Posts

ಭಾರತೀಯರನ್ನೂ ಸಮ್ಮೋಹನಗೊಳಿಸಿದ ಕಾದಂಬರಿ

Image
ಇತ್ತೀಚೆಗೆ ಬಿಡುಗಡೆಯಾದ ಇಂಗ್ಲಿಷ್‍ನ `ಫಿಫ್ಟಿ ಶೇಡ್ಸ್ ಆಫ್ ಗ್ರೇ' ಕಾದಂಬರಿ ಇಡೀ ವಿಶ್ವದಾದ್ಯಂತ ಸಂಚಲನ ಸೃಷ್ಟಿಸಿದೆ.  ಯುವದಂಪತಿಗಳ ಪ್ರಣಯದ ಸುತ್ತ ರಚನೆಯಾಗಿರುವ ಈ ಕಾದಂಬರಿ, ಪುಸ್ತಕಪ್ರೇಮಿಗಳನ್ನು ಸಮ್ಮೋಹನಗೊಳಿಸಿದೆ. ಕಾದಂಬರಿಯಲ್ಲಿ ಬರುವ ದಂಪತಿಗಳ ನಡುವಿನ `ಲೈಂಗಿಕ ಒಪ್ಪಂದ' ಇಂದು ಯುವಜೋಡಿಗಳ ಮೇಲೆ ಅಪಾರ ಪ್ರಭಾವ ಬೀರಿದ್ದು, ಬಹಳಷ್ಟು ಯುವಜೋಡಿಗಳು ಅಂತಹ `ಲೈಂಗಿಕ ಒಪ್ಪಂದ'ಕ್ಕೆ ಮುಂದಾಗಲು ಉತ್ಸುಕತೆ ತೋರುತ್ತಿದ್ದಾರೆ.   ಈ ಕುರಿತು ಸಮೀಕ್ಷೆ ನಡೆಸಿರುವ ಸಂಸ್ಥೆಯೊಂದು ಭಾರತೀಯ ಯುವಜನರೂ ಈ ವಿಚಾರದಲ್ಲಿ ಉದಾರವಾಗಿದ್ದಾರೆ ಎಂಬ ಚೇತೋಹಾರಿ ಅಂಶವನ್ನು ಹೊರಗೆಡವಿದೆ.   `ಫಿಫ್ಟಿ ಶೇಡ್ಸ್ ಆಫ್ ಗ್ರೇ' ಕಾದಂಬರಿ ಬಿಡುಗಡೆಯಾದ ದಿನದಿಂದಲೂ ಓದುಗರನ್ನು ಅಪಾರ ಸಂಖ್ಯೆಯಲ್ಲಿ ಸೆಳೆಯುತ್ತಿದೆ. ಈ ಕಾದಂಬರಿ ಅಪರೂಪದ ಥ್ರಿಲ್ಲರ್ ಕಾದಂಬರಿಯಾಗಿದ್ದು, ಚಿತ್ರದ ಕೇಂದ್ರ ಪಾತ್ರಗಳಾದ ದಂಪತಿಗಳು `ಗುಪ್ತ ಲೈಂಗಿಕ ಒಪ್ಪಂದ' ಮಾಡಿಕೊಂಡು ಸಾಂಸಾರಿಕ ಜೀವನ ನಡೆಸುತ್ತಿರುತ್ತಾರೆ. ಈ ಗುಪ್ತ ಲೈಂಗಿಕ ಒಪ್ಪಂದದ ಕಾರಣಕ್ಕೇ ಕಾದಂಬರಿಯಲ್ಲಿ ಅನೇಕ ಊಹಿಸಲಸದಳ ತಿರುವುಗಳಿದ್ದು, ಪುಸ್ತಕಪ್ರೇಮಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.  ಇಲ್ಲಿಯವರೆಗೆ ಕೇವಲ ಕಾದಂಬರಿ ಮಾತ್ರವಾಗಿ ಓದುಗರಲ್ಲಿ ನಾನಾ ರಮ್ಯ ಕಲ್ಪನೆಗಳಿಗೆ ಕಾರಣವಾಗಿದ್ದ `ಫಿಫ್ಟಿ ಶೇಡ್ಸ್ ಆಫ್ ಗ್ರೇ' ಇನ್ನು ಕೆಲವೇ ದಿನಗಳಲ್ಲಿ ಚಲನಚಿತ್ರವಾಗಿಯ

ಎಸ್‌.ಪಿ.ಬಾಲಸುಬ್ರಹ್ಮಣ್ಯಂಗೆ ಹರಿವರಾಸನಂ ಪ್ರಶಸ್ತಿ(PSG)

ಎಸ್‌.ಪಿ.ಬಾಲಸುಬ್ರಹ್ಮಣ್ಯಂಗೆ ಹರಿವರಾಸನಂ ಪ್ರಶಸ್ತಿ (PSG) ಎಸ್‌.ಪಿ.ಬಾಲಸುಬ್ರಹ್ಮಣ್ಯಂಗೆ ಹರಿವರಾಸನಂ ಪ್ರಶಸ್ತಿ ತಿರುವನಂತಪುರ: ಕೇರಳ ಸರಕಾರ ನೀಡುವ ಪ್ರತಿಷ್ಠಿತ ಹರಿವರಾಸನಂ ಪ್ರಶಸ್ತಿ ಈ ಬಾರಿ ಹಿರಿಯ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂಗೆ ಒಲಿದು ಬಂದಿದೆ. ಜಾತ್ಯತೀತತೆ, ಸಮಾನತೆ ಹಾಗೂ ವಿಶ್ವ ಬ್ರಾತೃತ್ವ ಸಾರುವ ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ಪ್ರತಿಷ್ಠೆ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಬಾಲಸುಬ್ರಹ್ಮಣ್ಯಂ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಕಳೆದ ಐದು ದಶಕಗಳಲ್ಲಿ ಅವರು ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿರುವ ಅಮೋಘ ಸೇವೆಯನ್ನು ಪರಿಗಣಿಸಲಾಗಿದೆ. ಕೆ.ಜಯಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಶಬರಿಮಲೆಯ ಸಮಿತಿ ಎಸ್‌ಪಿಬಿ ಅವರನ್ನು ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಕೇರಳ ಸರಕಾರದ ಆರೋಗ್ಯ ಮತ್ತು ದೇವಸ್ಯಂ ಖಾತೆಯ ಸಚಿವ ವಿ.ಎಸ್‌. ಶಿವಕುಮಾರ್‌ ತಿಳಿಸಿದ್ದಾರೆ. ಪ್ರಶಸ್ತಿಯು ಒಂದು ಲಕ್ಷ ರೂ. ಬಹುಮಾನ ಮೊತ್ತವನ್ನು ಹೊಂದಿದ್ದು, ಸನ್ಮಾನ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಜೂನ್ ತಿಂಗಳಲ್ಲಿ ಶಬರಿಮಲೆಯಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಕಳೆದ ವರ್ಷಕ್ಕಿಂತ ಮುನ್ನ ಈ ಪ್ರಶಸ್ತಿಯ ಬಹುಮಾನ ಮೊತ್ತ 50 ಸಾವಿರ ರೂ. ಆಗಿತ್ತು. ಈ ವರ್ಷದಿಂದ ಪ್ರಶಸ್ತಿ ಮೊತ್ತವನ್ನು ಏರಿಸಲಾಗಿದೆ ಎಂದು ಸಚಿವರು ಹೇಳಿದರು.

Charlie Hebdo 's ediror Stephen's book ready to release..

Image
' ಚಾರ್ಲಿ ಹೆಬ್ದೊ ' ಸಂಪಾದಕ ಸ್ಟೀಫನ್ ಬರೆದ ಪುಸ್ತಕ ಪ್ಯಾರಿಸ್ ( ಐಎಎನ್ಎಸ್ ) : ಉಗ್ರರ ದಾಳಿಗೆ ಬಲಿಯಾದ ಫ್ರಾನ್ಸ್ನ ' ಚಾರ್ಲಿ ಹೆಬ್ದೊ ' ವಾರಪತ್ರಿಕೆಯ ಮಾಜಿ ಪ್ರಧಾನ ಸಂಪಾದಕ ಸ್ಟೀಫನ್ ಚಾರ್ಬೊನಿಯರ್ (ಚಾರ್ಬ್) ಅವರ ಪುಸ್ತಕವೊಂದು ಪ್ರಕಟಣೆಗೆ ಸಿದ್ಧವಾಗಿದೆ . ' ಅನ್ ಓಪನ್ ಲೆಟರ್ ಟು ದಿ ಫ್ರಾಡ್ಸ್ಟರ್ಸ್ ಆಫ್ ಇಸ್ಲಾಮೋಫೋಬಿಯಾ ಹೂ ಪ್ಲೇ ಇನ್ಟು ರಾಸಿಸ್ಟ್ಸ್ ಹ್ಯಾಂಡ್ಸ್ ' ಹೆಸರಿನ ಪುಸ್ತಕವನ್ನು ಚಾರ್ಬ್ ಸಾಯುವ ಎರಡು ದಿನದ ಹಿಂದಷ್ಟೇ ಬರೆದು ಮುಗಿಸಿದ್ದರು ಎಂದು ಬಿಬಿಸಿ ವರದಿ ಮಾಡಿದೆ. ಈ ಪುಸ್ತಕದಲ್ಲಿ ಮುಸ್ಲಿಂ ಮೂಲಭೂತವಾದವನ್ನು ಚಾರ್ಬ್ ಖಂಡಿಸಿದ್ದಾರೆ ಎನ್ನಲಾಗಿದೆ . ಪತ್ರಿಕಾ ಕಚೇರಿಯ ಮೇಲೆ ಜನವರಿ 7 ರಂದು ನಡೆದಿದ್ದ ಉಗ್ರರ ದಾಳಿಯಲ್ಲಿ ಚಾರ್ಬ್ ಸೇರಿದಂತೆ 12 ಮಂದಿ ಮೃತಪಟ್ಟಿದ್ದರು.

Indian Origin RajRajeshwari appointed as Justice of NewYork Criminal Court( Its 1st time)..

Image
ನ್ಯೂಯಾರ್ಕ್ ನ್ಯಾಯಾಧೀಶರಾಗಿ ಭಾರತ ಮೂಲದ ಮಹಿಳೆ Thu , 04 /16/2015 - 14 : 29 ವಾಷಿಂಗ್ಟನ್ ( ಐಎಎನ್ಎಸ್ ) : ಭಾರತ ಮೂಲದ ರಾಜರಾಜೇಶ್ವರಿ ಅವರು ನ್ಯೂಯಾರ್ಕ್ ಕ್ರಿಮಿನಲ್ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ . ಭಾರತ ಮೂಲದವರೊಬ್ಬರು ನ್ಯೂಯಾರ್ಕ್ನ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿರುವುದು ಇದೇ ಮೊದಲು . 43 ವರ್ಷದ ರಾಜರಾಜೇಶ್ವರಿ ಅವರು ಚೆನ್ನೈನಲ್ಲಿ ಜನಿಸಿದವರು . 16 ವರ್ಷದವರಿದ್ದಾಗ ಅಮೆರಿಕ ಸೇರಿದ ರಾಜರಾಜೇಶ್ವರಿ , ರಿಚ್ಮಂಡ್ ಕೌಂಟಿಯ ಜಿಲ್ಲಾ ಅಟಾರ್ನಿ ಕಚೇರಿಯಲ್ಲಿ ಸಹಾಯಕ ಜಿಲ್ಲಾ ಅಟಾರ್ನಿಯಾಗಿ ಕಾರ್ಯನಿರ್ವಹಿಸಿದ್ದಾರೆ. ' ಈ ನೇಮಕದಿಂದ ಹೆಚ್ಚು ಸಂತೋಷವಾಗಿದೆ . ಅನಿವಾಸಿಯೊಬ್ಬರಿಗೆ ಇಂಥ ಗಳಿಗೆಗಳು ಹೆಚ್ಚು ಸ್ಮರಣೀಯ . ಈ ನೇಮಕ ನನ್ನಂಥ ಅನೇಕರಿಗೆ ಪ್ರೇರಣೆ ' ಎಂದು ರಾಜರಾಜೇಶ್ವರಿ ಹೇಳಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ನೃತ್ಯಪಟುವೂ ಆಗಿರುವ ರಾಜರಾಜೇಶ್ವರಿ ಅವರು ಅಮೆರಿಕದಲ್ಲಿ ನಡೆಯುವ ಅನಿವಾಸಿ ಭಾರತೀಯರ ಸಮಾರಂಭಗಳಲ್ಲಿ ನೃತ್ಯ ಪ್ರದರ್ಶನವನ್ನೂ ನೀಡಿದ್ದಾರೆ .

First State to introduce BIKE AMBULANCE in India is Karnataka

Image
ಪ್ರಥಮ ಚಿಕಿತ್ಸೆಗೆ ಬೈಕ್ ಆಂಬುಲೆನ್ಸ್ ಪ್ರಜಾವಾಣಿ ವಾರ್ತೆ Thu , 04 /16/2015 - 01 : 44 Tweet 0 ವಿಧಾನಸೌಧದ ಮುಂಭಾಗದಲ್ಲಿ ಬೈಕ್ ಆಂಬುಲೆನ್ಸ್ಗೆ ಚಾಲನೆ ನೀಡಲಾಯಿತು . 30 ಬೈಕ್ಗಳನ್ನು ತರಬೇತಿಗೊಂಡ ಸವಾರರು ಚಲಾಯಿಸಿದರು . – ಪ್ರಜಾವಾಣಿ ವಾರ್ತೆ ಹೊಸ ವ್ಯವಸ್ಥೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ, ಮೊದಲ ರಾಜ್ಯ ಕರ್ನಾಟಕ ಬೆಂಗಳೂರು : ಅಪಘಾತದಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡುವ ಬೈಕ್ ಆಂಬುಲೆನ್ಸ್ ಸೇವೆಗೆ ಬುಧವಾರ ಮುಖ್ಯಮಂತ್ರಿ ಸಿದ್ದ ರಾಮಯ್ಯ ಚಾಲನೆ ನೀಡಿದರು. ಬೈಕ್ ಆಂಬುಲೆನ್ಸ್ ಸೇವೆ ನಿರ್ವಹಣೆಯ ಜವಾಬ್ದಾರಿ ಹೊತ್ತ ಕೃಷ್ಣರಾವ್ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಪಿ . ಎಸ್ . ವಸ್ತ್ರದ್ ಅವರಿಗೆ ಬೈಕ್ ಕೀ ಹಸ್ತಾಂತ ರಿಸಿದರು. ' ನಗರ ಪ್ರದೇಶದಲ್ಲಿ ವಾಹನಗಳ ದಟ್ಟಣೆಯಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ . ಅನೇಕರು ರಕ್ತಸ್ರಾವ ದಿಂದಾಗಿ ಮೃತರಾಗುತ್ತಾರೆ . ಆದರೆ, ಅಪಘಾತ ನಡೆದ ಹತ್ತು ನಿಮಿಷದೊಳಗೆ ಗಾಯಾಳುವನ್ನು ಉಪಚರಿಸಿದರೆ ಜೀವ ಉಳಿಸಬಹುದು ' ಎಂದು ಹೇಳಿದರು . ' ಸರ್ಕಾರಿ ಬೈಕ್ ಆಂಬುಲೆನ್ಸ್ ಸೇವೆಯನ್ನು ಆರಂಭಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ' ಎಂದರು ' ಒಟ್ಟು 153 ಬೈಕ್ ಆಂಬುಲೆನ್ಸ್ಗಳಿಗೆ ಸರ್ಕಾರ ಅನುದಾನ ನೀಡಿದೆ ' ಎಂದು ಸಿದ್ದರಾಮಯ್ಯ ಹೇಳಿದರು . ಈ ಯೋಜನೆ ಫಲಪ್ರದವಾದರೆ

April 15 celebrated as World Art Day,

Image
ಕುಂಚದೊಲುಮೆಗೆ ಒಂದು ದಿನ ಪದ್ಮನಾಭ್‌ ಭಟ್‌ Wed, 04/15/2015 - 01:00 3 Images VIEW GALLERY ಏಪ್ರಿಲ್‌ 15 ವಿಶ್ವ ಕಲಾ ದಿನವೆಂದು ಯುನೆಸ್ಕೋ 2012ರಲ್ಲಿಯೇ ಘೋಷಿಸಿದೆ. ಆದರೆ ಇಂದಿಗೂ ಅನೇಕರಿಗೆ ಕಲೆಗಾಗಿಯೇ ಒಂದು ದಿನ ಇದೆ ಎಂಬುದೇ ತಿಳಿದಿಲ್ಲ.  ಈ ಬರಹದಲ್ಲಿ ಕಲಾದಿನದ ಅವಶ್ಯಕತೆ– ಸಾರ್ಥಕತೆಯ ಕುರಿತು ಹಿರಿಯ ಕಲಾವಿದರ ಅನಿಸಿಕೆಯೂ ಇದೆ. ಮಾತು, ಅಕ್ಷರಗಳು ಸಂವಹನದ ಪ್ರಬಲ ಸಾಧನಗಳು. ಆದರೆ ಬದುಕಿನ ಸಂಕೀರ್ಣತೆಯನ್ನು ಅರಿತುಕೊಳ್ಳುವ ದಾರಿಯಲ್ಲಿ, ಅದರ ನಿಗೂಢತೆಯ ಶೋಧನೆಯಲ್ಲಿ ಈ ಸಾಧನಗಳು ಕೆಲವು ಆಯಾಮವನ್ನಷ್ಟೇ ಮುಟ್ಟಬಲ್ಲದು. ಹಾಗೆ ನೋಡಿದರೆ ಜಗತ್ತಿನ ಎಲ್ಲ ಸೃಜನಶೀಲ ಕಲೆಗಳೂ ಬದುಕನ್ನು ಅರಿಯುವ ಮನುಷ್ಯನ ಹಂಬಲದ ಫಲಗಳೇ. ಚಿತ್ರಕಲೆಯೂ ಅಂಥದ್ದೇ ಅರಿವಿನ– ಅರಿಕೆಯ ಒಂದು ಹಾದಿ. ಅಂದಹಾಗೆ ಇಂದು 'ವಿಶ್ವ ಕಲಾ ದಿನ'. ಚಿತ್ರಕಲೆಗೆ ಸುದೀರ್ಘವಾದ ಇತಿಹಾಸವಿದೆಯಾದರೂ, 'ಕಲಾದಿನ'ದ ಪರಿಕಲ್ಪನೆ ಹೊಸದು. ಕಲಾದಿನದ ಹಿನ್ನೋಟ 'ದಿ ಇಂಟರ್‌ನ್ಯಾಷನಲ್‌ ಅಸೋಸಿಯೇಷನ್‌ ಆಫ್‌ ಆರ್ಟ್ಸ್‌' 2012ರಲ್ಲಿ ಮೆಕ್ಸಿಕೊ ದೇಶದ ಗುಡಲಾಜರಾ ಎಂಬಲ್ಲಿ ವಿಶ್ವ ಕಲಾವಿದರ ಸಭೆಯನ್ನು ನಡೆಸಿತು. 92 ದೇಶಗಳ ಕಲಾ ಪ್ರತಿನಿಧಿಗಳು ಭಾಗವಹಿಸಿದ್ದ ಈ ಸಭೆಯಲ್ಲಿ   ಏಪ್ರಿಲ್‌ 15ನ್ನು 'ವಿಶ್ವ ಕಲಾ ದಿನ'ವನ್ನಾಗಿ ಆಚರಿಸುವ ಪ್ರಸ್ತಾಪ ಮಾಡಲಾಯಿತು. ಎಲ್ಲ ಪ್ರತಿನಿಧಿಗಳೂ ಈ ಪ್ರಸ್ತಾವನೆಗೆ ಬೆಂಬಲ

FAST RUNNING ROBO 'ATRIYAS'

ವೇಗವಾಗಿ ಓಡುವ ರೋಬೊ 'ಏಟ್ರಿಯಾಸ್‌' ಓದೇಶ ಸಕಲೇಶಪುರ Wed, 04/15/2015 - 01:00 3 Images VIEW GALLERY ಹಿಂದಿನ ಎಲ್ಲ ರೋಬೊಗಳಿಗೆ ಹೋಲಿಸಿದರೆ, 'ಏಟ್ರಿಯಾಸ್' ಬಲು  ವೇಗವಾಗಿ ನಡೆಯಬಲ್ಲದು, ಓಡಬಲ್ಲದು. ನಡಿಗೆ ಮತ್ತು ಓಟಕ್ಕೆ ಸಮತಟ್ಟು ನೆಲವೇ ಬೇಕೆಂದಿಲ್ಲ. ಕಡಿಮೆ ಭಾರದ ಕಾರ್ಬನ್‌ ಫೈಬರ್‌ನಿಂದ ನಿರ್ಮಿಸಲಾದ ಇದರ ಕಾಲುಗಳಿಗೆ ಎಲಾಸ್ಟಿಕ್‌ ಫೈಬರ್‌ಗ್ಲಾಸ್‌ ಸ್ಪ್ರಿಂಗ್‌ ಅಳವಡಿಸಿದೆ. 'ಏಟ್ರಿಯಾಸ್‌' ಕುರಿತ  ಮಾಹಿತಿ ಇಲ್ಲಿದೆ . ವಿಜ್ಞಾನಲೋಕದ ವಿಸ್ಮಯವೆನಿಸುವಂತಹ ಸಂಶೋಧನೆಯಾದ 'ರೊಬೊ' (ಯಂತ್ರಮಾನವ) ಯಾರಿಗೆ ತಾನೇ ಗೊತ್ತಿಲ್ಲ? ಕೆಲವರು ಓದಿ ತಿಳಿದಿದ್ದರೆ, ಮತ್ತೊಬ್ಬರು ನೋಡಿ ಅರ್ಥ ಮಾಡಿಕೊಂಡಿರುತ್ತಾರೆ.  ಹೆಚ್ಚಿನ ಮಂದಿಗೆ 'ರೊಬೊ' ದರ್ಶನವಾಗಿರುವುದು ಸಿನಿಮಾಗಳಲ್ಲಿ. ಅದರಲ್ಲೂ ನಾಲ್ಕೈದು ವರ್ಷದ ಹಿಂದೆ ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರ ನಟನೆಯಲ್ಲಿ ಮೂಡಿಬಂದ 'ಎಂದಿರನ್‌'  ಸಿನಿಮಾ ವೀಕ್ಷಿಸಿದ್ದರೆ, ಅದರಲ್ಲಿರುವ 'ಚಿಟ್ಟಿ' ಪಾತ್ರ (ರಜನಿಕಾಂತ್‌ ರೂಪದ ರೊಬೊ) ನಿಜಕ್ಕೂ ಮನದಲ್ಲಿ ಅಚ್ಚೊತ್ತಿಯೇ ಇರುತ್ತದೆ. ಮನುಷ್ಯನಂತೆ ಓಡಾಡಬಲ್ಲ, ಮಾತನಾಡಬಲ್ಲ, ಹೇಳಿದ್ದನ್ನು ಕೇಳಿಸಿಕೊಂಡು ಪ್ರತಿಕ್ರಿಯಿಸಬಲ್ಲ.... ಹೀಗೆ ಹಲವು ಬಗೆಯ ರೊಬೊಗಳು ಇಲ್ಲಿಯವರೆಗೂ ಬಂದಿವೆ. ಆದರೆ ಈ ಹಿಂದಿನ ವಿಜ್ಞಾನಿಗಳ ಸಂಶೋಧನೆಯಲ್ಲಿ ಮೂಡಿ ಬಂದ ರೊಬೊಗಳನ್

VENKATESH GODKINDI IS NO MORE:

Image
ವೇಣುವಾದಕ ವೆಂಕಟೇಶ‌ ಗೋಡ್ಖಿಂಡಿ ಇನ್ನಿಲ್ಲ Wed, 04/15/2015 - 01:00 ಬೆಂಗಳೂರು:  ಪ್ರಸಿದ್ಧ ವೇಣುವಾದಕ ಪಂಡಿತ‌ ವೆಂಕಟೇಶ‌ ಗೋಡ್ಖಿಂಡಿ (74) ಅವರು ಅಲ್ಪಕಾಲದ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ ನಿಧನರಾದರು.ಅವರಿಗೆ ಪತ್ನಿ ಪದ್ಮಜಾ, ಪುತ್ರರಾದ ತಬಲಾ ವಾದಕ ಕಿರಣ್‌ ಗೋಡ್ಖಿಂಡಿ, ಅಂತರರಾಷ್ಟ್ರೀಯ ಖ್ಯಾತಿಯ ಬಾನ್ಸುರಿ  ವಾದಕ ಪ್ರವೀಣ್‌ ಗೋಡ್ಖಿಂಡಿ ಇದ್ದಾರೆ. ಮೂಲತಃ ಧಾರವಾಡದವರಾದ ಅವರು ಆಕಾಶವಾಣಿಯ 'ಎ' ಗ್ರೇಡ್‌ ಕಲಾವಿದರಾಗಿದ್ದರು. ಧಾರವಾಡ ಆಕಾಶವಾಣಿಯಲ್ಲಿ ನಿಲಯ ನಿರ್ದೇಶಕ, ವಿಶೇಷ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಕಳೆದ 15 ವರ್ಷಗಳಿಂದ ಬೆಂಗಳೂರಿನ ವಿದ್ಯಾನಗರದಲ್ಲಿ ನೆಲೆಸಿದ್ದರು. ಈ ಸಂದರ್ಭದಲ್ಲಿ ಅವರು ನೂರಾರು ಶಿಷ್ಯರನ್ನು ತಯಾರು ಮಾಡಿದರು.  ಅವರ  ಅನೇಕ ಶಿಷ್ಯರು ಸ್ವಂತ ಸಂಗೀತ ಶಾಲೆಗಳನ್ನು ಆರಂಭಿಸಿದ್ದಾರೆ. 'ಕರ್ನಾಟಕಕ್ಕೆ ಬಾನ್ಸುರಿ ವಾದ್ಯವನ್ನು ಪರಿಚಯಿಸಿದ ಮೊದಲ ವ್ಯಕ್ತಿ ಅವರು. ಬಾನ್ಸುರಿಯಲ್ಲಿ ಅನೇಕ ಪ್ರಯೋಗ ಮಾಡಿ ರಾಜ್ಯದಲ್ಲಿ ಜನಪ್ರಿಯಗೊಳಿಸಿದ್ದರು. ಅವರು ಧಾರವಾಡ ಆಕಾಶವಾಣಿಯಲ್ಲಿ ಸಂಗೀತ ಪ್ರಧಾನ ನಾಟಕ ಪ್ರಯೋಗವನ್ನು ಆರಂಭಿಸಿದ್ದರು. ಅವರ ಶಿಷ್ಯ ವರ್ಗ ಬಹಳ ದೊಡ್ಡದು' ಎಂದು ಲೇಖಕ ಗೋಪಾಲ್‌ ವಾಜಪೇಯಿ ನೆನಪಿಸಿಕೊಂಡಿದ್ದಾರೆ. 'ಅವರದು ಮೂರು ತಲೆಮಾರಿನ ಸಂಗೀತ ಕುಟುಂಬ. ಪ್ರವೀಣ್‌ ಅವರಿಗೆ ತಂದೆಯೇ ಮೊದಲ ಗುರು ಆಗಿ

Water source found on MARS:-

Image
ಮಂಗಳನ ಅಂಗಳದಲ್ಲಿ ನೀರಿನ ಅಂಶ ಪತ್ತೆ Posted by:  Madhusoodhan Hegde Updated: Tuesday, April 14, 2015, 17:46 [IST] ಲಂಡನ್‌ ಏ. 14: ಮಂಗಳನ ಮೇಲ್ಪದರದಲ್ಲಿ ನೀರಿನ ಅಂಶ ಪತ್ತೆಯಾಗಿದೆ ಎಂದು ನಾಸಾದ  ಕ್ಯೂರಿಯಾಸಿಟಿ ರೋವರ್ ಹೇಳಿದೆ. ಮಾನವನ ವಾಸದ ಸಾಧ್ಯತೆ ಬಗ್ಗೆ ಸಮಗ್ರ ಅಧ್ಯಯನ ನಡೆಸುತ್ತಿರುವ ಕ್ಯೂರಿಯಾಸಿಟಿ ಮಹತ್ವದ ಅಂಶ ಬಹಿರಂಗ ಮಾಡಿದೆ. ಮೊದಲು  ಮಂಗಳ  ಗ್ರಹದಲ್ಲಿ ಅಪಾರ ಪ್ರಮಾಣದ ಮಂಜುಗಡ್ಡೆ ಪದರಗಳಿವೆ ಎಂದು ವಿಜ್ಞಾನಿಗಳು ತಿಳಿಸಿದ್ದರು. ಆದರೆ ಇದೀಗ ದ್ರವ ರೂಪದಲ್ಲಿಯೇ ನೀರು ಪತ್ತೆಯಾಗಿದೆ. ಮಣ್ಣಿನಲ್ಲಿ ನೀರಿನ ಅಂಶ ಪತ್ತೆಯಾಗಿದ್ದು ಇದು ಅಪಾರ ಪ್ರಮಾಣದ ಲವಣಾಂಶದಿಂದ ಕೂಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.[ ಸೆಲ್ಫಿ ಕ್ಲಿಕ್ಕಿಸಿಕೊಂಡ ಕ್ಯೂರಿಯಾಸಿಟಿ ] ಮಂಗಳನಲ್ಲಿರುವ ಮಂಜುಗಡ್ಡೆ ಪ್ರಮಾಣ 15 ಸಾವಿರ ಕೋಟಿ ಕ್ಯುಬಿಕ್‌ ಮೀಟರ್‌ಗಳಷ್ಟಾಗಬಹುದು. ಮಂಗಳ ಮೇಲ್ಮೈಯಲ್ಲಿ ಇದನ್ನು ಹರಡಿದರೆ ಹೊಸ ಪದರವನ್ನೇ ಸೃಷ್ಟಿಸಬಹುದು ಎಂದು ಹೇಳಿದ್ದಾರೆ.[ ಮಂಗಳನ ಅಂಗಳದಲ್ಲಿ ಕೆರೆ ಕಂಡ ಕ್ಯೂರಿಯಾಸಿಟಿ ] ಮಂಜುಗಡ್ಡೆ ಪದರಗಳ ಮೇಲೆ ದಪ್ಪ ಧೂಳಿನ ಪದರ ಇದೆ. ಈ ಪದರ ಮೇಲಿನಿಂದ ನಮಗೆ ಕಾಣುತ್ತಿದೆ. ಆದರೆ ಕೆಳಭಾಗದಲ್ಲಿ ಮಂಜುಗಡ್ಡೆಯಿದೆ. ಮಣ್ಣಿನಲ್ಲೂ ನೀರಿನ ಅಂಶ ಹೇರಳವಾಗಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ದೊಡ್ಡ ಸರೋವರವೊಂದು ಮಂಗಳನ ಮೇಲ್ಮೈ ಮೇಲಿತ್ತು ಎಂಬ ಕುರಿತಾಗಿಯೂ ದಾಖಲೆ

New procedure implemented to appoint judges of HighCourt and Supreme Court.

Image
ಜಡ್ಜ್ಗಳ ನೇಮಕಕ್ಕೆ ಹೊಸ ವ್ಯವಸೆ ಉದಯವಾಣಿ, Apr 14, 2015, 3:45 AM IST ನವದೆಹಲಿ:  ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ನ ನ್ಯಾಯಾಧೀಶರ ನೇಮಕಕ್ಕೆ ಇದ್ದ ಕೊಲಿಜಿಯಂ ವ್ಯವಸ್ಥೆಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರ, ವಿವಾದಿತ ನ್ಯಾಯಾಂಗ ನೇಮಕ ಆಯೋಗವನ್ನು ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿದೆ. ನ್ಯಾಯಾಧೀಶರ ನೇಮಕ ಆಯೋಗ ಕಾಯ್ದೆ ಸೋಮವಾರದಿಂದಲೇ ಜಾರಿಗೆ ಬಂದಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಜತೆಗೆ ಆಯೋಗಕ್ಕೆ ಸಂವಿಧಾನದ ಮಾನ್ಯತೆ ನೀಡುವ ಸಂವಿಧಾನ ತಿದ್ದುಪಡಿ ಕಾಯ್ದೆಯೂ ಜಾರಿಯಾಗಿದೆ. ವಿಶೇಷವೆಂದರೆ, ನ್ಯಾಯಾಂಗ ನೇಮಕಾತಿ ಆಯೋಗ ಮಸೂದೆಯನ್ನು ಪ್ರಶ್ನಿಸಿ ವಿವಿಧ ಸಂಘಟನೆಗಳು ಸಲ್ಲಿಸಿರುವ ಅರ್ಜಿ ಬುಧವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದ್ದು, ಅದಕ್ಕೆ ಎರಡು ದಿನ ಮೊದಲು ಸರ್ಕಾರ ಹೊಸ ವ್ಯವಸ್ಥೆಯನ್ನು ಜಾರಿಗೆ ತರುವ ಅಧಿಸೂಚನೆ ಪ್ರಕಟಿಸಿದೆ.ನೂತನ ಕಾಯ್ದೆ ಜಾರಿಯಾಗುವ ಮೂಲಕ ಕೊಲಿಜಿಯಂ ವ್ಯವಸ್ಥೆಗೆ ಕೊನೆಯ ಮೊಳೆ ಬಿದ್ದಿದೆ. ಆದರೆ, ನೂತನ ವ್ಯವಸ್ಥೆ ಕಾರ್ಯನಿರ್ವಹಿಸಲು ಇನ್ನೂ ಸ್ವಲ್ಪ ಸಮಯ ಹಿಡಿಯಲಿದೆ ಎಂದು ಕಾನೂನು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ನ್ಯಾಯಾಧೀಶರ ನೇಮಕ ಆಯೋಗಕ್ಕೆ ಇಬ್ಬರು ಪ್ರಮುಖ ವ್ಯಕ್ತಿಗಳನ್ನು ನೇಮಿಸುವ ಸಂಬಂಧ ಪ್ರಧಾನಿ ಮೋದಿ ಅವರು ಸುಪ್ರೀಂಕೋರ್ಟ್‌ನ ಸಿಜೆ ಎಚ್‌.ಎಲ್‌. ದತ್ತು, ಲೋಕಸಭೆಯಲ್ಲಿ ಅತಿದೊಡ್ಡ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ

Now Sania on First Rank(officially)

Image
ಸಾನಿಯಾ ನಂ. ವನ್‌ ಅಧಿಕೃತ ಉದಯವಾಣಿ, Apr 14, 2015, 3:45 AM IST ಹೊಸದಿಲ್ಲಿ:  ಸಾನಿಯಾ ಮಿರ್ಜಾ ಅವರು ಅಧಿಕೃತವಾಗಿ ಡಬಲ್ಸ್‌ನಲ್ಲಿ ವಿಶ್ವದ ನಂಬರ್‌ ವನ್‌ ಸ್ಥಾನ ಪಡೆದ ಭಾರತದ ಪ್ರಪ್ರಥಮ ವನಿತಾ ಟೆನಿಸ್‌ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಸೋಮವಾರ ಬಿಡುಗಡೆಗೊಂಡ ನೂತನ ಡಬ್ಲ್ಯುಟಿಎ ರ್‍ಯಾಂಕಿಂಗ್‌ನ ಡಬಲ್ಸ್‌ ವಿಭಾಗದಲ್ಲಿ ಅವರು ನಂಬರ್‌ ವನ್‌ ಅಲಂಕರಿಸಿದ್ದಾರೆ. ಒಟ್ಟಾರೆ 7660 ಅಂಕ ಗಳಿಸಿದ ಸಾನಿಯಾ ಅವರು ಇಟಲಿಯ ಸಾರಾ ಇರಾನಿ (7640 ಅಂಕ) ಅವರನ್ನು ಹಿಂದಿಕ್ಕಿ ನಂಬರ್‌ ವನ್‌ ಸ್ಥಾನಕ್ಕೇರಿದರು. ಅಮೆರಿಕದ ಚಾರ್ಲ್ಸ್‌ಟನ್‌ನಲ್ಲಿ ನಡೆದ ಡಬ್ಲ್ಯುಟಿಎ ಫ್ಯಾಮಿಲಿ ಸರ್ಕಲ್‌ ಕಪ್‌ ಟೆನಿಸ್‌ ಕೂಟದ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಸಾನಿಯಾ ಈ ಸಾಧನೆ ಮಾಡಿದರು. ಅಗ್ರ ಶ್ರೇಯಾಂಕದ ಸಾನಿಯಾ-ಮಾರ್ಟಿನ್‌ ಹಿಂಗಿಸ್‌ ಅವರು ಫೈನಲ್‌ ಹೋರಾಟದಲ್ಲಿ ಕ್ಯಾಸಿ ಡೆಲ್ಲಾಕ್ವಾ ಮತ್ತು ದಾರಿಜಾ ಜುರಾಕ್‌ ಅವರನ್ನು 6-0, 6-4 ನೇರ ಸೆಟ್‌ಗಳಿಂದ ಉರುಳಿಸಿದ್ದರು. ಈ ಗೆಲುವಿನಿಂದ ಸಾನಿಯಾ 470 ಅಂಕ ಪಡೆದಿದ್ದರು. ಸಾನಿಯಾ ಅವರಿಗಿಂತ ಮೊದಲು ಲಿಯಾಂಡರ್‌ ಪೇಸ್‌ ಮತ್ತು ಮಹೇಶ್‌ ಭೂಪತಿ ಅವರು ಡಬಲ್ಸ್‌ನಲ್ಲಿ ವಿಶ್ವದ ನಂಬರ್‌ ವನ್‌ ಸ್ಥಾನ ಅಲಂಕರಿಸಿದ್ದರು. 90ರ ದಶಕದಲ್ಲಿ ಪುರುಷರ ಡಬಲ್ಸ್‌ನಲ್ಲಿ ಪ್ರಾಬಲ್ಯ ಸ್ಥಾಪಿಸಿದ್ದ ವೇಳೆ ಇವರಿಬ್ಬರು ನಂಬರ್‌ ವನ್‌ ಸ್ಥಾನ ಪಡೆದಿದ್ದರು. ಸಾನಿಯಾ ಗ್ರ್ಯಾನ್‌ ಸ್ಲಾಮ್‌

Nobel winner Gunter Grass (Germany) died @87

Image
ಜರ್ಮನಿಯ ಪ್ರಸಿದ್ಧ ಬರಹಗಾರ, ನೊಬೆಲ್‌ ಪ್ರಶಸ್ತಿ ಪುರಸ್ಕೃತ ಲೇಖಕ ಗುಂಟರ್‌ ಗ್ರಾಸ್‌ ನಿಧನ Tue, 04/14/2015 - 01:00 ಗುಂಟರ್‌ ಗ್ರಾಸ್‌ ಬರ್ಲಿನ್‌ (ಎಪಿ):   ಜರ್ಮನಿಯ ಪ್ರಸಿದ್ಧ  ಬರಹಗಾರ, ನೊಬೆಲ್‌ ಪ್ರಶಸ್ತಿ ಪುರಸ್ಕೃತ ಗುಂಟರ್‌ ಗ್ರಾಸ್‌ ಅವರು  ಇಲ್ಲಿನ ಲ್ಯುಬೆಕ್‌ ಆಸ್ಪತ್ರೆಯಲ್ಲಿ ಸೋಮವಾರ ಬೆಳಿಗ್ಗೆ ನಿಧನರಾದರು. ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಅವರಿಗೆ 87 ವರ್ಷ ವಯಸ್ಸಾಗಿತ್ತು. ತಮ್ಮ 17ನೇ ವಯಸ್ಸಿನಲ್ಲಿಯೇ ಅವರು ಎರಡನೇ ಮಹಾಯುದ್ಧದ ಭೀಕರತೆಯನ್ನು ನೋಡಿದ್ದರು. ಆಗ ಅವರು ಹಿಟ್ಲರ್‌ನ ಯುವ ಪಡೆಯ ಸದಸ್ಯರಾಗಿದ್ದರು. ನಂತರದಲ್ಲಿ ನಾಜಿ ವಿಶೇಷ ಪಡೆಗಳ ಘಟಕ (ವಾಫೆನ್‌–ಎಸ್‌ಎಸ್‌)ಸೇರಿದ್ದರು. ಅವರ ಸಾಹಿತ್ಯ  ಕೃಷಿ ಶುರುವಾಗಿದ್ದು ೧೯೫೨ರಲ್ಲಿ. ೨೦೦೬ರಲ್ಲಿ ಪ್ರಕಟಗೊಂಡ ಅವರ ಆತ್ಮಕಥೆ ' ಸ್ಕಿನಿಂಗ್‌ ದಿ ಆನಿಯನ್‌' ದೊಡ್ಡ ವಿವಾದ ಸೃಷ್ಟಿಸಿತ್ತು. ತಾನು ವಾಫೆನ್‌್‍–ಎಸ್‌ಎಸ್‌್ ಸದಸ್ಯನಾಗಿದ್ದೆ ಎಂದು ಅವರು ಅದರಲ್ಲಿ  ಬರೆದುಕೊಂಡಿದ್ದಾರೆ.  ಈ ಅಂಶ ಗೊತ್ತಾಗಿದ್ದೇ ತಡ ಇಡೀ ಯುರೋಪ್‌ ದಂಗಾಗಿತ್ತು. 2012ರಲ್ಲಿ ಪ್ರಕಟಗೊಂಡ ಅವರ ಕವನ 'ವಾಟ್‌  ಮಸ್ಟ್‌ ಬಿ ಸೆಡ್‌' ಕೂಡ ಜರ್ಮನಿ ಹಾಗೂ ಇಸ್ರೇಲ್‌ನಲ್ಲಿ ಟೀಕೆಗೆ ಕಾರಣವಾಗಿತ್ತು.  ಇರಾನ್‌ ಪರಮಾಣು ಕಾರ್ಯಕ್ರಮ ಕುರಿತಂತೆ ಇರಾಕ್‌ ತಳೆದ ನಿಲುವನ್ನು ಅವರು ಇದರಲ್ಲಿ ಟೀಕಿಸಿದ್ದರು. ಅಲ್ಲದೇ  ಇರಾನ್‌್ ಪರಮಾಣು ಕಾರ್ಯಕ್ರಮದ ಕು

ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ 96 ವರ್ಷ

ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ 96 ವರ್ಷ (PSG) ಭಾರತದ ಇತಿಹಾಸವನ್ನು ಅವಲೋಕಿಸಿದರೆ ಮೈನವಿರೇಳಿಸುವ ಅದೆಷ್ಟೋ ಘಟನೆಗಳು ಅನಾವರಣಗೊಳ್ಳುತ್ತವೆ. ಹಾಗೆಯೇ ಎದೆ ನಡುಗಿಸುವ, ನರನಾಡಿಗಳಲ್ಲಿ ರಕ್ತ ಕುದಿದು ರೋಷ ಉಕ್ಕಿಸುವ ಘಟನೆಗಳೂ ಬಿಚ್ಚಿಕೊಳ್ಳುತ್ತವೆ.  ಏಕೆಂದರೆ ವಿದೇಶಿ ದಾಳಿಕೋರ ಕಟುಕರು ಭಾರತದ ನೆಲದ ಮೇಲೆ ನಡೆಸಿದ ಅತ್ಯಾಚಾರ, ಅನಾಚಾರ, ಹತ್ಯಾಕಾಂಡಗಳು ಒಂದೆರಡಲ್ಲ. ಆದರೆ ಅಂಥ ಎಲ್ಲ ಘಟನೆಗಳಲ್ಲೇ ಅತ್ಯಂತ ಹೇಯ, ಅಮಾನವೀಯ, ಅಮಾನುಷ ಘಟನೆಯೆಂದರೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ.  ಜಲಿಯನ್ ವಾಲಾಬಾಗ್ ಎಂಬುದು ಒಂದು ಸುಂದರ ತೋಟ. ಪಂಜಾಬ್‌ನ ಈ ತೋಟ ಪ್ರಶಾಂತತೆಗೆ ತವರಾಗಿತ್ತು. 1919ರ ಏಪ್ರಿಲ್ ತಿಂಗಳ ಇದೇ ದಿನದಂದು  ಅಲ್ಲೊಂದು ಇಡೀ ಮಾನವ ಸಮುದಾಯವೇ ಬೆಚ್ಚಿ ಬೀಳುವಂಥ ಹೀನ ಕೃತ್ಯವೊಂದು ನಡೆದು ಹೋಯಿತು. ಮಾನವ ನಿರ್ಮಿತ ಆ ದುರಂತಕ್ಕೆ ಇದೀಗ ಬರೋಬ್ಬರಿ 96 ವರ್ಷ. ಈ ದುಷ್ಕೃತ್ಯದ ರೂವಾರಿ ಬ್ರಿಟನ್‌ನ ಭಾರತ ಚಕ್ರವರ್ತಿ ಬ್ರಿಗೆಡಿಯರ್-ಜನರಲ್ ರೆಜಿನಾಲ್ಡ್ ಡಯರ್. ಅವನೊಬ್ಬ ಸೇನಾ ಕಮಾಂಡರ್. ಈಗ ಈ ಜಲಿಯನ್ ವಾಲಾಬಾಗ್‌ನ್ನೇ ಅಮೃತಸರ ಎಂದು ಕರೆಯಲಾಗುತ್ತದೆ. 1919ರ ಏಪ್ರಿಲ್ 13ರಂದು ಅಲ್ಲಿ ಸಾವಿರಾರು ಮಂದಿ ಪುರುಷರು, ಮಹಿಳೆಯರು, ಮಕ್ಕಳು ಸೇರಿದ್ದರು. ಈ ಪ್ರದೇಶ(ಜಲಿಯನ್ ವಾಲಾಬಾಗ್)ದ ಸುತ್ತ ಎತ್ತರದ ಗೋಡೆ, ಒಂದೇ ಕಡೆ ದ್ವಾರ, ಅಲ್ಲಿಂದ ತಪ್ಪಿಸಿಕೊಂಡು ಪಾರಾಗುವುದು ಭಾರೀ ಕಷ್ಟಸಾಧ್ಯ.  ಅದು ಸ್ವತಂತ್ರ ಹೋರಾಟ ಮೊಳ

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು.13-04-2015

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು.13-04-2015 01). ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿಯು ಯಾವ ವಂಶದ ರಾಜರ ಆಳ್ವಿಕೆಯ ಕಾಲದಲ್ಲಿ ಕೆತ್ತಲ್ಪಟ್ಟಿತು ? a) ಕದಂಬರು b) ಗಂಗರು● c) ರಾಷ್ಟ್ರಕೂಟರು d) ಚಾಲುಕ್ಯರು 02). ಹಸಿರು ಸಸ್ಯಗಳು ? a) ಉತ್ಪಾದಕಗಳೂ● b) ಮಾಂಸಾಹಾರಿಗಳೂ c) ಸಸ್ಯಾಹಾರಿಗಳು d) ವಿಘಟಕಗಳು 03). ಕರ್ನಾಟಕದ ಕೇಸರಿ ಎಂದು ಯಾರನ್ನು ಕರೆಯಲಾಗುತ್ತದೆ? a) ಹರ್ಡೆಕರ್ ಮಂಜಪ್ಪ b) ಖಾನ್ ಅಬ್ದುಲ್ ಗಫರ್ ಖಾನ್ c) ಗಂಗಾಧರರಾವ್ ದೇಶಪಾಂಡೆ● d) ಯಾರೂ ಅಲ್ಲ 04). ಕರ್ನಾಟಕ ರತ್ನ ಪ್ರಶಸ್ತಿಯನ್ನು ಪಡೆದ ಮೊದಲಿಗರು ಯಾರು? a) ಡಾ ರಾಜ್ ಕುಮಾರ್ b) ಯು ಆರ್ ಅನಂತಮೂರ್ತಿ c) ಎಸ್ ನಿಜಲಿಂಗಪ್ಪ d) ಕುವೆಂಪು● 05). ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ, ಪಾಕಿಸ್ತಾನದ 'ಮಲಾಲಾ ಯೂಸಫ್ ಜಾಯ್' ಳ ಹೆಸರನ್ನು ಇತ್ತೀಚೆಗೆ ಇದಕ್ಕೆ ಇಡಲಾಗಿದೆ... a) ಅಂತರಾಷ್ಟ್ರೀಯ ಮಕ್ಕಳ ಅಭಿವೃದ್ಧಿ ಮಂಡಳಿ b) ರಾಷ್ಟ್ರೀಯ ಮಹಿಳಾ ಕಲ್ಯಾಣ ಸಂಸ್ಥೆಗೆ c) ಕ್ಷುದ್ರ ಗ್ರಹಕ್ಕೆ● d) ಯಾವುದುಕ್ಕೂ ಅಲ್ಲ. ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು) ವಿಜಯಪುರ

ಶಿಕ್ಷಕರ ಪರಸ್ಪರ ವರ್ಗಾವಣೆ ಮಾಹಿತಿ ವಿನಿಮಯ ಫಲಕ ೨೦೧೫: ವರ್ಗಾವಣೆ ಬಯಸುವವರು freegksms.2015@blogger.com ಗೆ ಈ-ಮೇಲ್ ಮಾಡಿ.. (ಸ್ವಯಂಚಾಲಿತವಾಗಿ ಪ್ರಕಟಗೊಳ್ಳುವದು) Then Check it on getgk.blogspot.in * For FREE GK SMS ALERTS type FOLLOW FREEGKSMS then send it to 9248948837

Image

ಶಿಕ್ಷಕರ ನೇಮಕ ಪ್ರಕ್ರಿಯೆ ಆರಂಭ, ಟಿಇಟಿ ದಿನಾಂಕ ವು ಪ್ರಕಟ

JOB INFO: IN VARIOUS DEPARTMENTS...

Image
ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌, ವಿಜಯ ಬ್ಯಾಂಕ್‌, ಬಾರ್ಡರ್‌ ಸೆಕ್ಯೂರಿಟಿ ಫೋರ್ಸ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಸೇನಾಪಡೆ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ಎಸ್‌ಎಸ್‌ಸಿನಲ್ಲಿ 2902 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26/04/2015. ಹುದ್ದೆ ಹೆಸರು:  1) ಸಬ್‌ಇನ್‌ಸ್ಪೆಕ್ಟರ್‌ ಇನ್‌ ಸೆಂಟ್ರಲ್‌ ಆರ್ಮ್ಡ್‌ ಫೋರ್ಸಸ್‌: 1706. * ಸೆಂಟ್ರಲ್‌ ರಿಸರ್ವ್‌ ಪೊಲೀಸ್‌ ಫೋರ್ಸ್‌ (ಸಿಆರ್‌ಪಿಎಫ್‌): 221 ಹುದ್ದೆ, * ಸೆಂಟ್ರಲ್‌ ಇಂಡಸ್ಟ್ರಿಯಲ್‌ ಸೆಕ್ಯೂರಿಟಿ ಫೋರ್ಸ್‌ (ಸಿಐಎಸ್‌ಎಫ್‌): 289 ಹುದ್ದೆ, * ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ): 53 ಹುದ್ದೆ, *  ಬಾರ್ಡರ್‌ ಸೆಕ್ಯೂರಿಟಿ ಫೋರ್ಸ್‌ (ಬಿಎಸ್‌ಎಫ್‌): 607 ಹುದ್ದೆ. 2) ಸಬ್‌ಇನ್‌ಸ್ಟೆಕ್ಟರ್‌ ಇನ್‌ ದೆಹಲಿ ಪೊಲೀಸ್‌: 95 ಹುದ್ದೆ. ವೇತನ ಶ್ರೇಣಿ: ರೂ. 9300ರಿಂದ 34800. 3) ಅಸಿಸ್ಟೆಂಟ್‌ ಸಬ್‌ ಇನ್‌ಸ್ಪೆಕ್ಟರ್‌ (ಎಸ್‌ಎಐ) (ಸಿಐಎಸ್‌ಎಫ್‌): 1101 ಹುದ್ದೆ (ಪುರುಷರು: 991, ಮಹಿಳೆಯರು: 110). ವೇತನ ಶ್ರೇಣಿ:  ರೂ. 5200ರಿಂದ 20200. ವಯೋಮಿತಿ : ಕನಿಷ್ಠ 20 ವರ್ಷ, ಗರಿಷ್ಠ 25 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ : ಪದವಿ. ಅರ್ಜಿ ಶುಲ್ಕ: ರೂ. 100 ಆಯ್ಕೆ ವಿಧಾನ:  ಲಿಖಿತ

TOEFL EXAM: How to get ready for TOEFL exam?

Image
ಇಂಗ್ಲಿಷ್ ಸಾಮರ್ಥ್ಯ ಪರೀಕ್ಷೆ 'ಟೊಫೆಲ್' Mon, 04/13/2015 - 01:00 ? ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯುವ ಕನಸು ಯಾರಿಗಿಲ್ಲ? ಆದರೆ ಇಂಗ್ಲಿಷ್ ಹೇಗಿರಬೇಕೆಂಬ ಪ್ರಶ್ನೆ ಬಹುತೇಕರಲ್ಲಿದೆ. ವಿದೇಶಿ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಆಯ್ಕೆಗೆ ಮುನ್ನ ಅವರ ಇಂಗ್ಲಿಷ್ ಸಾಮರ್ಥ್ಯದ ಕುರಿತು ವಿಶೇಷ ಕಾಳಜಿ ವಹಿಸುತ್ತವೆ. ಹಾಗಾದರೆ ವಿದ್ಯಾರ್ಥಿಗಳ ಇಂಗ್ಲಿಷ್ ಮಾನದಂಡದ ಪರೀಕ್ಷೆ ಏನು? ಇಲ್ಲಿದೆ ಟಿಒಇಎಫ್‌ಎಲ್ (ಟೊಫೆಲ್) ಪರೀಕ್ಷೆ. ಇಂಗ್ಲಿಷ್ ಭಾಷೆಯ ಮೇಲೆ ನಿಮಗೆಷ್ಟು ಹಿಡಿತವಿದೆ ಎಂಬುದನ್ನು ಪರೀಕ್ಷಿಸಲು ಟೊಫೆಲ್ ಪರೀಕ್ಷೆ ನಡೆಯುತ್ತದೆ. ಭಾರತ ಸೇರಿದಂತೆ ವಿಶ್ವದ 130 ರಾಷ್ಟ್ರಗಳಲ್ಲಿ ಈ ಪರೀಕ್ಷೆಗೆ ಮಾನ್ಯತೆ ಇದೆ. ಆಸ್ಟ್ರೇಲಿಯ, ಕೆನಡ, ಬ್ರಿಟನ್ ಮತ್ತು ಅಮೆರಿಕದ ಪ್ರಮುಖ ವಿಶ್ವವಿದ್ಯಾಲಯಗಳು ಸೇರಿ ವಿಶ್ವದ 9000ಕ್ಕೂ ಹೆಚ್ಚು ಸಂಸ್ಥೆಗಳು ವಿದ್ಯಾರ್ಥಿಗಳ ಆಯ್ಕೆಗೆ ಮುನ್ನ ಟೊಫೆಲ್ ಪರೀಕ್ಷೆಯ ಅಂಕಗಳನ್ನು ಗಮನಿಸುತ್ತವೆ. ಟೊಫೆಲ್ ಪರೀಕ್ಷೆಗೆ 50ವರ್ಷಗಳ ಇತಿಹಾಸವಿದೆ. 50ನೇ ವರ್ಷಾಚರಣೆಗಾಗಿ ಟೊಫೆಲ್ ಪರೀಕ್ಷೆಯಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ.  ವಿದ್ಯಾರ್ಥಿಯ ಇಂಗ್ಲಿಷ್ ಓದು, ಬರಹ, ಸಂಭಾಷಣೆ ಮತ್ತು ಆಲಿಕೆಯ ಸಾಮರ್ಥ್ಯಕ್ಕೆ ಇದು ಕೈಗನ್ನಡಿ.  ಈ ಕೌಶಲಗಳನ್ನು ಟೊಫೆಲ್ ಪರೀಕ್ಷೆಯ ಮೂಲಕ ನಿಖರವಾಗಿ ಪತ್ತೆಹಚ್ಚಲು ಸಾಧ್ಯ. ಓದು, ಆಲಿಕೆ, ಸಂಭಾಷಣೆ ಮತ್ತು ಬರಹದ ಸಾಮರ್ಥ್ಯವನ್ನು ದೈನಂದ

