ಮೋದಿ ಅಂಚೆ ಚೀಟಿ ಬಿಡುಗಡೆ:-
ಅಂಟಾಲಿಯಾ: ಎರಡು ದಿನಗಳ
ಹಿಂದಷ್ಟೇ ಪೂರ್ಣಗೊಂಡ ಜಿ-20
ಶೃಂಗಸಭೆಯ ಸ್ಮರಣಾರ್ಥ ಟರ್ಕಿಯು,
ಪ್ರಧಾನಿ ನರೇಂದ್ರ ಮೋದಿ
ಸೇರಿದಂತೆ ವಿಶ್ವ ನಾಯಕರ ಅಂಚೆ
ಚೀಟಿಗಳನ್ನು ಬಿಡುಗಡೆ ಮಾಡಿದೆ.
ಮೋದಿ ಅವರ ಭಾವಚಿತ್ರವಿದ್ದು, ಅದರ
ಕೆಳಭಾಗದಲ್ಲಿ ರಾಷ್ಟ್ರಧ್ವಜ ಹಾಗೂ
ಮೋದಿ ಅವರ ಹೆಸರಿದೆ. ಇದೇ ವೇಳೆ
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ,
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್,
ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ಬ್ರಿಟನ್
ಪ್ರಧಾನಿ ಡೇವಿಡ್ ಕ್ಯಾಮರೂನ್,
ಬ್ರೆಜಿಲ್ ಅಧ್ಯಕ್ಷೆ ಡಿಲ್ಮಾ ರೌಸೆಫ್
ಸೇರಿದಂತೆ ಒಟ್ಟು 33 ವಿಶ್ವ
ನಾಯಕರ ಅಂಚೆ ಚೀಟಿಗಳನ್ನು ಟರ್ಕಿ
ಬಿಡುಗಡೆಗೊಳಿಸಿದೆ.
Comments
Post a Comment