ಸರ್ಕಾರಿ ಹುದ್ದೆಗಳಿಗೆ ಇನ್ನು ಸಂದರ್ಶನ ಇಲ್ಲ, ಅಫಿಡವಿಟ್ಟೂ ಬೇಕಿಲ್ಲ BY ವಿಜಯವಾಣಿ ನ್ಯೂಸ್


· DEC 26, 2015
ಹೊಸ ವರ್ಷಕ್ಕೆ ಕೇಂದ್ರದ
ಕ್ರಾಂತಿಕಾರಿ ಕೊಡುಗೆ
ನವದೆಹಲಿ: 2016ರ ಜನವರಿ 1ರಿಂದ
ಸರ್ಕಾರದ ವಿವಿಧ ಹುದ್ದೆಗಳಿಗೆ ಸಂದರ್ಶನ
ಇರುವುದಿಲ್ಲ, ಹಾಗೆಯೇ ಅಭ್ಯರ್ಥಿಗಳು ಸರ್ಕಾರಿ
ಸೇವೆಗಳನ್ನು ಸೇರಲು ಅಫಿಡವಿಟ್​ಗಳ (ಪ್ರಮಾಣಪತ್ರ)
ಆವಶ್ಯಕತೆಯೂ ಇರುವುದಿಲ್ಲ. 2015ರಲ್ಲಿ
ಹಲವಾರು ಮಹತ್ವದ ಉಪಕ್ರಮಗಳ ಮೂಲಕ
ಸುದ್ದಿಯಲ್ಲಿದ್ದ ಕೇಂದ್ರ ಸರ್ಕಾರದ
ಸಿಬ್ಬಂದಿ ಇಲಾಖೆ ವರ್ಷಾಂತ್ಯದಲ್ಲಿ
ಕೈಗೊಂಡಿರುವ ಮಹತ್ವದ
ನಿರ್ಧಾರ ಇದು.
'ಸರ್ಟಿಫಿಕೇಟ್​ಗಳನ್ನು ಗಜೆಟೆಡ್ ಅಧಿಕಾರಿಗಳಿಂದ
ದೃಢೀಕರಣ ಮಾಡಿಸಿಕೊಳ್ಳುವ
ಕ್ರಮವನ್ನು ರದ್ದು ಪಡಿಸುವ ಅತ್ಯಂತ
ಮಹತ್ವದ ಕ್ರಾಂತಿಕಾರಿ ನಿರ್ಧಾರವನ್ನು
ಕೈಗೊಳ್ಳಲಾಗಿದ್ದು, ಇದರ ಬದಲಿಗೆ
ಸ್ವಯಂ ದೃಢೀಕರಣ ಮಾಡುವ
ವಿಧಾನವನ್ನು ಜಾರಿಗೊಳಿಸಲಾಗುತ್ತಿದೆ'
ಎಂದು ಸಿಬ್ಬಂದಿ, ಸಾರ್ವಜನಿಕ
ಕುಂದುಕೊರತೆ ಮತ್ತು
ಪಿಂಚಣಿಗಳ ರಾಜ್ಯ ಸಚಿವ ಜಿತೇಂದ್ರ
ಸಿಂಗ್ ಶನಿವಾರ ಇಲ್ಲಿ ಹೇಳಿದರು.
'ಪ್ರಜೆಗಳನ್ನು ನಂಬುವ ನಿರ್ಧಾರವನ್ನು ಸರ್ಕಾರ
ಕೈಗೊಂಂಡಿದೆ. ಅದರಲ್ಲೂ
ಯುವಕರು ಸ್ವಯಂ ದೃಢೀಕೃತ
ದಾಖಲೆಗಳನ್ನು ಸಲ್ಲಿಸುವಾಗ ತಪ್ಪು ಮಾಹಿತಿ
ನೀಡುವುದಿಲ್ಲ ಎಂಬುದು ಸರ್ಕಾರದ
ನಂಬಿಕೆ' ಎಂದು ಅವರು ನುಡಿದರು. ಸರ್ಕಾರದ
ಈ ನಿರ್ಧಾರವು ಸಾಮಾನ್ಯ ಜನರಿಗೆ ಅದರಲ್ಲೂ
ಗ್ರಾಮೀಣ ಮಂದಿಯನ್ನು
ನಿರಾಳಗೊಳಿಸಿದೆ. ತಮ್ಮ
ದಾಖಲೆಗಳನ್ನು
ದೃಢೀಕರಿಸಿಕೊಳ್ಳಲು
ಗ್ರಾಮೀಣ ಮಂದಿ ಇನ್ನಿಲ್ಲದ ಪಡಿಪಾಟಲು
ಅನುಭವಿಸಬೇಕಾಗುತ್ತಿತ್ತು.
ಸರ್ಕಾರಿ ಉದ್ಯೋಗಿ
ಸಾವನ್ನಪ್ಪಿದಾಗ, ಅನುಕಂಪದ ನೆಲೆಯ
ನೇಮಕಾತಿಗಳೆ ಕುಟುಂಬ ಸದಸ್ಯರು ಪ್ರಮಾಣ
ಪತ್ರ ಸಲ್ಲಿಸಬೇಕೆಂಬ ನಿಯಮವನ್ನೂ
ಸಚಿವಾಲಯವು ಇತ್ತೀಚೆಗೆ ರದ್ದು ಪಡಿಸಿತ್ತು.
ಅನುಕಂಪದ ನೆಲೆಯ ನೇಮಕಾತಿಗಾಗಿ, ಈಗ ಅರ್ಜಿ
ಸಲ್ಲಿಸುವಾಗ ಸ್ವಯಂಘೊಷಣೆ
ಮಾಡಿದರೆ ಸಾಕು. ಪ್ರಮಾಣಪತ್ರಗಳಿಗೆ ಗಜೆಟೆಡ್
ಅಧಿಕಾರಿಗಳು ಸಹಿ ಮಾಡಿ ದೃಢೀಕರಿಸುವ
ಕ್ರಮವನ್ನು ಕೈಬಿಟ್ಟು ಸ್ವಯಂ
ದೃಢೀಕರಿರುವ ಪರಿಪಾಠ
ಆರಂಭಿಸುವಂತೆ ಎಲ್ಲಾ ರಾಜ್ಯಗಳು
ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ
ಕೇಂದ್ರ ಸರ್ಕಾರ ಸೂಚನೆ ನೀಡಿದೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು