SDA/FDA 2,464 ಹುದ್ದೆ, 19 ಲಕ್ಷ ಅರ್ಜಿ! ಪರೀಕ್ಷೆ ನಡೆಸುವ ಸವಾಲು ಕೆಪಿಎಸ್ಸಿ ಮುಂದಿದೆ

ಬೆಂಗಳೂರು: ಹುದ್ದೆಗಳಿರುವುದು
2,464. ಅರ್ಜಿಗಳು ಬಂದಿರುವುದು
19 ಲಕ್ಷ! ಅಂದರೆ, ಒಂದು ಹುದ್ದೆಗೆ
ಸರಾಸರಿ 771 ಆಕಾಂಕ್ಷಿಗಳು!
ಸಚಿವಾಲಯ ಮತ್ತು ಸರ್ಕಾರದ ವಿವಿಧ
ಇಲಾಖೆಗಳಿಗೆ ಪ್ರಥಮ ದರ್ಜೆ ಸಹಾಯಕ
(ಎಫ್ಡಿಎ) ಮತ್ತು ದ್ವಿತೀಯ ದರ್ಜೆ
ಸಹಾಯಕರ (ಎಸ್ಡಿಎ) ನೇಮಕಾತಿಗಾಗಿ
ಕರ್ನಾಟಕ ಲೋಕಸೇವಾ
ಆಯೋಗವು (ಕೆಪಿಎಸ್ಸಿ) ನಡೆಸಲಿರುವ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 19 ಲಕ್ಷ
ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಸಾಮಾನ್ಯವಾಗಿ ಎಫ್ಡಿಎ, ಎಸ್ಡಿಎ
ಹುದ್ದೆಗಳಿಗೆ ಆರರಿಂದ ಏಳು ಲಕ್ಷ
ಮಂದಿ ಅರ್ಜಿ ಸಲ್ಲಿಸುತ್ತಾರೆ. ಈ ಬಾರಿ
ಹೆಚ್ಚೆಂದರೆ 10 ಲಕ್ಷ ಅರ್ಜಿಗಳು
ಬರಬಹುದು ಎಂದು ಕೆಪಿಎಸ್ಸಿ
ಅಧಿಕಾರಿಗಳು ನಿರೀಕ್ಷಿಸಿದ್ದರು. ಆದರೆ
ಅವರ ನಿರೀಕ್ಷೆಯನ್ನು ಮೀರಿ
ಅರ್ಜಿಗಳು ಬಂದಿವೆ.
ಕೆಪಿಎಸ್ಸಿಯು 2,464 ಹುದ್ದೆಗಳ
ನೇಮಕಾತಿ ಪ್ರಕ್ರಿಯೆಯನ್ನು
ಜುಲೈ 3 ರಂದು ಆರಂಭಿಸಿತ್ತು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು
ಅಭ್ಯರ್ಥಿಗಳಿಗೆ ಆಗಸ್ಟ್ 1ನೇ
ತಾರೀಖಿನವರೆಗೆ ಅವಕಾಶ ಕಲ್ಪಿಸಿತ್ತು.
ಪರೀಕ್ಷೆ ಅಕ್ಟೋಬರ್ನಲ್ಲಿ ನಡೆಯಲಿದೆ.
ಆದರೆ, ದಿನಾಂಕ ಇನ್ನೂ
ನಿಗದಿಯಾಗಿಲ್ಲ.
ಉತ್ತರ ಕರ್ನಾಟಕದಿಂದ ಹೆಚ್ಚು ಅರ್ಜಿ:
ಈ ಬಾರಿ, ಉತ್ತರ ಕರ್ನಾಟಕ
ಭಾಗದಿಂದಲೂ ಹೆಚ್ಚು ಅರ್ಜಿಗಳು
ಬಂದಿವೆ. ವಿಜಯಪುರ, ಕಲಬುರ್ಗಿ
ಜಿಲ್ಲೆಗಳಿಂದ ಬಂದಿರುವ ಅರ್ಜಿಗಳ
ಸಂಖ್ಯೆಯೇ 2 ಲಕ್ಷ ದಾಟಿದೆ.
ಹೆಚ್ಚು ಅರ್ಜಿಗಳು ಬಂದಿರುವ ಜಿಲ್ಲೆಗಳ
ಪಟ್ಟಿಯಲ್ಲಿ ಬೆಂಗಳೂರು ಮೊದಲ
ಸ್ಥಾನದಲ್ಲಿದ್ದರೆ (2.56 ಲಕ್ಷ)
ಕೊಡಗು (8 ಸಾವಿರ) ಕೊನೆ
ಸ್ಥಾನದಲ್ಲಿದೆ.
ಗ್ರಾಮೀಣ ಮಟ್ಟದಲ್ಲೂ ಪರೀಕ್ಷೆ:
ಪರೀಕ್ಷೆ ನಡೆಸಲು ಬೇಕಾದ
ಸಿದ್ಧತೆಗಳನ್ನು ಕೆಪಿಎಸ್ಸಿ ಆರಂಭಿಸಿದೆ.
'ಸಾಮಾನ್ಯವಾಗಿ
ಜಿಲ್ಲಾಮಟ್ಟದಲ್ಲಿ ಪರೀಕ್ಷೆಗಳನ್ನು
ನಡೆಸುತ್ತೇವೆ. ಆದರೆ, ಈ ವರ್ಷ
ದೊಡ್ಡ ಸಂಖ್ಯೆಯಲ್ಲಿ ಅರ್ಜಿಗಳು
ಬಂದಿರುವುದರಿಂದ ತಾಲ್ಲೂಕು
ಮತ್ತು ಗ್ರಾಮೀಣ ಮಟ್ಟದಲ್ಲೂ
ಪರೀಕ್ಷೆ ನಡೆಸಬೇಕಾಗಬಹುದು'
ಎಂದು ಆಯೋಗದ ಕಾರ್ಯದರ್ಶಿ
ಮನೋಜ್ ಕುಮಾರ್ ಮೀನಾ
'ಪ್ರಜಾವಾಣಿ'ಗೆ ತಿಳಿಸಿದರು.
'ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಪತ್ರ
ಬರೆದಿದ್ದೇವೆ. ಅಭ್ಯರ್ಥಿಗಳ
ಜಿಲ್ಲಾವಾರು ಪಟ್ಟಿಗಳನ್ನೂ ಅವರಿಗೆ
ನೀಡಲಾಗಿದೆ. ಸಿದ್ಧತೆ ನಡೆಸಲು
ಸೂಚಿಸಲಾಗಿದೆ. ಶಾಲಾ –
ಕಾಲೇಜುಗಳಲ್ಲಿ ಪರೀಕ್ಷೆ
ನಡೆಯಲಿದೆ' ಎಂದು ಅವರು
ವಿವರಿಸಿದರು.
'ವಿಶ್ವವಿದ್ಯಾಲಯಗಳು, ಶಿಕ್ಷಣ
ಇಲಾಖೆಗಳೊಂದಿಗೆ ಚರ್ಚಿಸಿ
ಎಲ್ಲರಿಗೂ ಅನುಕೂಲವಾಗುವ
ದಿನವನ್ನು ಪರೀಕ್ಷೆಗೆ
ನಿಗದಿಪಡಿಸಲಾಗುವುದು' ಎಂದು
ಹೇಳಿದರು.
ಹುದ್ದೆಗಳ ಸಂಖ್ಯೆ ಹೆಚ್ಚುವ
ಸಾಧ್ಯತೆ: ಇನ್ನೂ ಕೆಲವು
ಇಲಾಖೆಗಳು ಎಫ್ಡಿಎ, ಎಸ್ಡಿಎ ಹುದ್ದೆಗಳಿಗೆ
ನೇಮಕ ಮಾಡಲು ಮುಂದೆ ಬರುವ
ಸಾಧ್ಯತೆ ಇರುವುದರಿಂದ ಹುದ್ದೆಗಳ
ಸಂಖ್ಯೆ 200ರಿಂದ 300ರಷ್ಟು
ಹೆಚ್ಚುವ ನಿರೀಕ್ಷೆ ಇದೆ ಎಂದು
ಅಧಿಕಾರಿಗಳು ಹೇಳಿದ್ದಾರೆ.
*
ಕಾರಣ ಏನು?
ಪದವಿ ಶಿಕ್ಷಣ ಪಡೆದಿರುವವರು ಈ
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು.
ರಾಜ್ಯದಲ್ಲಿ ಪದವೀಧರರು
ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
ಸರ್ಕಾರಿ ಕೆಲಸಕ್ಕೆ ಸೇರುವ ಆಕಾಂಕ್ಷೆ
ಅವರಲ್ಲಿ ಹೆಚ್ಚಿರುವ ಕಾರಣ, ಅರ್ಜಿಗಳ
ಸಂಖ್ಯೆಯಲ್ಲೂ ಏರಿಕೆಯಾಗಿದೆ
ಮನೋಜ್ ಕುಮಾರ್ ಮೀನಾ
ಅಭಿಪ್ರಾಯಪಟ್ಟರು.
*
ದಾಖಲೆ ಸಂಖ್ಯೆಯಲ್ಲಿ ಅರ್ಜಿಗಳು
ಬಂದಿರುವುದು ಸಂತಸ ತಂದಿದೆ. 19
ಲಕ್ಷ ಜನರಿಗೆ ಪರೀಕ್ಷೆ ನಡೆಸುವುದು
ದೊಡ್ಡ ಸವಾಲು. ಇದರಲ್ಲಿ
ಯಶಸ್ವಿಯಾಗುವ ವಿಶ್ವಾಸವಿದೆ.
- ಮನೋಜ್ ಕುಮಾರ್ ಮೀನಾ,
ಕೆಪಿಎಸ್ಸಿ ಕಾರ್ಯದರ್ಶಿ
*
ಲಕ್ಷಕ್ಕಿಂತಲೂ ಹೆಚ್ಚು ಅರ್ಜಿ
ಬಂದಿರುವ ಜಿಲ್ಲೆಗಳು
ಬೆಂಗಳೂರು: 2.56 ಲಕ್ಷ
ಮೈಸೂರು: 1.53 ಲಕ್ಷ
ವಿಜಯಪುರ: 1.08 ಲಕ್ಷ
ಕಲಬುರ್ಗಿ: 1.04 ಲಕ್ಷ
ಧಾರವಾಡ: 1.02 ಲಕ್ಷ
*
ಹುದ್ದೆಗಳೆಷ್ಟು?
1,162 ಪ್ರಥಮ ದರ್ಜೆ ಸಹಾಯಕರ ಹುದ್ದೆ
(ಹಿರಿಯ ಸಹಾಯಕರೂ ಸೇರಿ)
1,302 ದ್ವಿತೀಯ ದರ್ಜೆ ಸಹಾಯಕರ
ಹುದ್ದೆಕಿರಿಯ ಸಹಾಯಕರೂ ಸೇರಿ)
*
ಬಂದ ಅರ್ಜಿಗಳು (ಲಕ್ಷಗಳಲ್ಲಿ)
4.98 ಎಫ್ಡಿಎ
2.41 ಹಿರಿಯ ಸಹಾಯಕರು
7.73 ಎಸ್ಡಿಎ
3.73 ಕಿರಿಯ ಸಹಾಯಕರು

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

INCOME TAX CALCULATION 2022-23 IN A CLICK