w.e.f. May 1, BSNL(Landline ) OFFER FREE TALKTIME to any phone/mobile(9pm to 7am)
ಬಿಎಸ್ಸೆನ್ನೆಲ್‌ನಿಂದ ಫ್ರೀ ಟಾಕ್‌ಟೈಮ್: ಮೇ 1ರಿಂದ ಜಾರಿ ಏಜೆನ್ಸೀಸ್ | Apr 23, 2015, 03.45PM IST ಲೇಖನ ಅನಿಸಿಕೆಗಳು (2) 2 ಸ್ಥಿರ ದೂರವಾಣಿಯ ಕರೆ ರಾತ್ರಿ ಉಚಿತ/ ದೇಶಾದ್ಯಂತ ಮೇ 1ರಿಂದ ಜಾರಿ ಮುಖ್ಯಾಂಶಗಳು * ಬಿಸ್ಸೆನ್ನೆಲ್ ಸ್ಥಿರ ದೂರವಾಣಿ ಗ್ರಾಹಕರಿಗೆ ಬಂಪರ್ ಕೊಡುಗೆ * ಮೇ 1ರಿಂದ ರಾತ್ರಿ 9ರಿಂದ ಬೆಳಗ್ಗೆ 7 ಗಂಟೆ ತನಕ ಮಾತಿಗೆ ದುಡ್ಡಿಲ್ಲ * ಯಾವುದೇ ಸ್ಥಿರ ದೂರವಾಣಿ, ಮೊಬೈಲ್‌ಗೆ ಉಚಿತ ಕರೆ * ಬ್ರಾಡ್‌ಬಾಂಡ್ ಜತೆಗಿನ ಸ್ಥಿರ ದೂರವಾಣಿಗೂ ಅನ್ವಯ ಹೊಸದಿಲ್ಲಿ: ನಾನಾ ಬಗೆಯ ಮೊಬೈಲ್, ಸ್ಮಾರ್ಟ್‌ಫೋನ್ ಜಮಾನ ಬಂದ ಮೇಲೆ ಜನರು ಗುಡ್‌ಬೈ ಹೇಳಿದ್ದ ಸ್ಥಿರ ದೂರವಾಣಿ ಮತ್ತೆ ಮನೆಯನ್ನು ಅಲಂಕರಿಸುವ ಕಾಲ ಬಂದಿದೆ! ಸಾರ್ವಜನಿಕ ವಲಯದ ಬಿಎಸ್ಸೆನ್ನೆಲ್ ತನ್ನ ಗ್ರಾಹಕರಿಗೆ ಉಚಿತ ಕರೆಯ ಬಂಪರ್ ಕೊಡುಗೆ ನೀಡಿದೆ. ಬಿಎಸ್ಸೆನ್ನೆಲ್ ಸ್ಥಿರ ದೂರವಾಣಿ ಗ್ರಾಹಕರು ಮೇ 1ರಿಂದ ರಾತ್ರಿ ಒಂಬತ್ತರಿಂದ ಬೆಳಗ್ಗೆ 7 ಗಂಟೆವರೆಗೆ ಅನಿಯಮಿತ ಉಚಿತ ಕರೆ ಮಾಡಬಹುದು. ಕರೆ ಸ್ವೀಕರಿಸುವಾತ ಯಾವ ಕಂಪನಿಯ ಯಾವ ಪೋನ್ ಬಳಸುತ್ತಿದ್ದಾನೆ ಎಂಬ ತಲೆಬಿಸಿಯಿಲ್ಲದೇ ಬಾಯಿತುಂಬಾ ಹರಟಬಹುದು. ಅಂದರೆ, ಬಿಎಸ್ಸೆನ್ನೆಲ್ ಸ್ಥಿರ ದೂರವಾಣಿಯಿಂದ ರಾತ್ರಿ ಒಂಬತ್ತರಿಂದ ಬೆಳಗ್ಗೆ 7 ಗಂಟೆ ಅವಧಿಯಲ್ಲಿ ಬಿಎಸ್ಸೆನ್ನೆಲ್ ಅಲ್ಲದೇ, ಇತರ ಯಾವುದೇ ಕಂಪನಿಯ ಸ್ಥಿರ ಅಥವಾ ಮೊಬೈಲ್ ದೂರವಾಣಿಗಳಿಗೆ ಮಾಡುವ ಕರೆ ಸಂಪೂರ್ಣ ಉಚಿತವಾಗಿ...