ಜುಲೈ 26 ವಿಶ್ವ ಕಾಂಡ್ಲ(walking trees) ದಿನಾಚರಣೆ


- ನಡೆದಾಡುವ ಮರಗಳು(ವಾಕಿಂಗ್
ಟ್ರೀಸ್) ಎಂದರೆ ಅದು ಕಾಂಡ್ಲಾ
ಅಂತಲೇ ಅರ್ಥ. ಇವು ಭೂಮಿಯ
ಮೇಲಿನ ಶ್ರೇಷ್ಠ ಪರಿಸರ ಉತ್ಪಾದಕ
ಸಸ್ಯ ಸಂಪತ್ತು. ಸುನಾಮಿಗಳ
ಹೊಡೆತಕ್ಕೂ ಜಗ್ಗದ ಬಿಗಿ ಹಿಡಿತದ
ಕಾಂಡ್ಲಾಗಳು ಮನುಷ್ಯನೂ
ಸೇರಿದಂತೆ ಜಗತ್ತಿನ ಬಹುಪಾಲು
ಜೀವ ಸಂಕುಲಗಳ ದಿನಚರಿಯಲ್ಲಿ
ಪ್ರತ್ಯಕ್ಷ ಹಾಗೂ ಪರೋಕ್ಷ
ಆಸರೆಯಾಗಿ ನೆಲೆ ನಿಂತಿದೆ. ಉತೆ³ೆÅàಕ್ಷೆ
ಎನಿಸುವಷ್ಟು ಮಟ್ಟದಲ್ಲಿ
ವಿಶೇಷತೆಗಳು ಕಾಂಡ್ಲಾದಲ್ಲಿದೆ.
ಒಮ್ಮೆ ಬೇರೂರಿತೆಂದರೆ
ಮತ್ತೆಂದೂ ನಾಶವಿಲ್ಲದ ಇಂಥ
ಕಾಂಡ್ಲಾದ ಬಗ್ಗೆ ಒಂದಿಷ್ಟು
ಪ್ರಮುಖ ಮಾಹಿತಿ ಇಲ್ಲಿದೆ.
ಕಾಂಡ್ಲ ಕಾಡುಗಳು
ಕಾಂಡ್ಲಗಳು ಕರಾವಳಿ ಪ್ರದೇಶದ
ಲವಣ ಮಿಶ್ರಿತ ಜೌಗು ಮಣ್ಣಿನಲ್ಲಿ
ಬೆಳೆಯುವ ಸಾಮರ್ಥ್ಯವಿರುವ
ವಿಶೇಷ ರೀತಿಯ ಸಸ್ಯಗಳಾಗಿದೆ. ನದಿ
ಸಂಗಮದ ಅಳಿವೆ ಪ್ರದೇಶಗಳು,
ಹಿನ್ನೀರ ಪ್ರದೇಶಗಳು
ಮೊದಲಾದ ಕಡೆಗಳಲ್ಲಿ ಕಾಂಡ್ಲಾ
ಸಸ್ಯಗಳು ಬೆಳೆಯುತ್ತವೆ. ಬೆಳೆಯುವ
ಹಂತದಲ್ಲೇ ಒಂದಕ್ಕೊಂದು
ಸರಣಿಯಂತೆ ಒತ್ತೂತ್ತಾಗಿ ಬೆಳೆಯುವ
ಕಾಂಡ್ಲ ಸಸ್ಯಗಳು ಕೆಲ
ಸಮಯದಲ್ಲೇ ದಟ್ಟ ಕಾಂಡ್ಲ
ಕಾಡುಗಳಾಗಿ ರೂಪುಗೊಂಡು
ನಿರಂತರ ಹಬ್ಬುತ್ತದೆ. ಆದ್ದರಿಂದ
ಇವುಗಳನ್ನು ನಡೆದಾಡುವ ಮರಗಳು
ಎನ್ನುತ್ತಾರೆ.
ನಮ್ಮ ದೇಶದ ಕರಾವಳಿಯಲ್ಲಿ
ಸುಮಾರು 4700 ಚ ಕಿ.ಮೀ
ಕಾಂಡ್ಲ ಕಾಡುಗಳಿವೆ. ಇವುಗಳಲ್ಲಿ
ಶೇ. 60 ರಷ್ಟು ಪೂರ್ವ ಕರಾವಳಿ,
ಶೇ. 25 ರಷ್ಟು ಪಶ್ಚಿಮ
ಕರಾವಳಿಯಲ್ಲಿ ಮತ್ತು ಉಳಿದ ಶೇ. 15
ರಷ್ಟು ಅಂಡಮಾನ್ ನಿಕೋಬಾರ್
ದೀÌಪಗಳ ಸುತ್ತ ಕಂಡುಬರುತ್ತದೆ.
ಇವುಗಳಲ್ಲಿ ಸುಮಾರು ಶೇ. 70
ರಷ್ಟು ವೈವಿಧ್ಯಮಯ ಜಾತಿಯ
ಸಸ್ಯಗಳು ಭಾರತದ ಕಾಂಡ್ಲ
ಕಾಡುಗಳಲ್ಲೇ ಇದೆ.
ಹೊನ್ನಾವರ ಅರಣ್ಯ ವಿಭಾಗದ
ಕಾಂಡ್ಲಗಳು :-
ಕಾಂಡ್ಲಾಗಳ ಅಧ್ಯಯನಕ್ಕೆ ಕೆನರಾ
ವೃತ್ತದ ಹೊನ್ನಾವರ ಅರಣ್ಯವಿಭಾಗ
ಹೇಳಿ ಮಾಡಿಸಿದಂತಿದೆ.
ಹೊನ್ನಾವರ ಅರಣ್ಯ
ವಿಭಾಗದಲ್ಲಿರುವ
ಪಶ್ಚಿಮಾಭಿಮುಖವಾಗಿ ಹರಿಯುವ
ಗಂಗಾವಳಿ, ಅಘನಾಶಿನಿ, ಶರಾವತಿ
ಮತ್ತು ವೆಂಕಟಾಪುರ ನದಿಗಳ ಅಳಿವೆ
ಪ್ರದೇಶಗಳಲ್ಲಿ ಕಾಂಡ್ಲ
ಕಾಡುಗಳಿವೆ.
ಭಾರತೀಯ ವಿಜ್ಞಾನ ಸಂಸ್ಥೆಯ
ಡಾ. ಸುಭಾಷಚಂದ್ರನ್ ನೇತೃತ್ವದ
ತಂಡ 2012ರಲ್ಲಿ ನಡೆಸಿದ ವ್ಯಾಪಕ
ಅಧ್ಯಯನದಲ್ಲಿ ಇಲ್ಲಿ ಒಟ್ಟೂ 390
ಹೆಕ್ಟೇರ್ ವಿಸ್ತೀರ್ಣವಾದ ಕಾಂಡ್ಲ
ಕಾಡುಗಳಿರುವುದನ್ನು
ದಾಖಲಿಸಲಾಗಿದೆ. ಜೊತೆಗೆ
ಸುಮಾರು 1019 ಹೆಕ್ಟೇರ್ಗಳಲ್ಲಿ
ಕಾಂಡ್ಲ ಕಾಡು ಬೆಳೆಯಲು
ಯೋಗ್ಯವಾದ ಪ್ರದೇಶ ಈ
ಅರಣ್ಯ ವಿಭಾಗದಲ್ಲಿದೆ ಎಂಬುದನ್ನು
ಗುರುತಿಸಲಾಗಿದೆ. ಹೊನ್ನಾವರ
ಅರಣ್ಯ ವಿಭಾಗದ ಕಾಂಡ್ಲ
ಕಾಡುಗಳಲ್ಲಿ ಒಟ್ಟು 12 ಜಾತಿಯ
ನೈಜ ಕಾಂಡ್ಲಗಳು ಮತ್ತು 20
ಜಾತಿಯ ಕಾಂಡ್ಲ ಸಹಚರ ಸಸ್ಯಗಳು
ಪತ್ತೆಯಾಗಿವೆ.
ಕಾಂಡ್ಲ ಸಹಚರ ಸಸ್ಯಗಳು
ಹೊನ್ನಾವರ ವಿಭಾಗದ ಕಾಂಡ್ಲ
ಕಾಡುಗಳಲ್ಲಿರುವ ಪ್ರಮುಖ
ಕಾಂಡ್ಲ ಸಹಚರ ಸಸ್ಯಗಳು :
ಬಾರಿಂಗೊràನಿಯಾ ರೆಸಿಮೋಸಾ
(ಸಮುದ್ರಫಲ), ಕ್ಯಾಲೊಫಿಲ್ಲಮ್
ಇನೋಫಿಲ್ಲಮ್(ಹೊನ್ನೆಮರ),
ಸೆರ್ಬರಾ ಒಡಾಲಮ್,
ಕ್ಲೀರೋಡೆಂಡ್ರಮ್ ಇನರ್ಮೆ,
ಸೀಸಾಲ್ಫಿನಿಯಾ ಕ್ರಿಸ್ಟಾ, ಡೆರ್ರಿಸ್
ಟ್ರೈಪೊಲಿಯೆಟಾ,
ಡೊಲಿಚಾಂಡ್ರನ್
ಸ್ಪಥೇಶಿಯಾ, ಎರಿತರಿನಾ ಇಂಡಿಕಾ,
ಪಂಡಾನಸ್ ಪಾಸಿಕ್ಯುಲಾರಿಸ್
(ಕೇದಿಗೆ), ಪೊಂಗಾಮಿಯ
ಪನ್ನಾಟ(ಹೊಂಗೆ ಮರ), ಪ್ರಮ್ನಾ
ಒಬುr Âಸಿಫೂಲಿಯಾ,
ಸಾಲ್ವಡೊರಾ ಪರ್ಸಿಕಾ ಇತ್ಯಾದಿ
ನಮ್ಮಲ್ಲಿ ಕಾಂಡ್ಲ
ಪ್ರವಾಸೋದ್ಯಮ
ಕಾಂಡ್ಲ ಪ್ರದೇಶಗಳು
ನಿಸರ್ಗಾಧ್ಯಯನ, ಸಸ್ಯ ವೀಕ್ಷಣೆ,
ಪಕ್ಷಿ ವೀಕ್ಷಣೆ, ದೋಣಿಯಾನ,
ಮೀನು ಹಿಡಿಯುವುದು
ಮುಂತಾದ ಪರಿಸರಪರ
ಪ್ರವಾಸೋದ್ಯಮ ಚಟುವಟಿಕೆಗಳಿಗೆ
ಅತ್ಯಂತ ಪ್ರಶಸ್ತ ನೆಲೆಗಳಾಗಿದೆ.
ಕಾಂಡ್ಲ ಪ್ರವಾಸೋದ್ಯಮ
ಚಟುವಟಿಕೆಗಳನ್ನು ಉತ್ತೇಜಿಸಲು
ಅರಣ್ಯ ವಿಭಾಗ
ಕಾರ್ಯೋನ್ಮುಖವಾಗಿದ್ದು,
ಹೊನ್ನಾವರದ ಶರಾವತಿ ಮತ್ತು
ಗೋಕರ್ಣ ಸಮೀಪದ
ನುಸಿಕೋಟೆಗಳಲ್ಲಿ ಸ್ಥಳೀಯ
ಗ್ರಾಮ ಅರಣ್ಯ ಸಮಿತಿಗಳ
ಸಹಭಾಗಿತ್ವದಲ್ಲಿ ಕಾಂಡ್ಲ ವೀಕ್ಷಣೆಗೆ
ಪ್ರವಾಸಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ.
ಇಲ್ಲಿನ ಸಹಸ್ರಾರು ಎಕರೆ ವಿಶಾಲ
ಪ್ರದೇಶದಲ್ಲಿ ಕಾಂಡ್ಲಾ
ನೆಡುತೋಪು
ಅಭಿವೃದ್ಧಿಪಡಿಸಲಾಗಿದ್ದು ಪರಿಸರ
ಪ್ರೇಮಿಗಳ ಆಸಕ್ತಿ ಕೆರಳಿಸುತ್ತಿದೆ.
ಜೈವಿಕ ವೈಶಿಷ್ಟÂಗಳು :-
ಸಾಮಾನ್ಯ ಎಂಬಂತೆ ಸಮುದ್ರ
ತೀರದ ಮತ್ತು ಅಳಿವೆ ಪ್ರದೇಶಗಳ
ಜೌಗು ಮಣ್ಣಿನಲ್ಲಿ ಲವಣಾಂಶ
ಹೆಚ್ಚಾಗಿದ್ದು, ಗಾಳಿಯ ಪ್ರಮಾಣ
ತೀರಾ ಕಡಿಮೆ ಇರುತ್ತದೆ. ಭರತದ
ಸಂದರ್ಭದಲ್ಲಿ ಪದೇಪದೇ
ನೀರಿನಿಂದ ಆವೃತಗೊಳ್ಳುವ ಇಂತಹ
ಮಣ್ಣಿನಲ್ಲಿ ಅನ್ಯ ಸಾಮಾನ್ಯ
ಸಸ್ಯಗಳು ಬೆಳೆಯಲು ಸಾಧ್ಯವಿಲ್ಲ.
ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ
ಯಶಸ್ವಿಯಾಗಿ ಬೆಳೆದು
ವಂಶೋತ್ಪಾದನೆ ಮಾಡಲು
ಪ್ರಕೃತಿಯೇ ಕಾಂಡ್ಲ
ಸಸ್ಯಗಳನ್ನು ಕೆಲವು ವಿಶೇಷ
ಸಾಮರ್ಥ್ಯಗಳಿಂದ ಸನ್ನದ್ಧಗೊಳಿಸಿದೆ.
ಕಾಂಡ್ಲ ಸಸ್ಯಗಳ ಕೆಲವು ವಿಶೇಷ
ಲಕ್ಷಣಗಳೆಂದರೆ --
· ಮಣ್ಣಿನಿಂದ ಮೇಲೆ
ಚಾಚಿಕೊಳ್ಳುವ ವಿಶೇಷ ಉಸಿರಾಟದ
ಬೇರುಗಳು
(ನ್ಯುಮ್ಯಾಟೋಫೋರÕ)
ಮತ್ತು ರಕ್ಷಣೆಗಾಗಿ
ಗಾಳಿಬೇರುಗಳು (ಸ್ಟಿಲ್ಟ ರೂಟ್ಸ).
· ಸಸಿಗಳಾಗಿ ಮೊಳಕೆ ಬಂದ
ನಂತರವೇ ತಾಯಿ ವೃಕ್ಷದಿಂದ
ಕಳಚಿಕೊಂಡು ಮಣ್ಣಿಗೆ ಗಟ್ಟಿಯಾಗಿ
ಕಚ್ಚಿಕೊಳ್ಳುವ ವಿಶೇಷ ಬೀಜಗಳು
(ವೀವಿಪ್ಯಾರಿ ಸಂತಾನೋತ್ಪತ್ತಿ)
· ಉಪ್ಪು ಮತ್ತಿತರ ಲವಣಾಂಶಗಳನ್ನು
ಸೋಸಿ ಕೇವಲ ಸಿಹಿ ನೀರನ್ನು
ಮಾತ್ರ ಹೀರುವ
ಸಾಮರ್ಥ್ಯವಿರುವ ಬೇರು
ವ್ಯವಸ್ಥೆ.
· ಹೀರಿಕೊಂಡ ಉಪ್ಪು ಮತ್ತಿತರ
ಲವಣಾಂಶವನ್ನು ಎಲೆಗಳ ಮೂಲಕ
ಹೊರಗೆ ಸ್ರವಿಸುವ ಲವಣ ಗ್ರಂಥಿಗಳು
· ವಾತರಂಧ್ರಗಳ(ಲೆಂಟಿಸೆಲ್ಸ) ಮೂಲಕ
ಗಾಳಿಯನ್ನು ಹೀರಿಕೊಳ್ಳುವ
ಸಾಮರ್ಥ್ಯ.
ಸಸ್ಯ ವೈವಿಧ್ಯ :- ಕಾಂಡ್ಲ
ಸಸ್ಯಗಳಲ್ಲಿ ಎರಡು ವಿಧ
ನೈಜ ಕಾಂಡ್ಲ ಸಸ್ಯಗಳು :
ಇವುಗಳು ಕೇವಲ ಕಾಂಡ್ಲ
ಪ್ರದೇಶಗಳಿಗೆ ಮಾತ್ರ ಸೀಮಿತವಾಗಿ
ಬೆಳೆಯುವ ಸಸ್ಯಗಳು. ಉದಾ :
ಅವಿಸಿನಿಯಾ, ಬ್ರುಗೇರಿಯಾ,
ಎಕೊÕàಕಾರಿಯಾ, ಕಾಂಡಿಲಿಯಾ,
ರೈಜೋಫೂರಾ,
ಸೊನರೇಶಿಯಾ ಇತ್ಯಾದಿ.
