ಖಾಸಗಿ ಅನುದಾನ ರಹಿತ ಶಾಲಾ- ಕಾಲೇಜುಗಳು ಸದ್ಯದಲ್ಲೇ ಅನುದಾನಕ್ಕೊಳಪಡಲಿದೆ : ಕಿಮ್ಮನೆ ರತ್ನಾಕರ್:-
ಬೆಂಗಳೂರು, ನ.20-1994-95ನೆ
ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭವಾದ
ಖಾಸಗಿ ಅನುದಾನ ರಹಿತ ಶಾಲಾ-
ಕಾಲೇಜುಗಳನ್ನು
ಅನುದಾನಕ್ಕೊಳಪಡಿಸಲು ಸರ್ಕಾರ
ಅವಕಾಶ ಕಲ್ಪಿಸಿದ್ದು, ಡಿ.30ರೊಳಗೆ
ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ
ಅನುದಾನಕ್ಕೊಳಪಡಿಸುವ ನಿರ್ಧಾರ
ಕೈಗೊಳ್ಳಲಾಗುವುದು
ಎಂದು ಪ್ರಾಥಮಿಕ ಮತ್ತು ಪ್ರೌಢ
ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ
ಹೇಳಿದರು.
ಪ್ರಶ್ನೋತ್ತರ ಕಲಾಪದಲ್ಲಿ ಗಣೇಶ್
ಕಾರ್ನಿಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು,
ಪ್ರಭಾವಿ ಕೆಲ ಸಂಸ್ಥೆಗಳು ಮಾತ್ರ
ಅನುದಾನ ಪಡೆಯುತ್ತವೆ.
ವರ್ಷಕ್ಕೆ 8-10 ಶಾಲಾ-
ಕಾಲೇಜುಗಳನ್ನು
ನುದಾನಕ್ಕೊಳಪಡಿಸಲಾಗುತ್ತಿದೆ.
ಹಾಗಾಗಿ ಆರ್ಥಿಕ ಇಲಾಖೆಗೆ
ಹೊರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ
ಅರ್ಹತೆಯಿರುವ ಎಲ್ಲಾ ಶಾಲಾ-
ಕಾಲೇಜುಗಳನ್ನು ಪಟ್ಟಿಮಾಡಿ
ಅನುದಾನಕ್ಕೊಳಪಡಿಸಲು
ತೀರ್ಮಾನಿಸಲಾಗಿದ್ದು, ಇದಕ್ಕೆ ಆರ್ಥಿಕ
ಇಲಾಖೆ ಕೂಡ ಸಹಮತ ವ್ಯಕ್ತಪಡಿಸಿದೆ. ಈ
ಸಂಬಂಧ
ಮುಖ್ಯಮಂತ್ರಿಗಳೊಂದಿಗೆ ಸಭೆ
ನಡೆಸಿದ್ದು, ಅವರೂ ಕೂಡ ಅರ್ಹವಿರುವ
ಶಾಲಾ-ಕಾಲೇಜುಗಳನ್ನು ಪಟ್ಟಿ
ಮಾಡಿ ಅನುದಾನಕ್ಕೊಳಪಡಿಸಲು
ಮೌಖಿಕವಾಗಿ ಸೂಚಿಸಿದ್ದಾರೆ. ಎರಡು
ತಿಂಗಳ ಕಾಲಾವಕಾಶ
ನೀಡಲಾಗಿದ್ದು, ಡಿ.31ರೊಳಗೆ ಅರ್ಹ
ಅನುದಾನರಹಿತ ಎಲ್ಲಾ ಶಾಲಾ-
ಕಾಲೇಜುಗಳನ್ನು ಅನುದಾನ
ವ್ಯಾಪ್ತಿಗೊಳಿಸಲು ಪ್ರಕ್ರಿಯೆ
ಪರಿಶೀಲನೆಯಲ್ಲಿದೆ ಎಂದರು.
ಪ್ರಾಥಮಿಕ, ಪ್ರೌಢ, ಪದವಿ ಪೂರ್ವ
ಸೇರಿದಂತೆ 82 ಶಾಲಾ-
ಕಾಲೇಜುಗಳ
ಅನುಮೋದನೆಗಾಗಿ ಪ್ರಸ್ತಾವನೆ
ಸಲ್ಲಿಸಲಾಗಿದೆ. ಇದಕ್ಕಾಗಿ ವಾರ್ಷಿಕ 19
ಕೋಟಿ ವೆಚ್ಚವಾಗಲಿದೆ ಎಂದರು.
ಒಂದು ನಿರ್ದಿಷ್ಟ ಗಡವು ವಿಧಿಸಲು
ಆರ್ಥಿಕ ಇಲಾಖೆ ಸೂಚಿಸಿರುವ
ಹಿನ್ನೆಲೆಯಲ್ಲಿ ಪತ್ರಿಕೆಗಳಲ್ಲಿ ವ್ಯಾಪಕ
ಪ್ರಕಟಣೆ ನೀಡಿ. ಅಲ್ಲದೆ ಆನ್ಲೈನಲ್ಲೂ
ಅವಕಾಶ ಕಲ್ಪಿಸುವುದಾಗಿ ಸಚಿವರು
ತಿಳಿಸಿದರು.
Comments
Post a Comment