ಹೊಸ ರೂಪದಲ್ಲಿ ಬಂತು ಪ್ಯಾನ್‌ ಕಾರ್ಡ್‌ ಏಜೆನ್ಸೀಸ್ | Updated Jan 14, 2017,

ಹೊಸ ರೂಪದಲ್ಲಿ ಬಂತು ಪ್ಯಾನ್‌ ಕಾರ್ಡ್‌

ಹೊಸದಿಲ್ಲಿ: ಕೇಂದ್ರ ಸರಕಾರ ದೇಶದ ನಾಗರಿಕರಿಗೆ ಹೊಸ ರೂಪದ ಪ್ಯಾನ್‌ (ಶಾಶ್ವತ ಖಾತೆ ಸಂಖ್ಯೆ) ಕಾರ್ಡ್‌ಗಳನ್ನು ವಿತರಿಸುತ್ತಿದೆ. ಹೊಸ ವಿನ್ಯಾಸದ ಪ್ಯಾನ್‌ ಕಾರ್ಡ್‌ಗಳ ಮಾಹಿತಿಯನ್ನು ತಿದ್ದಲಾಗದಂತೆ ಹೆಚ್ಚುವರಿ ಭದ್ರತಾ ಗುಣಲಕ್ಷಣಗಳನ್ನು ಸೇಸೇರ್ಪಡೆ ಮಾಡಲಾಗಿದ್ದು, ವಿವರಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿದೆ. ಎನ್‌ಎಸ್‌ಡಿಎಲ್‌ ಮತ್ತು ಯುಟಿಐ ಇನ್‌ಫ್ರಾಸ್ಟ್ರಕ್ಚರ್‌ ಟೆಕ್ನಾಲಜಿ ಅಂಡ್‌ ಸವೀರ್‍ಸಸ್‌ ಲಿಮಿಟೆಡ್‌ ಸಂಸ್ಥೆಗಳು ಹೊಸ ವಿನ್ಯಾಸದ ಪ್ಯಾನ್‌ ಕಾರ್ಡ್‌ಗಳನ್ನು ಮುದ್ರಿಸುತ್ತಿವೆ. ಜನವರಿ 1ರಿಂದಲೇ ಹೊಸ ಪ್ಯಾನ್‌ ಕಾರ್ಡ್‌ಗಳನ್ನು ಜನರಿಗೆ ವಿತರಿಸಲಾಗುತ್ತಿದೆ ಎಂದು ಆದಾಯ ತೆರಿಗೆ ಇಲಾಖೆಯ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೊಸ ಅರ್ಜಿದಾರರಿಗೆ ಹೊಸ ಪ್ಯಾನ್‌ ಕಾರ್ಡ್‌ ಹಂಚಿಕೆ ಮಾಡಲಾಗುತ್ತಿದೆ. ಪ್ಯಾನ್‌ ಹೊಂದಿರುವವರು ಸಹ ಹೊಸ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಹೊಸ ಪ್ಯಾನ್‌ ಕಾರ್ಡ್‌ ಮಾಹಿತಿಯನ್ನು ಸ್ವಯಂಚಾಲಿತಗೊಳಿಸಿ, ಸಂಪೂರ್ಣ ದೋಷಮುಕ್ತಗೊಳಿಸಲಾಗಿದೆ. ಕೇಂದ್ರ ಸರಕಾರದ ರಾಜಭಾಷಾ ನೀತಿಯ ಅನ್ವಯ, ಪ್ಯಾನ್‌ ಮಾಹಿತಿಯನ್ನು ಎರಡು ಭಾಷೆಗಳಲ್ಲಿ ಮುದ್ರಿಸಲಾಗುತ್ತಿದೆ. ಪ್ಯಾನ್‌ ಕಾರ್ಡ್‌ ಮಾಹಿತಿಯ ಪರಿಶೀಲನಾ ಪ್ರಕ್ರಿಯೆಗೆ ನೆರವಾಗುವಂತೆ ತ್ವರಿತ ಸ್ಪಂದನಾ ಸಂಕೇತದ ಹೊಸ ಭದ್ರತಾ ಗುಣಲಕ್ಷಣವನ್ನು ಸೇರಿಸಲಾಗಿದೆ. ಒಂದೇ ಬಾರಿಗೆ ಕಾರ್ಡ್‌ದಾರನ ಸಮಗ್ರ ಮಾಹಿತಿಯನ್ನು ಈ ಸಂಕೇತವು ಪರಿಶೀಲಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

INCOME TAX CALCULATION 2025-26 for JAMAKHANDI BLOCK