ಕೊಲಂಬಿಯಾ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾನಟೋಸ್ ಗೆ ನೊಬೆಲ್ ಶಾಂತಿ ಪ್ರಶಸ್ತಿ:-

Nobel Peace Prize 2016,  ನೊಬೆಲ್ ಶಾಂತಿ
ಪ್ರಶಸ್ತಿ 2016, ಕೊಲಂಬಿಯಾ ಅಧ್ಯಕ್ಷ,
ಜುವಾನ್ ಮ್ಯಾನುಯೆಲ್ ಸ್ಯಾನಟೋಸ್ ಗೆ..
English summary
Colombia's President Juan Manuel Santos was on
Friday declared the winner of the Nobel Peace
Prize 2016.

ಓಸ್ಲೋ: ಕೊಲಂಬಿಯಾದ ಸರ್ಕಾರ ಮತ್ತು
ಎಫ್ಎಆರ್ ಸಿ ಬಂಡಾಯ ಗುಂಪಿನ ನಡುವೆ ಶಾಂತಿ
ನೆಲೆಸಲು ಪ್ರಮುಖ ಕಾರಣವಾಗಿದ್ದ
ಕೊಲಂಬಿಯಾ ಅಧ್ಯಕ್ಷ ಜುವಾನ್
ಮ್ಯಾನುಯೆಲ್ ಸ್ಯಾಂಟೋಸ್ ನೊಬೆಲ್
ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಾರ್ವೆಯ ನೊಬೆಲ್ ಶಾಂತಿ ಪ್ರಶಸ್ತಿ ಆಯ್ಕೆ ಸಮಿತಿ
2016 ನೇ ಸಾಲಿನ ನೊಬೆಲ್ ಪ್ರಶಸ್ತಿಯನ್ನು
ಅಂತಿಮಗೊಳಿಸಿದ್ದು, ಕಳೆದ 50 ವರ್ಷಗಳಿಂದ
ಕೊಲಂಬಿಯಾ ಸರ್ಕಾರ ಮತ್ತು ಎಫ್ಎಆರ್ ಸಿ
ನಡುವೆ ನಡೆಯುತ್ತಿದ್ದ ನಾಗರಿಕ ಯುದ್ಧವನ್ನು
ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದ್ದ
ಅಧ್ಯಕ್ಷ ಜುವಾನ್ ಮ್ಯಾನುಯೆಲ್
ಸ್ಯಾಂಟೋಸ್ ಗೆ ಪ್ರಶಸ್ತಿಯನ್ನು ಘೋಷಿಸಿದೆ.
ಕಳೆದ 50 ವರ್ಷ ನಡೆದ ಯುದ್ಧದಲ್ಲಿ 220,000
ಕೊಲಂಬಿಯನ್ನರು ಮೃತಪಟ್ಟಿದ್ದರು. ಅಷ್ಟೇ
ಅಲ್ಲದೆ 6 ಮಿಲಿಯನ್ ಕೊಲಂಬಿಯನ್ನರು ಮೂಲ
ಪ್ರದೇಶದಿಂದ ಸ್ಥಳಾಂತರಗೊಂಡಿದ್ದರು.
ಕ್ಯೂಬಾದಲ್ಲಿ 2012 ರಲ್ಲಿ ಪ್ರಾರಂಭವಾಗಿದ್ದ
ಮಾತುಕತೆಯ ಭಾಗವಾಗಿ ಶಾಂತಿಯುತ
ಒಪ್ಪಂದಕ್ಕೆ ಸಹಿಹಾಕುವ ಪ್ರಸ್ತಾವನೆಗೆ ಶೇ.52
ರಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದರು.
ಸೆ.26 ರಂದು ಕೊಲಂಬಿಯಾ ಹಾಗೂ ಎಫ್ಎಆರ್
ಸಿ ನಡುವೆ ಐತಿಹಾಸಿಕ ಶಾಂತಿಯುತ ಒಪ್ಪಂದ
ನಡೆದಿತ್ತು. ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ
376 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು. ಈ ಪೈಕಿ
228 ವ್ಯಕ್ತಿಗಳು ಹಾಗೂ 148 ಸಂಸ್ಥೆಗಳಿದ್ದವು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು