: ಚೋಪ್ರಾ ರಾಷ್ಟ್ರೀಯ ದಾಖಲೆ; ಭಾರತಕ್ಕೆ 8ನೇ ಚಿನ್ನ


>
> ನೀರಜ್ ಚೋಪ್ರಾ
>
> - ನ್ಯೂಸ್18 ಕನ್ನಡ
>
> ಬೆಂಗಳೂರು(ಆ. 27): ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಇಂದು ಸೋಮವಾರ ಎಂಟನೇ ಚಿನ್ನ ಸಿಕ್ಕಿದೆ. ಭರ್ಜಿ ಎಸೆತದಲ್ಲಿ (ಜಾವೆಲಿನ್ ಥ್ರೋ) ನೀರಜ್ ಚೋಪ್ರಾ ಅಗ್ರಸ್ಥಾನ ಪಡೆದಿದ್ದಾರೆ. 88.03 ದೂರ ಭರ್ಜಿ ಎಸೆದ ನೀರಜ್ ಚೋಪ್ರಾ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಈ ಮೂಲಕ ಏಷ್ಯನ್ ಗೇಮ್ಸ್​ನಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆಯನ್ನು ಚೋಪ್ರಾ ಉಳಿಸಿಕೊಂಡರು. ಏಷ್ಯನ್ ಗೇಮ್ಸ್ ಜಾವೆಲಿನ್ ಥ್ರೋನಲ್ಲಿ ಭಾರತ ಕೊನೆಯ ಬಾರಿ ಚಿನ್ನ ಗಳಿಸಿದ್ದು 1982ರಲ್ಲಿ. ಅಂದರೆ, 36 ವರ್ಷಗಳ ನಂತರ ನೀರಜ್ ಚೋಪ್ರಾ ಅವರ ಮೂಲಕ ಭಾರತಕ್ಕೆ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಲಭಿಸಿದೆ.
>
> ನೀರಜ್ ಚೋಪ್ರಾ ತಮ್ಮ ಮೂರನೇ ಪ್ರಯತ್ನದಲ್ಲಿ 88.03 ಮೀಟರ್ ದೂರಕ್ಕೆ ಭರ್ಜಿ ಎಸೆದರು. ಅವರ ಇತರ ಐದು ಪ್ರಯತ್ನಗಳು ಈ ಮಟ್ಟಕ್ಕೆ ಬರಲಿಲ್ಲ. ಆದರೆ, ಅವರ ಮೂರನೇ ಯತ್ನದ ಎಸೆತವು ಚಿನ್ನ ದಕ್ಕಿಸಿಕೊಳ್ಳಲು ಯಶಸ್ವಿಯಾಯಿತು.
>
> ನೀರಜ್ ಚೋಪ್ರಾ ಅವರು ಶಿರಸಿ ಮೂಲದ ಜಾವೆಲಿನ್ ಪಟು ಕಾಶಿನಾಥ್ ನಾಯ್ಕ್ ಅವರ ಗರಡಿಯಲ್ಲಿ ಅಭ್ಯಾಸ ಮಾಡಿದವರಾಗಿದ್ದಾರೆ. ಚೋಪ್ರಾ ಸದ್ಯ ದೇಶದ ನಂಬರ್ ಒನ್ ಜಾವೆಲಿನ್ ಥ್ರೋ ಪಟುವಾಗಿದ್ಧಾರೆ. ಇವರಿಂದ ಚಿನ್ನದ ಪದಕದ ನಿರೀಕ್ಷೆಯು ಕ್ರೀಡಾಕೂಟದ ಮುನ್ನವೇ ಇತ್ತು. ಆದರೆ, ಕಳೆದ ವರ್ಷದಂದು ಚೈನೀ ಥೈಪೆ ದೇಶದ ಅಥ್ಲೀಟ್ ಎಸೆದ 91.36 ಮೀಟರ್ ದಾಖಲೆಯನ್ನು ಮುರಿಯುವ ಅವಕಾಶ ಚೋಪ್ರಾ ಕೈತಪ್ಪಿತು. 1997ರಲ್ಲಿ ಚೆಕೋಸ್ಲಾವಾವಿಕಾ ದೇಶದ ಜಾನ್ ಜೆಲೆಜ್ನಿ ಅವರು 98.48 ಮೀಟರ್ ದೂರ ಎಸೆದದ್ದು ಈಗಲೂ ವಿಶ್ವದಾಖಲೆಯಾಗಿಯೇ ಉಳಿದಿದೆ.
>
> ಇನ್ನೂ 20 ವರ್ಷದ ವಯಸ್ಸಿನ ನೀರಜ್ ಚೋಪ್ರಾ ಅವರ ಸಾಧನೆಯನ್ನು ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಹಲವರು ಶ್ಲಾಘಿಸಿ ಟ್ವೀಟ್ ಮಾಡಿದ್ಧಾರೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು