ಪ್ರಥಮ ಸಂವಿಧಾನ ದಿನ’ ಆಚರಿಸಿದ ಭಾರತದ ಸಂಸತ್ತು:


· NOV 26, 2015
ನವದೆಹಲಿ: ಸಂವಿಧಾನಸಭೆಯು ಭಾರತದ
ಸಂವಿಧಾನವನ್ನು ಅಂಗೀಕರಿಸಿದ
1949ರ ನವೆಂಬರ್ 26ರ ಈದಿನವನ್ನು
ಸಂವಿಧಾನ ಶಿಲ್ಪಿ ಡಾ. ಬಿ.ಆರ್.
ಅಂಬೇಡ್ಕರ್ ಅವರನ್ನು ಸ್ಮರಿಸುವ ಮೂಲಕ
ಸಂಸತ್ತು ಗುರುವಾರ 'ಪ್ರಥಮ ಸಂವಿಧಾನ
ದಿನ'ವಾಗಿ ಆಚರಿಸಿತು.
ಲೋಕಸಭೆಯಲ್ಲಿ ಡಾ.
ಅಂಬೇಡ್ಕರ್ ಅವರನ್ನು ನೆನೆದ ಗೃಹ ಸಚಿವ
ರಾಜನಾಥ್ ಸಿಂಗ್, 'ಅಂಬೇಡ್ಕರ್ ಅವರನ್ನು
ಅವಮಾನಿಸಲಾಗಿತ್ತು. ಆದರೆ ಅವರೆಂದೂ ದೇಶ
ತ್ಯಜಿಸುವ ಮಾತುಗಳನ್ನು ಆಡಿರಲಿಲ್ಲ.
ಸಂವಿಧಾನಕ್ಕೆ 'ಸಮಾಜವಾದಿ' ಮತ್ತು
'ಜಾತ್ಯತೀತ' ಪದಗಳನ್ನು ನಮ್ಮ
ಸಂವಿಧಾನದ ಪೀಠಿಕೆಯಲ್ಲಿ ಸೇರಿಸುವ
ಅಗತ್ಯ ಅಂಬೇಡ್ಕರ್ ಅವರಿಗೆ
ಕಂಡುಬಂದಿರಲಿಲ್ಲ. ಅದು ನಮ್ಮ
ಮೂಲಪ್ರವೃತ್ತಿಯಲ್ಲೇ ಇದೆ ಎಂಬುದು
ಅವರ ಗಮನದಲ್ಲಿತ್ತು. ಜಾತ್ಯತೀತ ಪದ
ನಮ್ಮ ದೇಶದಲ್ಲಿ ಅತ್ಯಂತ ಹೆಚ್ಚು
ದುರುಪಯೋಗವಾಗಿರುವ ಪದ'
ಎಂದು ರಾಜನಾಥ್ ಸಿಂಗ್ ನುಡಿದರು.
ಸಮಾಜವಾದಿ, ಜಾತ್ಯತೀತ ಕುರಿತ ಗೃಹ ಸಚಿವರ
ಮಾತಿಗೆ ಲೋಕಸಭೆಯಲ್ಲಿ ಭಾರಿ
ವಿರೋಧ ವ್ಯಕ್ತವಾಯಿತು.
ರಾಜನಾಥ್ ಸಿಂಗ್ ಅವರ ಬಳಿಕ ಮಾತನಾಡಿದ
ಕಾಂಗ್ರೆಸ್ ಪಕ್ಷದ ನಾಯಕಿ
ಸೋನಿಯಾ ಗಾಂಧಿ 'ಭಾರತದ
ಸಂವಿಧಾನ ದಶಕಗಳ
ಹೋರಾಟದ ಫಲ. ಈ
ಹೋರಾಟಕ್ಕೆ ಮಹಾತ್ಮಾ
ಗಾಂಧಿ ದೊಡ್ಡ
ಕೊಡುಗೆ ನೀಡಿದರು.
ಅಂಬೇಡ್ಕರ್ ಅವರು ಸಂವಿಧಾನ ರೂಪಿಸುವಲ್ಲಿ
ಕಾಂಗ್ರೆಸ್​ನ ಆಡಳಿತದ ಮಹತ್ವವನ್ನು
ಗುರುತಿಸಿದ್ದರು. ಸಂವಿಧಾರ ರೂಪಿಸುವ ಎಲ್ಲಾ
ಹಂತಗಳಲ್ಲೂ ಜವಾಹರಲಾಲ್ ನೆಹರೂ, ಸರ್ದಾರ್
ಪಟೇಲ್, ಡಾ. ರಾಜೇಂದ್ರ ಪ್ರಸಾದ್ ಮತ್ತು ಮೌಲಾನಾ
ಆಜಾದ್ ಈ ನಾಲ್ವರು ಗಣ್ಯರು ಮಾರ್ಗದರ್ಶನ
ಮಾಡಿದ್ದರು' ಎಂದು
ಸೋನಿಯಾ ನುಡಿದರು.
ಇದಕ್ಕೆ ಮುನ್ನ ನಸುಕಿನಲ್ಲೇ ಸಂಸತ್
ಭವನದ ಎದುರಿನಲ್ಲೇ
ಪತ್ರಿಕಾಗೋಷ್ಠಿ ನಡೆಸಿದ ಪ್ರಧಾನಿ
ನರೇಂದ್ರ ಮೋದಿ ಪ್ರಥಮ
ಸಂವಿಧಾನ ದಿನದ ಅಂಗವಾಗಿ ರಾಷ್ಟ್ರದ
ಜನತೆಯನ್ನು ಅಭಿನಂದಿಸಿದರು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು