ನನ್ನ ಹೆಮ್ಮೆಯ ಸರ್ಧಾರ ಪಟೇಲ:


ವಲ್ಲಭಬಾಯಿ ಪಟೇಲ್
ವಲ್ಲಭಬಾಯಿಯ ಹುಟ್ಟೂರು ಕರಮಸ,.ಗುಜರಾತ್ ಪ್ರಾಂತದಲ್ಲಿ ಪೇಟ್ಗಾ ತಾಲ್ಲೂಕಿಗೆ ಸೇರಿಸ ಸಣ್ಣದೊಂದು ಹಳ್ಳಿ ಅದು. ತಂದೆ ಝಾವೇರಬಾಯಿ ಪಟೇಲ್.ತಾಯಿ ಲಾಡಬಾಯಿ. ಝಾವೆರಬಾಯಿ ಬಡ ರೈತರು. ಅವರ ದೇಹಬಲಿಷ್ಠವಾಗಿತ್ತು. ಸ್ವದೇಶ, ಸ್ವಾತಂತ್ಯ್ರ ಎಂದರೆ ಅವರಿಗೆ ಪ್ರಾಣ. ೧೮೫೭ರಲ್ಲಿ ನಮ್ಮ ಜನ ಸ್ವಾತಂತ್ಯ್ರಕ್ಕಾಗಿ ಇಂಗ್ಲೀಷರ ಮೇಲೆ ಯುದ್ಧ ಹೂಡಿದರು. ಆಗ ಯುವಕರಾಗಿದ್ದ ಝವೇರಬಾಯಿಯೂ ಆ ಯುದ್ಧಕ್ಕೆ ಸೇರಿ ತಮ್ಮಸಾಹಸ ತೋರಿಸಿದ್ದರು. ವಲ್ಲಭಬಾಯಿ ಅರ್ಣಣ ವಿ‌ಠ್ಠಲಬಾಯಿ ಪಟೇಲರು ಪ್ರಖ್ಯಾತ ದೇಶಪ್ರೇಮಿ. ಅವರು ಭಾರತದ ವಿಧಾನ ಪರಿಷತ್ತಿನ ಅಧ್ಯಕ್ಷರೂ ಆಗಿದ್ದರು.
ಬಾಲಕ ವಲ್ಲಭಬಾಯಿಗೆ ಒಮ್ಮೆ ಕಂಕುಳದಲ್ಲಿ ದೊಡ್ಡ ಕುರುಎದ್ದಿತು. ಅವರ ಹಳ್ಳಿಯಲ್ಲಿ ಒಬ್ಬ ಕುರುವಿಗೆ ಬರೆಹಾಕಿ ವಾಸಿ ಮಾಡುತ್ತಿದ್ದ. ಈ ಹುಡುಗನೂ ಅವನಬಳಿ ಹೋದ.ಅವನುಕಬ್ಬಿಣದ ಸಾಲಾಕಿಯನ್ನು ಕೆಂಪಗೆ ಕಾಯಿಸಿದ.  ಆದರೆ ಬಾಲಕ ಎಳೆ ವಯಸ್ಸು ಕಂಡು ಬರೆ ಹಾಕಲು ಮನಸ್ಸು ಹಿಂಜರಿಯಿತು.
"ಏನು ನೋಡೀತ್ತಿದ್ದೀ? ಕಬ್ಬಿಣ ಆರಿ ತಣ್ಣಗಾಗಿ ಹೋಗುತ್ತೆ ಬೇಗ ನಿಗಿನಿಗಿ ಕಾದ ಸರಳಿನಿಂದ ಕುರುವನ್ನು ಚೆನ್ನಾಗಿ ಸುಟ್ಟುಕೊಂಡ. ನೋಡುತ್ತಿದ್ದವರೆಲ್ಲ ಗಾಬರಿಯಿಂದ ಚೀರಿದರು. ಆದರೆ ವಲ್ಲಭಬಾಯಿಯ ಮುಖದಲ್ಲಿ ನೋವಿನ ಛಾಯೆಯೂ  ಸುಳಿಯಲಿಲ್ಲ.
ದಿಟ್ಟ ವಿದ್ಯಾರ್ಥಿ
ಈ ಪ್ರಚಂಡ ಹುಡುಗ ಹುಟ್ಟಿದ್ದು ೧೮೭೫ ಅಕ್ಟೊಬರ್ ೩೧ ರಂದು. ಚಿಕ್ಕಂದಿನಲ್ಲಿಯೇ ಇವನ ಎದೆಗಾರಿ ಕಂಡುಹಿರಿಯರಿಗೆಲ್ಲ ಹೆಮ್ಮೆ,ಆನಂದ: ಕಿರಿಯರಿಗೆಲ್ಲ ಪ್ರೀತಿ, ಗೌರವ. ಜೊತೆಗಾರರು ಯಾರೂ ಇವ ಮಾತು ಮೀರುತ್ತಿರಲಿಲ್ಲ. ಸದಾ ಅನ್ಯಾಯದ ವಿರುದ್ಧ ಸಿಡಿದು ನಿಲ್ಲುವ ಬುದ್ಧಿ ಅವನದು. ಸಂಗಡಿಗರಲ್ಲಿ ಒಗ್ಗಟ್ಟು ಬೆಳೆಸುವುದು, ಅವರ ಕಷ್ಟ ಸುಖ ವಿಚಾರಿಸಿಕೊಳ್ಳುವುದು, ಕೈಲಾದ ಸಹಾಯ ಮಾಡುವುದು ಅವನ ಸ್ವಭಾವ.
ವಲ್ಲಭಬಾಯಿ  ಕರಮಸದನಲ್ಲಿ ಆರಂಭದ ಶಿಕ್ಷಣ ಮುಗಿಸಿದ. ಆಮೇಲೆ ನದಿಯಾದ್ ಎಂಬ ಊರಿನಲ್ಲಿ ಶಾಲೆಗೆ ಸೇರಿದ. ಅಲ್ಲಿ ಒಬ್ಬ ಶಿಕ್ಷಕರು ತಾವೇ ಶಾಲೆಯ ಪುಸ್ತಕಗಳನ್ನು ಮಾರುತ್ತಿದ್ದರು.  ಎಲ್ಲ ಹುಡುಗರೂ ತಮ್ಮಿಂದಲೇ ಕೊಳ್ಳಬೇಕೆಂದು ಬಲವಂತ ಮಾಡುತ್ತಿದ್ದರು. ವಲ್ಲಭಭಾಯಿಗೆ ಇದು ಸರಿ ಕಾಣಲಿಲ್ಲ.  ಜೊತೆಯವರಿಗೆಲ್ಲ ಹೇಳಿ, ಯಾರೂ ಅವರ ತರಗತಿಗೆ ಹೋಗದಂತೆ ಮಾಡಿದ. ಒಂದು ವಾರ ಶಾಲೆಯೇ ನಡೆಯಲಿಲ್ಲ. ಆಗ ಆ ಶಿಕ್ಷಕರು ತಮ್ಮತಪ್ಪು ತಿದ್ದಿಕೊಳ್ಳಬೇಕಾಗಿ ಬಂತು.
ವಲ್ಲಭಬಾಯಿ ಹೈಸ್ಕೂಲಿಗೆ ಸೇರಿದ್ದು ಪೇಟ್ಲಾದಲ್ಲಿ. ಅಲ್ಲಿ ಅವನ ಸ್ವತಃ ಅಡುಗೆ ಮಾಡಿಕೊಳ್ಳುತ್ತಿದ್ದ.  ಅದಕ್ಕಾಗಿ ಪ್ರತಿವಾರ ಮನೆಯಿಂದ ಅಕ್ಕಿ, ಬೇಳೆ ಹೊತ್ತುಕೊಂಡು ಅಲ್ಲಿಗೆ ನಡೆದುಕೊಂಡೇ ಹೋಗುತ್ತಿದ್ದ. ಆ ದಾರಿಯಲ್ಲಿ ರೈಲೇನೋ ಇತ್ತು. ಆದರೆ ಬಡ ವಲ್ಲಭಬಾಯಿ ಬಳಿ ಟಿಕೇಟ್ಗೆ ದುಡ್ಡು ಇರುತ್ತಿರಲಿಲ್ಲ.
ಹೈಸ್ಕೂಲು ಕೊನೆಯ ವರ್ಷ ಓದಲು ವಲ್ಲಭನು ಬರೋಡಾಕ್ಕೆ ಬಂದ. ಅಲ್ಲಿ ಸಹ ಅವನ ಪ್ರಭಾವ ಹರಡಲು ತಡವಾಗಲಿಲ್ಲ. ಒಮ್ಮೆ ಒಬ್ಬ ಶಿಕ್ಷಕರ ಲೆಕ್ಕ ತಪ್ಪು ಮಾಡಿದರು. ವಲ್ಲಭಬಾಯಿ ಆ ತಪ್ಪು ತೋರಿಸಿದ. ಶಿಕ್ಷಕರು ಸಿಟ್ಟಗೆದ್ದು, "ನೀನೇ ಮಾಡು ನೀನೇ ಶಿಕ್ಷಕನಾಗು" ಎಂದು ಕೂಗಾಡಿದರು. ಇವನು, "ಹಾಗೆಯೇ ಆಗಲಿ" ಎಂದ. ಲೆಕ್ಕಸರಿಯಾಗಿ ಮಾಡಿ ಶಿಕ್ಷಕರ ಕುರ್ಚಿಯ ಮೆಲೆಕುಳಿತೇಬಿಟ್!
ವಲ್ಲಭಭಾಯಿ ಮೊದಲು ತೆಗೆದುಕೊಂಡಿದ್ದುದು ಸಂಸ್ಕೃತ. ಆಮೇಲೆ ಗುಜರಾತಿ ಭಾಷೆಗೆ ಬದಲಾಯಿಸಿದ. ಗುಜರಾತಿ ಕಲಿಸುತ್ತಿದ್ದ ಶಿಕ್ಷಕರಿಗೆ ಸಂಸ್ಕೃತ ಎಂದರೆ ಹೆಚ್ಚು ಪ್ರೀತಿ. ವಲ್ಲಭಬಾಯಿ ತಮ್ಮ ತರಗತಿಗೆ ಬರುತ್ತಲೇ ಅವನನ್ನು ಹಂಗಿಸಲು "ಬಾರಯ್ಯ ಮಹಾ ಪುರುಷ!" ಎಂದರು. ಆದರೆ ಆಬಾಲಕ ಮುಂದೆ ಮಹಾಪುರುಷನೇ ಆಗುವನೆಂದು ಪಾಪ,  ಆಗ ಅವರಿಗೆ ಗೊತ್ತಿರಲಿಲ್ಲ.
"ಸಂಸ್ಕೃತ ಬಿಟ್ಟು ಗುಜರಾತಿಗೆ ತೆಗೆದುಕೊಂಡಿದ್ದೇಕೆ?" ಎಂದು ರೇಗಿದರು.
"ಎಲ್ಲರೂ ಸಂಸ್ಕೃತ ತೆಗೆದುಕೊಂಡರೆ ನಿಮಗೆ ಕೆಲಸವೇ ಇಲ್ಲದಂತಾಗುತ್ತದಲ್ಲ" ಎಂದು ವಲ್ಲಭ.
ಶಿಕ್ಷಕರ ಕೋಪ ನೆತ್ತಿಗೇರಿತು. ಏನು ಮಾಡಬೇಕೆಂಬುವುದೇ ತೋರಲಿಲ್ಲ. ಮುಖ್ಯ ಶಿಕ್ಷಕರ ಬಳಿ ದೂರು ಹೇಳಿದರು. ವಲ್ಲಭಬಾಯಿ ಅವರಿಗೆ ಎಲ್ಲಾ ವಿಷಯಗಳನ್ನು ವಿವರಿಸಿದ. ಆಗ ಮುಖ್ಯ ಶಿಕ್ಷಕರು "ಇಂಥ ದಿಟ್ಟ ಹುಡುಗನನ್ನು ನಾನು ಕಂಡದ್ದೇ ಇಲ್ಲ" ಅಂದರು. ಅದರಿಂದ ಶಿಕ್ಷಕರ ಮನಸ್ಸು ಮತ್ತಷ್ಟು ಕಹಿಯಯಿತು. ವಲ್ಲಭಬಾಯಿಗೂ ಆಶಾಲೆಯಲ್ಲಿರುವುದು ಇಷ್ಟವಾಗಲಿಲ್ಲ. ಊರಿಗೆ ವಾಪಸು ಹೋದ. ಮನೆಯಲ್ಲೇ ಓದಿಕೊಂಡು ಪರೀಕ್ಷೆಯಲ್ಲಿ ತೇರ್ಗಡೆಯಾದ.
ವಕೀಲ ವಲ್ಲಭಭಾಯಿ
ವಲ್ಲಭಭಾಯಿಗೆ "ಬ್ಯಾರಿಸ್ಟರ‍್ " ಆಗಬೇಕೆಂದು ಬಹಳ ಆಸೆ. ಅದಕ್ಕೆ ಇಂಗ್ಲೇಂಡಿಗೆ ಹೋಗಿ ಓದಬೇಕಾಗಿತ್ತು. ಆದರೆ ಮನೆಯಲ್ಲಿ ಕಡುಬಡತನ. ಇಲ್ಲಿಯ ಕಾಲೇಜಿಗೆ ಸೇರಲೂ ಹಣ ಇರಲಿಲ್ಲ.
ಆ ಕಾಲದಲ್ಲಿ ವಕೀಲಿ ಪರೀಕ್ಷೆಗೆ ಕಾಲೇಜಿಗೆ ಹೋಗದೆ ಕೂಡಬಹುದಾಗಿತ್ತು. ವಲ್ಲಭಭಾಯಿ ಅಣ್ಣ ವಿಠ್ಠಲಭಾಯಿಯವರೂ ಆಗ ವಲೀಕಿ ವೃತ್ತಿ ಮಾಡುತ್ತಿದ್ದರು. ಅವರು ಪರೀಕ್ಷೆಗೆ ಕುಳಿತುಕೊಳ್ಳುವ ಮೊದಲು ಮುಂಬಯಿಯ ತರಬೇತಿ ಶಾಲೆಗೆ ಹೋಗುತ್ತಿದ್ದರು.  ವಲ್ಲಭಭಾಯಿಯಂತೂ ಅದಕ್ಕೂ ಹೋಗಲಿಲ್ಲ. ತನಗೆ ಪರಿಚಯವಿದ್ದ ವಕೀಲರ ಹತ್ತಿರ ಪುಸ್ತಕಗಳನ್ನು ತೆಗೆದುಕೊಂಡು ತಾನೇ ಮನೆಯಲ್ಲಿ ಚೆನ್ನಾಗಿ ಓದಿದ.  ಅವನು ಆಗಾಗ್ಗೆ ನ್ಯಾಯಾಲಯಕ್ಕೆ ಹೋಗುತ್ತಿದ್ದ. ಅಲ್ಲಿ ನ್ಯಾಯಾಧೀಶರು ತೀರ್ಪು ಕೊಡುವ ಬಗೆಯನ್ನು ಗಮನಿಸುತ್ತಿದ್ದ.  ವಕೀಲರು ತರ್ಕಬದ್ಧವಾಗಿ ವಾದ ವಿವಾದ ಗಮನಿಸುತ್ತಿದ್ದ. ವಕೀಲರು ತರ್ಕಬದ್ಧರಾಗಿ ವಾದ ವಿವಾದ ಮಾಡುವುದನ್ನು ಕುತೂಹಲದಿಂದ ಕೇಳುತ್ತಿದ್ದ.  ಪುಕ್ಕಲು ವಕೀಲರು, ದಿಟ್ಟ ವಕೀಲರು, ಬುದ್ಧಿವಂತ ವಕೀಲರು- ಎಲ್ಲರ ರೀತಿಯನ್ನೂ ಮಾತನ್ನೂ ಎಚ್ಚರಿಕೆಯಿಂದ ಗಮನಿಸುತ್ತಿದ್ದ. ಪರೀಕ್ಷೆಯಲ್ಲಿ ತೇರ್ಗಡೆಯಾಯಿತು.
ಹೊಸದಾಗಿ ವಕೀಲಿ ವೃತ್ತಿ ಆರಂಭಿಸಲು ವಲ್ಲಭಭಾಯಿಗೆ ಇದ್ದ ಅನುಕೂಲಗಳು ಸೊನ್ನೆ. ಅವನು ಸ್ನೇಹಿತರಿಂದ ಸಾಲ ಮಾಡಿ ಗೋಧರಾ ಎಂಬ ಊರಿನಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ಪಡೆದ. ಅಲ್ಲಿ ಒಂದೆರಡು ಕುರ್ಚಿಗಳನ್ನು  ಮೇಲೆ ಕುಳಿತುಕೊಳ್ಳುವವರಿಗೆಂದು ಚಾಪೆಯನ್ನೂ ತರಿಸಿದ.
ಉತ್ಸಾಹದ ಈ ಯುವಕನ ಬಳಿಗೆ ಜನ ಬರುವುದು ತಡವಾಗಲಿಲ್ಲ. ವಲ್ಲಭಬಾಯಿ ಒಂದು ವಿಷಯ ತೆಗೆದುಕೊಂಡರೆ ಅದರ ಎಲ್ಲ ವಿವರಗಳನ್ನೂ ತಿಳಿದಿರುತ್ತಿದ್ದ.
ವಲ್ಲಭಬಾಯಿ ಪಟೇಲರು ಬಹು ಬೇಗ ಅತ್ಯುತ್ತಮ ವಕೀಲರೆಂದು ಹೆಸರುಪಡೆದರು.  ಆ ವೇಳೆಗೆ ಅವರಿಗೆ ಮದುವೆಯಾಗಿತ್ತು. ದಯಾಭಾಯಿಎಂಬ ಮಗ, ಮಣಿಬೆಹೆನ್ ಎಂಬ ಮಗಳು ಹುಟ್ಟಿದರು. ಅಷ್ಟರಲ್ಲಿ ಅವರ ಹೆಂಡತಿಗೆ ಕಾಯಿಲೆಯಾಯಿತು. ಚಕಿತ್ಸೆಗಾಗಿ ಮುಂಬೈಗೆ ಕಳುಹಿಸಿದರು.
ತಂತಿ ಸುದ್ಧಿ!
ಒಮ್ಮೆ ನ್ಯಾಯಾಲಯದಲ್ಲಿ ಒಂದು ಮುಖ್ಯ ಮೊಕದ್ದಮ್ಮೆ ಇತ್ತು. ಪಟೇಲರು ಮನಸ್ಸಿಟ್ಟು ವಾದ ಮಾಡುತ್ತಿದ್ದರು. ಮಧ್ಯದಲ್ಲಿ ಅವರ ಕೈಗೊಂದು ತುರ್ತಾದ ತಂತಿ ಸುದ್ಧಿ ಬಂತು. ಅವರು ಅದರತ್ತ ಒಮ್ಮೆ ನೋಡಿ ಜೇಬಿನಲ್ಲಿರಿಸಿಕೊಂಡರು. ಮುಂಚಿನಂತೆಯೇ ತಮ್ಮ ವಾದವನ್ನು ಕೊನೆಯತನಕ ಮುಂದುವರೆಸಿದರು. ಅವರು ವಾದ ಮ ಮುಗಿಸಿ ಕುಳಿತ ಮೇಲೆ ಅಕ್ಕಪಕ್ಕದವರಿಗೆ ಗೊತ್ತಾಯಿತು. ತಂತಿ ಅವರ ಹೆಂಡತಿ ತೀರಿಕೊಂಡರೆಂಬ ಸುದ್ಧಿಯನ್ನು ತಂದಿತ್ತು!

ಚೀಟಿಯನ್ನು ಜೇಬಿನಲ್ಲಿರಿಸಿ ವಾದವನ್ನು ಮುಂದುವರಿಸಿದರು.
ಅದನ್ನು ಓದಿಯೂ ವಿಚಲಿತರಾಗದೇ ವಾದವನ್ನು ಮುಂದುವರೆಸಿದರು ವಲ್ಲಭಭಾಯಿ. ಹಾಗಿತ್ತು ಅವರ ಕರ್ತವ್ಯ ನಿಷ್ಠೆ. ಜೀವನ ಪೂರ್ತಿ ಅವರು ಎಷ್ಟೇ ಕಷ್ಟ ಬಂದರೂ ಲೆಕ್ಕಿಸುತ್ತಿರಲಿಲ್ಲ. ಗಟ್ಟಿ ಮನಸ್ಸಿನಿಂದ ಹಿಡಿದ ಕೆಲಸ ಪೂರೈಸುತ್ತಿದ್ದರು.
ಕೈತುಂಬ ಹಣ
ಪತ್ನಿಸತ್ತಾಗ ಪಟೇಲರಿಗೆ ಇನ್ನೂ ಮೂವತ್ತು ವರ್ಷ ಪುನಃ ಮದುವೆಯಾಗಲು ಅವರು ಇಷ್ಟಪಡಲಿಲ್ಲ. ಬ್ಯಾರಿಸ್ಟರ ಆಗಬೇಕೆಂಬ ನಿಶ್ಚಯ ಹಾಗೇ ಇತ್ತು.  ಅದಕ್ಕಾಗಿ ಅವರು ಹಣ ಕೂಡಿಸಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.  ಆದರೆ ಅಕಸ್ಮಾತ್ ಇಂಗ್ಲೇಂಡಿಗೆ ಹೋಗಲು ಪ್ರವಾಸದ ಏಜೆಂಟರಿಂದ ಬಂದ ಪತ್ರ ವಿಠ್ಠಲಬಾಯಿ ಪಟೇಲರ ಕೈಗೆ  ಸಿಕ್ಕಿತು.ವಿಠ್ಠಲಬಾಯಿಯವರು, "ಮೊದಲು ನಾನು ಹೋಗಿ ಬರುತ್ತೇನೆ, ಅನಂತರ ನೀನು ಹೋಗುವಿಯೆಂತೆ ಎಂದರು.
ವಲ್ಲಭಭಾಯಿ ಸ್ವಲ್ಪವೂ ಹಿಂದು ಮುಂದು ನೋಡದೆ ಅದಕ್ಕೊಪ್ಪಿದರು. :ನನ್ನಲಿರುವ ಹಣ ಮತ್ತು ಪ್ರವಾಸದ ಟಿಕ್ಕೆಟನ್ನು ನಿನ್ನದೆಂದೇ ತಿಳಿ. ಇದನ್ನು ನೀನು ಸಂತೋಷದಿಂದ ಉಪಯೋಗಿಸು. ಅಷ್ಟೇ ಅಲ್ಲ. ಇಂಗ್ಲೇಂಡಿನಲ್ಲಿ ನಿನಗೆ ಖರ್ಚಿಗೇನಾದರೂ ಬೇಕಾದರೆ ಬರಿ.ನಾನುಕಳಿಸುತ್ತೇನೆ" ಎಂದರು.
ವಿಠ್ಠಲಭಾಯಿ ಪಟೇಲರ ಹೆಂಡತಿ ಸ್ವಲ್ಪ ಹೊಂದಿ ಕೊಳ್ಳದ ಸ್ವಭಾವದ ಹೆಂಗಸು.ಆಕೆ ಗಂಡ ಇಂಗ್ಲೆಂಡಿಗೆ ಹೋದರೆ ತನ್ನಗತಿ ಏನು, ತನ್ನನ್ನಾರು ನೋಡಿಕೊಳ್ಳುವವರು ಎಂದು ಕೇಳಿದಳು.
ವಲ್ಲಭಭಾಯಿ ಹೇಳಿದರು: "ನನ್ನ ಮನೆ ನಿಮ್ಮದೆಂದೇ ತಿಳಿಯಿರಿ. ಅಣ್ಣ ಹಿಂತಿರುಗಿ ಬರುವವರೆಗೂ ಮ್ಮ ಮನೆಯಲ್ಲೇ ಬಂದು ಇದ್ದು ಬಿಡಿ."
ಮೂರು ವರ್ಷ ಕಳೆದು ಅಣ್ಣ ವಾಪಸು ಬಂದ ಮೇಲೆ ಪಟೇಲರು ಇಂಗ್ಲೇಂಡಿಗೆ ಹೊರಟರು. ಅಲ್ಲಿ ದೃಢಚಿತ್ತದಿಂದ ಓದಿದರು. ಹೊರಗಿನ ಯಾವ ವಿಲಾಸ ವೈಭವಗಳಿಗೂ ಅವರು ಮರಳಾಗಲಿಲ್ಲ. ಅವರು ವಾಸಿಸುತ್ತಿದ್ದ ಕೊಠಡಿಗೂ ಪುಸ್ತಕ ಬಂಡಾರಕ್ಕೂ ಹನ್ನೊಂದು ಮೈಲಿ ದೂರವಿತ್ತು. ದಿನವೂ ಅಲ್ಲಿಗೆ ನಡೆದುಕೊಂಡೇ ಬೆಳಿಗ್ಗೆ ಹೋಗಿ ಸಂಜೆ ವಾಪಸು ಬರುತ್ತಿದ್ದರು. ಬ್ಯಾರಿಸ್ಟರ್ ಪರೀಕ್ಷೆಯಲ್ಲಿ ಮೊಟ್ಟ ಮೊದಲ ಸ್ಥಾನ ಅವರು ಗಿಟ್ಟಿಸಿದರು.
