'ಅತ್ಯುತ್ತಮ ಬಾಲನಟ' ರಾಷ್ಟ್ರೀಯ ಪ್ರಶಸ್ತಿ ಪಡೆದ ಪ್ರತಿಭಾನ್ವಿತ ಕನ್ನಡಿಗ ಮನೋಹರ ಕೆ ..!


Posted by: Harshitha | Sat, Apr 8, 2017, 13:46 [IST]

2016ನೇ ಸಾಲಿನ 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನಿನ್ನೆ ಪ್ರಕಟವಾಯ್ತು. ಕನ್ನಡಕ್ಕೆ ಒಟ್ಟು ನಾಲ್ಕು ಪ್ರಶಸ್ತಿಗಳು ಲಭಿಸಿವೆ. 'ಅಲ್ಲಮ' ಚಿತ್ರದ ಸಂಗೀತ ನಿರ್ದೇಶನ ಹಾಗೂ ಮೇಕಪ್ ವಿಭಾಗಕ್ಕೆ ಎರಡು ಪ್ರಶಸ್ತಿಗಳು ಸಿಕ್ರೆ, 'ರಿಸರ್ವೇಶನ್' ಚಿತ್ರ 'ಅತ್ಯುತ್ತಮ ಚಿತ್ರ' (ಕನ್ನಡ) ಪ್ರಶಸ್ತಿಗೆ ಭಾಜನವಾಯ್ತು.
ಇನ್ನೂ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಅತ್ಯದ್ಭುತ ನಟನೆಯಿಂದ ಜ್ಯೂರಿ ಮೆಂಬರ್ಸ್ ಮನವನ್ನ ಗೆದ್ದು 'ಅತ್ಯುತ್ತಮ ಬಾಲನಟ' ಪ್ರಶಸ್ತಿ ಪಡೆದಿರುವ ಪ್ರತಿಭಾನ್ವಿತ ಕನ್ನಡಿಗ ಮನೋಹರ.ಕೆ.
ಪೃಥ್ವಿ ಕೊಣನೂರು ನಿರ್ದೇಶನದ 'ರೈಲ್ವೇ ಚಿಲ್ಡ್ರನ್' ಚಿತ್ರದ ಅಭಿನಯಕ್ಕಾಗಿ ಮಾಸ್ಟರ್ ಮನೋಹರ.ಕೆ 'ಅತ್ಯುತ್ತಮ ಬಾಲನಟ' ಪ್ರಶಸ್ತಿಯನ್ನ ಇನ್ನಿಬ್ಬರ ಜೊತೆ ಹಂಚಿಕೊಂಡಿದ್ದಾರೆ

ದೊಡ್ಡಬಳ್ಳಾಪುರದ ಹುಡುಗ ಮನೋಹರ.ಕೆ
ಇಂದು 'ಅತ್ಯುತ್ತಮ ಬಾಲನಟ' ಪ್ರಶಸ್ತಿ ಪಡೆದು ದೇಶಾದ್ಯಂತ ಸುದ್ದಿ ಮಾಡಿರುವ ಮನೋಹರ.ಕೆ ಮೂಲತಃ ದೊಡ್ಡಬಳ್ಳಾಪುರದವರು. ಹೈ ಸ್ಕೂಲ್ (8ನೇ ತರಗತಿ) ವ್ಯಾಸಂಗ ಮಾಡುತ್ತಿರುವ ಮನೋಹರ.ಕೆ ಓದಿನಲ್ಲಿ ನಂಬರ್ ಓನ್... ಉತ್ತಮ ಕ್ರೀಡಾಪಟು ಕೂಡ ಹೌದು.
  

'ರೈಲ್ವೇ ಚಿಲ್ಡ್ರನ್' ಚಿತ್ರದ ಕುರಿತು
ಮನೆ ಬಿಟ್ಟು ರೈಲ್ವೇ ನಿಲ್ದಾಣಗಳಲ್ಲಿ ಜೀವಿಸುತ್ತಿರುವ... ರೈಲು ಹಳಿಗಳ ನಡುವೆಯೇ ಬದುಕು ಕಟ್ಟಿಕೊಳ್ಳಲು ಗುದ್ದಾಡುತ್ತಿರುವ ಮಕ್ಕಳ ಸುತ್ತ ಹೆಣೆದಿರುವ ಚಿತ್ರವೇ 'ರೈಲ್ವೇ ಚಿಲ್ಡ್ರನ್'.

  

ಕಡಿಮೆ ಬಜೆಟ್ ನಲ್ಲಿ ತಯಾರಾಗಿರುವ ಸಿನಿಮಾ
'ರೈಲ್ವೇ ಚಿಲ್ಡ್ರನ್' ಕಮರ್ಶಿಯಲ್ ಚಿತ್ರ ಅಲ್ಲ. ಇದರಲ್ಲಿ ಹಾಡು, ಸಾಹಸ ದೃಶ್ಯಗಳು ಇಲ್ಲ. ಹಾಗಂತ ಸಿನಿಮಾದಲ್ಲಿ ಮನರಂಜನೆಗೆ ಕೊರತೆ ಇಲ್ಲ ಎನ್ನುತ್ತಾರೆ ನಿರ್ದೇಶಕ ಪೃಥ್ವಿ.
  

ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ
'ಜಿಯೊ ಮಾಮಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ' ಸೇರಿದಂತೆ ಅನೇಕ ಚಿತ್ರೋತ್ಸವಗಳಲ್ಲಿ 'ರೈಲ್ವೇ ಚಿಲ್ಡ್ರನ್' ಪ್ರದರ್ಶನಗೊಂಡು ಪ್ರಶಂಸೆ ಗಳಿಸಿದೆ. ಸದ್ಯದಲ್ಲಿಯೇ 'ರೈಲ್ವೇ ಚಿಲ್ಡ್ರನ್' ಬಿಡುಗಡೆ ಆಗುವ ಸಾಧ್ಯತೆ ಇದೆ

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು