ಅಮೆರಿಕ ನ್ಯೂಯಾರ್ಕ್ ಟೈಮ್ಸ್ ಪಟ್ಟಿಯಲ್ಲಿ ಹಂಪಿಗೆ 2ನೇ ಸ್ಥಾನ..! Sunday, 13.01.2019, 7:37 AM Public TV

-ವಿಶ್ವ ಪರಂಪರೆ ತಾಣಕ್ಕೆ ಮತ್ತೊಂದು ಗರಿ..!

ಬಳ್ಳಾರಿ: ವಿಶ್ವ ಪರಂಪರೆ ತಾಣವಾಗಿರುವ ಹಂಪಿಗೀಗ ಮತ್ತೊಂದು ಗರಿ ಲಭಿಸಿದ್ದು, ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪಟ್ಟಿಯ ಪ್ರವಾಸಿ ತಾಣಗಳಲ್ಲಿ ವಿಶ್ವ ವಿಖ್ಯಾತ ಹಂಪಿಗೆ 2ನೇ ಸ್ಥಾನ ಲಭಿಸಿದೆ. ಇದೂ ರಾಜ್ಯದ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ.

'ಕಣ್ಣು ಇದ್ದವರು ಕನಕಗಿರಿ ನೋಡಬೇಕು. ಕಾಲಿದ್ದವರು ಹಂಪಿ ನೋಡಬೇಕು' ಅನ್ನೋ ಗಾದೆ ಮಾತಿದೆ. ವಿಶ್ವ ವಿಖ್ಯಾತ ಹಂಪಿಯ ಸ್ಮಾರಕಗಳನ್ನ ನೋಡುವುದೇ ಒಂದು ಅಂದವಾಗಿದ್ದು, ಅಂತಹ ಅಂದದ ಸೊಬಗಿನ ಸ್ಮಾರಕಗಳಿಗೆ ಇದೀಗ ಮತ್ತೊಮ್ಮೆ ಹಿರಿಮೆ ಲಭಿಸಿದೆ. ವಿಶ್ವದ 52 ಪ್ರವಾಸಿ ತಾಣಗಳಲ್ಲಿ ವಿಶ್ವ ಪರಂಪರೆಯ ಹಂಪಿಗೆ 2ನೇ ಸ್ಥಾನ ಲಭಿಸಿದೆ. ಅಮೆರಿಕದ ನ್ಯೂಯಾರ್ಕ್ಸ್ ಟೈಮ್ಸ್ ಮಾಡಿರುವ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೆರೆಬಿಯನ್ ದ್ವೀಪವಾದ ಪೋರ್ಟೋ ರಿಕೋಗೆ ಮೊದಲ ಸ್ಥಾನ ಲಭಿಸಿದ್ದರೆ, ವಿಶ್ವ ವಿಖ್ಯಾತ ಹಂಪಿಗೆ 2ನೇ ಸ್ಥಾನ ದೊರೆತಿರುವುದು ರಾಜ್ಯದ ಹೆಮ್ಮೆಯ ಸಂಗತಿಯಾಗಿದೆ ಎಂದು ಬಳ್ಳಾರಿ ಡಿಸಿ ರಾಮಪ್ರಸಾತ್ ಮನೋಹರ್ ಹೇಳಿದ್ದಾರೆ.

ವಿಶ್ವ ವಿಖ್ಯಾತ ಹಂಪಿಯ ಸ್ಮಾರಕಗಳನ್ನ ನೋಡಲು ಪ್ರತಿನಿತ್ಯ ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಕಳೆದ ವರ್ಷ ಬರೋಬ್ಬರಿ 5,35 ಲಕ್ಷ ಪ್ರವಾಸಿಗರು ಹಂಪಿ ವೀಕ್ಷಣೆ ಮಾಡಿದ್ದಾರೆ. ಈ ಪೈಕಿ 38 ಸಾವಿರ ವಿದೇಶಿ ಪ್ರವಾಸಿಗರು ಹಂಪಿ ವೀಕ್ಷಣೆ ಮಾಡಿರುವುದು ಮತ್ತೊಂದು ದಾಖಲೆಯಾಗಿದೆ. ಹೀಗಾಗಿ ಇತಂಹ ವಿಶ್ವ ವಿಖ್ಯಾತ ಹಂಪಿಗೆ ಇದೀಗ ನ್ಯೂಯಾರ್ಕ್ ಟೈಮ್ಸ್ ನಲ್ಲಿ 2ನೇ ಸ್ಥಾನ ದೊರೆತಿರುವುದು ನಿಜಕ್ಕೂ ರಾಜ್ಯದ ಹೆಮ್ಮೆಯ ಸಂಗತಿಯಾಗಿದೆ. ದೇಶದ ಯಾವ ಪ್ರವಾಸಿ ತಾಣಗಳಿಗೂ ಸಿಗದ ಮಾನ್ಯತೆ ವಿಶ್ಯ ವಿಖ್ಯಾತ ಹಂಪಿಗೆ ದೊರೆತಿರುವುದು ಬಳ್ಳಾರಿ ಜನರಲ್ಲಿ ಮತ್ತಷ್ಟೂ ಸಂತಸ ಮೂಡಿಸಿದೆ. ಜೊತೆಗೆ ಹಂಪಿಯನ್ನ ಇನ್ನಷ್ಟು ಅಭಿವೃದ್ಧಿ ಮಾಡಿದರೆ ಒಳಿತೂ ಅಂತ ಪ್ರವಾಸಿಗ ಬಸವರಾಜ್ ಹೇಳಿದ್ದಾರೆ.

ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪಟ್ಟಿಯಲ್ಲಿ ಹಂಪಿಗೆ ವಿಶೇಷ ಸ್ಥಾನ ಗೌರವ ಸಿಕ್ಕರೂ ರಾಜ್ಯ ಸರ್ಕಾರ ಇತಂಹ ಹೆಮ್ಮೆಯ ಹಂಪಿ ಉತ್ಸವವನ್ನು ಮಾಡದೇ ನಿರ್ಲಕ್ಷ್ಯ ತೊರಿರುವುದು ನಿಜಕ್ಕೂ ದುರಂತಮಯವಾಗಿದೆ. ಇನ್ನಾದ್ರೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಶ್ವ ಪರಂಪರೆಯ ತಾಣವಾಗಿರುವ ಹಂಪಿಯತ್ತ ಚಿತ್ತ ಹರಿಸಲಿ ಅನ್ನೋದೇ ಎಲ್ಲರ ಒತ್ತಾಯವಾಗಿದೆ.

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

INCOME TAX CALCULATION 2025-26 for JAMAKHANDI BLOCK