Pulitzer Award to Palani Kumanan (T.N)
ಕೊಯಮತ್ತೂರಿನ ಸಾಫ್ಟ್‌ವೇರ್ ಎಂಜಿನಿಯರ್‌ಗೆ 'ಪುಲಿಟ್ಜರ್'
Thu, 04/23/2015 - 01:00
ನ್ಯೂಯಾರ್ಕ್ (ಐಎಎನ್ಎಸ್): ವರದಿಗಾರಿಕೆ ಹಾಗೂ ಅದನ್ನು ಪ್ರಸ್ತುತಪಡಿಸಲು ಮಾಹಿತಿ ತಂತ್ರಜ್ಞಾನದ ಬಳಕೆಯ ಹೆಚ್ಚಳದ ಬಗ್ಗೆ ತನಿಖಾ ವರದಿ ಮಾಡಿರುವ ತಮಿಳುನಾಡು ರಾಜ್ಯದ ಕೊಯಮತ್ತೂರಿನ ಸಾಫ್ಟ್‌ವೇರ್ ಎಂಜಿನಿಯರ್ ಪಳನಿ ಕುಮಾನನ್ ಅವರಿಗೆ 'ದಿ ವಾಲ್ ಸ್ಟ್ರೀಟ್ ಜರ್ನಲ್'ನ ಪ್ರತಿಷ್ಠಿತ 'ಪುಲಿಟ್ಜರ್' ಪ್ರಶಸ್ತಿ ಸಂದಿದೆ.
ಸಾಫ್ಟ್‌ವೇರ್ ವಾಸ್ತುಶಾಸ್ತ್ರ ಮತ್ತು ತಾಂತ್ರಿಕ ಮುಖ್ಯಸ್ಥರಾಗಿರುವ ಕುಮಾನನ್, 'ಡೋವ್ ಜೋನ್ಸ್' ಜರ್ನಲ್‌ನ ಪ್ರಶಸ್ತಿ ಪುರಸ್ಕೃತ ವರದಿ 'ಮೆಡಿಕೇರ್ ಅನ್‌ಮಾಸ್ಕ್‌ಡ್'ಗೆ ಗ್ರಾಫಿಕ್ಸ್ ತಂಡದ ಸದಸ್ಯರಾಗಿ ದುಡಿದಿದ್ದರು ಎಂದು ಜರ್ನಲ್‌ನ ತನಿಖಾ ಸಂಪಾದಕ ಮಿಖಾಯಿಲ್ ಸಿಕೋನೊಲ್ಫಿ ಹೇಳಿದ್ದಾರೆ.
ಕೊಯಮತ್ತೂರಿನ ಪಿಎಸ್ಜಿ ತಾಂತ್ರಿಕ ಕಾಲೇಜಿನಲ್ಲಿ ಕುಮಾನನ್ ಪದವಿ ಪಡೆದಿದ್ದಾರೆ. ವೈದ್ಯರು, ಆಸ್ಪತ್ರೆಗಳು ಸೇರಿದಂತೆ ಸುಮಾರು 8.80 ಲಕ್ಷ ವೈದ್ಯಕೀಯ ಸೇವಾದಾರರ ಮೇಲೆ ಸರ್ಕಾರಿ ಪಾವತಿ ವಿಶ್ಲೇಷಣೆಗೆ ಬಳಸುವ ಆರೋಗ್ಯ ಸುರಕ್ಷಾ ಬಿಲ್ಲಿಂಗ್‌ನಲ್ಲಿ
ಸಂವಹನ ದತ್ತಾಂಶವನ್ನು ಕುಮಾನನ್ ತಂಡ ಅಭಿವೃದ್ಧಿಪಡಿಸಿದೆ.
Comments
Post a Comment