Posts

ತೋಟಗಾರಿಕೆ ಇಲಾಖೆಗೆ 1,500 ಹುದ್ದೆಗಳ ನೇಮಕಾತಿ

Image
November 25, 2016November 25, 2016 ಬೆಳಗಾವಿ, ನ.25-  ತೋಟಗಾರಿಕೆ ಇಲಾಖೆಗೆ ಈ ವರ್ಷ ಹೊಸದಾಗಿ ಒಂದೂವರೆ ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವುದಾಗಿ ಕೃಷಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸಿ.ಬಿ.ಸುರೇಶ್‍ಬಾಬು ತೋಟಗಾರಿಕೆ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪ್ರಶ್ನಿಸಿದರು. ಜೆಡಿಎಸ್‍ನ ಶಾಸಕ ಸಿ.ಎನ್. ಬಾಲಕೃಷ್ಣ ಮತ್ತು ಎಚ್.ಡಿ.ರೇವಣ್ಣ ಮಧ್ಯ ಪ್ರವೇಶಿಸಿ ಸಿಬ್ಬಂದಿ ಮತ್ತು ಅಧಿಕಾರಿಗಳ ಕೊರತೆ ಇರುವ ಬಗ್ಗೆ ಸಚಿವರ ಗಮನ ಸೆಳೆದರು. ಇದಕ್ಕೆ ತೋಟಗಾರಿಕೆ ಸಚಿವರ ಪರವಾಗಿ ಉತ್ತರಿಸಿದ ಕೃಷ್ಣಬೈರೇಗೌಡ ಅವರು, ಈಗಾಗಲೇ 335 ಜನ ಸಹಾಯಕ ತೋಟಗಾರಿಕಾ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಈಗಾಗಲೇ ಅವರು ಮೂರು ತಿಂಗಳ ತರಬೇತಿ ಪಡೆದಿದ್ದಾರೆ. 261 ಮಂದಿ ತೋಟಗಾರಿಕಾ ಅಧಿಕಾರಿಗಳು ನೇಮಕವಾಗಿ ತರಬೇತಿ ಮುಗಿಸಿ ಕ್ಷೇತ್ರಗಳಿಗೆ ನೇಮಿಸುವ ಪ್ರಕ್ರಿಯೆ ನಡೆಯುತ್ತಿದೆ.  ಹೆಚ್ಚುವರಿಯಾಗಿ ಈ ವರ್ಷ 500 ಮಂದಿ ಸಹಾಯಕ ತೋಟಗಾರಿಕಾ ಅಧಿಕಾರಿ ಮತ್ತು ಒಂದು ಸಾವಿರ ಉದ್ಯಾನವನ ಪಾಲಕರ ನೇಮಕಕ್ಕೆ ಅನುಮತಿ ಸಿಕ್ಕಿದ್ದು, ಶೀಘ್ರವೇ ಪ್ರಕ್ರಿಯೆ ಆರಂಭಿಸಲಾಗುವುದು. ಒಟ್ಟಾರೆ 2500ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಎರಡು ವರ್ಷದಲ್ಲಿ ನೇಮಕಾತಿ ಮಾಡಿ ಕೊಳ್ಳಲಾಗುತ್ತಿದೆ. ಇದು ಹಿಂದೆ ಯಾವ ಸರ್ಕಾರ ಕೈಗೊಳ್ಳದಷ್ಟು ನೇಮಕಾತಿಯ ಸಂಖ್ಯೆ ...

ರವಿಶಂಕರ್‌ ಗುರೂಜಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ:-

Image
ಏಜೆನ್ಸೀಸ್ | Nov 21, 2016, 04.50 AM IST ರವಿಶಂಕರ್‌ ಗುರೂಜಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಹೊಸದಿಲ್ಲಿ : ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್‌ ಗುರೂಜಿಗೆ ಭಾನುವಾರ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ರಾಜಧಾನಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ಸಚಿವ ರಾಜನಾಥ್‌ ಸಿಂಗ್‌, ಜಾಗತಿಕ ಶಾಂತಿ ಸಹಬಾಳ್ವೆಗಾಗಿ ಗುರೂಜಿ ನೀಡಿದ ಕೊಡುಗೆಗಾಗಿ ''ಡಾ. ನಾಗೇಂದ್ರ ಸಿಂಗ್‌ ಅಂತರಾಷ್ಟ್ರೀಯ ಶಾಂತಿ ಪ್ರಶಸ್ತಿ' ಪ್ರದಾನ ಮಾಡಿದರು. ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಮೊದಲ ಭಾರತೀಯ ಡಾ.ನಾಗೇಂದ್ರ ಸಿಂಗ್‌ರ ನೆನಪಿನಲ್ಲಿ ನೀಡಲಾಗುತ್ತದೆ.

*ಟಿಇಟಿ ಪರೀಕ್ಷಾ ದಿನಾಂಕವನ್ನು 18-12-2016 ರ ಬದಲಾಗಿ,ದಿನಾಂಕ 08-01-2017 ರಂದು ನಡೆಸಲು ನಿರ್ಧರಿಸಲಾಗಿದೆ*☝

Image

ನೋಟು ರದ್ದಾದರೆ ಸಾಮಾನ್ಯರಿಗೇನು ಲಾಭ?

ಸಂಪೂರ್ಣ ವರದಿ: ಪ್ರಧಾನಿ ನರೇಂದ್ರ ಮೋದಿ 130 ಕೋಟಿ ಭಾರತೀಯರ ಕನಸುಗಳಲ್ಲಿ ಅಚ್ಛೇ ದಿನಗಳ ಕನಸು ತುಂಬಿದ ನಾಯಕರು. ಪ್ರಧಾನಿಯಾದ ಕ್ಷಣದಿಂದ ದೇಶದ ಬದಲಾವಣೆಗಾಗಿ ಪಣತೊಟ್ಟು ನಿಂತ ನಾಯಕ. ಕಪ್ಪು ಹಣದ ವಿರುದ್ಧ ಸಮರ ಸಾರಿರೋ ಮೋದಿ 1000 ಮತ್ತು 500 ರೂಪಾಯಿ ನೋಟ್​ಗಳನ್ನ ಬ್ಯಾನ್ ಮಾಡಿದ್ದಾರೆ. ಈಗ ಕಪ್ಪು ಕುಬೇರರ ಬ್ಲಾಕ್ ಮನಿ ಹೊರಗೆ ಬರ್ತಾ ಇದೆ. ಕಪ್ಪು ಹಣಗಳೆಲ್ಲಾ ಈಗ ಹೊರಗೆ ಬರ್ತಾ ಇದ್ದು, ಸರ್ಕಾರಕ್ಕೆ ಹೆಚ್ಚಿನ ಆದಾಯ ಸಿಗ್ತಾ ಇದೆ. ಡಿಸೆಂಬರ್​ 30ರವರೆಗೆ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ಹರಿದು ಬರೋ ನಿರೀಕ್ಷೆ ಇದ್ದು, ಮುಂದಿನ ದಿನಗಳಲ್ಲಿ ಭಾರತೀಯರಿಗೆ ಅಚ್ಛೇದಿನಗಳು ಸಿಗಲಿದೆ ಅಂತ ಹೇಳಲಾಗ್ತಿದೆ. ಕಡಿಮೆಯಾಗಲಿವೆ   ಬೆಲೆಗಳು, ಇಳಿಯಲಿವೆ   ತೆರಿಗೆ ದರಗಳು ಇಡೀ ದೇಶವೇ ಬೆಲೆ ಏರಿಕೆಯಿಂದ ತತ್ತರಿಸಿದೆ. ಇಷ್ಟು ವರ್ಷಗಳಾದ್ರೂ, ಯಾವ ಸರ್ಕಾರ ಬಂದ್ರೂ ಬೆಲೆ ಏರಿಕೆಗೆ ಕಡಿವಾಣ ಹಾಕೋದಕ್ಕೆ ಆಗ್ಲೇ ಇಲ್ಲ. ಆದರೆ ಮೋದಿ ನೋಟ್​ ಬ್ಯಾನ್ ಮಾಡಿದ್ದೇ ತಡ, ಅತಿ ಹೆಚ್ಚಿನ ಪ್ರಮಾಣದ ಹಣ ಸರ್ಕಾರದ ಖಜಾನೆ ಸೇರ್ತಾ ಇದೆ. ಇದ್ರಿಂದ ಮುಂದಿನ ದಿನಗಳಲ್ಲಿ ಎಲ್ಲಾ ವಸ್ತುಗಳ ಬೆಲೆಗಳು ಕಡಿಮೆಯಾಗಲಿವೆ ಅಂತ ಅಂದಾಜಿಸಲಾಗಿದೆ. ಇಷ್ಟೇ ಅಲ್ಲ, ಸರ್ಕಾರಕ್ಕೆ ನಾವುಗಳು ಕಟ್ಟೋ ತೆರಿಗೆ ಹಣದ ಪ್ರಮಾಣ ಕೂಡ, ಗಣನೀಯವಾಗಿ ಇಳಿಮುಖವಾಗೋ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ. ಕಾಳಧನಿಕರಿಗೆ ನಿದ್ದೆ ಬರ್ತಿಲ್ಲ ಮೋದಿ ಇಟ್ಟ ದಿಟ್ಟ ಹೆಜ್ಜೆಯಿಂ...

*Breaking news* *19-11-2016* KPSC news for SDA/ FDA Aspirants.* 494 candidates were found to be selected for both Assistants (FDA/SDA)

*Please click this link:* http://kpsc.kar.nic.in/FINALIST%20FDA%20REVISED.HTM *With reference to Notification cited above, 494 candidates were found to be selected for both Assistants / First Division Assistants and Junior Assistants / Second Division Assistants. After the publication of final select lists. Therefore inview of the options of such candidates revised finabgl select list is published for the information of the candidates.*

ಇನ್ನು ಮುಂದೆ 5ನೇ, 8ನೇ ಮತ್ತು 10ನೇ ತರಗತಿಗಳಿಗೆ 'ಪಬ್ಲಿಕ್ ಪರೀಕ್ಷೆ'.....!

Image
ಅಷ್ಟೇ ಅಲ್ಲದೆ ಮುಂದಿನ ಶೈಕ್ಷಣಿಕ ವರ್ಷದಿಂದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್​​ ಎಕ್ಸಾಂ ನಡೆಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಚಿಂತನೆ ನಡೆಸಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ಜಾವಡೇಕರ್ತಿಳಿಸಿದ್ದಾರೆ. ನವದೆಹಲಿ(ನ.15): ಸಿಬಿಎಸ್‌ಇ 10ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತೆ 'ಪಬ್ಲಿಕ್ ಪರೀಕ್ಷೆ' ಆರಂಭಿಸಲು ಚಿಂತನೆ ನಡೆಸಿದೆ. ಅಷ್ಟೇ ಅಲ್ಲದೆ ಮುಂದಿನ ಶೈಕ್ಷಣಿಕ ವರ್ಷದಿಂದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್​​ ಎಕ್ಸಾಂ ನಡೆಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಚಿಂತನೆ ನಡೆಸಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ಜಾವಡೇಕರ್ತಿಳಿಸಿದ್ದಾರೆ. ವಿದ್ಯಾರ್ಥಿಗಳ ಮೇಲಿನ ಪರೀಕ್ಷಾ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಸಿಬಿಎಸ್‌ಇ 2010ರಲ್ಲಿ ಈ ಪರೀಕ್ಷಾ ಪದ್ಧತಿ ರದ್ದುಪಡಿಸಿ, ಸಿಸಿಇ ವಿಧಾನ ಜಾರಿಗೊಳಿಸಿತ್ತು. ಆದರೆ ಸಿಸಿಇಯಿಂದ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ. ಶಿಕ್ಷಣದ ಗುಣಮಟ್ಟ ಸುಧಾರಿಸುವ ಉದ್ದೇಶದಿಂದ ಹಿಂದಿನ ಪರೀಕ್ಷಾ ವಿಧಾನಕ್ಕೆ ಮರು ಜೀವ ನೀಡುವುದರ ಜೊತೆಗೆ ಕೇಂದ್ರೀಯ ಶೈಕ್ಷಣಿಕ ಸಲಹಾ ಮಂಡಳಿ ನೀಡಿದ ಮಾಹಿತಿಯನ್ನ ಸದ್ಯದಲ್ಲಿಯೇ ಕ್ಯಾಬಿನೆಟ್​​ ಮಿಟಿಂಗ್​ನಲ್ಲಿ ಪ್ರಸ್ತಾಪಿಸುವುದಾಗು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ ಸ್ಪಷ್ಟಪಡಿಸಿದ್ರು. Dailyhunt

ಕರ್ನಾಟಕ ರಾಜ್ಯ ಸರ್ಕಾರದ ಸಾರ್ವತ್ರಿಕ ರಜಾದಿನಗಳ ಪಟ್ಟಿ ೨೦೧೭

Image