ನವೆಂಬರ್ನಲ್ಲಿ ವಿಶ್ವದಾದ್ಯಂತ ಸತತ 15 ದಿನಗಳ ಕಾಲ ಕತ್ತಲು ಕವಿಯಲಿದೆ : ನಾಸಾ

ನವದೆಹಲಿ, ಸೆ.19-ಕತ್ತಲೆ ಎಂದರೆ ಭಯದ
ಮೂಲ. ಅರ್ಧ ದಿನದ ಕತ್ತಲೆಗೇ ಮನುಷ್ಯ ತತ್ತರಿಸಿ
ಹೋಗುವಾಗ ಇನ್ನು ದಿನಗಟ್ಟಲೆ ಕತ್ತಲೆಯಿದ್ದರೆ...?
ಹೌದು. ಅಂಥ ಒಂದು ಪರಿಸ್ಥಿತಿ ಈ
ಜಗತ್ತಿಗೆ ಸದ್ಯದಲ್ಲೇ ಎದುರಾಗಲಿದೆ. ಅಂದರೆ
ಇಡೀ ವಿಶ್ವದಾದ್ಯಂತ ಸತತ 15
ದಿನಗಳ ಕಾಲ ಕತ್ತಲೆ ಈ ಭೂಮಿಯನ್ನು ಮುತ್ತಲಿದೆ.
ವಿಜ್ಞಾನಿಗಳು ಹೇಳುವುದೇ ನಿಜವಾಗುವುದಾದರೆ, ಬರುವ
ನವೆಂಬರ್ ತಿಂಗಳಲ್ಲಿ ನೀವು
15 ದಿನಗಳ ಕಾಲ ಸೂರ್ಯನ ದರ್ಶನವಿಲ್ಲದೆ
ಕಳೆಯಬೇಕಂತೆ ! ಇಂಥ ಒಂದು
ಪರಿಸ್ಥಿತಿ ಒಂದು ಮಿಲಿಯನ್ (10ಲಕ್ಷ)
ವರ್ಷಗಳಿಗೊಮ್ಮೆ
ಹೀಗಾಗುವ ಸಾಧ್ಯತೆ ಇರುತ್ತದಂತೆ.
ಕಳೆದ ಕೆಲವು ದಿನಗಳ ಹಿಂದೆ ಇಂಥ
ಒಂದು ಸುದ್ದಿ ಹಲವು ವೆಬ್ಸೈಟ್ಗಳಲ್ಲಿ
ಪ್ರತ್ಯಕ್ಷವಾಗಿತ್ತು. ಆದರೆ, ಅದನ್ನು
ನಂಬುವುದೇ ಬಿಡುವುದೇ ಎಂಬ ಜಿಜ್ಞಾಸೆ
ಉಂಟಾಗಿತ್ತು.
ಆದರೆ, ಇದೀಗ ಅಮೆರಿಕದ ಬಾಹ್ಯಾಕಾಶ
ಅಧ್ಯಯನ ಸಂಸ್ಥೆ-ನಾಸಾ(ಎನ್ಎಎಸ್ಎ)
ಅದನ್ನು ದೃಢಪಡಿಸಿದೆ.
2015ರ ನವೆಂಬರ್ 15ರ ಭಾನುವಾರ ಬೆಳಗಿನ
ಜಾವ 3 ಗಂಟೆಯಿಂದ ನವೆಂಬರ್
30ರ ಸೋಮವಾರ ಸಂಜೆ 4.15ರ ವರೆಗೆ ಕತ್ತಲೆ
ಆವರಿಸಿರುತ್ತದೆ ಎಂಬುದು ನಾಸಾ ವಿಜ್ಞಾನಿಗಳ
ಹೇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಇದರ ಮೂಲ
ಪತ್ತೆ ಹಚ್ಚಲು ನಾಸಾ ಈಗಾಗಲೇ ಹಲವು
ಕಾರ್ಯಕ್ರಮಗಳನ್ನು
ಕೈಗೊಂಡಿದೆ. ಈ ಅವಧಿಯನ್ನು
ವಿಜ್ಞಾನಿಗಳು ನವೆಂಬರ್ ಬ್ಲಾಕ್ ಔಟ್
ಎಂದು ಹೆಸರಿಸಿದ್ದಾರೆ. ಖುದ್ದಾಗಿ ಅಮೆರಿಕ
ಅಧ್ಯಕ್ಷ ಬರಾಕ್ ಒಬಾಮಾ ಅವರಿಂದ
ನೇಮಕಗೊಂಡಿರುವ ನಾಸಾ
ಮುಖ್ಯಸ್ಥ ಚಾರ್ಲ್ಸ್ ಬೋಲ್ಡನ್ ಅವರು ಈ
ಕುರಿತಂತೆ ಒಂದು ಸಾವಿರ ಪುಟಗಳ
ವರದಿಯನ್ನು ಬಿಡುಗಡೆ ಮಾಡಿದ್ದು, ಈ ಕತ್ತಲೆ ಬಗ್ಗೆ
ಸುದೀರ್ಘ ವಿವರಣೆಯನ್ನು ಶ್ವೇತಭವನಕ್ಕೆ
ತಲುಪಿಸಿದ್ದಾರೆ. ಒಟ್ಟಾರೆ ಈಗ 15 ದಿನಗಳ ಕತ್ತಲೆ
ಎದುರಿಸಲು ಪ್ರಪಂಚ ಸಿದ್ಧವಾಗಿರಬೇಕಾಗಿದೆ. ಇದು
ಸುಳ್ಳೋ.... ನಿಜವೋ... ಎಂಬ ಸಂದೇಹವೂ
ಎಲ್ಲರಲ್ಲೂ ಮೂಡುವುದು ಸಹಜವೇ. ಆದರೆ,
ಪ್ರಕೃತಿಯಲ್ಲಿ ಏನೂ ಆಗಬಹುದು ಎಂಬುದನ್ನು
ಅಲ್ಲಗಳೆಯುವಂತಿಲ್ಲ. ನಿಜಕ್ಕೂ ಕತ್ತಲೆ
ಆಗಿಯೇ ಬಿಟ್ಟರೆ....?

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು