ಬನ್ನೇರುಘಟ್ಟಕ್ಕೆ ಇಸ್ರೇಲ್ ಜೀಬ್ರಾಗಳು; ವಿಮಾನ ಪ್ರಯಾಣದ ಮೂಲಕ ಆಗಮನ:-


ಉದಯವಾಣಿ, Nov 27, 2015, 4:57 PM IST
ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನ ವನಕ್ಕೆ
ಆಗಮಿಸಿದ ಇಸ್ರೇಲ್ ಅತಿಥಿಗಳನ್ನು ಇಲ್ಲಿನ
ಸಿಬ್ಬಂದಿ ಸಂತಸದಿಂದ ಬರ
ಮಾಡಿಕೊಂಡಿದ್ದಾರೆ.
12 ಗಂಟೆಗಳ ವಿಮಾನ ಪ್ರಯಾಣದ ಮೂಲಕ
ಆಗಮಿಸಿದ ನಾಲ್ಕು ಅತಿಥಿಗಳನ್ನು ಪ್ರವಾಸಿಗರು ನೋಡಬೇ
ಕಾದರೆ ಇನ್ನೂಒಂದು ತಿಂಗಳು
ಕಾಯಬೇಕಾಗುತ್ತದೆ. ಇಸ್ರೇಲ್ನ ಜೂಲಾಜಿಕಲ್
ಸೆಂಟರ್ ಟೆಲ್ ಅವಿವ್-ರಮಾತ್ ಗನ್
ಸಫಾರಿಯಿಂದ ಒಂದು ವರ್ಷ ವಯಸ್ಸಿನ
ನಾಲ್ಕು ಜೀಬ್ರಾ (ಹೇಸರಗತ್ತೆ)ಗಳ ತರಲಾಗಿದೆ.
ಬುಧವಾರ ಸಂಜೆ ದೇವನಹಳ್ಳಿ ವಿಮಾನ
ನಿಲ್ದಾಣಕ್ಕೆ ಬಂದ ನಾಲ್ಕು ಹೇಸರಗತ್ತೆಗಳನ್ನು
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಹಾಯಕ
ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು,
ವಲಯ ಅರಣ್ಯಾಧಿಕಾರಿ ಭಾಗ್ಯಲಕ್ಷ್ಮಿ,
ವೈದ್ಯರಾದ ಮಂಜುನಾಥ್, ನಿರುಪಮಾ
ಬರಮಾಡಿಕೊಂಡು ಉದ್ಯಾನವಕ್ಕೆ ತಡ ರಾತ್ರಿ
ಕರೆತಂದರು.
ಸದ್ಯ ಉದ್ಯಾನವನದ ಸಸ್ಯಹಾರಿ ಸಫಾರಿ
ಬಳಿಯ ವಿಶೇಷ ಬಯಲು ಆಲಯದಲ್ಲಿ ನಾಲ್ಕು
ಹೇಸರಗತ್ತೆಗಳಿಗೆ ಆಶ್ರಯ ನೀಡಲಾಗಿದೆ.
ವೈದ್ಯರ ತಂಡ ಜೀಬ್ರಾಗಳನ್ನು
ವಿಶೇಷ ಕಾಳಜಿಯಿಂದ ನೋಡಿಕೊಳ್ಳುತ್ತಿದೆ. ಇನ್ನೂ
ಒಂದು ತಿಂಗಳು ಜೀಬ್ರಾಗಳು
ಇಲ್ಲಿನ ವಾತಾವರಣಕ್ಕೆ
ಹೊಂದಿಕೊಂಡ ಬಳಿಕ
ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿ
ಕೊಡಲಾಗುವುದು ಎಂದು ಉದ್ಯಾನವನದ
ಕಾರ್ಯನಿರ್ವಾಹಕ ನಿರ್ದೇಶಕ ಸಂತೋಷ್ ಕುಮಾರ್
ತಿಳಿಸಿದರು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು