ಮೇ 1, 2ಕ್ಕೆ ಸಿಇಟಿ ಪರೀಕ್ಷೆ:-


ಬೆಂಗಳೂರು: ವೃತ್ತಿಪರ ಶಿಕ್ಷಣ ಕೋರ್ಸ್ಗಳಿಗೆ
ಪ್ರವೇಶಾವಕಾಶ ಕಲ್ಪಿಸುವ 2016ನೇ ಸಾಲಿನ ಸಾಮಾನ್ಯ
ಪ್ರವೇಶ ಪರೀಕ್ಷೆ (ಸಿಇಟಿ) ವೇಳಾಪಟ್ಟಿ
ಗುರುವಾರ ಬಿಡುಗಡೆಯಾಗಿದೆ. ಮೇ 1 ಮತ್ತು
2ರಂದು ಪರೀಕ್ಷೆ ನಡೆಯಲಿದೆ.
ಹೊರನಾಡು ಹಾಗೂ ಗಡಿನಾಡು ಕನ್ನಡಿಗ
ಅಭ್ಯರ್ಥಿಗಳಿಗೆ ಮೇ 3ರಂದು ಕನ್ನಡ ಭಾಷಾ
ಪರೀಕ್ಷೆ ನಡೆಸಲಾಗುವುದು.
ಮೇ 1ರಂದು ಬೆಳಗ್ಗೆ 10.30ರಿಂದ
11.50ರವರೆಗೆ ಜೀವಶಾಸ್ತ್ರ,
ಮಧ್ಯಾಹ್ನ 2.30ರಿಂದ 3.50ರವರೆಗೆ
ಗಣಿತ ವಿಷಯಗಳ ಪರೀಕ್ಷೆ ನಡೆಯಲಿದೆ.
ಮೇ 2ರಂದು ಬೆಳಗ್ಗೆ 10.30ರಿಂದ
11.50ರವರೆಗೆ ಭೌತಶಾಸ್ತ್ರ ಹಾಗೂ ಮಧ್ಯಾಹ್ನ
2.30ರಿಂದ 3.50ರವರೆಗೆ ರಸಾಯನಶಾಸ್ತ್ರ
ವಿಷಯಗಳ ಪರೀಕ್ಷೆ ನಡೆಯಲಿದೆ.
ಹೊರನಾಡು ಹಾಗೂ ಗಡಿನಾಡು ಕನ್ನಡಿಗ
ಅಭ್ಯರ್ಥಿಗಳಿಗೆ ಮೇ 3ರಂದು ಬೆಳಗ್ಗೆ
11.30ರಿಂದ ಮಧ್ಯಾಹ್ನ 12.30ರವರೆಗೆ
ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.
ಜೀವಶಾಸ್ತ್ರ, ಗಣಿತ, ಭೌತಶಾಸ್ತ್ರ,
ರಸಾಯನಶಾಸ್ತ್ರ ವಿಷಯಗಳಿಗೆ ತಲಾ 60
ಅಂಕಗಳಿದ್ದರೆ, ಕನ್ನಡ ಭಾಷಾ
ಪರೀಕ್ಷೆಗೆ 50 ಅಂಕ ನಿಗದಿಯಾಗಿದೆ.
ದ್ವಿತೀಯ ಪಿಯುಸಿ ಪಾಸಾದ
ವಿದ್ಯಾರ್ಥಿಗಳು ವೈದ್ಯಕೀಯ,
ದಂತ ವೈದ್ಯಕೀಯ, ಆಯುರ್ವೇದ,
ಹೋಮಿಯೋಪತಿ, ಯುನಾನಿ, ನ್ಯಾಚುರೋಪತಿ ಮತ್ತು
ಯೋಗ, ಎಂಜಿನಿಯರಿಂಗ್, ಬಿ.ಎಸ್ಸಿ ಕೃಷಿ
ವಿಜ್ಞಾನ, ಪಶು ವೈದ್ಯಕೀಯ/ ಪಶು
ಸಂಗೋಪನೆ, ರೇಷ್ಮೆ, ಅರಣ್ಯಶಾಸ್ತ್ರ,
ತೋಟಗಾರಿಕೆ, ಬಿ-ಫಾರ್ಮ, ಫಾರ್ಮ-ಡಿ ಕೋರ್ಸ್ಗಳಿಗೆ
ಪ್ರವೇಶ ಪಡೆಯಲು ಈ ಪರೀಕ್ಷೆ
ಬರೆಯುವುದು ಕಡ್ಡಾಯವಾಗಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

INCOME TAX CALCULATION 2022-23 IN A CLICK