Portugal's Jorge Sampaio and Namibian Helena Ndume were awarded the 1st UN Nelson Mandela Prize,
ಇಬ್ಬರಿಗೆ ನೆಲ್ಸನ್ ಮಂಡೇಲಾ ಪ್ರಶಸ್ತಿ ಪ್ರದಾನ ವಿಶ್ವಸಂಸ್ಥೆ (ಐಎಎನ್ಎಸ್): ವಿಶ್ವ ಸಂಸ್ಥೆಯ ಪ್ರತಿಷ್ಠಿತ ‘ನೆಲ್ಸನ್ ರೊಲಿಹ್ಲಾಹ್ಲ ಮಂಡೇಲಾ ಪ್ರಶಸ್ತಿ’ಗೆ ನಮೀಬಿಯಾ ದೇಶದ ನೇತ್ರ ತಜ್ಞೆ ಹೆಲೆನಾ ನುಡುಮೆ ಹಾಗೂ ಪೋರ್ಚ್ಗಲ್ನ ಜೋರ್ಗ್ ಸ್ಯಾಂಪಿಯೊ ಅವರು ಪಾತ್ರ ರಾಗಿದ್ದು, ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಇಬ್ಬರಿಗೆ ಪ್ರದಾನ ಮಾಡಲಾಯಿತು. ಮಾನವೀಯ ಸೇವೆಗಳಲ್ಲಿ ತೊಡಗಿ ಸಿಕೊಂಡವರಿಗೆ ನೆಲ್ಸನ್ ಮಂಡೇಲಾ ಅವರ ಹೆಸರಿನಲ್ಲಿ ಪ್ರತಿವರ್ಷ ಪ್ರಶಸ್ತಿ ನೀಡಲು 2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಿರ್ಣಯ ಕೈಗೊಂಡಿತ್ತು. ನಿಡುಮೆ ಅವರು, ನಮೀಬಿಯಾ ಹಾಗೂ ವಿಶ್ವದ ಇತರೆಡೆಯ ಅಂಧರು ಹಾಗೂ ದೃಷ್ಟಿದೋಷ ತೊಂದರೆ ಅನುಭವಿಸುತ್ತಿರುವವರ ಸೇವೆಯಲ್ಲಿ ತೊಡಗಿಸಿಕೊಂಡಿದ್ ದಾರೆ. ಜೋರ್ಗ್ ಸ್ಯಾಂಪಿಯೊ ಅವರು, ಪೋರ್ಚುಗಲ್ನ ಮಾಜಿ ಅಧ್ಯಕ್ಷ. ಇವರು 1996ರಿಂದ 2006ರವರೆಗೆ ಪೋರ್ಚ್ ಗಲ್ನ ಅಧ್ಯಕ್ಷರಾಗಿದ್ದರು.