ವಾಟ್ಸಾಪ್ ಸಂದೇಶಗಳನ್ನು ಬುಕ್ ಮಾರ್ಕ ಮಾಡಿಕೊಳ್ಳಲು ಅವಕಾಶ.


GKPOINTS

ವಾಟ್ಸಾಪ್'ನಲ್ಲಿ ಇನ್ಮುಂದೆ ನೀವು ಮೆಸೇಜ್ ಗುರುತು ಮಾಡಿಟ್ಟುಕೊಳ್ಳಬಹುದು
ವಾಟ್ಸಾಪ್'ನಲ್ಲಿ ದಂಡಿಯಾಗಿ ಮೆಸೇಜ್'ಗಳು ಬಂದು ಬೀಳುತ್ತಲೇ ಇರುತ್ತವೆ. ಕೆಲವೊಮ್ಮೆ ತೀರಾ ಮುಖ್ಯವಾದ ಮೆಸೇಜ್'ಗಳು ಈ ರಾಶಿಯಲ್ಲಿ ಬಹುತೇಕ ಕಳೆದೇಹೋಗುತ್ತವೆ. ಜನರ ಈ ಒದ್ದಾಟಕ್ಕೆ ವಾಟ್ಸಾಪ್ ಪರಿಹಾರ ಒದಗಿಸಿದೆ. ಮೆಸೇಜ್'ಗಳನ್ನು ಬುಕ್'ಮಾರ್ಕ್ ಮಾಡಿಟ್ಟುಕೊಳ್ಳುವ ಅವಕಾಶವನ್ನು ವಾಟ್ಸಾಪ್ ನೀಡಿದೆ.

ನಿಮಗೆ ಬೇಕಾದ ಮೆಸೇಜ್'ಗೆ ಸ್ಟಾರ್ ಗುರುತು ಮಾಡಬಹುದು. ನೀವು ಸರ್ಚ್ ಮಾಡಿದಾಗ ಈ ಸ್ಟಾರ್ಡ್ ಸಂದೇಶಗಳು ಪ್ರತ್ಯೇಕ ಫೋಲ್ಡರ್'ನಲ್ಲಿ ಕಾಣಿಸುತ್ತವೆ. ಆಗ, ನಿಮಗೆ ಹುಡುಕಲು ಸುಲಭವಾಗುತ್ತದೆ.

ಸದ್ಯಕ್ಕೆ ಇತ್ತೀಚಿನ ಐಓಎಸ್ ಸೆಟ್'ಗಳಲ್ಲಿ ವಾಟ್ಸಾಪ್'ನ ಬುಕ್ ಮಾರ್ಕ್ ಫೀಚರ್ ಲಭ್ಯವಿದೆ. ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ ಸೆಟ್'ಗಳಲ್ಲೂ ಈ ಆಪ್ಷನ್ ಸಿಗಲಿದೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು