್ನು
ಭೂಮಿಗೆ ರವಾನಿಸಿದೆ. ಮಂಗಳಯಾನದಲ್ಲಿ
ಅಳವಡಿಸಿರುವ ಮಾರ್ಸ್ ಕಲರ್ಸ್ ಕ್ಯಾಮೆರಾ ಮೂರು
ವಿಭಿನ್ನ ರೀತಿಯ 3ಡಿ ಚಿತ್ರಗಳನ್ನು
ಸೆರೆಹಿಡಿದಿದೆ.
ಜುಲೈ 19 ರಂದು ಮಂಗಳನಿಂದ
1857 ಕಿಮೀ ದೂರದಲ್ಲಿದ್ದ ವೇಳೆ ಈ
ಫೋಟೋವನ್ನು ಸೆರೆ ಹಿಡಿದಿದೆ. ಇದೇ ವರ್ಷದ
ಆರಂಭದಲ್ಲಿ ಮಂಗಳಯಾನ ಹಲವು
ಚಿತ್ರಗಳನ್ನು ಭೂಮಿಗೆ ರವಾನಿಸಿತ್ತು.
ಕೇವಲ 450 ಕೋಟಿ ರುಪಾಯಿ ವೆಚ್ಚದಲ್ಲಿ
ನಿರ್ಮಿಸಲಾಗಿದ್ದ ಮಾರ್ಸ್ ಆರ್ಬಿಟರ್ ಮಿಷನ್ 2013
ನವೆಂಬರ್ 5ರಂದು
ಆಂಧ್ರಪ್ರದೇಶದ ಸತೀಶ್ ಧವನ್
ಉಡಾವಣಾ ಕೇಂದ್ರದಿಂದ ಉಡಾವಣೆಯಾದ
ಮಾಮ್ 2014 ಸೆಪ್ಟೆಂಬರ್ 24ರಂದು
ಯಶಸ್ವಿಯಾಗಿ ಮಂಗಳ ಗ್ರಹದ ಕಕ್ಷೆಗೆ
ಸೇರಿತು. ಆ ಮೂಲಕ ಇಡೀ ವಿಶ್ವದ ಯಾವುದೇ
ದೇಶ ಮಾಡದ ಸಾಧನೆಯನ್ನು ಇಸ್ರೋ ಮಾಡಿ ತೋರಿಸಿತ್ತು.
ಮೊದಲ ಯತ್ನದಲ್ಲೇ
ಮಂಗಳಯಾನ
ಯಶಸ್ವಿಗೊಳಿಸಿದ ಏಕೈಕ
ರಾಷ್ಟ್ರವೆಂಬ ಖ್ಯಾತಿ ಭಾರತಕ್ಕೆ ಲಭಿಸಿತು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು