Posts

ಪೊಲೀಸ್ ಇಲಾಖೆಯಲ್ಲಿ 25 ಸಾವಿರ ಹುದ್ದೆ ಖಾಲಿ:*

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ಶ್ರೇಣಿಯ ಒಟ್ಟು 25 ಸಾವಿರದ 749 ಪೊಲೀಸ್ ಹುದ್ದೆಗಳು ಖಾಲಿಯಿವೆ ಎಂದು ಹೈಕೋರ್ಟ್ ಗೆ ಸರ್ಕಾರ ಮಾಹಿತಿ ನೀಡಿದೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ಅಂಕಿಅಂಶ ಕುರಿತು ಮಾಹಿತಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ನೀಡಿದ್ದ ಹಿನ್ನೆಲೆಯಲ್ಲಿ ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ನೇಮಕಾತಿ ಮತ್ತು ತರಬೇತಿ ವಿಭಾಗ) ರಾಘವೇಂದ್ರ ಔರಾದ್ಕರ್ ಹೈಕೋರ್ಟ್ ಶುಕ್ರವಾರ ಪ್ರಮಾಣ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಎಯಿಂದ ಡಿ ವೃಂದದವರೆಗೆ ಒಟ್ಟು 99 ಸಾವಿರದ 189 ಪೊಲೀಸ್ ಕಾರ್ಯ ನಿರ್ವಾಹಕ ಹುದ್ದೆಗಳು ಭರ್ತಿಯಾಗಿದ್ದು, 25 ಸಾವಿರದ 749 ಹುದ್ದೆಗಳು ಖಾಲಿಯಿವೆ. ಇದರಲ್ಲಿ 10 ಸಾವಿರಕ್ಕೂ ಹೆಚ್ಚು ಪೊಲೀಸ್ ಪೇದೆಗಳ ಹುದ್ದೆಗಳು ಖಾಲಿಯಿವೆ ಎಂದು ಮಾಹಿತಿ ನೀಡಿದ್ದಾರೆ. ಸಚಿವಾಲಯ ಸೇರಿದಂತೆ ತಾಂತ್ರಿಕ ವಿಭಾಗದಲ್ಲಿ 1, 03, 457 ಹುದ್ದೆಗಳು ಮಂಜೂರಾಗಿದ್ದು, 74 ಸಾವಿರದ 389 ಭರ್ತಿಯಾಗಿವೆ. 27 ಸಾವಿರದ 068 ಹುದ್ದೆಗಳು ಖಾಲಿಯಿವೆ. ಒಟ್ಟಾರೆ ಎಯಿಂದ ಡಿ ವೃಂದದವರೆಗೆ ಶೇಕಡಾ 25ರಷ್ಟು ಕಾರ್ಯನಿರ್ವಾಹಕ ಹುದ್ದೆಗಳು ಪೊಲೀಸ್ ಇಲಾಖೆಯಲ್ಲಿ ಭರ್ತಿಯಾಗದೆ ಖಾಲಿ ಉಳಿದಿರುವುದಾಗಿ ತಿಳಿಸಲಾಗಿದೆ.

ಸಾನಿಯಾಮಿರ್ಜಾ- ಮಾರ್ಟೀನಾ ಜೋಡಿಗೆ ಆಸ್ಟ್ರೇಲಿಯನ್ ಡಬಲ್ಸ್ ಪ್ರಶಸ್ತಿ:-

ಮೆಲ್ಬೋರ್ನ್, ಜ.29- ಇಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಡ್ಜರ್ಲ್ಯಾಂಡ್ನ ಮಾರ್ಟೀನಾ ಹಿಂಗೀಸ್ ಜೋಡಿ ಮುಡಿಗೇರಿಸಿಕೊಂಡಿದೆ. ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಚೆಕ್ ರಿಪಬ್ಲಿಕ್ನ ಆಂಡ್ರಿಯಾ ಮತ್ತು ಲ್ಯೂಸಿ ಜೋಡಿಯನ್ನು 7-6, 6-3 ಸೆಟ್ಗಳಿಂದ ಮಣಿಸಿ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಿದೆ. ಆರಂಭದಲ್ಲಿ ಮುನ್ನಡೆ ಸಾಧಿಸಿದ್ದ ಸಾನಿಯಾ-ಹಿಂಗೀಸ್ ಜೋಡಿಯನ್ನು ಪ್ರಬಲವಾಗಿ ಎದುರೇಟು ನೀಡುವಲ್ಲಿ ಚೆಕ್ನ ಜೋಡಿ ಯಶಸ್ವಿಯಾಗಿತ್ತು. ಆದರೆ, ಟೈಬ್ರೇಕರ್ನಲ್ಲಿ ಚುರುಕಾದ ಆಟದಿಂದ ಪ್ರಥಮ ಸೆಟ್ಅನ್ನು ಕೈ ವಶಪಡಿಸಿಕೊಂಡಿತು. ಆದರೆ, ಎರಡನೆ ಸೆಟ್ನಲ್ಲಿ ಪ್ರಾಬಲ್ಯ ಮೆರೆದು ಸುಲಭವಾಗಿಯೇ ಪಂದ್ಯವನ್ನು ತನ್ನತ್ತ ತೆಗೆದುಕೊಂಡು ಪ್ರಶಸ್ತಿ ಕೂಡ ತನ್ನದಾಗಿಸಿಕೊಂಡರು. ಸತತ ಮೂರು ಗ್ರ್ಯಾಂಡ್ಸ್ಲ್ಯಾಮ್ಗಳನ್ನು ಗೆದ್ದ ಕೀರ್ತಿ (ವಿಂಬಲ್ಡನ್, ಯು.ಎಸ್.ಓಪನ್ ಈಗ ಆಸ್ಟ್ರೇಲಿಯನ್ ಓಪನ್) ಮಹಿಳಾ ಡಬಲ್ಸ್ ಪ್ರಶಸ್ತಿ ಸಾನಿಯಾ- ಮಾರ್ಟಿನಾ ಹಿಂಗೀಸ್ಗೆ ಸಲ್ಲುತ್ತದೆ. ಸತತ ಗೆಲುವಿನ ನಾಗಾಲೋಟದಲ್ಲಿರುವ ಈ ಜೋಡಿ ಈಗ ಹೊಸ ದಾಖಲೆಗೂ ಪಾತ್ರವಾಗಿದೆ..

ಮಾಹಿತಿ ಹಕ್ಕು ಕಾಯ್ದೆಯಡಿ ವಿದ್ಯಾರ್ಥಿಯ ವಿವರ ಬಹಿರಂಗಕ್ಕೆ ಅವಕಾಶವಿಲ್ಲ... ಎಂದು ಕೇಂದ್ರ ಮಾಹಿತಿ ಆಯೋಗವು ಶಾಲೆಗಳಿಗೆ ಮತ್ತು ಶಿಕ್ಷಣ ಇಲಾಖೆಗೆ ಆದೇಶಿಸಿದೆ

Image
Scanned by CamScanner

ರೇಖಾಗೆ ಯಶ್ ಛೋಪ್ರಾ ಪ್ರಶಸ್ತಿ

Image

IIFA ಉತ್ಸವದಲ್ಲಿ ಆರು ಪ್ರಶಸ್ತಿ ಬಾಚಿದ್ದ 'ರಂಗಿತರಂಗ'

Image

ಇನ್ಮುಂದೆ ಪೂರ್ಣ ನಾಡಗೀತೆ

Image

೬೭ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸಸಿಯಲ್ಲಿ ಉದಯಿಸಿದ ಭಾರತ GHPS BANAHATTI TOTA, Dt : BAGALKOT

Image