ಕಾಂಡ್ಲ ಸಹಚರ ಸಸ್ಯಗಳು : ಈ
ಸಸ್ಯಗಳು ಕೇವಲ ಕಾಂಡ್ಲಗಳಿಗೆ
ಮಾತ್ರ ಸೀಮಿತವಾಗಿರದೇ ಇತರ
ಸಾಮಾನ್ಯ ಪರಿಸರಗಳಲ್ಲಿ ಕೂಡಾ
ಬೆಳೆಯುವಂಥದು.
ಕಾಂಡ್ಲಗಳು ಏಕೆ ಬೇಕು
ಕಾಂಡ್ಲಗಳು ಪ್ರಪಂಚದ ಅತ್ಯಂತ
ಹೆಚ್ಚು ಉತ್ಪಾದಕ ಪರಿಸರ
ವ್ಯವಸ್ಥೆಗಳಲ್ಲಿ ಒಂದಾಗಿದ್ದು,
ಕರಾವಳಿ ಪ್ರದೇಶಗಳಿಗೆ
ಸಂಬಂಧಿಸಿದಂತೆ ಬಹಳಷ್ಟು
ಪಾರಿಸಾರಿಕ ಮತ್ತು ಆರ್ಥಿಕ ಮಹತ್ವ
ಪಡೆದುಕೊಂಡಿದೆ.
ಕಾಂಡ್ಲ ಕಾಡುಗಳ ಕೆಲವು
ಪ್ರಮುಖ ಪ್ರಯೋಜನಗಳು
ಹೀಗಿವೆ.
· ಸಮುದ್ರ ಮತ್ತು ನದಿ ತೀರದ ಮಣ್ಣಿನ
ಸವಕಳಿ ಮತ್ತು ಕೊರೆತವನ್ನು ತಡೆದು
ಕರಾವಳಿ ಪ್ರದೇಶಗಳಿಗೆ ನೈಸರ್ಗಿಕ
ರಕ್ಷಣೆ ಒದಗಿಸುವ ಹಸಿರು
ತಡೆಗೋಡೆಗಳಾಗಿ ಕಾರ್ಯ
ನಿರ್ವಹಿಸುತ್ತವೆ.
· ಸುನಾಮಿ ಮತ್ತು
ಚಂಡಮಾರುತಗಳ ಪ್ರಭಾವ
ತಗ್ಗಿಸುತ್ತವೆ.
· ಮೀನುಗಳು ಸೇರಿದಂತೆ ಸಕಲ
ಸಮುದ್ರ ಜಲಜೀವಿಗಳಿಗೆ ಆಹಾರ
ಮೂಲ.
· ಹಲವಾರು ಜಾತಿಯ ಏಡಿಗಳು,
ಸಿಗಡಿಗಳು, ಚಿಪ್ಪೆ ಮೀನುಗಳು
ಮತ್ತು ಮೀನುಗಳಿಗೆ ಆಶ್ರಯ ಮತ್ತು
ವಂಶೋತ್ಪಾದನೆಯ ತಾಣ.
· ಪಕ್ಷಿಗಳು ಮತ್ತಿತರ ಪ್ರಾಣಿಗಳ ಆಹಾರ
ಮೂಲ ಮತ್ತು
ವಂಶೋತ್ಪಾದನಾ ನೆಲೆ.
· ಉರುವಲು, ಸೊಪ್ಪು, ಔಷಧಿ,
ಇದ್ದಿಲು ಇತ್ಯಾದಿ ಜನಬಳಕೆಯ
ವಸ್ತುಗಳ ಪೂರೈಕೆ.
· ಅತ್ಯಧಿಕ ಪ್ರಮಾಣದಲ್ಲಿ
ಇಂಗಾಲವನ್ನು ಹೀರಿಕೊಳ್ಳುವ
ಮೂಲಕ ವಾತಾವರಣವನ್ನು
ತಂಪಾಗಿಡುತ್ತದೆ.
· ನದಿ ನೀರಿನ ಗುಣಮಟ್ಟ ಮತ್ತು
ಲವಣಾಂಶವನ್ನು ನಿರ್ವಹಿಸುತ್ತದೆ.
· ನಿಸರ್ಗ ಅಧ್ಯಯನ,
ಪ್ರವಾಸೋದ್ಯಮಕ್ಕೆ ಪ್ರಶಸ್ತವಾದ
ಪ್ರದೇಶಗಳು.
· ಏೇನಿನ ಹುಳುಗಳಿಗೆ ಉತ್ತಮ
ಮಕರಂದ ಒದಗಿಸುತ್ತದೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು