ಸಾನಿಯಾಮಿರ್ಜಾ- ಮಾರ್ಟೀನಾ ಜೋಡಿಗೆ ಆಸ್ಟ್ರೇಲಿಯನ್ ಡಬಲ್ಸ್ ಪ್ರಶಸ್ತಿ:-
ಮೆಲ್ಬೋರ್ನ್, ಜ.29- ಇಲ್ಲಿ ನಡೆದ ಆಸ್ಟ್ರೇಲಿಯನ್
ಓಪನ್ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಭಾರತದ
ಸಾನಿಯಾ ಮಿರ್ಜಾ ಮತ್ತು ಸ್ವಿಡ್ಜರ್ಲ್ಯಾಂಡ್ನ
ಮಾರ್ಟೀನಾ ಹಿಂಗೀಸ್ ಜೋಡಿ
ಮುಡಿಗೇರಿಸಿಕೊಂಡಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಚೆಕ್
ರಿಪಬ್ಲಿಕ್ನ ಆಂಡ್ರಿಯಾ ಮತ್ತು ಲ್ಯೂಸಿ
ಜೋಡಿಯನ್ನು 7-6, 6-3 ಸೆಟ್ಗಳಿಂದ ಮಣಿಸಿ
ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಿದೆ. ಆರಂಭದಲ್ಲಿ
ಮುನ್ನಡೆ ಸಾಧಿಸಿದ್ದ ಸಾನಿಯಾ-ಹಿಂಗೀಸ್
ಜೋಡಿಯನ್ನು ಪ್ರಬಲವಾಗಿ ಎದುರೇಟು
ನೀಡುವಲ್ಲಿ ಚೆಕ್ನ ಜೋಡಿ ಯಶಸ್ವಿಯಾಗಿತ್ತು.
ಆದರೆ, ಟೈಬ್ರೇಕರ್ನಲ್ಲಿ ಚುರುಕಾದ ಆಟದಿಂದ
ಪ್ರಥಮ ಸೆಟ್ಅನ್ನು ಕೈ ವಶಪಡಿಸಿಕೊಂಡಿತು.
ಆದರೆ, ಎರಡನೆ ಸೆಟ್ನಲ್ಲಿ ಪ್ರಾಬಲ್ಯ ಮೆರೆದು
ಸುಲಭವಾಗಿಯೇ ಪಂದ್ಯವನ್ನು ತನ್ನತ್ತ
ತೆಗೆದುಕೊಂಡು ಪ್ರಶಸ್ತಿ ಕೂಡ
ತನ್ನದಾಗಿಸಿಕೊಂಡರು. ಸತತ ಮೂರು
ಗ್ರ್ಯಾಂಡ್ಸ್ಲ್ಯಾಮ್ಗಳನ್ನು ಗೆದ್ದ ಕೀರ್ತಿ
(ವಿಂಬಲ್ಡನ್, ಯು.ಎಸ್.ಓಪನ್ ಈಗ ಆಸ್ಟ್ರೇಲಿಯನ್
ಓಪನ್) ಮಹಿಳಾ ಡಬಲ್ಸ್ ಪ್ರಶಸ್ತಿ ಸಾನಿಯಾ-
ಮಾರ್ಟಿನಾ ಹಿಂಗೀಸ್ಗೆ ಸಲ್ಲುತ್ತದೆ. ಸತತ
ಗೆಲುವಿನ ನಾಗಾಲೋಟದಲ್ಲಿರುವ ಈ ಜೋಡಿ
ಈಗ ಹೊಸ ದಾಖಲೆಗೂ ಪಾತ್ರವಾಗಿದೆ..
Comments
Post a Comment