* ಸಿಯಾಚಿನ್ ಹೀರೋ ಹನುಮಂತಪ್ಪ ಕೊಪ್ಪದ್‌ಗೆ ಮರಣೋತ್ತರ ಶೌರ್ಯ ಪ್ರಶಸ್ತಿ.!!!*
*
ನವದೆಹಲಿ: ಸಿಯಾಚಿನ್ ಹೀರೋ, ಹುತಾತ್ಮ ಯೋಧ *ಲ್ಯಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ್* ಅವರು ಮರಣೋತ್ತರ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
*ಇಂದು 'ಆರ್ಮಿ ಡೇ' ನಿಮಿತ್ತ ದೆಹಲಿಯಲ್ಲಿ ನಡೆದ ಸೇನೆಯ ಸಮಾರಂಭದಲ್ಲಿ ಭೂಸೇನೆ ಮುಖ್ಯಸ್ಥ ಬಿಪಿನ್ ರಾವತ್ ಅವರಿಂದ ಕೊಪ್ಪದ್ ಅವರ ಪತ್ನಿ ಮಹಾದೇವಿ ಶೌರ್ಯ ಪ್ರಶಸ್ತಿಯನ್ನು ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ 15 ವೀರ ಯೋಧರಿಗೂ ಶೌರ್ಯ ಪ್ರಶಸ್ತಿ ನೀಡಲಾಯಿತು.*
ಕಳೆದ ವರ್ಷದ ಫೆಬ್ರವರಿ 3 ರಂದು ಸಿಯಾಚಿನ್ ಗಡಿಯಲ್ಲಿ ಸಂಭವಿಸಿದ್ದ ಭೀಕರ ಹಿಮಪಾತದಲ್ಲಿ ಧಾರವಾಡ ಜಿಲ್ಲೆಯ ಹನುಮಂತಪ್ಪ ಕೊಪ್ಪದ್ ಅವರು ಕಣ್ಮರೆಯಾಗಿದ್ದರು. 6 ದಿನಗಳ ನಂತರ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದರಾದರೂ, ಮಂಜುಗಡ್ಡೆಯಲ್ಲಿ 35 ಅಡಿ ಆಳದೊಳಗೆ ಹೂತು ಹೋಗಿದ್ದ ಹನುಮಂತಪ್ಪ ಅವರು ಫೆ.11ರಂದು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದರು.
Comments
Post a Comment