ವಲ್ಲಭಭಾಯಿ ಸ್ವದೇಶಕ್ಕೆ ವಾಪಸು ಬರುತ್ತಲೇ ಅಹಮದಾಬಾದಿನಲ್ಲಿ ಬ್ಯಾರಿಸ್ಟರ‍್ ವೃತ್ತಿ ಆರಂಭಿಸಿದರು.  ದಿನೇ ದಿನೇ ಅವರ ಪ್ರಭಾವ ಹೆಚ್ಚಿತು. ಕೀರ್ತಿ ಬೆಳೆಯಿತು., ಅವರ ಅಣ್ಣ ವಿಠ್ಠಲಭಾಯಿಯರು,"ನೀಉ ಕೊಂಚ ಮನೆಯಕಡೆಗೆ ನೋಡಿಕೋ, ನಾನು ಸ್ವಲ್ಪ ದೇಶದ ಕೆಲಸ ಮಾಡುತ್ತೇನೆ" ಎಂದರು.
"ಹಾಗೇ ಆಗಲಿ" ಎಂದರು ವಲ್ಲಭಭಾಯಿ. ಅವರಿಗೆ ಆಗ ಏನಿಲ್ಲವೆಂದರೂ ತಿಂಗಳಿಗೆ ಎಂಟು-ಹತ್ತುಸಾವಿರ ರೂ. ಸಂಪಾದನೆಯಿತ್ತು. ಬಿಡುವಿನ ಸಮಯವನ್ನು ಅವರು ಇಸ್ಪೀಟ್ ಕ್ಲಬ್ಗಳಲ್ಲಿ ಕಳೆಯುತ್ತಿದ್ದರು. ಇಂಗ್ಲೀಷರಂತೆಯೆ ಉಡಿಗೆ ತೊಡಿಗೆ ಹಾಕಿಕೊಳ್ಳುತ್ತಿದ್ದರು. ರಾಜಕಾರಣದಲ್ಲಿ ಸ್ವಲ್ಪವೂ ಆಸಕ್ತಿ ಇರಲಿಲ್ಲ. ಸತ್ಯಾಗ್ರಹ, ದೇಶಸೇವೆ ಇವೆಲ್ಲ ಹುಚ್ಚರ ಕೆಲಸ  ಎಂದು ಅವರು ತಮಾಷೆ ಮಾಡುತ್ತಿದ್ದುದು ಉಂಟು.
ಗಾಂಧೀಜಿ ಬಂದರು
ಕ್ರಮೇಣ ಗುಜರಾತಿನಲ್ಲಿ ಗಾಂಧೀಜಿಯವರ ಪ್ರಭಾವ ಹರಡಿತು. ಅದರ ಪರಿಣಾಮವಾಗಿ ವಲ್ಲಭಭಾಯಿಯವರ ಜೀವನದಲ್ಲೂ ಬದಲಾವಣೆ ಕಾಲಿಟ್ಟಿತು. ಅದೇ ಸಮಯಕ್ಕೆ ಗೋಧಾರಾವದಲ್ಲಿ ನಡೆದ ಗುಜರಾತ್ ರಾಜಕೀಯ ಪರಿಷತ್ತಿಗೆ ಗಾಂಧೀಜಿಯವರು ಬಂದಿದ್ದರು.  ಆಗ ಅವರಿಗೂ ಪಟೇಲರಿಗೂ ಪರಿಚಯವಾಗಿ, ಸ್ನೇಹ ಬೆಳೆಯಿತು.
ಪಟೇಲರಿಗೆ ಮಕ್ಕಳೆಂದರೆ ಪ್ರೀತಿ. ಆದರೆ ಪ್ರೀತಿಯ ಪ್ರದರ್ಶನವನ್ನು ಅವರು ಮಾತನಾಡುತ್ತಿರಲಿಲ್ಲ. ಮಣಿಬೆಹನ್ ಸಂಕೋಚದ ದನಿಯಲ್ಲಿ, "ಹೇಗಿದ್ದೀರಿ ಅಪ್ಪ?" ಎಂದು ಪ್ರಶ್ನಿಸಿದಾಗ ಮಾತ್ರ "ಚೆನ್ನಾಗಿದ್ದೇನೆ"ಎಂದು ಚುಟುಕಾಗಿ ಉತ್ತರಿಸುತ್ತಿದ್ದರು.  ದಯಾಭಾಯಿ ಕೆಲವು ವೇಳೆ ತಂದೆಯನ್ನು ಮಾತನಾಡಿಸಲು ಯತ್ನಿಸುತ್ತಿದ್ದ. ಆಧರೆ ವಲ್ಲಭಭಾಯಿ ಉತ್ತರಿಸುತ್ತಿದುದೇ ಕಡಿಮೆ.
ಪಟೇಲರ ಮನೆಗೆ ಗಾಂಧೀಜಿಯ  ಪ್ರವೇಶವಾಯಿತು. ಗಾಂಧೀಜಿ ಇಬ್ಬರುಮಕ್ಕಳಿಗೂ ತಂದೆಯ ಪಾತ್ರವನ್ನು ವಹಿಸಿದರು.
ಅವಳಿಗೆ ದೊರೆತ ಶಿಕ್ಷ ಸಂಸ್ಕಾರಗಳಿಂದ ಅನೇಕ ಗುಣಗಳು ಮಣಿಬೆಹೆನಳಲ್ಲಿ ಮೈಗೂಡಿತ್ತು.  ಸರಳವಾದ ಜೀವನ, ಒಳ್ಳೆಯ ಹವ್ಯಾಸಗಳು ಅವಳಿಗೆ ಸ್ವಭಾವಿಕವಾಗಿ ಬಂದವು.  ತನ್ನ ತಂದೆಗೆ ಸಾರ್ವಜಿಕ ಕೆಲಸಗಳ ಒತ್ತಡ ಹೆಚ್ಚಾದಾಗ ಅವಳು ಅವರ ನೆರವಿಗೆ ನಿಂತಳು. ತಂದೆಯ ಆಪ್ತ ಕಾರ್ಯದರ್ಶಿನಿಯಾಗಿ, ಅವರ ಆರೋಗ್ಯದ ಆರೈಕೆ ಮಾಡುತ್ತ ತನ್ನ ಸುಖ ಸಂತೋಷಗಳನ್ನು ತಂದೆಗೋಸ್ಕರ ಮುಡಿಪಾಗಿಟ್ಟಳು. ತಂದೆಯ ಹೊರೆಯನ್ನು ಸ್ವಲ್ಪ ವಹಿಸಿಕೊಳ್ಳುವುದೇ ತಾನು ಮಾಡಬಹುದಾದ ಸೂಕ್ತ ದೇಶಸೇವೆ ಎಂದು ತಿಳಿದಳು.
ರೈತರ ಬಂಧು
೧೯೧೭ರಲ್ಲಿ ಗುಜರಾತಿನಲ್ಲಿ ಮಳೆ ಹೆಚ್ಚಾಗಿ ಬೆಳೆಗಳು ಹಾಳಾದವು. ಖೇಡಾ ಜಿಲ್ಲೆಯ ರೈತರಿಗಂತೂ ತುಂಬ ಕಷ್ಟ ಬಂತು. ಕಂದಾಯದ ಹಣ ಒಂದುಕಾಸೂ ಬಿಡದೆ ಕೊಡಬೇಕೆಂದು ಇಂಗ್ಲೀಷ್ ಸರಕಾರ ರೈತರನ್ನು ಬೆದರಿಸಿತು. ಆಗ ರೈತರು ಗಾಂಧೀಜಿಯವರ ಮೊರೆ ಹೊಕ್ಕರು.
"ಈ ಹೋರಾಟದ ಪೂರ್ತಿ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಒಬ್ಬ ವ್ಯಕ್ತಿ ನನಗೆ ಬೇಕು"ಎಂದರು ಗಾಂಧೀಜಿ.
"ಆ ಜವಾಬ್ದಾರಿ ನನಗಿರಲಿ" ಎಂದುವಲ್ಲಭಭಾಯಿ ಪಟೇಲರು ಮುಂದೆ ಬಂದರು. ಅವರು ಜನರನ್ನು  ಕುರಿತು, "ನೀವು ಇಂಗ್ಲೀಷರಿಗೆ ಏಕೆ ಹೆದರುತ್ತೀರಿ? ಜನರು ಒಗ್ಗಟ್ಟಾದರೆ ಯಾವ ಸರಕಾರವೂ ಏನೂ ಕೆಡಕು ಮಾಡಲಾರದು" ಎಂದು ದೈರ್ಯ ಹೇಳಿದರು. ತಾವು ಸೂಟು, ಬೂಟು ಬಿಟ್ಟು ಬಡರೈತರಂತೆ ಉಡುಪು ತೊಟ್ಟರು. ಹಳ್ಳಿಯಿಂದ ಹಳ್ಳೀಗೆ ಕಲ್ಲು ಮುಳ್ಳಿನ ದಾರಿಯಲ್ಲಿ ನಡೆದು ಕೊಂಡುಹೋಗಿ ರೈತರನ್ನು ಒಗಟ್ಟು ಮಾಡಿದರು. ಅಹಮದಾಬಾದಿನ ದೊಡ್ಡ ಬ್ಯಾರಿಸ್ಟರರಾದ ಅವರು ಈರೀತಿ ಹಗಲು ರಾತ್ರಿ ತಮಗಾಗಿ ಕಷ್ಟಪಡುವುದನ್ನು ಕಂಡು ರೈತರಿಗೆ ಅವರಲ್ಲಿ ಭಕ್ತಿ,ವಿಶ್ವಾಸ ಹುಟ್ಟಿತು. ಪಟೇಲರ ಮಾತಿಗಾಗಿ ಪ್ರಾಣ ಕೊಡಲು ಸಹ ತಯ್ಯಾರಾದರು.  ಇದರಿಂದ ಸರಕಾರ ಬಗ್ಗಬೇಕಾಯಿತು.ರೈತರ ಕಂದಾಯ ರದ್ದಾಯಿತು. ಪಟೇಲರು ನಡೆಸಿದ ಸತ್ಯಾಗ್ರಹಕ್ಕೆ ಜಯವಾಯಿತು. ೧೯೧೮ರ ಜೂನ್ ನಲ್ಲಿ ಗೆಲುವಿನ ಹಬ್ಬ ಆಚರಿಸಿದರು. ಗಾಂಧೀಜಿಯವರನ್ನು ಬರಮಾಡಿಕೊಂಡು ಮಾನ ಪತ್ರ ಅರ್ಪಿಸಿದರು.
"ಈ ಗೆಲುವಿನ ಕೀರ್ತಿ ವಲ್ಲಭಭಾಯಿ ಪಟೇಲರಿಗೆ ಸೇರಿದ್ದು, ಅಂಥ ಧೀರ ನಾಯಕರನ್ನು ಪಡೆದ ನೀವೇ ಧನ್ಯರು" ಎಂದು ಗಾಂಧೀಜಿಯವರು.
"ಖೇಡಾ ಜಿಲ್ಲೆಯ ಜನರು ದೈರ್ಯವನ್ನೂ ಸಹನ ಶಕ್ತಿಯನ್ನೂ ತೋರಿಸಿ ಹೋರಾಡಿದ್ದಾರೆ.  ಆದ್ದರಿಂದ ಎಲ್ಲ ಗೌರವವೂ ಅವರಿಗೆ ಸಲ್ಲಬೇಕು" ಎಂದು ಪಟೇಲರು ನಮ್ರತೆಯಿಂದ ಹೇಳಿದರು.
'ತೆರಿಗೆ ಕೊಡುವುದಿಲ್ಲ'
ವಲ್ಲಭಭಾಯಿ ತಾವು ನಂಬಿದ ತತ್ವಗಳಂತೆ ನಡೆಯುವವರು. ೧೯೨೦ರಲ್ಲಿ ಕಾಂಗ್ರೆಸ್ ಪಕ್ಷವು ಇಂಗ್ಲೀಷ ಸರಕಾರಕ್ಕೆ ಯಾವುದೇ ರೀತಿಯಲ್ಲಿಯೂ ನೆರವಾಗಬಾರದೆಂದು "ಅಸಹಕಾರ ನಿರ್ಣಯ" ಸ್ವೀಕರಿಸಿತು.  ಆಗ ಪಟೇಲರು ಕೈತುಂಬಾ ಸಂಪಾದನೆಯಿದ್ದ ಬ್ಯಾರಿಸ್ಟರ‍ವೃತ್ತಿ ಬಿಟ್ಟು ಬಿಟ್ಟರು. ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಬಾರದೆಂದರು. ಎಳೆಯರಿಗೆ ದೇಶಭಕ್ತಿಯ ಶಿಕ್ಷ ಕೊಡಲು "ಗುಜರಾತ್ ವಿದ್ಯಾಪೀಠ" ಎಂಬ ಸಂಸ್ಥೆಯನ್ನು ಆರಂಭಿಸಿದರು. ಲಕ್ಷಾಂತರ ರೂಪಾಯಿಗಳ ಹಣ ಸಂಗ್ರಹಿಸಿ ಆ ಸಂಸ್ಥೆಯನ್ನು ಬೆಳೆಸಿದರು.
೧೯೨೨ರಲ್ಲಿ ಬೋರಸದ್ ತಾಲೂಕಿನ ಜನರು ತೊಂದರೆಗೆ ಸಿಕ್ಕಿದರು. ದೇವರ‍್ ಬಾಬಾ ಎಂಬ ದರೋಡೆಗಾರ ತನ್ನ ತಂಡದವರೊಡನೆ ಅಲ್ಲಿ ಭೀಕರ ಕೊಲೆ, ಸುಲಿಗೆಗಳನ್ನು ಮಾಡತೊಡಗಿದ. ಅವನನ್ನು ಅಡಗಿಸಲೆಂದು ಪೋಲಿಸ್ ಪಡೆ ಬಂತು. ಆ ಪೋಲಿಸರು ಸಹ ಕಳ್ಳರಷ್ಟೆ ಕೇಡಿಗರು. ಜನರನ್ನು ಹೆದರಿಸಿ ಬೆದರಿಸಿ ಅವರಲ್ಲಿದ್ದ ನಗನಾಣ್ಯ, ದವಸ ಧಾನ್ಯಗಳನ್ನು ಕಿತ್ತಕೊಂಡು ಹೋಗುತ್ತಿದ್ದರು. ಅಷ್ಟರಲ್ಲಿ ಸರಕಾರವು ಪೋಲಿಸರ ಖರ್ಚು ವೆಚ್ಚಕ್ಕಾಗಿ ಜನರು ಹೊಸ ತೆರಿಗೆ ಕೊಡಬೇಕೆಂದು ಅಜ್ಞೆ ಹೊರಡಿಸಿತು. ಇಂತಹ ತೆರಿಗೆಗೆ "ಪುಂಡಗಂದಾಯ"ವೆಂದೆನ್ನುತ್ತಾರೆ. ಇದರಿಂದ ಉರಿಯುವ ಹುಣ್ಣಿಗೆ ಉಪ್ಪು ಹಾಕಿದಂತಾಯಿತು. ಹಳ್ಳಿಗಳಲ್ಲಿ ಹಾಹಾಕಾರ ಎದ್ದಿತು.
ಇಂಥ ಆಪತತಿನಲ್ಲಿ ವಲ್ಲಭಬಾಯಿ ಪಟೇಲರು ಜನರ ನೆರವಿಗೆ ಧಾವಿಸಿ ಬಂದರು. ಗ್ರಾಮಗಳ ರಕ್ಷಣೆಗೆ ಅಲ್ಲಿನ ಯುವಕರನ್ನೇ ಸೇರಿಸಿ ಒಂದು ಸ್ವಯಂ ಸೇವಕ ಪಡೆ ಕಟ್ಟಿದರು. ಆ ಯುವಕರು ಕಾವಲು ಶುರು ಮಾಡುತ್ತಲೇ ಡಕಾಯಿತರ ಹಾವಳಿ ನಿಂತು ಹೋಯಿತು.
"ನಿಮ್ಮ ಪೋಲಿಸರು ನಮಗೆ ಬೇಕಿಲ್ಲ. ನಾವು ಹೊಸ ತೆರಿಗೆ ಕೊಡುವುದಿಲ್ಲ. ಎಂದು ಸರಕಾರಕ್ಕೆ ಪಟೇಲರು ತಿಳೀಸಿದರು. ಸರಕಾರಿ ಅಧಿಕಾರಿಗಳು, ಜನರಿಗೆ ಎಷ್ಟೋ ಬಗೆಯಲ್ಲಿ ಬೆದರಿಕೆ ಹಾಕಿದರು. ಆದರೆ ಅವರ ಆಟ ಸಾಗಲಿಲ್ಲ. ಸರಕಾರ ತನ್ನ  ಆಜ್ಞೆಯನ್ನು ತೆಪ್ಪಗೆ ಹಿಂತೆಗೆದುಕೊಳ್ಳಬೇಕಾಯಿತು. ವಲ್ಲಭಭಾಯಿ ಪಟೇಲರ ಹೆಸರು ಭಾರತಕ್ಕೆಲ್ಲ ಹರಡಿತು.
೧೯೨೩ರಲ್ಲಿ ನಾಗಪೂರದಲ್ಲಿ ಸರಕಾರಿ ಅಧಿಕಾರಿಗಳು ವಾಸಿಸುತ್ತಿದ್ದ ಬೀದಿಗೆ ಯಾರೂ ತ್ರಿವರ್ಣ ಧ್ವಜ ಹಿಡಿದುಕೊಂಡು  ಹೋಗಬಾರದೆಂದು ಆಜ್ಞೆಯಾಯಿತು. ನಮ್ಮ ದೇಶದಲ್ಲಿ ನಮ್ಮ ಧ್ವಜ ಹಾರಿಸಲು ಏನು ಅಡ್ಡಿ? ಈ ಅವಮಾನದ ಅಜ್ಞೆಯನ್ನು ಮುರಿಯಲು ಜನರು ನಿರ್ಧರಿಸಿದರು.  ತಮಗೆ ಮಾರ್ಗದರ್ಶನ ಮಾಡಲು ವಲಭಭಾಯಿ ಪಟೇಲರನ್ನು ಕರೆಸಿಕೊಂಡರು. ಪಟೇಲರು ಬರುತ್ತಲೇ ಹೋರಾಟಕ್ಕೆ ಕಳೆ ಏರಿತು. ಇತರ ರಾಜ್ಯಗಳಿಂದಲೂ ಸತ್ಯಾಗ್ರಹಿಗಳು ಬರಲಾರಂಭಿಸಿದರು. ಮೂರುವರೆ ತಿಂಗಳು ದಿನವೂ ಸತ್ಯಾಗ್ರಹ ನಡೆಯಿತು. ಸರಕಾರದ ಆಜ್ಞೆಯ ರದ್ದಾಗಿ, ಚಳುವಳಿಗೆ ಜಯ ಸಿಕ್ಕಿತು.

ಪಟೇಲರಂಥ ಧೀರ ನಾಯಕರನ್ನು ಪಡೆದ ನೀವೇ ಧನ್ಯರು." ನಾನು ಒಬ್ಬ ರೈತ. ರೈತರು ಗೌರವದಿಂದ ತಲೆ ಎತ್ತಿಕೊಂಡು ನಡೆಯುವಂತೆ ಆಗಬೇಕು"
ಜನತೆಯ ಸೇವಕ
ಆ ವರ್ಷ ಗುಜರಾತ್ ಪ್ರದೇಶದಲ್ಲಿ ಮಳೆಯ ಆರ್ಭಟವೇ ಆರ್ಭಟ. ಎಲ್ಲೆಲ್ಲೂ ಪ್ರವಾಹ. ದಾರಿಗಳೆಲ್ಲ ನೀರಿನಲ್ಲಿ ಮುಚ್ಚಿ ಹೋದವು. ಸಾವಿರಾರು ಮನೆಗಳು ಕೊಚಿಚ ಹೋದವು. ಲಕ್ಷಾಂತರ ಜನ ನಿರ್ಗತಿಕರಾದರು. ಅವರಿಗೆ ನೆರವು ನೀಡಲು ವಲ್ಲಭಬಾಯಿ ಪಟೇಲರು ಮುಂದಾದರು. ಅವರ ಪ್ರಯತ್ನದಿಂದ ಎರಡೂ ಸಾವಿರ ಸ್ವಯಂ ಸೇವಕರ ಪಡೆ ಸಿದ್ಧವಾಯಿತು. ಪ್ರವಾಹ ಪೀಡಿತರಿಗೆ ಅನ್ನ, ಬಟ್ಟೆ ಒದಗಿಸಿ ಕಾಪಾಡಿದರು.
ಈ ಸೇವಾ ಕಾರ್ಯ ಅಷ್ಟಕ್ಕೆ ಮುಗಿಯಲಿಲ್ಲ. ಅತ್ತ ನೆರೆ ಹಾವಳಿ ನಿಲ್ಲುತ್ತಿದ್ದಂತೆಯೇ ಇತ್ತ ಘೋರಕ್ಷಾಮ ತಲೆಹಾಕಿತು. ನೆಲೆ ಉಳಲು ಎತ್ತುಗಳಿಲ್ಲ, ಧಾನ್ಯ ಬೆಳೆಯಲು ಬೀಜವಿಲ್ಲ. ರೈತ ಏನು ಮಾಡಿಯಾನು ? ಹಸಿವಿನಿಂದ  ಜನ ಕಂಗಾಲಾದರು. ಆಗ ಪಟೇಲರು ಜನರ ದುಃಖ ದುಮ್ಮಾನಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.  ಜನರಿಂದ ತೆರಿಗೆ ಪಡೆಯುವ ಸರಕಾರ ಕಷ್ಟಕಾಲದಲ್ಲಿ ಅವರಿಗೆ ಸಹಾಯ ಮಾಡಬೇಕೆಂದು ಒತ್ತಾಯಿಸಿದರು.  ಅದರಿಂದ ಸರಕಾರ ಒಂದೂವರೆ ಕೋಟಿ ರೂಪಾಯಿಗಳನ್ನು ಕ್ಷಾಮ ಪೀಡಿತರಿಗೆ ನೀಡಬೇಕಾಗಿ ಬಂತು. ಹೀಗೆ ಬಂದ ಹಣ ಸದುಪಯೋಗವಾಗುವಂತೆ ಪಟೇಲರು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದರು. ಅವರು ಕೇವಲ ಹೋರಾಟದ ವೀರರು ಮಾತ್ರವಲ್ಲ. ಉತ್ತಮ ವ್ಯವಸ್ಥಾಪಕರೂ ಹೌದೆಂದು ಜಗತ್ತಿಗೆ ಗೊತ್ತಾಯಿತು.  ಈ ವೇಳೆಗೆ ಅವರು ಅಹಮ್ಮದಾಬಾದ್ ಪುರಸಭೆಯ ಅಧ್ಯಕ್ಷರೂ ಆಗಿದ್ದರು.
ಬಾರ್ದೊಲಿ ವೀರ
ಗುಜರಾತಿನಲ್ಲಿ ಬಾರ್ದೊಲಿ ಎಂಬ ತಾಲೂಕಿದೆ. ಪ್ರವಾಹ ಮತ್ತು ಕ್ಷಾಮದ ದೆಸೆಯಿಂದ ಅಲ್ಲಿನ ಜನರೆಲ್ಲ ಪೂರಾ ಸೊರಗಿ ಹೋಗಿದ್ದರು.  ಇಂತಹ ಸಂಕಟದ ಸಮಯದಲ್ಲಿಯೇ ಇಂಗ್ಲೀಷ್ ಸರಕಾರ ಅಲ್ಲಿ ಕಂದಾಯವನ್ನು ನೂರಕ್ಕೆ ಮೂವತ್ತರಷ್ಟು ಹೆಚ್ಚಿಸಿತು. ಜನರಿಗೆ ಧಿಕ್ಕೆ ತೋರಲಿಲ್ಲ. ಅವರು ವಲ್ಲಭಭಾಯಿ ಯವರ ಬಳಿ ಹೋಗಿ, ಈಗ ನಮಗೆ ನೀವೇ ದಿಕ್ಕು" ಎಂದರು.
"ಸರಕಾರದೊಡನೆ ಜಗಳಕ್ಕೆ ನಿಂತರೆ, ನೀವೂ ಇನ್ನೂ ಕಷ್ಟಪಡಬೇಕಾಗುತ್ತದೆ. ಆಸ್ತಿಪಾಸ್ತಿಗಳ ಆಸೆ ಬಿಡಬೇಕಾಗುತ್ತದೆ. ಸರಕಾರ ನಿಮ್ಮನ್ನು ಮಣ್ಣು ಗೂಡಿಸಲು ಪ್ರಯತ್ನಿಸುತ್ತಿದೆ. ಅಗುಳು ಅನ್ನ ಸಿಕ್ಕದೆ ತೊಟ್ಟು  ಹಾಲು ಸಿಕ್ಕದೆ ನಿಮ್ಮ ಹೆಂಗಸರು, ಮಕ್ಕಳು ನರಳಬೇಕಾಗುತ್ತದೆ. ಹೊಲ, ಮನೆ ಜಪ್ತಿಯಾಗುತ್ತದೆ.ಮೊದಲೇ ಚೆನ್ನಾಗಿ ಅಲೋಚಿಸಿ ನೋಡಿ, ಇಷ್ಟೆಲ್ಲ ಸಹಿಸುವ ತಾಕತ್ತು ಇದ್ದರೆ ಹೋರಾಟ ಆರಂಭಿಸೋಣ" ಎಂದರು. ಪಟೇಲರು.
"ನಾವು ಸಿದ್ಧರು, ಪ್ರಾಣ ಹೋದರೂ ಸರಿಯೆ, ಅನ್ಯಾಯಕ್ಕೆ ತಲೆಬಾಗುವುದಿಲ್ಲ" ಎಂದರು ರೈತರು.
ಪಟೇಲರು  ಮೊದಲು ಗವರ್ನರಿಗೆ ಪತ್ರ ಬರೆದು, ಕಂದಾಯ ಕಡಿಮೆ ಮಾಡಬೇಕೆಂದು ವಿನಂತಿಸಿದರು. ಆದರೆ ಅವರು ಕಿವಿಗೊಡಲಿಲ್ಲ. ಕಂದಾಯ ವಸೂಲಿಯ ದಿನವನ್ನೂ ಸರಕಾರ ಪ್ರಕಟಿಸಿತು.
"ಯಾರೂ ಒಂದು ಕಾಸು ಸಹ ಕಂದಾಯ ಕೊಡಬಾರದು:" ಎಂದು ವಲ್ಲಭಭಾಯಿ ರೈತರಿಗೆ ಆದೇಶ ವಿತ್ತರು. ಸಂಘರ್ಷದ ಕಹಳೆ ಮೊಳಗಿತು.
ಪಟೇಲರು ಬಾರ್ದೊಲಿ ತಾಲೂಕನ್ನು ಹಲವು ಭಾಗಳಾಗಿ ವಿಂಗಡಿಸಿದರು. ಒಂದೊಂದು ಭಾಗದಲ್ಲಿಯೂ ಒಂದೊಂದು ಶಿಬಿರ. ಅದರಲ್ಲಿ ಕೆಲವು ಸತ್ಯಾಗ್ರಹಿಗಳು ಮತ್ತು ಒಬ್ಬ ಮುಖ್ಯಸ್ಥ. ಶಿಬಿರದಿಂದ ಶಿಬಿರಕ್ಕೆ ಸುದ್ಧಿ ತಿಳಿಸಲು ಸಂದೇಶ ವಾಹಕರು. ಸರಕಾರಿ ಅಧಿಕಾರಿಗಳಿ ಚಲನವಲನಗಳು ತಿಳಿಸುವ ಗೂಢಚಾರರನ್ನೂ ಪಟೇಲರು ನೇಮಿಸಿದರು.
"ನಮ್ಮ ಪೂರ್ತಿ ಶಕ್ತಿ ಪ್ರಯೋಗಿಸಿ ಸತ್ಯಾಗ್ರಹಕ್ಕೆ ಮಟ್ಟ ಹಾಕುತ್ತೇವೆ" ಎಂದು ಮುಂಬಯಿಯ ಗವರ್ನರ‍್ ಘೋಷಣೆ ಮಾಢಿದ. ಸರಕಾರವು ಹಳ್ಳಿಗಳಗರನ್ನು ಹೆರಿಸಲು ಗೊಂಡಾಗಳ ತಂಡವನ್ನು ಕಳೂಹಿಸಿತು. ಅವರು ಗ್ರಾಮಗಳೀಗೆ ನುಗ್ಗಿ ರೈತರನ್ನು ಹೊಡೆಯುವರು. ಮನೆಗಳಿಗೆ ನುಗ್ಗಿ ಧನಧಾನ್ಯ ದೋಚಿವರು. ಹೆಂಗಸರನ್ನು ಅವಮಾನಿಸುವರು. ಇಷ್ಟೆಲ್ಲ ಆದರೂ ರೈತರ ನಿರ್ಧಾರ ಕದಲಿಲ್ಲ. ಒಂದು ಕುರುಡು ಕಾಸನ್ನೂ ಕೊಡಲಿಲ್ಲ.
ಸರಕಾರ ಹೊಲ, ಮನೆಗಳನ್ನು ಹರಾಜು ಹಾಕಲು ಆರಂಭಿಸಿತು. ಆದರೆ ಅದನ್ನು ಕೊಳ್ಳಳು ಒಂದು ನರ ಪಿಳ್ಳೆಯೂ ಬರಲಿಲ್ಲ. ಪ್ರತಿ ಗ್ರಾಮದಲ್ಲಿಯೂ ವಲ್ಲಭಭಾಯಿ ಕಾವಲು ಸ್ವಯಂ ಸೇವಕರನ್ನು ನೇಮಿಸಿದ್ದರು.  ಈ ಕಾವಲುಗಾರರ ತುತ್ತೂರಿ ಊದಿ ಹರಾಜು ಹಾಕುವ ಆಧಿಕಾರಿಗಳ ಬರುವ ಸುಳಿವು ತಿಳಿಸುತ್ತಿದ್ದ. ಕೂಡಲೇ ರೈತರೆಲ್ಲ ಊರು ಬಿಟ್ಟು ಕಾಡು ಕಣಿವೆಗಳೀಗೆ ಹೊರಟು ಹೋಗುತ್ತಿದ್ದರು. ಊರೆಲ್ಲ ಖಾಲಿ, ಯಾರದ್ದು ಯಾವ ಮನೆ ಎಂಬುವುದೇ ಅಧಿಕಾರಿಗಳಿಗೆ ಪತ್ತೇ ಹತ್ತುತ್ತಿರಲಿಲ್ಲ.
ಪಟೇಲರು ಹಗಲುರಾತ್ರಿ ಹಳ್ಳೀಗರ ನಡುವೆ ಯಿದ್ದು, ಧೈರ್ಯ ತುಂಬಿದರು.  "ನಿಮಗೆ ಇನ್ನು ಅಲ್ಪಸ್ವಲ್ಪ ಭಯ ಅಂಟಿಕೊಂಡಿದ್ದರೆ, ಅದನ್ನು ಕಿತ್ತುಹಾಕಿ ಬಾವಿಯಲ್ಲಿ ಹಾಕಿಬಿಡಿ, ಈಗ ಭಯ ಹುಟ್ಟಿರುವುದು ನಮಗಲ್ಲ, ಸರಕಾರಕ್ಕೆ" ಎಂದರು.
"ನಾನೂ ಒಬ್ಬ ರೈತ. ರೈತರ ಮನಸ್ಸು ನನಗೆ ಚೆನ್ನಾಗಿ ಗೊತ್ತು. ರೈತರು ಗೌರವದಿಂದ ತಲೆಯೆತ್ತಿಕೊಂಡು ಓಡಾಡುವಂತೆ ಆಗಬೇಕೆಂಬುವುದೇ ನನ್ನ ಆಶೆ. ಆಗಲೇ ಮನಸ್ಸಿಗೆ ಶಾಂತಿ ಎಂದರು.
ರೈತರ ಭೂಮಿಯನ್ನು ಹರಾಜಿನಲ್ಲಿ ಕೊಳ್ಳಳು ಪಟ್ಟಣದಿಂದ ಕೆಲವು ಹಣವಂತರು ಬರುತ್ತಾರೆಂದು ತಿಳಿಯಿತು. ಆಗ ಪಟೇಲರು, "ಗುಜರಾತಿನಲ್ಲಿ ಈಗ ನಾನು ಸರ್ದಾರ. ಬರಲಿ ನಾನು ನೋಡಿಕೊಳ್ಳುತ್ತೇನೆ" ಎಂದು ಎಚ್ಚರಿಸಿದರು. ಭೂಮಿ ಕೊಂಡವರಿಗೆ ಪೂರ್ತಿ ಬಹಿಷ್ಕಾರ ಹಾಕಿದರು. ಹೊರಗಿನ ಸಾಹುಕಾರರು ಅನ್ನ, ನೀರು ಸಹ ಸಿಕ್ಕದೆ, ಜೀವ ಉಳಿದರೆ ಸಾಕೆಂದು ವಾಪಸ್ಸು ಹೋಗಬೇಕಾಯಿತು.
ಸರ್ದಾರ್ ಪಟೇಲ್
ಸರಕಾರದ ತಪ್ಪು ನೀತಿಯನ್ನು ಖಂಡಿಸಿ ಅನೇಕ ಸದಸ್ಯರು ರಾಜೀನಾಮೆ ಕೊಟ್ಟರು. ಸರ್ಕಾರ ಹಣ್ಣಾಯಿತು. ಜನರ ಅಂದೋಲನಕ್ಕೆ ಜಯವಾಯಿತು. ವಲ್ಲಭಭಾಯಿಯವರು ಅಂದಿನಿಂದ ಸರ್ಧಾರ ವಲ್ಲಭಭಾಯಿ ಪಟೇಲ್ ಆದರು. ಬಾರ್ದೊಲಿಯ ರೈತರು  ಅವರಿಗೆ ಸನ್ಮಾನ ಏರ್ಪಡಿಸಿದರು.  ಮಾನಪತ್ರ ಅರ್ಪಿಸಿ ಗುಣಗಾನ ಮಾಡಿದರು. ಆಗ ಸರ್ದಾರರು ಹೇಳಿದ ಮಾತು-
"ಮಹಾತ್ಮಾ ಗಾಂಧಿಯವರು ಸತ್ಯಾಗ್ರಹದ ಮೂಲಿಕೆ ಕೊಟ್ಟರು. ಅದನ್ನು ನಾನು ನಿಮಗೆ ತೇಯ್ದು ಕುಡಿಸಿದೆ. ಆದ್ದರಿಂದ ಮಾನಪತ್ರದಲ್ಲಿರುವ ಹೊಗಳಿಕೆಯೆಲ್ಲ  ಅವರಿಗೂ ಮತ್ತು ಪಥ್ಯ ಪಾಲಿಸಿದ ನಿಮಗೂ ಸೇರಬೇಕು. ನನ್ನ ಪಾಲಿಗೆ ಉಳಿಯುವುದು ಕೇವಲ ಖಾಲಿ ಕಾಗದ, ಅಷ್ಟೇ. ದೇಶದ ಹಿತ ಯುವಕರ ಕೈಲಿದೆ. ಪ್ರತಿ ದೇಶದಲ್ಲಿಯೂ ಸ್ವಾತಂತ್ಯ್ರ ಗಳಿಸಿ ಅದನ್ನು ಭದ್ರಪಡಿಸಿ ಮುಂದಿನ ಜನಾಂಗಕ್ಕೆ ಕೊಟ್ಟವರು ಯುವಕರೇ: ಮರೆಯಬೇಡಿ".
ಪಟೇಲರು ಇಡೀ ಹಿಂದೂಸ್ಥಾನಕ್ಕೆ "ಸರ್ದಾರ" ಆದರು.
ಸೆರಮನೆಯಲ್ಲಿ ಸಿಂಹ
ಸರ್ದಾರರ ಸಿಂಹಗರ್ಜನೆಯಿಂದ ಇಂಗ್ಲೀಷ ಸರಕಾರಕ್ಕೆ ಸಿಟ್ಟು ಬಂತು. ೧೯೩೦ರಲ್ಲಿ ಅವರನ್ನು ಎರಡು ಭಾರಿ ಬಂಧಿಸಿತು. ಆದರದಿಂದ ಅವರ ಪ್ರಭಾವ ಬೆಳೆಯಿತೇ ಹೊರತು ಕಡಿಮೆಯಾಗಲಿಲ್ಲ. ೧೯೩೧ರ ಮಾರ್ಚ ತಿಂಗಳಲ್ಲಿ ಕರಾಚಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಸರ್ದಾರ ಪಟೇಲರೇ ಅಧ್ಯಕ್ಷರಾಗಿ ಆಯ್ಕೆ ಹೊಂದಿದರು. ತಮ್ಮ ಭಾಷಣದಲ್ಲಿ ಅವರು, "ರಾಜ್ಯವೇ ನಮ್ಮ ಗುರಿ. ಅದನ್ನು ಸ್ವಲ್ಪವೂ ಬದಲಾಯಿಸುವಂತಿಲ್ಲ ಎಂದು ಸಾರಿದರು. ಸರಕಾರದ ಕೋಪ ಇನ್ನಷ್ಟು ಕೆರಳಿ, ಪುನಃ ಅವರನ್ನು ಸೆರೆಯಲ್ಲಿಟ್ಟಿತು. ಆಮೇಲೆ ಅವರು ಬಿಡುಗಡೆಯಾದುದು ೧೯೩೫ರಲ್ಲಿ.
ಸರ್ದಾರರ ಸೆರೆಮನೆಯ ಅನುಭವ ರೋಚಕವಾಗಿದೆ. ಅವರನ್ನು ಸಾಮಾನ್ಯ ಖೈದಿಯಂತೆ ಇಡಲಾಗಿತ್ತು.  ಸೆರೆಮನೆಯಲ್ಲಿಯದ್ದುದು ಒಂದೇ ಕಕ್ಕಸ್ಸು.  ಬೆಳಿಗ್ಗೆ ಎದ್ದರೆ ಖೈದಿಗಳೆಲ್ಲ ಸಾಲಿನಲ್ಲಿ ಕಾಯುತ್ತ ನಿಲ್ಲಬೇಕಿತ್ತು. ಮತ್ತೇ ನೀರಿಗೋಸ್ಕರವೂ ಬೇರೆ ಸಾಲು ಮಾಡಬೇಕಾಗುತ್ತಿತ್ತು.  ಮೂತ್ರ ವಿಸರ್ಜನೆಗೂ ಏಕಾಂತವಾದ ಸ್ಥಳ ಇರುತ್ತಿರಲಿಲ್ಲ. ಅಲ್ಲಿಯ ಊಟ ತಿಂಡಿಗಳಂತೂ ತೀರ ಕೀಳು ದರ್ಜೆಯದಾಗಿರುತ್ತಿತ್ತು. ಆದರೆ ಇದಾವುದೂ ಸರ್ದಾರರ ಧೈರ್ಯವನ್ನು ಕೆಡಿಸಲಿಲ್ಲ.
ಸೆರೆಮನೆಯ ಅಧಿಕಾರಿಗಳು ಖೈದಿಗಳಿಗೆ ಕಿರುಕುಳ ಕೊಡಲು ಕಾರಣವೇ ಬೇಕಾಗುತ್ತಿರಲಿಲ್ಲ. ಸೆರೆಮನೆಯಲ್ಲಿ ಉಪಯೋಗಕ್ಕೆಂದು ಸ್ನೇಹಿತರು ಸರ್ದಾರರಿಗೆ ಕೆಲವು ವಸ್ತುಗಳನ್ನು ತಂದುಕೊಟ್ಟರು.  ಅದರಲ್ಲಿ ಮುಖ ಕ್ಷೌರ ಮಾಡಿಕೊಳ್ಳುವ ರೇಜರ ಇತ್ತು. ಅದನ್ನು ಕೊಡುವುದಕ್ಕೆ ಅಧಿಕಾರಿಗಳ ತಕರಾರು,  ಕೊನೆಗೆ ಪ್ರತಿಭಟಿಸಿದರು.
"ನನಗೆ  ರೇಜರ ಕೊಟ್ಟರು ಎಲ್ಲ ಖೈದಿಗಳಿಗೂ ನಾನೇ ಶೇವ್ ಮಾಡಲು ನೀವು ಏಕೆ ಬಿಡಬಾರದು ? ಒಂದಿಷ್ಟು ಕೆಲಸ  ಮಾಡಿ ಸಮಯ ಕಳೆದ ಹಾಗಾದರೂ ಆಗುತ್ತದೆ" ಎಂದು ಹೇಳಿದರು ಸರ್ದಾರ್.
ಇದನ್ನು ಕೇಳಿ ಸೆರೆಮನೆಯ ಸಣ್ಣ ಪುಟ್ಟ ಕಾರಕೂನರನ್ನು ಮೊದಲ್ಗೊಂಡು ಎಲ್ಲರೂ ಘೋಳ್ಳೆಂದು ನಕ್ಕರು.
ಸರ್ದಾರರಿಗೆ ದೇವರು- ಧರ್ಮಗಳಲ್ಲಿ ಎಷ್ಟು ನಂಬಿಕೆಯತ್ತೆಂದು ಹೊರನೋಟಕ್ಕೆ ಗೊತ್ತಾಗುತ್ತಿರಲಿಲ್ಲ. ಆದರೆ ಅವರು ಸೆರಮನೆಯಲ್ಲಿದ್ದಾಗ ಭಗವದ್ಗೀತೆ ಮತ್ತು ರಾಮಾಯಣಗಳನ್ನು ಸೆರೆಮನೆಯ ಅಧಿಕಾರಿಗಳಿಂದ ತರಿಸಿಕೊಂಡಿದ್ದರು. ಅವುಗಳನ್ನು ದಿನವೂ ಓದಿ ಮನನ ಮಾಡುತ್ತಿದ್ದರು.
ನಿರ್ದಾಕ್ಷಿಣ್ಯ ಮಾತು  ಮತ್ತು ಕೃತಿ
೧೯೩೭ರಲ್ಲಿ ಪ್ರಾಂತೀಯ ಶಾಸನ ಸಭೆಗಳೀಗೆ ಚುನಾವಣೆಗಳು ನಡೆದವು. ಸರ್ದಾರರು ಕಾಂಗ್ರೆಸ್ ಪಾರ್ಲಿಮೆಂಟರಿ ಸಮಿತಿಯ ಅಧ್ಯಕ್ಷರಾಗಿದ್ದರು. ಅವರ ನೇತೃತ್ವದಲ್ಲಿ ಕಾಂಗ್ರೆಸ, ಎಂಟು ಪ್ರಾಂತಗಳಲ್ಲಿ ಗೆದ್ದು, ಮಂತ್ರಿ ಮಂಡಲಗಳನ್ನು ರಚಿಸಿತು. ಅವೆಲ್ಲದರ ಲಗಾಮು ಇದ್ದುದು ಸರ್ದಾರರ ಕೈಯಲ್ಲಿ. ಅವರು ತಪ್ಪು ಮಾಡಿದ ಮಂತ್ರಿಗಳನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುತ್ತಿದ್ದರು.
೧೯೪೨ರಲ್ಲಿ ಕಾಂಗ್ರೆಸ್ ಬ್ರಿಟಿಷರಿಗೆ "ಭಾರತ ಬಿಟ್ಟು ತೊಲಗಿ" ಎಂದು ಗರ್ಜಿಸಿತು. ಇದಕ್ಕೆ "ಕ್ವಿಟ್ ಇಂಡಿಯಾ ಅಥವಾ "ಚಲೇಜಾವ, ಚಳುವಳಿ ಎಂದೂ ಹೆಸರು.  ಆಗ ಸರಕಾರ ಸರ್ದಾರ ಪಟೇಲರನ್ನೂ ಒಳಗೊಂಡು ಎಲ್ಲ ಕಾಂಗ್ರೆಸ್ ಸರ್ದಾರ ಪಟೇಲರನ್ನೂ ಒಳಗೊಂಡು  ಎಲ್ಲ ಕಾಂಗ್ರೆಸ್ ನಾಯಕರನ್ನೂ ಕಾರಾಗೃಹಕ್ಕೆ ದೂಡಿತು. ಪಟೇಲರು ಸೆರೆಯಲ್ಲಿ ಕಾಯಿಲೆ ಬಿದ್ದರು. ಅವರ ಡಾಕ್ಟರು ಅವರನ್ನು ನೋಡಲು ಸರಕಾರ ಅನುಮತಿ ಕೊಡಲಿಲ್ಲ. ಮೂರು ವರ್ಷಗಳ ಬಳಿಕ ಅವರೆಲ್ಲರೂ ಬಿಡುಗಡೆ ಹೊಂದಿರು. ಅಘ ಮುಸ್ಲಿಂ ಲೀಗ್ ಪಕ್ಷ ಅಡಿಗಡಿಗೂ ಭಾರತದ ಸ್ವಾತಂತ್ಯ್ರಕ್ಕೆ ಅಡ್ಡಿ ಬರುವವರೆಲ್ಲರೊಡನೆಯೂ ಹೋರಾಡುತ್ತೇನೆ" ಎಂದು ಸವಾಲು ಹಾಕಿದರು.

೧೯೪೭ರ ಆಗಸ್ಟ್ ೧೫ ರಂದು ಸರ್ದಾರ ಪಟೇಲರು ಉಪ ಪ್ರಧಾನಿಯಾಗಿ ಪ್ರಮಣ ವಚನ ಸ್ವೀಕರಿಸುತ್ತಿರುವುದು.
೧೯೪೭ರ ಆಗಸ್ಟ್ ೧೫ ರಂದು ಸ್ವಾತಂತ್ಯ್ರ ಬಂತು. ಪಂಡಿತ ಜವಾಹರಲಾಲ್ ನೆಹರು ಸ್ವತಂತ್ಯ್ರ ಭಾರತದ ಮೊದಲನೇ ಪ್ರಧಾನಿ ಆದರು. ಸರ್ದಾರ‍್ ಪಟೇಲರು ಉಪ ಪ್ರಧಾನಿ ಆದರು. ಗೃಹಖಾತೆ ಪ್ರಚಾರ ಮತ್ತು ದೇಶೀಯ ರಾಜ್ಯಗಳ ವಿಭಾಗ ಪಟೇಲರಿಗೆ ಸೇರಿತ್ತು.
ದೇಶದ ಸಮಗ್ರತೆಯ ಶಿಲ್ಪಿ
ಆಗ ಭಾರತದಲ್ಲಿ ೬೦೦ಕ್ಕೂ ಹೆಚ್ಚು ಸಂಸ್ಥಾನಗಳಿದ್ದವು. ಹಲವನ್ನು ಬಿಟ್ಟರೆ ಉಳಿದೆಲ್ಲವೂ ಸಣ್ಣ ಪುಟ್ಟ ಪಾಳೆಯಪಟ್ಟುಗಳು. ಇವನ್ನಾಳುತ್ತಿದ್ದ ರಾಜಮಹಾರಾಜರು, ನವಾಬರುಗಳಲ್ಲಿ ಕೆಲವರು ವಿವೇಕವಂತರು, ದೇಶಾಭಿಮಾನಿ ಗಳೂ ಇದ್ದರು. ಆದರೆ ಬಹುಮಂದಿ ಹಣ, ಅಧಿಕಕಾರಗಳಿಂದ ಕೊಬ್ಬಿದವರು. ಬ್ರೀಟಿಷರು ಈ ದೇಶ ಬಿಟ್ಟು ಹೋದರೆ ತಾವು ಸ್ವತಂತ್ಯ್ರ ರಾಜರಾಗುತ್ತೇವೆ ಎಂದು ಕನಸು ಕಂಡವರು. ಸ್ವತಂತ್ಯ್ರ ಭಾರತದ ಸರಕಾರ ತಮ್ಮನ್ನು ಸರಿಸಮಾನರಂತೆ ಕಾಣಬೇಕು ಎಂದು ವಾದಿಸಿದರು. ಕೆಲವರಂತೂ ವಿಶ್ವಸಂಸ್ಥೆಗೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸುವ ಯೋಚನೆ ಮಾಡುತ್ತಿದ್ದರು.
ಈ ರಾಜ್ಯಗಳೆಲ್ಲ ಸ್ವತಂತ್ರ ಭಾರತದ ಭಾಗವಾಗಬದೇ ಇದ್ದಿದ್ದರೆ ಭಾರತದಲ್ಲಿ ನೂರಾರು ಸಣ್ಣ ಪುಟ್ಟ  ರಾಜ್ಯಗಳು ಅಲ್ಲಲ್ಲಿ ಉಳಿಯುತ್ತಿದ್ದವು. ಅಲ್ಲಿ ಭಾರ‍ತದ ರೈಲು ಹೋಗಬೇಕಾದರೆ ಆ ರಾಜರ ಅಪ್ಪಣೆ ಬೇಕು. ಅಲ್ಲಿ ನದಿಗಳು ಅಕ್ಕಪಕ್ಕದ  ಪ್ರದೇಶಗಳಲ್ಲಿ ಹರಿದಾಗ ಪಾಲಿಗಾಗಿ ಅವರ ಅಪ್ಪಣೆ ಬೇಕು.  ಭಾರತಕ್ಕೂ ಬೇರ ದೇಶಕ್ಕೂ ಯುದ್ಧವಾದರೆ  ಈರಾಜ್ಯಗಳು ಯಾವ  ಕಡೆ ಸೇರಿದರೂ ಸೇರಿದವರೇ! ಭಾರತದ ದೇಹದಲ್ಲಿ ನೂರಾರು ಹುಣ್ಣುಗಳಾಗುತ್ತಿದ್ದವು ಇವು. ಇವುಗಳಲ್ಲಿ ಒಂದು ಸಂಸ್ಥಾನವಾದ ಕಾಶ್ಮೀರದ ಸಮಸ್ಯೆ ಕೂಡಲೇ ಪರಿಹಾರವಾಗಲಿಲ್ಲ; ಇನ್ನೂ ಅದರ ಒಂದು ಭಾಗ ಪಾಕಿಸ್ತಾನದ ಕೈಯಲ್ಲಿ ಇದೆ. ಇನ್ನೂ ಅದರ ತಲೆನೋವು ಭಾರತಕ್ಕೆ ಹ ಓಗಿಲ್ಲ. ಈ ಸಂಸ್ಥಾನಗಳ ಸಮಸ್ಯೆ ಬೇಗನೇ ಪರಿಹಾರವಾಗದಿದ್ದರೆ ಆರುನೂರು ಕಾಶ್ಮೀರ ಸಮಸ್ಯೆಗಳಾಗಿ ಬಿಡುತ್ತಿತು.
"ನಾಔಎಲ್ಲ ಒಟುಗೂಡಿದರೆ ದೇಶಧ ಎಳಿಗೆಯನ್ನು , ಬಹುಬೇಗ ಸಾಧಿಸಬಹುದು. ಬನ್ನಿ, ಸಹಕಾರ ನೀಡಿ" ಎಂದು ಸರ್ದಾರರು ರಾಜರುಗಳಿಗೆ ಸ್ವಾತಂತ್ಯ್ರಕ್ಕೆ ಮೊದಲೇ ಒಳ್ಳೆಯ ಮಾತಿನಲ್ಲಿ ಹೇಳಿದರು. ಅನಂತರ , "ಆಗಸ್ಟ ೧೫ರೊಳಗೆ ಸೇರದಿದ್ದರೆ, ಆಮೇಲಿನ ಲೆಕ್ಕ ಬೇರೆ. ಈಗಿನ ಸವಲತ್ತುಗಳು ಆಮೇಲೆ ಸಿಕ್ಕಲಾರವು" ಎಂದು ಎಚ್ಚರಿಕೆ ಕೊಟ್ಟರು.  ಅನೇಕ ರಾಜರನ್ನು ಪಟೇಲರು ತಾವೇ ಭೇಟಿಯಾಗಿ ಮಾತುಕತೆಯಾಢಿದರು. ಇದರಿಂದ ದೇಶಭಕ್ತಿ ಇದ್ದವರೆಲ್ಲರೂ  ಬೇಗ ಭಾರತದ ಒಕ್ಕೂಟಕ್ಕೆ ಸೇರಿಕೊಂಡರು.
ಉಕ್ಕಿನ ಮನುಷ್ಯ
ಆದರೆ ಜುನಾಗಢ ಮತ್ತು ಹೈದರಾಬಾದಿನ ರಾಜರು ಪಾಕಿಸ್ತಾನಕ್ಕೆ ಸೇರಿಕೊಳ್ಳಲು ಒಳಗೊಳಗೆ ಸಂಚು ನಡೆಸತೊಡಗಿದರು.
ಪಾಕಿಸ್ತಾನವು ತಂಟೆ ಮಾಡಿದರೆ ವಿಚಾರಿಸಿಕೊಳ್ಳಲುಸರ್ದಾರ‍್ ಪಟೇಲರು ಬ್ರಿಗೇಡಿಯಿರ‍್ ಗುರುದಯಾಲ ಸಿಂಹರನ್ನು ಸೈನ್ಯ ಸಹಿತ ಜುನಾಗಢದ ಗಡಿಗೆ ಕಳುಹಿಸಿದರು.  ಹಿಂದೂಸ್ಥಾನಕ್ಕೆ ಸೇರಬೇಕೆಂದಿದ್ದ ಅಲ್ಲಿನ ಪ್ರಜೆಗಳು ದಂಗೆ ಎದ್ದು ಜನತಾ ಸರಕಾರ ಸ್ಥಾಪಿಸಿದರು.ಅಲ್ಲಿನಜನತಾ ದ್ರೋಹಿ ನವಾಬನು ಪಾಕಿಸ್ತಾನಕ್ಕೆ ಪರಾರಿಯಾದ.  ೧೯೪೭ರ ನವೆಂಬರ‍್, ೧೨ ರಂದು ಸರ್ದಾರರು ಜುನಾಗಢ ತಲುಪಿದರು. ಅಲ್ಲಿ ಭಾಷಣ ಮಾಡುತ್ತಾ,
"ಹೈದರಾಬಾದಿನ ನಿಜಾಮರು ಏನಾದರೂ ದಗಾಬಾಜಿ ಮಾಡಿದರೆ, ಜುನಾಗಢ ನವಾಬನ ಗತಿಯೇ ಅವರಿಗೂ ಕಾದಿದೆ" ಎಂದು ಎಚ್ಚರಿಸಿದರು.
ಆದರೆ ನಿಜಾಮರಿಗೆ ಬೇಗ ಬುದ್ಧಿ ಬರಲಿಲ್ಲ. ಪಾಕಿಸ್ತಾನಕ್ಕೆ ಕೋಟ್ಯಾಂತರ ರೂಪಾಯಿ ಸಾಗಿಸಿದರು.ಕಾಸಿಂ ರಜ್ಜಿ ಎಂಬ ಅವರ ಅಧಿಕಾರಿ ಹಿಂದೂಗಳ ಮೇಲೆ ಹಿಂಸಾಚಾರ ಆರಂಭಿಸಿದ. ಅವನ ತಂಡಕ್ಕೆ ರಜಾಕಾರರೆಂದು ಹೆಸರು. ಅವರು ಹಿಂದುಗಳನ್ನು ಹೊರಗಟ್ಟಲು ಪ್ರಯತ್ನಿಸಿದರು. ಅವರ ಪೈಶಾಚಿಕ ಕೃತ್ಯಗಳಿಗೆ ಮಿತಿಯೇ ಉಳಿಯಲಿಲ್ಲ. ಹೈದರಾಬಾದಿನ ಹೊರಗಿನಿಂದ ಮದ್ದುಗುಂಡುಗಳನ್ನು ತರಿಸುವ ವ್ಯವಸ್ಥೆ ಮಾಡಲು ಪ್ರಯತ್ನಿಸಿದರು.
ಕೊನೆಗೆ ಸರ್ದಾರ ಪಟೇಲರು, ಜನರಲ್ ಚೌಧುರಿಯವರನ್ನು ಸೈನ್ಯದೊಡನೆ ಕಳೂಹಿಸಿ, ಪೋಲಿಸ ಕಾರ್ಯಾಚರಣೆ ನಡೆಸಿದರು. ಐದೇ ದಿನದಲ್ಲಿ ನಿಜಾಮರು ಶರಣರಾಗಬೇಕಾಯಿತು. ಕಾಸಿಂ ರಜ್ಜಿ ಪಾಕಿಸ್ತಾನಕ್ಕೆ ಓಡಿ ಹೋದ. ರಜಾಕಾರರ ಅತ್ಯಾಚಾರಗಳು ಕೊನೆಗೊಂಡು ಶಾಂತಿ ನೆಲಸಿತು. ಉಕ್‌ಇನ ಮನುಷ್ಯ ಸರ್ಧಾರರ ದೃಢ ನೀತಿಯಿಂದ ಪಿತೂರಿಗಳೆಲ್ಲ ಧ್ವಂಸವಾದವು.
ಆಗ ಕಾಶ್ಮೀರದಲ್ಲಿಯೂ ಸಮಸ್ಯೆ ಎದ್ದಿತು. ಅಲ್ಲಿನ ರಾಜರೂ ವಿಧಾನಸಭೆಯೂ ಭಾರತಕ್ಕೆ ಸೇರಲು ಒಪ್ಪಿದರು. ಆದರೆ ಪಾಕಿಸ್ತಾನವು ಸೈನ್ಯ ನುಗ್ಗಿಸಿ ಅದರ ಐದನೇ ಎರಡು ಭಾಗವನ್ನು ವಶಪಡಿಸಿಕೊಂಡಿತು. ಕಾಶ್ಮೀರದ ವ್ಯವಹಾರ ವಿದೇಶಾಂಗ ಖಾತೆಗೆ ಸೇರಿದ್ದರಿಂದ ಪಟೇಲರು ಏನೂ ಮಾಡಲಾಗಲಿಲ್ಲ.
ವಲ್ಲಭಭಾಯಿಯವರದು ಅಸಾಧಾರಣ ದೂರದೃಷ್ಟಿ. ೧೯೬೨ರಲ್ಲಿ ಚೀನ ಇದ್ದಕ್ಕಿದ್ದಂತೆ ಭಾರತದ ಮೇಲೆ ಸೈನ್ಯ ನುಗ್ಗಿಸಿ, ಭಾರತ ತತ್ತರಿಸುವಂತೆ ಮಾಡಿತು. ಸ್ವತಂತ್ರ ಭಾರತದ ಚರಿತ್ರೆಯಲ್ಲಿತುಂಬ  ದುಃಖದ ಪ್ರಸಂಗ ಇದು. ಬಹುಕಾಲದ ಚೀನ ಭಾರತದ ಸ್ನೇಹಿತನಂತೆಯೇ ವರ್ತಿಸುತ್ತಿತ್ತು.  ಆಧರೆ ೧೯೫೦ರ ನವೆಂಬರ‍್ ೭ ರಂದು ಜವಾಹರಲಾಲ ನೆಹರೂ ಅವರಿಗೆ ಪಟೇಲರು ಒಂದು ಕಾಗದ ಬರೆದು "ಚೀನವನ್ನು ನಂಬುವಂತಿಲ್ಲ" ಎಂದು ಹೇಳಿದ್ದರು. ಅವರು ಕಾಗದದಲ್ಲಿ ಹೀಗೆ ಬರೆದಿದ್ದರು:" ಚೀನ ಸರಕಾರ ಶಾಂತಿಯ ಬಯಕೆಯ ಮಾತುಗಳನ್ನಾಡಿ ನಮಗೆ ಭ್ರಮೆ ಹುಟ್ಟಿಸಲು  ಪ್ರಯತ್ನಿಸುತ್ತಿದೆ. ನಮ್ಮ ದೇಶದ ರಕ್ಷಣೆಯ ಲೆಕ್ಕಾಚಾರಗಳಲ್ಲಿ ಇನ್ನು ಮೇಲೆ ಕಮ್ಯುನಿಸ್ಟ್ ಚೀನವನ್ನೂ ಗಮನದಲ್ಲಿಟ್ಟುಕೊಳ್ಳಬೇಕು."
ಇದಾಗಿ ಐದು ವಾರಗಳಿಗೆ ಅವರು ತೀರಿಕೊಂಡರು. ಸುಮಾರು ಹನ್ನೆರಡು ವರ್ಷಗಳ ನಂತರ ಚೀನ ಭಾರತದ ಮೇಲೆ ದಾಳಿ ಮಾಡಿತು.
'ಸತ್ಯಬಿಡಲಾರೆ'
ಪಟೇಲರನ್ನು ಅನೇಕರು ತಪ್ಪಾಗಿ ತಿಳಿದುಕೊಂಡಿದ್ದರು. ಅವರಿಗೆ ಮುಸ್ಲಿಮರನ್ನು ಕಂಡರಾಗುವುದಿಲ್ಲವೆಂಬ ಅಪಪ್ರಚಾರವೂ ನಡೆದಿತ್ತು. ೧೯೪೮ರ ಜನೆವರಿ ೬ ರಂದು ಲಕ್ನೋದಲ್ಲಿ ಭಾಷಣ ಮಾಡುತ್ತಾ,
"ನಾನು ಮುಸಲ್ಮಾನರ ಶತ್ರುವೆಂದು ಕೂಗೆದ್ದಿವೆ. ಆದರೆ ನಾನು ಅವರ ನಿಜವಾದ ಮಿತ್ರ. ಸುತ್ತಿ ಬಳಸಿ ಮಾತನಾಡುವುದು ನನಗೆ ಗೊತ್ತಿಲ್ಲ. ಒಳಗೊಂದು ಹೊರಗೊಂದು ನನಗೆ ಬಾರದು. "ಒಮ್ಮೆಗೇ ಎರಡು ದೋಣಿಗಳಲ್ಲಿ ಕಾಲಿಡುವುದು ಬೇಢ. ಒಂದು ದೋಣಿ ಆರಿಸಿಕೊಳ್ಳಲಿ. ಭಾರತದಲ್ಲಿ ಇರುವುವರೆಲ್ಲ ಏಲುತ್ತೇವೆಯೋ ಮುಳುತ್ತೇವೆಯೋ ಒಟ್ಟಿಗೆ ತೇಲೋಣ. ಒಟ್ಟಿಗೆ ಮುಳುಗೋಣ" ಎಂದು ಹೇಳಿದರು.
ಸರ್ದಾರರ ಸ್ಪಷ್ಟ ಮಾತುಗಳಿಂದ ಕೆಲವರಿಗೆ ಸಿಟ್ಟು ಬಂತು, ಆದರೆ ಅವರಿಗೆ ಸರ್ದಾರರೊಡನೆ ವಾದಿಸುವಷ್ಟು ಧೈರ್ಯವಿರಲಿಲ್ಲ. ಆದ್ದರಿಂದ ಗಾಂಧೀಜಿಯವರ ಬಳಿ ಚಾಡಿ ಹೇಳಿದರು. ಆಗ ಪಟೇಲರು ಆಡಿದ ಮಾತುಗಳು ಆ ವಜ್ರ ಪುರುಷನ ಪ್ರಚಂಡ ಆತ್ಮಶಕ್ತಿಯನ್ನು ತೋರಿಸುತ್ತವೆ.
"ಯಾರನ್ನಾದರೂ ಖುಷಿಪಡಿಸಲು ನಾನು ಸತ್ಯ ಬಿಡಲಾರೆ, ಕರ್ತವ್ಯಕ್ಕೆ  ಬೆನ್ನು ತಿರುಗಿಸಲಾರೆ".
ಗಾಂಧೀಜಿ ಇಲ್ಲ
೧೯೪೮ರ ಜನೆವರಿ ೩೦, ಭಾರತದ ಚರಿತ್ರೆಯಲ್ಲಿ ಬಹು ಕರಾಳ ದಿನ.ಅಂದು ಪಾತಕಿಯೊಬ್ಬ ಮಹಾತ್ಮ ಗಾಂಧಿಯವರ ಕೊಲೆ ಮಾಡಿದ. ಗಾಂಧಿಜೀ ಸರ್ದಾರ‍್ ಪಟೇಲರಿಗೆ ಅಣ್ಣನಂತೆ ಮತ್ತು ಗುರುವಿನಂತೆ ಇದ್ದರು.  ಎಷ್ಟೋ ಬಾರಿ ಇಬ್ಬರೂ ಒಟ್ಟಿಗೆ ಜೈಲು ಅನುಭವಿಸುತ್ತಿದ್ದರು.
"ಜೈಲಿನಲ್ಲಿ ವಲ್ಲಭಭಾಯಿಯವರು ನನ್ನ ಮೇಲೆ ತೋರಿಸುತ್ತಿದ್ದ ಪ್ರೀತಿ ಕಂಡು ನನಗೆ ನನ್ನತಾಯಿಯ ಪ್ರೀತಿ ಜ್ಞಾಪಕವಾಗುತ್ತಿತ್ತು. ಅವರಲ್ಲಿ  ಮಾತೃಹೃದಯ ಅಡಗಿತೆಂಬುವುದು ನನಗೆ ಮೊದಲು ಗೊತ್ತಿರಲಿಲ್ಲ ಎಂದು ಗಾಂಧೀಜಿಯವರು ಒಂದೆಡೆ ಸ್ಮರಿಸಿಕೊಂಡಿದ್ದಾರೆ.
ಭಾರತದ ಹಿರಿಯಮೆಯನ್ನು ಎತ್ತಿ ಹಿಡಿಯಲು ಸರ್ದಾರ ಪಟೇಲರು ಅನೇಕ ಮಹತ್ಕಾರ್ಯಗಳನ್ನು ಕೈಗೊಂಡರು. ಲೆಕ್ಕವಿಲ್ಲದಷ್ಟು ಬಾರಿ ಪರಕಿಯರ ದಾಳಿಗಳಿಗೆ ಸಿಕ್ಕಿ ಪಾಳುಬಿದ್ದಿದ್ದ ಸೊಮನಾಥ ದೇವಾಸ್ಥಾನದ ದೃಶ್ಯ ಅವರ ಮನಸ್ಸನ್ನು ಇರಿಯುತ್ತಿತ್ತು. ಆ ದೇಗುಲದ ಜೀರ್ಣೋಧ್ದಾರ ಕಾರ್ಯವನ್ನು ಅವರು ಆರಂಭಿಸಿದರು. ಶತಶತಮಾನಗಳ ದಾಸ್ಯವನ್ನು ಕೊಡವಿಕೊಂಡು ಮೇಲೆದ್ದ ಭಾರತದ ಅದ್ಭುತ ಚೈತನ್ಯ ಮತ್ತು ವಿಜಯದ ಸಂಕೇತವಾಗಿ ಅದು ಮೆರೆಯುವಂತೆ ಮಾಡಿದರು.  ಮುಂಬಯಿಯಲ್ಲಿ ಭಾರತೀಯ ವಿದ್ಯಾಭವನ ಸ್ಥಾಪಿಸುವಂತೆ ದಿವಂಗತ ಕನ್ನಯ್ಯಲಾಲ್ ಮುನಶಿಯವರಿಗೆ ಪ್ರೇರಣೆ ಕೊಟ್ಟವರು ಅವರೇ.
ಪಟೇಲರು ಇಲ್ಲ- ಅವರ ದರ್ಶನ ಇದೆ
ಒಮ್ಮೆ ಅವರು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು. ಮಧ್ಯೆ ವಿಮಾನ ಯಂತ್ರ ಕೆಟ್ಟು ಹೋಯಿತು. ಅದನ್ನು ಬಲವಂತವಾಗಿ ಜಯಪುರಕ್ಕೆ ೩೦ ಮೈಲಿ ದೂರದ ಒಂದು ನದಿಯ ದಡದಲ್ಲಿ ಇಳಿಸಬೇಕಾಯಿತು. ದೆಹಲಿ ಕೇಂದ್ರದಿಂದ ವಿಮಾನದೊಂದಿಗೆ ಇದ್ದ ಎಲ್ಲ ಸಂಪರ್ಕ ಕಡಿದುಹೋಗಿತ್ತು. ಸುಮಾರು ನಾಲ್ಕು ಗಂಟೆಗಳ ಕಾಲ ಏನಾಯಿತೆಂದು ದೆಹಲಿಗೆ ತಿಳಿದಿರಲಿಲ್ಲ. ಆಧರೆ ಸರ್ದಾರರ ಜೀವಕ್ಕೆ ಏನೂ ಅಪಾಯವಾಗಿರಲಿಲ್ಲ.
ಎರಡೂ ದಿಗನಳ ಕಳೆದ ಮೇಲೆ ಸರ್ದಾರರು ಸಂಸತ್ತಿಗೆ ಬಂದರು. ಸದಸ್ಯರು ಸಂಸತ್ತಿನ ನಿಯಮಗಳನ್ನೂ ಉಲ್ಲಂಘೀಸಿ " ಸರ್ದಾರ ಪಟೇಲ ಜಿಂದಾಬಾದ" ಎಂದು ಜೋರಾಗಿ  ಘೋಷಣೆ ಕೂಗಿದರು.
ಸಭಾಪತಿ ಕೂಡ ಅಪಘಾತದಿಂದ ಪಾರಾದ ಅವರನ್ನು ಅಭಿನಂದಿಸುತ್ತ ಹೀಗೆ ಹೇಳೀದರು. "ಆ ಕೆ,ವು ಗಂಟೆಗಳ ಕಾಲ ಸರ್ದಾರರು ಕ್ಷೇಮ ಎಂದು ತಿಳಿಯುವವರೆಗೆ, ಇಡೀ ದೇಶದ ಯಾತನೆ- ಕಾತರಗಳು ಜನರ ಹೃದಯದಲ್ಲಿ ಸರ್ದಾರರು ಎಂತಹ ಸ್ಥಾನವನ್ನು ಪಡೆದಿದ್ದಾರೆಂಬುವುದನ್ನು ತೋರಿಸಿಕೊಟ್ಟಿವೆ.
ಎಂಟು ದಿನಗಳಾದ ಮೇಲೆ ಅವರನ್ನು ಅಭಿನಂದಿಸಲು ಸಂಸತ್ ಸದಸ್ಯರೆಲ್ಲ ಒಂದೂ ಸತ್ಕಾರ ಕೂಟವನ್ನೇ ಏರ್ಪಡಿಸಿದರು.
ಇಳಿವಯಸಿನಲ್ಲಿಯೂ ಸರ್ಧಾರ ಪಟೇಲರಿಗೆ ಬಿಡುವಿಲ್ಲದಷ್ಟು ಕೆಲಸ. ದೇಶದಾದ್ಯಂತ ಪ್ರವಾಶ ಮಾಡಬೇಕಾಗಿ ಬಂತು. ಅದರಿಂದ ಅವರ ಆರೋಗ್ಯ ಹದಗೆಟ್ಟಿತು.  ೧೯೫೦ರ ಡಿಸೆಂಬರ ೧೪ರಂದು ಬೆಳಿಗ್ಗೆ ಮುಂಬಯಿಯಲ್ಲಿ ಅವರು ನಿಧನರಾದರು.
ಬಾರ್ದೊಲಿಯ ಸೇನಾನಿ, ಗುಜರಾತಿನ ಸಿಂಹ, ಭಾರತದ ಉಕ್ಕಿನ ಮನುಷ್ಯ, ಸ್ವಾತಂತ್ಯ್ರ ಹೋರಾಟದ ಸರ್ದಾರ, ಭಾರತ ಒಕ್ಕೂಟದ ಮಹಾಶಿಲ್ಪಿ, ವಜ್ರಸಂಕಲ್ಪ ಶಕ್ತಿಯ ವಲ್ಲಭಬಾಯಿ ಪಟೇಲ್ ಇನ್ನಿಲ್ಲವಾದರು.
ಆಗ ಅವರಿಗೆ ಎಪ್ಪತ್ತೈದು ವರ್ಷ
"ಚರಿತ್ರೆಯಲ್ಲಿ ಅವರ ಹೆಸರು ಶಾಶ್ವತ. ಅವರು ನವಭಾರತದ ನಿರ್ಮಾಪಕರು. ಕಷ್ಟಕಾಲದಲ್ಲಿ ಶ್ರೇಷ್ಠ ಸಲಹೆಗಾರರು, ನಂಬಿಕೆಯ ಮಿತ್ರರು, ಧೈರ್ಯ ಸ್ಪೂರ್ತಿಯ ಖನಿ ಅವರು" ಎಂದರು ಪ್ರಧಾನಿ ನೆಹರು ಅವರು.
ಪಟೇಲರು "ಉಕ್ಕಿನ ಮನುಷ್ಯ"ಎಂದು ಪ್ರಖ್ಯಾತರು. ಆದರೆ ಅವರ ಸ್ವಭಾವದ ಉಕ್ಕಿನಲ್ಲಿ ಮಾರ್ದವ ಜೀವಂತವಾಗಿತ್ತು. ಗಾಂಧೀಜಿಯನ್ನು ಮಾತ್ರವಲ್ಲ. ಕನ್ನಯ್ಯಲಾಲ್ ಮುನಶಿ ಮೊದಲಾದ ಗೆಳೆಯ- ಸೆರಮನೆ ವಾಸಿಗಳು ಕಾಯಿಲೆಯಾದಾಗ, ತಾಯಿ ಮಗುವನ್ನು ನೋಡಿಕೊಳ್ಳುವಂತೆ ನೋಡಿಕೊಂಡರು. ಅವರಿಗೆ ಭಾಷಣಗಳಲ್ಲಿ ನಂಬಿಕೆ ಇರಲಿಲ್ಲ. ಮಾತು ಕಡಿಮೆ.  ಕಷ್ಟ-ಸುಖ ಎಲ್ಲವನ್ನೂ ದೃಢಚಿತ್ತದಿಂದ ಸಹಿಸಿದರು.  ಎಂದೂ ನೋವಿನಿಂದ , ದುಃಖದಿಂದ ಮುಖದಲ್ಲಿ ಒಂದು ಗೆರೆ ಬದಲಿಸಲಿಲ್ಲ. ಅವರು ಅಗತ್ಯವಾದಾಗ ಎಷ್ಟು ದರ್ಪದ ಸ್ವಭಾವದವರೋ ನೈಜವಾಗಿ ಅಷ್ಟೇ ಸೌಜನ್ಯವಂತರು. ಬಾರ್ದೊಲಿ ಸತ್ಯಾಗ್ರಹದ ನಂತರ ಅವರು ಇಡೀ ಭಾರತದಲ್ಲಿ ಖ್ಯಾತಿವಂತರಾದರು.
ಕಾಂಗ್ರೆಸ್ ಅಧಿವೇಶನಕ್ಕೆ ಹೋಗುವಾಗ ತಮ್ಮ ಟಿಕೆಟ್ ಮರೆತಿದ್ದರು. ಸ್ವಯಂ ಸೇವಕರು ಅವರನ್ನು ತಗಡೆದರು. ಪಟೇಲರು ಹಿಂದಕ್ಕೆ  ಹೋದರು. ಮರುದಿನ ಅವರು ಯಾರೆಂದು ತಿಳಿದಾಗ ಸ್ವಯಂ ಸೇವಕರಿಗೆ ನಾಚಿಕೆ. ಆದರೆ ಪಟೇಲರು ಸ್ವಲ್ಪವೂ ಅಸಮಾಧಾನ ಪಡಲಿಲ್ಲ.
ಅಂಥ ದೀರ ಸರ್ದಾರರನ್ನು ಭಕ್ತಿಯಿಂದ ನೆನೆಯೋಣ, ಅವರಿಗೆ ನಮಿಸೋಣ ಅವರ ಗುಣಗಳನ್ನು ನಮ್ಮಲ್ಲೂ ಬೆಳಸಿಕೊಳ್ಳೋಣ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು