*ಬೇಸಿಗೆ ಸಂಭ್ರಮ-2017ರ ಕಿರು ಪರಿಚಯ*


💐 *SUMMER-CAMP 2017*💐

*(01).* ಡೈಸ್ ಮಾಹಿತಿ ಆಧರಿಸಿ 150ಕ್ಕಿಂತ ಹೆಚ್ಚು ದಾಖಲಾತಿ ಹೊಂದಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಾತ್ರ ಕಡ್ಡಾಯವಾಗಿ ಅನುಷ್ಠಾನ.

*(02).* ಸನ್-2017-18ನೆಯ ಸಾಲಿಗೆ 6ನೆಯ & 7ನೆಯ ವರ್ಗಕ್ಕೆ ಅರ್ಹರಿರುವ ಮಕ್ಕಳು ಮಾತ್ರ ಅರ್ಹರು.

*(03).* ಇದು ನಿರಂತರವಾಗಿ ಐದು ವಾರಗಳವರೆಗೆ ನಡೆಯುವ ಕಾರ್ಯಕ್ರಮ.

*(04).* ಈ ಐದು ವಾರಕ್ಕೆ ಮಕ್ಕಳಿಗೆ ಬೋಧಿಸಬೇಕಾದ ಪಠ್ಯಕ್ರಮವು *ಸ್ವಲ್ಪ ಓದು-ಸ್ವಲ್ಪ ಮೋಜು* ಎಂಬ ಶಿರೋನಾಮೆಯಡಿಯಲ್ಲಿ ಸಿದ್ಧವಾಗಿರುತ್ತದೆ. ಈ ಪಠ್ಯಕ್ರಮವನ್ನೇ ಉಸ್ತುವಾರಿ ಶಿಕ್ಷಕರು ಬೋಧಿಸಬೇಕು.

ಈ ಬೇಸಿಗೆ ಸಂಭ್ರಮ-2017ರ ಕಾರ್ಯಕ್ರಮದಲ್ಲಿ ಉಸ್ತುವಾರಿ ಶಿಕ್ಷಕರು ಬೋಧಿಸಲು ಬಳಸುವ ಐದು ವಾರದ ಪಠ್ಯಕ್ರಮದ ಕಿರು ಪರಿಚಯ ಈ ಕೆಳಗಿನಂತಿರುತ್ತದೆ...
*ಮೊದಲ ವಾರ*
-ಕುಟುಂಬ

*ಎರಡನೆಯ ವಾರ*
-ನೀರು

*ಮೂರನೆಯ ವಾರ*
-ಆಹಾರ

*ನಾಲ್ಕನೆಯ ವಾರ*
-ಆರೋಗ್ಯ & ನೈರ್ಮಲ್ಯ

*ಐದನೆಯ ವಾರ*
-ಪರಿಸರ.

ಈ ಮೇಲಿನ ಐದು ವಾರದ ಪಠ್ಯಕ್ರಮದಲ್ಲಿ ಆಯಾ ವಾರಕ್ಕೆ ನಿಗದಿಪಡಿಸಿದ ವಿಷಯ ವಸ್ತುಗಳನ್ನು ವಾರದ ಆರು ದಿನಗಳಂದು ಪ್ರತಿದಿನ ಈ ಕೆಳಗೆ ನಮೂದಿಸಿದ ಐದು ಹಂತದ ಚಟುವಟಿಕೆಗಳಂತೆ ಬೋಧಿಸುವುದು...

*ಮೊದಲನೆಯ ಅವಧಿಯ ಚಟುವಟಿಕೆ*
-ಓದು-ಬರಹ

*ಎರಡನೆಯ ಅವಧಿಯ ಚಟುವಟಿಕೆ*
-ನಿತ್ಯಜೀವನಕ್ಕೆ ಸಂಬಂಧೀಕರಿಸುವುದು

*ಮೂರನೆಯ ಅವಧಿಯ ಚಟುವಟಿಕೆ*
-ಬಾ ಸಮಸ್ಯೆ ಬಿಡಿಸು

*ನಾಲ್ಕನೆಯ ಅವಧಿಯ ಚಟುವಟಿಕೆ*
-ಮಾಡಿಕಲಿ(ಪ್ರಯೋಗ)

*ಐದನೆಯ ಅವಧಿಯ ಚಟುವಟಿಕೆ*
-ಅಭ್ಯಾಸ ಚಟುವಟಿಕೆ

ಹೀಗೆ ವಾರದ ಐದು ದಿನಗಳವರೆಗೆ ಕಲಿಕಾ-ಬೋಧನಾ ಕಾರ್ಯ ಸಾಗುವುದು ಆದರೇ ಪ್ರತಿ ವಾರದ *ಆರನೆಯ ದಿನ*ವನ್ನು *ಕಲಿಕಾ ಮುಕ್ತ ದಿನ*ವಾಗಿ ಕಲಿಕಾ-ಬೋಧನಾ ಪ್ರಕ್ರಿಯೆಯಲ್ಲಿ ತೋಡಗಿಸುವುದು.

* ವಾರದ ಐದು ದಿನ  *ಸ್ವಲ್ಪ ಓದು-ಸ್ವಲ್ಪ ಮೋಜು* ಎಂಬ ಶಿರೋನಾಮೆಯಡಿಯಲ್ಲಿ ಸಿದ್ಧವಾಗಿರುವ ಈ ಪಠ್ಯಕ್ರಮವನ್ನೇ ಉಸ್ತುವಾರಿ ಶಿಕ್ಷಕರು ಬೋಧಿಸಬೇಕು. ಆದರೆ ಆರನೇ ದಿನವು *ಕಲಿಕಾ ಮುಕ್ತ ದಿನ*ವಾಗಿ ಕೆಲಸ ಮಾಡುತ್ತದೆ.
👉🏻 *ಕಲಿಕಾ ಮುಕ್ತ ದಿನ :-* ಅಂದರೆ ಮಕ್ಕಳಲ್ಲಿ ಹುದುಗಿರುವ ಸೃಜನಶೀಲ ಸಾಮರ್ಥ್ಯಗಳಾದ...
*-ಹಾಡು*
*-ಆಟ*
*-ಕಥೆ ಹೇಳುವುದು*
*-ಭಾಷಣ*
*-ನೃತ್ಯ ಪ್ರದರ್ಶನ*
*-ಚಿತ್ರಕಲೆ*
*-ನಾಟಕ* ಇತ್ಯಾದಿ... ಇತ್ಯಾದಿ ಈ ಕಲಿಕಾ ಮುಕ್ತ ದಿನದಂದು ಆಯಾ ವಾರಕ್ಕೆ ನಿಗದಪಡಿಸಿದ ಪಠ್ಯಕ್ರಮದ ವಿಷಯದಡಿಯಲ್ಲಿ ಮಕ್ಕಳಿಗೆ ಸೃಜನಶೀಲ ಚಟುವಟಿಕೆಗಳನ್ನು ಮಾಡಿಸುವುದು.

*(05).* ಬೋಧನೆ & ಕಲಿಕೆಗೆ ಅನುಕೂಲವಾಗಲು *ಕಲಿಕೋಪಕರಣ*ಗಳನ್ನು ಸರಬರಾಜು ಸಹ ಮಾಡಲಾಗುವುದು.

*(06).* ಮಕ್ಕಳ ಸಂಖ್ಯೆಗಳಿಗನುಗುಣವಾಗಿ ಉಸ್ತುವಾರಿ ಶಿಕ್ಷಕರ & ಬಿಸಿಯೂಟ ಸಿಬ್ಬಂದಿಯವರ ನೇಮಕ ಮಾಡಿಕೊಳ್ಳುವ ಜವಾಬ್ದಾರಿ ಶಾಲಾ ಮುಖ್ಯಗುರುಗಳದ್ದು.

*(07).* ನೇಮಕಗೊಂಡ ಶಾಲಾ ಅಡುಗೆ ಸಿಬ್ಬಂದಿಯವರಿಗೆ ಮುಂಗಡ ಅಡುಗೆ ಸಂಭಾವನೆ ಜಮೆ.

*(08).* ಬೇಸಿಗೆ ಸಂಭ್ರಮ-2017ರ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ನೌಕರರಿಗೆ ಸರಕಾರಿ ನಿಯಮಾನುಸಾರ *EL* ವ್ಯವಸ್ಥೆಯೂ ಇರುತ್ತದೆ.

*(09).* ಈ ಶಿಬಿರವು ಪ್ರತಿದಿನ ಮುಂಜಾನೆ 10ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ಕಾರ್ಯ ನಿರ್ವಹಿಸುವುದು.

*(10).* ಈ ಬೇಸಿಗೆ ಸಂಭ್ರಮ-2017ರ ಕಾರ್ಯಕ್ರಮವು ಸರಕಾರಿ ರಜಾ ದಿನಗಳಂದು ರಜೆ ಇರುತ್ತದೆ.

*(11).* ಈ ಬೇಸಿಗೆ ಸಂಭ್ರಮ-2017ರ ಕಾರ್ಯಕ್ರಮವು ಆಯ್ಕೆಯಾದ ಎಲ್ಲಾ ಶಾಲೆಗಳಲ್ಲಿ *17.04.2017ರಂದು ಪ್ರಾರಂಭ*ವಾಗಬೇಕು.

*(12).* ಮುಂಬರುವ  (04.04.2017ರ) ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಈ ಬೇಸಿಗೆ ಸಂಭ್ರಮ-2017ರ ಕಾರ್ಯಕ್ರಮದ ಕುರಿತು ವ್ಯಾಪಕ ಪ್ರಚಾರ ಮಾಡಿ, ಈ ಕಾರ್ಯಕ್ರಮದ ಕುರಿತಾಗಿ ಅರಿವು ಮೂಡಿಸುವುದು & ಯಶಸ್ಸು ಮಾಡುವುದು.

*(13).* ಸದರಿ ಯೋಜನೆಯಲ್ಲಿ ನಿಗದಿತ ಮಾಹಿತಿಗಳ ಸರಬರಾಜಿಗಾಗಿ ಒಂದು ವಿಶೇಷ *ಮೋಬೈಲ್ ಆಪ್* ಬಿಡುಗಡೆ, ಇದರ ಮಾಲಕವೇ ಮುಖ್ಯಗುರುಗಳು ಆಹಾರ-ಧಾನ್ಯಗಳ ಬೇಡಿಕೆ ಕಳಿಸಬಹುದು & ವಿವಿಧ ಹಂತದ ಮೇಲಾಧಿಕಾರಿಗಳು ಸಹ ಸಂದರ್ಶನ ವರದಿಯನ್ನು ಕೂಡ ಕಳಿಸಬಹುದು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು