ಬಿ.ಸಿ.ಡಿ. ಹುದ್ದೆಗಳ ಸಂದರ್ಶನ ರದ್ದು : ಮನ್ಕಿಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರಮೋದಿ

ನವದೆಹಲಿ, ಅ.25- ಕೇಂದ್ರ ಸರ್ಕಾರಿ
ಉದ್ಯೋಗ ನೇಮಕಾತಿ ವೇಳೆ ಭ್ರಷ್ಟಾಚಾರ
ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ
ಹಿನ್ನೆಲೆಯಲ್ಲಿ ಇದಕ್ಕೆ ಇತಿಶ್ರೀ ಹಾಡಲು
ಕ್ರಮ ಕೈಗೊಳ್ಳುತ್ತಿರುವುದಾಗಿ ಪ್ರಧಾನಿ
ನರೇಂದ್ರಮೋದಿ ಹೇಳಿದ್ದಾರೆ.
ಆಕಾಶವಾಣಿಯಲ್ಲಿಂದು
ಬಿತ್ತರಗೊಂಡ ಮನ್ಕಿಬಾತ್
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ಹುದ್ದೆಗೆ
ನೇಮಕ ಮಾಡುವ ಸಂದರ್ಭದಲ್ಲಿ ನಡೆಯುವ
ಸಂದರ್ಶನದಲ್ಲಿ ಅರ್ಹ ಅಭ್ಯರ್ಥಿಗಳು
ವಂಚನೆಗೊಳಗಾಗುತ್ತಿರುವುದು
ನನ್ನ ಗಮನಕ್ಕೆ ಬಂದಿದ್ದು, ಬರುವ 2016ರ
ಜನವರಿ1ರಿಂದ ಬಿ, ಸಿ, ಡಿ ದರ್ಜೆಯ ಹುದ್ದೆಗಳ
ಸಂದರ್ಶನವನ್ನು ರದ್ದು ಮಾಡುವುದಾಗಿ
ಘೋಷಿಸಿದ್ದಾರೆ.
ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಅರ್ಹರಿಗೆ ಹುದ್ದೆ
ಸಿಗಬೇಕೆಂಬ ದೃಷ್ಟಿಯಿಂದ ಸರ್ಕಾರ ಈ
ನಿರ್ಧಾರ ಕೈಗೊಳ್ಳುತ್ತಿದೆ ಎಂದು
ತಿಳಿಸಿದ್ದಾರೆ. ಇದೇ ವೇಳೆ ಅಂಗಾಂಗ ದಾನದ
ಬಗ್ಗೆಯೂ ಪ್ರಸ್ತಾಪಿಸಿರುವ ಮೋದಿ, ಎಲ್ಲ
ದಾನಗಳಿಗಿಂತ ಅಂಗಾಂಗ ದಾನ
ಮಹತ್ವದ್ದು ಎಂದು ಬಣ್ಣಿಸಿದ್ದಾರೆ.
ದೇಶದಲ್ಲಿ ದೃಷ್ಟಿ
ಕಳೆದುಕೊಳ್ಳುತ್ತಿರುವವರ
ಸಂಖ್ಯೆ ಹೆಚ್ಚಾಗಿದ್ದು, ಪ್ರತಿ ವರ್ಷ
ಒಂದು ಲಕ್ಷ ನೇತ್ರಗಳ ಅಗತ್ಯವಿದ್ದು,
ಆದರೆ, ಪ್ರಸ್ತುತ ಕೇವಲ 25 ಸಾವಿರ ಮಾತ್ರ ನೇತ್ರಗಳು
ದಾನದ ರೂಪದಲ್ಲಿ ಲಭ್ಯವಾಗುತ್ತಿವೆ.ಇದಲ್ಲದೆ
ಕಿಡ್ನಿ ಮತ್ತು ಲಿವರ್ಗಳ ಕೊರತೆಯೂ
ಇದ್ದು, ಇದರ ಬಗ್ಗೆ ಜನತೆಯಲ್ಲಿ ಅಂಗಾಗ
ದಾನಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆ ಇದೆ
ಎಂದು ಹೇಳಿದ್ದಾರೆ. ಸಾರ್ವಜನಿಕರ
ಉಪಯೋಗಕ್ಕಾಗಿ ಬ್ಯಾಂಕ್ಗಳಲ್ಲಿ ಚಿನ್ನದ
ಗಟ್ಟಿ ಅಥವಾ ಆಭರಣಗಳನ್ನು ಇರಿಸಿ ಅದಕ್ಕೆ ಬಡ್ಡಿ
ರೂಪದಲ್ಲಿ ಹಣ ನೀಡುವ
ಹೊಸ ಗೋಲ್ಡ್ ಬಾಂಡ್
ಯೋಜನೆಯನ್ನೂ ಕೂಡ ಸರ್ಕಾರ ಸದ್ಯದಲ್ಲಿಯೇ
ಜಾರಿಗೆ ತರಲಿದೆ ಎಂದು ತಿಳಿಸಿದರು. ಸರ್ದಾರ್
ವಲ್ಲಭಬಾಯಿಪಟೇಲ್ ಅವರ ಜನ್ಮದಿನಾಚರಣೆ
ಅ.31ರಂದು ದೇಶಾದ್ಯಂತ ಆಚರಿಸಲು
ನಿರ್ಧರಿಸಲಾಗಿದ್ದು, ಇದು ನಮ್ಮ ದೇಶದ ಏಕತೆಗೆ
ಪೂರಕ ಎಂದು ಹೇಳಿದರು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು