ಆಯ್ಕೆಪಟ್ಟಿ ಪ್ರಕಟ: ಆಕ್ಷೇಪ ಸಲ್ಲಿಕೆಗೆ ಸೂಚನೆ.
ಆಯ್ಕೆಪಟ್ಟಿ ಪ್ರಕಟ: ಆಕ್ಷೇಪ ಸಲ್ಲಿಕೆಗೆ ಸೂಚನೆ.
ಬೆಂಗಳೂರು: ಕೆಪಿಎಸ್ಸಿಯು ಕಳೆದ ಸೆ.29ರಂದು ಅಧಿಸೂಚನೆ ಹೊರಡಿಸಿದ್ದ
ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದ ಮೊರಾರ್ಜಿ
ದೇಸಾಯಿ ವಸತಿ ಶಾಲೆಗಳಲ್ಲಿನ ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು
ಭಾಷೆಯ ಶಿಕ್ಷಕರು ಹಾಗೂ ಗಣಕಯಂತ್ರ ಶಿಕ್ಷಕರು, ಸಹಕಾರ
ಇಲಾಖೆಯಲ್ಲಿನ ಸಹಕಾರ ಸಂಘಗಳ ನಿರೀಕ್ಷಕರು ಹಾಗೂ ವಾರ್ತಾ
ಇಲಾಖೆಯಲ್ಲಿನ ಸ್ವಾಗತಕಾರರು ಹಾಗೂ ಗ್ರಂಥಪಾಲಕರ ಹುದ್ದೆಗಳ
ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಗುರುವಾರ ಪ್ರಕಟಿಸಿದೆ.
ಈ ಆಯ್ಕೆಪಟ್ಟಿಗೆ ಆಕ್ಷೇಪ ಇದ್ದಲ್ಲಿ ಅಭ್ಯರ್ಥಿಗಳು ಹದಿನೈದು ದಿನದೊಳಗೆ
ಆಯೋಗದ ಕಾರ್ಯದರ್ಶಿಗೆ ಸಲ್ಲಿಸಬಹುದು. ವಿವರಕ್ಕೆ ಆಯೋಗದ
ವೆಬ್ಸೈಟ್ ವೀಕ್ಷಿಸಲು ಕೆಪಿಎಸ್ಸಿ ಪ್ರಕಟಣೆ ತಿಳಿಸಿದೆ.
Comments
Post a Comment