ರವಿಶಂಕರ್ ಗುರೂಜಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ:-
ಏಜೆನ್ಸೀಸ್ | Nov 21, 2016, 04.50 AM IST
ರವಿಶಂಕರ್ ಗುರೂಜಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ
ಹೊಸದಿಲ್ಲಿ : ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿಗೆ ಭಾನುವಾರ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಜಧಾನಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್, ಜಾಗತಿಕ ಶಾಂತಿ ಸಹಬಾಳ್ವೆಗಾಗಿ ಗುರೂಜಿ ನೀಡಿದ ಕೊಡುಗೆಗಾಗಿ ''ಡಾ. ನಾಗೇಂದ್ರ ಸಿಂಗ್ ಅಂತರಾಷ್ಟ್ರೀಯ ಶಾಂತಿ ಪ್ರಶಸ್ತಿ' ಪ್ರದಾನ ಮಾಡಿದರು.
ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಮೊದಲ ಭಾರತೀಯ ಡಾ.ನಾಗೇಂದ್ರ ಸಿಂಗ್‌ರ ನೆನಪಿನಲ್ಲಿ ನೀಡಲಾಗುತ್ತದೆ.
Comments
Post a Comment