Students' friendly JOB PORTAL :opens on April 7 (tollfree:1800-123-1008)

Image
ವಿದ್ಯಾರ್ಥಿಸ್ನೇಹಿ ಜಾಬ್‌ ಪೋರ್ಟಲ್‌ ಅನಿತಾ ಈ. Mon, 04/13/2015 - 01:00 ? ಕೆ. ಪ್ರಶಾಂತ್‌ ಸರ್ಕಾರಿ ರಜೆ, ವಾರಾಂತ್ಯ ಹಾಗೂ ಬಿಡುವಿನ ವೇಳೆಯಲ್ಲಿ ಪಾರ್ಟ್‌ ಟೈಮ್‌ ಕೆಲಸ ಮಾಡಲು ಬಯಸುವವರು  ಹಾಗೂ ಈಗಷ್ಟೇ ವಿದ್ಯಾಭ್ಯಾಸ ಮುಗಿಸಿ ಕೆಲಸದ ಅನುಭವಕ್ಕಾಗಿ ಇಂಟರ್ನ್‌ಶಿಪ್‌ ಮಾಡಲು ಕಾಯುತ್ತಿರುವವರಿಗಾಗಿ ಇಲ್ಲಿದೆ ನೂತನ ಜಾಬ್‌ ಪೋರ್ಟಲ್‌. ಇಲ್ಲಿ ಪುರುಷ, ಮಹಿಳೆ ಸೇರಿದಂತೆ ತೃತೀಯ ಲಿಂಗಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಫುಲ್‌ ಟೈಮ್‌ ಕೆಲಸ ಮಾಡುವವರಿಗೆ ಅವಕಾಶ ಕಲ್ಪಿಸಲು ನಾನಾ ರೀತಿಯ ಜಾಬ್‌ ವೆಬ್‌ಸೈಟ್‌ಗಳಿವೆ. ಆದರೆ ಪಾರ್ಟ್‌ ಟೈಮ್‌ ಹಾಗೂ ಇಂಟರ್ನ್‌ಶಿಪ್‌ ಮಾಡಲು ಅವಕಾಶ ಕಲ್ಪಿಸುವ ಯಾವುದೇ ಜಾಬ್‌ ಪೋರ್ಟಲ್‌ಗಳಿಲ್ಲ. ಹೀಗಾಗಿಯೇ ಕಾಲೇಜು ಮುಗಿಸಿದ ವಿದ್ಯಾರ್ಥಿಗಳು ಇಂರ್ಟನ್‌ಶಿಪ್‌ಗಾಗಿ ಹಾಗೂ ಬಿಡುವಿನ ವೇಳೆಯಲ್ಲಿ ಕೆಲಸ ಮಾಡಲು ಬಯಸುವವರು ಅವಕಾಶಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳು ಹಾಗೂ ಪಾರ್ಟ್‌ಟೈಮ್‌ ಕೆಲಸಗಳಿಗೆ ಹುಡುಕಾಟ ನಡೆಸುವವರ ಸಮಸ್ಯೆ ಪರಿಹರಿಸುವ ಸಲುವಾಗಿ 'ವ್ಯಾಲ್ಯೂ ವಿಂಗ್ಸ್‌ ಎಂಟರ್‌ಪ್ರೈಸಸ್‌ ಪ್ರೈ. ಲಿಮಿಟೆಡ್‌' ಈಗ ನೂತನವಾಗಿ  www.1008jobs.com    ಜಾಬ್‌ ಪೋರ್ಟಲ್‌ ಅನ್ನು ಪ್ರಾರಂಭಿಸಲಿದೆ. ವೆಬ್‌ಸೈಟ್‌ನ ಹೆಸರೇ ಹೇಳುವಂತೆ ಸಾವಿರದ ಎಂಟು ವಲಯಗಳಲ್ಲಿ ಪೂರ್ಣಾವಧಿ, ಅಲ್ಪಾವಧಿ ಕೆಲಸಗಳನ್ನು ಮಾಡಲು ಬಯಸುವವರು ಹಾಗೂ ಖಾಸಗಿ ಸಂಸ್ಥೆಗಳಲ್ಲಿ

ಮೆರಿಟ್‌ಗೆ ಪದವಿ ಅಂಕಗಳ ಶೇ 35ರಷ್ಟು ಪರಿಗಣನೆಗೆ ನಿರ್ಧಾರ ಬಿಇಡಿ ಅಭ್ಯರ್ಥಿಗಳ ವಿರೋಧ

Image
ಸೂರ್ಯನಾರಾಯಣ ವಿ. Mon, 04/13/2015 - 01:00 ಬೆಂಗಳೂರು:  ಹಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರ ನೇಮಕಾತಿಯಲ್ಲಿ ಮೆರಿಟ್‌ ಲೆಕ್ಕಹಾಕಲು ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅನುಸರಿ ಸಲಿರುವ ವಿಧಾನದ ಬಗ್ಗೆ ಬಿಇಡಿ ಅಭ್ಯರ್ಥಿಗಳು ವಿರೋಧ ವ್ಯಕ್ತಪಡಿಸಿ ದ್ದಾರೆ. ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲೂ ನಿರ್ಧರಿಸಿದ್ದಾರೆ. ಹಿರಿಯ ಪ್ರಾಥಮಿಕ ಶಾಲೆಯ (6ರಿಂದ 8ನೇ ತರಗತಿವರೆಗೆ) ಶಿಕ್ಷಕರಾಗಲು ಅಭ್ಯರ್ಥಿಗಳು ಪದವಿಯೊಂದಿಗೆ ಬಿಇಡಿ ಮಾಡಿ ನಂತರ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಪಾಸಾಗುವುದು ಕಡ್ಡಾಯ. ಹೀಗಾಗಿ, ಬಿಇಡಿ ಮಾಡಿ ಟಿಇಟಿಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಈ ವರ್ಷ ಹಿರಿಯ ಪ್ರಾಥ ಮಿಕ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸು ತ್ತಿದ್ದಾರೆ. (ಈ ಬಾರಿಯಸ್ಪರ್ಧಾತ್ಮಕ ಪರೀಕ್ಷೆ ಮೇ 23, 24ಕ್ಕೆ ನಡೆಯಲಿದೆ) ನೇಮಕಾತಿಯ ಅಂತಿಮ ಹಂತದಲ್ಲಿ ಮೆರಿಟ್‌ ಆಧಾರದಲ್ಲಿ ಪಟ್ಟಿ ಸಿದ್ಧಪಡಿಸುವಾಗ,  ಪದವಿ ಶಿಕ್ಷಣ, ಬಿಇಡಿ, ಟಿಇಟಿ ಮತ್ತು ಸಿಇಟಿಯಲ್ಲಿ ಅಭ್ಯರ್ಥಿಗಳು ಪಡೆದಿರುವ ಶೇಕಡಾವಾರು ಅಂಕಗಳನ್ನು ಇಲಾಖೆ ಪರಿಗಣಿಸಲಿದೆ. ಅಭ್ಯರ್ಥಿಯು ಪದವಿ ಶಿಕ್ಷಣದಲ್ಲಿ ಪಡೆದಿರುವ ಒಟ್ಟು ಅಂಕಗಳಲ್ಲಿ ಶೇ 35ರಷ್ಟು, ಬಿಇಡಿ ಅಂಕಗಳ ಶೇ 15, ಟಿಇಟಿಯ ಶೇ 15 ಮತ್ತು ಸಿಇಟಿಯ ಒಟ್ಟು ಅಂಕಗಳಲ್ಲಿ ಶೇ 35ರಷ್ಟು ಅಂಕಗಳನ್ನು ಗಣನೆಗೆ ತೆಗೆದುಕೊಂಡು ಅವುಗಳ ಸರಾಸರಿ ಆಧಾರದಲ್ಲಿ ಇಲಾಖೆ ಮೆರಿಟ್‌ ಪಟ್ಟಿ ಸಿದ್ಧಪಡಿಸ