2006 ಕ್ಕಿಂತ ಮೊದಲೇ ನಿವೃತ್ತರಾದ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ಧಿ


 Suvarnanews:  3 hours ago
2006 ಕ್ಕಿಂತ ಮೊದಲೇ ನಿವೃತ್ತರಾದ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ಧಿ

ನವದೆಹಲಿ(ಏ.13): ಕೇಂದ್ರ ಸರಕಾರದ ಪಿಂಚಣಿದಾರರಿಗೊಂದು ಸಿಹಿ ಸುದ್ಧಿ! 2006 ಕ್ಕಿಂತ ಪೂರ್ವ ನಿವೃತ್ತಿ ವೇತನದಾರರಿಗೆ ಈಗ ಪಿಂಚಣಿ ಹೆಚ್ಚಳ ಮಾಡುವ ನಿರ್ಧಾರವನ್ನು  ಕೇಂದ್ರ ಸರಕಾರ ತೆಗೆದುಕೊಂಡಿದೆ. ಜೊತೆಗೆ  33 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿ ನಿವೃತ್ತರಾದವರು ಈ ಪ್ರಯೋಜನ ಪಡೆಯಬಹುದು ಎಂದು ಹೇಳಿದೆ.  

ಪಿಂಚಣಿ ಮತ್ತು ನಿವೃತ್ತಿ ವೇತನದಾರರ ಕಲ್ಯಾಣ ಇಲಾಖೆ 33 ವರ್ಷಕ್ಕಿಂತ ಕಡಿಮೆ ವರ್ಷ ಕಾರ್ಯ ನಿರ್ವಹಿಸಿ ನಿವೃತ್ತರಾದವರಿಗೆ ಶೇ.50 ಕ್ಕಿಂತ ಕಡಿಮೆ  ವೇತನ ನೀಡಬಾರದು ಎಂದು ಪಿಂಚಣಿ ಹೆಚ್ಚಳ ಮಾಡಲು ನಿರ್ಧರಿಸಿದೆ. ನಿಯಮಗಳ  ಪ್ರಕಾರ ಕೇಂದ್ರ ಸರಕಾರಿ ನೌಕರರು ಕನಿಷ್ಠ ಹತ್ತು ವರ್ಷಗಳ ಸೇವೆ ಪೂರ್ಣಗೊಂಡ ಮೇಲೆ ನಿವೃತ್ತಿ ಪಿಂಚಣಿ ಪಡೆಯುವ ಅರ್ಹತೆ ಪಡೆಯುತ್ತಾರೆ. 2006 ಜನವರಿ 1 ರ ನಂತರ ಪಿಂಚಣಿಯನ್ನು ಕಳೆದ ಹತ್ತು ತಿಂಗಳಲ್ಲಿ ಪಡೆದ ಸರಾಸರಿ ವೇತನ ಅಥವಾ ಮೂಲ ವೇತನವನ್ನು ಆಧರಿಸಿ ಕಂಡು ಹಿಡಿಯಲಾಗುತ್ತದೆ.

2006 ಕ್ಕಿಂತ ಪೂರ್ವದಲ್ಲಿ 33 ವರ್ಷಕ್ಕಿಂತ ಪೂರ್ಣಗೊಳ್ಳುವ ಮೊದಲೇ ಸೇವೆಯಿಂದ ನಿವೃತ್ತಿಯಾದವರಿಗೆ ಒಟ್ಟು ಸೇವಾ ಅವಧಿಯಲ್ಲಿ ಅರ್ಧದಷ್ಟು ವರ್ಷವನ್ನು ಕಳೆದು ಪಿಂಚಣಿ ನೀಡಲಾಗುತ್ತಿತ್ತು. ಈ ತಾರತಮ್ಯವನ್ನು ಪ್ರಶ್ನಿಸಿ ಕೇಂದ್ರ ಆಡಳಿತ ನ್ಯಾಯಮಂಡಳಿಗೆ ಸಾಕಷ್ಟು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಬಂದಿದ್ದವು. ಸುಪ್ರೀಂ ಕೋರ್ಟ್ ಸಹ ಈ ತಾರತಮ್ಯದ ಬಗ್ಗೆ ಆಕ್ಷೇಪ ವ್ಯಕ್ಯಪಡಿಸಿತ್ತು. ಪರಿಷ್ಕೃತ ಪಿಂಚಣಿ ಬಾಕಿಯನ್ನು ಜನವರಿ 1 2006 ರಿಂದ ಕೊಡಬೇಕಾಗುತ್ತದೆ ಎಂದು ಏಪ್ರಿಲ್ 06 ರಂದು ಸರಕಾರಕ್ಕೆ ಆದೇಶ ನೀಡಿದೆ.

ಕೇಂದ್ರ  ಅಡಿಯಲ್ಲಿ ಬರುವ ಎಲ್ಲಾ ಸಚಿವಾಲಯಗಳಲ್ಲಿ 33 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿ 2006 ಕ್ಕಿಂತ ಮೊದಲೇ ನಿವೃತ್ತರಾದ ನೌಕರರಿಗೆ ಈ ನಿಯಮ ಅನ್ವಯವಾಗುತ್ತದೆಯೇ ಎಂದು ಎಲ್ಲಾ ಸಚಿವಾಲಯಗಳು ಪ್ರಶ್ನಿಸಿದ್ದು,ಪರಿಷ್ಕ್ರತ ಪಿಂಚಣಿ ಪಾವತಿ ಎಲ್ಲಾ ಕಡೆ ಅನ್ವಯವಾಗಲಿದ್ದು, ತಕ್ಷಣ ಆದೇಶ ಕೊಡಬಹುದು ಎಂದು ಸುಪ್ರೀಂ ಹೇಳಿದೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು