ತೋಟಗಾರಿಕೆ ಇಲಾಖೆಗೆ 1,500 ಹುದ್ದೆಗಳ ನೇಮಕಾತಿ

November 25, 2016November 25, 2016

ಬೆಳಗಾವಿ, ನ.25- ತೋಟಗಾರಿಕೆ ಇಲಾಖೆಗೆ ಈ ವರ್ಷ ಹೊಸದಾಗಿ ಒಂದೂವರೆ ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವುದಾಗಿ ಕೃಷಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸಿ.ಬಿ.ಸುರೇಶ್‍ಬಾಬು ತೋಟಗಾರಿಕೆ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪ್ರಶ್ನಿಸಿದರು. ಜೆಡಿಎಸ್‍ನ ಶಾಸಕ ಸಿ.ಎನ್. ಬಾಲಕೃಷ್ಣ ಮತ್ತು ಎಚ್.ಡಿ.ರೇವಣ್ಣ ಮಧ್ಯ ಪ್ರವೇಶಿಸಿ ಸಿಬ್ಬಂದಿ ಮತ್ತು ಅಧಿಕಾರಿಗಳ ಕೊರತೆ ಇರುವ ಬಗ್ಗೆ ಸಚಿವರ ಗಮನ ಸೆಳೆದರು.

ಇದಕ್ಕೆ ತೋಟಗಾರಿಕೆ ಸಚಿವರ ಪರವಾಗಿ ಉತ್ತರಿಸಿದ ಕೃಷ್ಣಬೈರೇಗೌಡ ಅವರು, ಈಗಾಗಲೇ 335 ಜನ ಸಹಾಯಕ ತೋಟಗಾರಿಕಾ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಈಗಾಗಲೇ ಅವರು ಮೂರು ತಿಂಗಳ ತರಬೇತಿ ಪಡೆದಿದ್ದಾರೆ. 261 ಮಂದಿ ತೋಟಗಾರಿಕಾ ಅಧಿಕಾರಿಗಳು ನೇಮಕವಾಗಿ ತರಬೇತಿ ಮುಗಿಸಿ ಕ್ಷೇತ್ರಗಳಿಗೆ ನೇಮಿಸುವ ಪ್ರಕ್ರಿಯೆ ನಡೆಯುತ್ತಿದೆ.  ಹೆಚ್ಚುವರಿಯಾಗಿ ಈ ವರ್ಷ 500 ಮಂದಿ ಸಹಾಯಕ ತೋಟಗಾರಿಕಾ ಅಧಿಕಾರಿ ಮತ್ತು ಒಂದು ಸಾವಿರ ಉದ್ಯಾನವನ ಪಾಲಕರ ನೇಮಕಕ್ಕೆ ಅನುಮತಿ ಸಿಕ್ಕಿದ್ದು, ಶೀಘ್ರವೇ ಪ್ರಕ್ರಿಯೆ ಆರಂಭಿಸಲಾಗುವುದು. ಒಟ್ಟಾರೆ 2500ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಎರಡು ವರ್ಷದಲ್ಲಿ ನೇಮಕಾತಿ ಮಾಡಿ ಕೊಳ್ಳಲಾಗುತ್ತಿದೆ. ಇದು ಹಿಂದೆ ಯಾವ ಸರ್ಕಾರ ಕೈಗೊಳ್ಳದಷ್ಟು ನೇಮಕಾತಿಯ ಸಂಖ್ಯೆ ಆಗಿದೆ ಎಂದು ವಿವರಿಸಿದರು.

ಹನಿ ನೀರಾವರಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ತೋಟಗಾರಿಕೆ ಇಲಾಖೆಯಿಂದ 230ಕೋಟಿ ಮತ್ತು ಕೃಷಿ ಇಲಾಖೆಯಿಂದ 300 ಕೋಟಿಯನ್ನು ಹನಿ ನೀರಾವರಿಗಾಗಿಯೇ ಮೀಸಲಿಡ ಲಾಗಿದೆ. ಪ್ರತಿವರ್ಷ ಶೇ.30ರಷ್ಟು ಹಣ ಹೆಚ್ಚಿಸಲಾಗುತ್ತಿದೆ.  ರಾಜ್ಯದಲ್ಲಿ ಕೃಷಿಗಿಂತಲೂ ತೋಟಗಾರಿಕೆ ಆದಾಯದ ಮೂಲ ವಾಗಿ ಕಂಡು ಬಂದಿದ್ದು, 50ರಿಂದ ಒಂದು ಲಕ್ಷ ಎಕರೆವರೆಗೂ ತೋಟ ಗಾರಿಕೆ ಬೆಳೆ ಹೆಚ್ಚುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು