ಬ್ಯಾಡ್ಮಿಂಟನ್: ಸಿಂಧು ಹ್ಯಾಟ್ರಿಕ್ ಸಾಧನೆ:-
ಮಕಾವ್ (ಪಿಟಿಐ): ಭಾರತದ ಭರವಸೆಯ
ಆಟಗಾರ್ತಿ ಪಿ.ವಿ.ಸಿಂಧು
ನಿರೀಕ್ಷೆ
ಹುಸಿಗೊಳಿಸಲಿಲ್ಲ.
ಅಮೋಘ ಪ್ರದರ್ಶನ ತೋರಿದ ಸಿಂಧು
ಮಕಾವ್ ಓಪನ್ ಬ್ಯಾಡ್ಮಿಂಟನ್
ಟೂರ್ನಿಯ ಮಹಿಳಾ ವಿಭಾಗದಲ್ಲಿ
ಭಾನುವಾರ ಹ್ಯಾಟ್ರಿಕ್ ಪ್ರಶಸ್ತಿಯ
ಸಾಧನೆಗೈದರು.
2013 ಹಾಗೂ 2014ರಲ್ಲಿ ಕೂಡ
ಸಿಂಧು ಮಕಾವ್ ಟೂರ್ನಿಯಲ್ಲಿ
ಚಾಂಪಿಯನ್ ಆಗಿದ್ದರು. ಆದರೆ,
ಈ ಋತುವಿನಲ್ಲಿ ಸಿಂಧುಗೆ ಒಲಿದ
ಮೊದಲ ಪ್ರಶಸ್ತಿ
ಇದಾಗಿದೆ.
ಫೈನಲ್ ಸುತ್ತಿನ ಹಣಾಹಣಿಯಲ್ಲಿ
ಸಿಂಧು 21–9, 21–23, 21–
14ರಲ್ಲಿ ಜಪಾನಿನ ಮಿನಾತ್ಸು ಮಿತನಿ
ಅವರನ್ನು ಮಣಿಸಿದರು. ಪ್ರಶಸ್ತಿ
ಸುತ್ತಿನ ಈ ಹೋರಾಟ ಒಂದು
ಗಂಟೆ ಆರು ನಿಮಿಷಗಳ ಕಾಲ
ನಡೆಯಿತು.
ವಿಶ್ವ ಕ್ರಮಾಂಕದಲ್ಲಿ 12ನೇ
ಸ್ಥಾನದಲ್ಲಿರುವ ಸಿಂಧು,
ಸೊಗಸಾದ ಸ್ಟ್ರೋಕ್ಸ್ ಹಾಗೂ
ಚುರುಕಿನ ರಿಟರ್ನ್ಸ್ ಮೂಲಕ
ಎದುರಾಳಿಯನ್ನು ಕಂಗೆಡಿಸಿದರು.
ಸಿಂಧು ಅವರ ಬಿರುಸಿನ ಆಟಕ್ಕೆ
ತಿರುಗೇಟು ನೀಡುವಲ್ಲಿ
ಮಿನಾತ್ಸು ಯಶ ಕಾಣಲಿಲ್ಲ.
ಸಿಂಧು ಆರಂಭಿಕ
ಗೇಮ್ನಿಂದಲೇ ಅಮೋಘ
ಆಟವಾಡಿದರು. ಎದುರಾಳಿ ಎಸೆಗಿದ
ತಪ್ಪುಗಳಿಂದ ಲಾಭ ಪಡೆದ
ಸಿಂಧು ಮೊದಲ
ಗೇಮ್ನಲ್ಲಿ ಸುಲಭವಾಗಿ ಜಯ
ಕಂಡರು.
ಎರಡನೇ ಗೇಮ್ನಲ್ಲಿಯೂ ಸಿಂಧು
ಉತ್ತಮ ಆರಂಭ
ಕಂಡರಾದರೂ, ಬೇಸ್ಲೈನ್ ಬಳಿ ಕೆಲ
ತಪ್ಪು ಎಸೆಗಿದರು. ಇದರಿಂದ ಲಾಭ
ಪಡೆದು ಚೇತರಿಕೆಯ ಆಟವಾಡಿದ
ಮಿನಾತ್ಸು ಗೇಮ್ ಗೆದ್ದರು.
ನಿರ್ಣಾಯಕ ಗೇಮ್ನಲ್ಲಿ ಬಿರುಸಿನ
ಆಟವಾಡಿದ ಸಿಂಧು ಎದುರಾಳಿಗೆ
ಪಾಯಿಂಟ್ ಗಳಿಸುವ ಅವಕಾಶವನ್ನೇ
ಕೊಡಲಿಲ್ಲ. ಜತೆಗೆ
ಒತ್ತಡಕ್ಕೆ ಒಳಗಾದಂತೆ
ಕಂಡ ಮಿನಾತ್ಸು ಮಾಡಿದ ತಪ್ಪುಗಳು
ಸಿಂಧು ಗೆಲುವಿಗೆ
ಕೊಡುಗೆ
ನೀಡಿದವು. ಈ ಮೂಲಕ
ಮೂರನೇ ಗೇಮ್ ಗೆದ್ದು ಸತತ ಮೂರನೇ
ಬಾರಿಗೆ ಚಾಂಪಿಯನ್ಷಿಪ್
ಪಟ್ಟವನ್ನು
ಮುಡಿಗೇರಿಸಿಕೊಳ್ಳುವಲ್ಲಿ
ಹೈದರಾಬಾದಿನ ಈ ಆಟಗಾರ್ತಿ
ಯಶಸ್ವಿಯಾದರು.
Comments
Post a Comment