ಆಫ್ರಿಕಾದಲ್ಲಿ ಪತ್ತೆಯಾಯ್ತು ಜಗತ್ತಿನ ಎರಡನೇ ಅತಿ ದೊಡ್ಡ ವಜ್ರದ ತುಣುಕು...!:-
ಗಬೋರೋನಿ, ನ.20-
ಜಗತ್ತಿನಲ್ಲೇ ಎರಡನೆ ಅತಿ ದೊಡ್ಡ
ವಜ್ರದ ತುಣುಕು ಆಫ್ರಿಕಾ ಖಂಡದ
ಬೋಟ್ಸ್ವಾನಾ ದೇಶದಲ್ಲಿ
ಪತ್ತೆಯಾಗಿದೆ. ಇಲ್ಲಿಂದ ಸುಮಾರು
500 ಕಿಲೋ ಮೀಟರ್
ಉತ್ತರದಲ್ಲಿರುವ ಕರೋವಿ ಗಣಿ
ಪ್ರದೇಶದಲ್ಲಿ 1,111 ಕ್ಯಾರೆಟ್ನ ವಜ್ರ
ಪತ್ತೆಯಾಗಿದ್ದು, ಇದರ
ಶತಮಾನದಲ್ಲೇ ದೊರೆತ ದೊಡ್ಡ
ಸಂಪತ್ತು ಎಂದು
ವಿಶ್ಲೇಷಿಸಲಾಗುತ್ತಿದೆ. ಗಣಿ
ಉಸ್ತುವಾರಿ ಹೊತ್ತಿರುವ ಕೆನಡಾ
ಮೂಲದ ಲ್ಯೂಸಾರಾ ಡೈಮಂಡ್
ಕಂಪೆನಿ ಈ ಕುರಿತಂತೆ ಮಾಹಿತಿ ಮತ್ತು
ಚಿತ್ರವನ್ನು ಬಹಿರಂಗಪಡಿಸಿದ್ದು, ಇದರ
ಬೆಲೆ ಇನ್ನೂ ಎಷ್ಟಿರಬಹುದು ಎಂದು
ನಿಗದಿಪಡಿಸುವ ಕಾರ್ಯ ನಡೆದಿದೆ ಎಂದು
ಇದರ ಸಿಇಒ ವಿಲಿಯಮ್ ಲ್ಯಾಂಬ್
ತಿಳಿಸಿದ್ದಾರೆ. ಟೆನ್ನಿಸ್ ಬಾಲ್ ಆಕೃತಿಯ ಈ
ವಜ್ರ ಬಹು ಅಮೂಲ್ಯವಾಗಿದ್ದು,
ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು
ಹೇಳಿದ್ದಾರೆ. ಕಳೆದ 1905ರಲ್ಲಿ ದಕ್ಷಿಣ
ಆಫ್ರಿಕಾದಲ್ಲೇ 3106 ಕ್ಯಾರೆಟ್
ವಜ್ರವನ್ನು ಗಣಿಯಿಂದ ತೆಗೆದು ಬ್ರಿಟನ್
ರಾಣಿಯ ಕಿರೀಟದಲ್ಲಿ
ಅಳವಡಿಸಲಾಗಿತ್ತು. ಇದು
ಸಾರ್ವಕಾಲಿಕ ದಾಖಲೆಯಾಗಿದೆ.
ಪ್ರಸ್ತುತ ಬೋಟ್ಸ್ವಾನಾ
ರಾಷ್ಟ್ರದಲ್ಲಿ ದೊರೆತಿರುವ ಈ ವಜ್ರ
ಕೂಡ ಅಪೂರ್ವವಾಗಿದೆ. ನಾವು
ಹೊಕ್ಕಿ ತೆಗೆಯುತ್ತಿರುವ ವಜ್ರದಲ್ಲಿ
ಇದು ನಮಗೆ ಸಿಕ್ಕ ಜಗತ್ತಿನ ಎರಡನೆ ಅತಿ
ದೊಡ್ಡ ವಜ್ರವಾಗಿದೆ ಎಂದು
ಅವರು ತಿಳಿಸಿದ್ದಾರೆ. ಕಳೆದ ಏಪ್ರಿಲ್ನಲ್ಲಿ
ನ್ಯೂಯಾರ್ಕ್ನಲ್ಲಿ ನೂರು
ಕ್ಯಾರೆಟ್ ಡೈಮಂಡ್ನ ಚಿಕ್ಕ ವಜ್ರ
ಸುಮಾರು 22.1 ಮಿಲಿಯನ್ ಡಾಲರ್ಗೆ
ಹರಾಜಾಗಿತ್ತು. ಈಗ ದೊರೆತಿರುವ
ವಜ್ರವನ್ನು ಪಾಲಿಷ್ ಮಾಡಿ ಅದನ್ನು
ಸಂಸ್ಕರಿಸಲು ಇನ್ನೂ ಹಲವು ದಿನಗಳು
ಬೇಕಾಗುತ್ತದೆ ಎಂದು ಅವರು
ತಿಳಿಸಿದ್ದಾರೆ.
Comments
Post a Comment