Posts

KPTCL Recruitment 2015 - Apply Online for 912 AE, JE & Accounts Officer Posts :

Image

TRANSFER GUIDELINES 2015-16 PUBLISHED (udayavani paper)

Image
​ಇಂದಿನಿಂದ ಸರ್ಕಾರಿ ನೌಕರರ ವರ್ಗಾವಣೆ ಭರಾಟೆ: ಮಾರ್ಗಸೂಚಿ ಪ್ರಕಟ ಉದಯವಾಣಿ, Apr 22, 2015, 3:40 AM IST ಬೆಂಗಳೂರು:  ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿ ಸೋಮವಾರ ಪ್ರಕಟವಾಗಿದ್ದು, ಮೇ 2ರೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಹೀಗಾಗಿ ಬುಧವಾರದಿಂದ ವರ್ಗಾವಣೆ ಭರಾಟೆ ಆರಂಭವಾಗಲಿದೆ. ಪೊಲೀಸ್‌, ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಹೊರತುಪಡಿಸಿ ಇತರೆಲ್ಲಾ ಇಲಾಖೆಗಳ ಸರ್ಕಾರಿ ನೌಕರರ ವರ್ಗಾವಣೆ ಈ ಮಾರ್ಗಸೂಚಿಯಂತೆ ನಡೆಯಲಿದೆ. 2013 ಮತ್ತು 2014ರಲ್ಲಿ ಹೊರಡಿಸಿದ್ದ ಮಾರ್ಗಸೂಚಿಯನ್ವಯ ಸರ್ಕಾರಿ ನೌಕರರ ವರ್ಗಾವಣೆ ಮಾಡುವಂತೆ ಸೂಚನೆ ನೀಡಲಾಗಿದೆ. ವರ್ಗಾವಣೆಯಾಗುವ ನೌಕರರು ಒಂದು ಹುದ್ದೆಯಲ್ಲಿ ಇರಬೇಕಾದ ಕನಿಷ್ಠ ಸೇವಾವಧಿಯನ್ನು 2014ರ ಮಾರ್ಗಸೂಚಿಯನ್ವಯವೇ ನಿಗದಿಪಡಿಸಲಾಗಿದೆ. ಆದರೆ, ಈ ಬಾರಿಯೂ ಎಷ್ಟು ಪ್ರಮಾಣದಲ್ಲಿ ನೌಕರರ ವರ್ಗಾವಣೆ ಮಾಡಬೇಕು ಎಂಬುದನ್ನು ಮಾರ್ಗಸೂಚಿಯಲ್ಲಿ ತಿಳಿಸಿಲ್ಲ. ಹೋದ ವರ್ಷದ ಮಾನದಂಡ: ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿಯವರು ಸೋಮವಾರ ವರ್ಗಾವಣೆ ಮಾರ್ಗಸೂಚಿ ಪ್ರಕಟಿಸಿದ್ದು, 2013 ಮತ್ತು 2014ರಲ್ಲಿ ವರ್ಗಾವಣೆ ಮಾರ್ಗಸೂಚಿಯಲ್ಲಿರುವ ಷರತ್ತುಗಳನ್ವಯ ಸರ್ಕಾರಿ ನೌಕರರ ವರ್ಗಾವಣೆಯನ್ನು ಮೇ 2ರೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದಾರೆ

NATIONAL AWARD TO SHEEGEEHALLI GRAM PANCHAYAT

Image
ಶೀಗೇಹಳ್ಳಿ ಗ್ರಾಮ ಪಂಚಾಯಿತಿಗೆ ರಾಷ್ಟ್ರ ಪ್ರಶಸ್ತಿ ಮಹದೇವಪುರ, ಏ.21- ಕ್ಷೇತ್ರದ ಶೀಗೇಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಸರ್ಕಾರ ವಿತರಿಸುವ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರಕ್ಕೆ ಪ್ರಸಕ್ತ ಸಾಲಿನಲ್ಲಿ ಆಯ್ಕೆಯಾಗುವ ಮೂಲಕ ಇತರೆ ಗ್ರಾಪಂಗಳಿಗೆ ಮಾದರಿಯಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ನೀಡಿರುವ ಅನುದಾನವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಮೂಲಕ ಶೀಗೇಹಳ್ಳಿ ಗ್ರಾಮ ಪಂಚಾಯಿತಿ ಇತರೆ ಪಂಚಾಯಿತಿಗಳಿಗೆ ಮಾದರಿ ಯನ್ನಾಗಿ ಮಾಡಿದ್ದಾರೆ ಇಲ್ಲಿನ ಗ್ರಾಪಂ ಅಧ್ಯಕ್ಷ ವೆಂಕಟೇಶ್(ಮಧು).  ನೈರ್ಮಲ್ಯ, ಮಹಿಳಾ ಸಬಲೀ ಕರಣ ಸೇರಿದಂತೆ ಗ್ರಾಮದಲ್ಲಿ ಹಮ್ಮಿಕೊಂಡಿರುವ ಉತ್ತಮ ಕೆಲಸಗಳನ್ನು ಗುರುತಿಸಿ ಇತ್ತೀಚೆಗೆ ಕೇಂದ್ರದ ತಂಡ ಶೀಗೇಹಳ್ಳಿ ಗ್ರಾಪಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದೇ 24ರಂದು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಪಂಚಾಯ್ತಿ ಅಧ್ಯಕ್ಷ ವೆಂಕಟೇಶ್ ಮತ್ತು ಪಿಡಿಒ ಅಂಬರೀಶ್ ಅವರು  ಪುರಸ್ಕಾರ ಸ್ವೀಕರಿಸಲಿದ್ದಾರೆ. ಅಂತರ್ಜಲ ಕಾಪಾಡಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಪಕ್ಕದ ಹೊಸಕೋಟೆ ಕೆರೆಗೆ ಹಾದುಹೋಗುವ ನೀರನ್ನು ಇಲ್ಲಿ ಶೇಖರಿಸಿರುವುದರಿಂದ ಅಂತರ್ಜಲ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯವಾಗಿದೆ.   ಗ್ರಾಪಂ ವ್ಯಾಪ್ತಿಯ ದೊಮ್ಮಸಂದ್ರದಲ್ಲಿ 100 ಮನೆಗಳಿದ್ದು, 50ಕ್ಕೂ ಹೆಚ್ಚು ಮನೆಗಳಿಗೆ ಕೇಂದ್ರ ಸರ್ಕಾರದ ಶೇ.22 ರಷ್ಟು ಯೋಜನೆಯಲ್

New Record of JAPAN BULLET TRAIN:-

Image
ಹೊಸ ದಾಖಲೆ ಬರೆದ ಜಪಾನ್ 'ಬುಲೆಟ್ ಟ್ರೈನ್' ಟೋಕಿಯೊ: ವಿಶ್ವದ ಅತ್ಯಂತ ವೇಗದ ಬುಲೆಟ್ ರೈಲನ್ನು ಇಂದು ಜಪಾನ್​ನಲ್ಲಿ ಮಂಗಳವಾರ ಪರೀಕ್ಷೆಗೆ ಒಳಪಡಿಸಲಾಗಿದ್ದು, ರೈಲು 600 ಕಿ.ಮೀ. (373 ಮೈಲು) ಪ್ರತಿ ಗಂಟೆ ವೇಗದಲ್ಲಿ ಸಂಚರಿಸಿ ದಾಖಲೆ ನಿರ್ಮಿಸಿದೆ. ಮ್ಯಾಗ್ಲೆವ್ ರೈಲು (ಅಯಸ್ಕಾಂತ ಬಲದಿಂದ ಸಂಚರಿಸುವ ರೈಲು) ಪರೀಕ್ಷಾರ್ಥ ಸಂಚಾರದಲ್ಲಿ ಗರಿಷ್ಠ 603 ಕಿ.ಮೀ. ಪ್ರತಿ ಗಂಟೆ ವೇಗದಲ್ಲಿ ಸಂಚರಿಸಿತ್ತು ಮತ್ತು ಸುಮಾರು 11 ಸೆಕೆಂಡುಗಳ ಕಾಲ 600 ಕಿ.ಮೀ. ಪ್ರತಿ ಗಂಟೆ ವೇಗದಲ್ಲಿ ಸಂಚರಿಸುವ ಮೂಲಕ ನೂತನ ದಾಖಲೆ ಬರೆದಿದೆ ಎಂದು ಜಪಾನ್ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ರೈಲು ಒಂದು ವಾರದ ಹಿಂದೆ 590 ಕಿ.ಮೀ. ವೇಗದಲ್ಲಿ ಸಂಚರಿಸಿತ್ತು, ಈ ಮೂಲಕ 2003ರಲ್ಲಿ ನಿರ್ಮಿಸಿದ್ದ 581 ಕಿ.ಮೀ. ವೇಗದ ದಾಖಲೆಯನ್ನು ಅಳಿಸಿಹಾಕಿತ್ತು. ಮ್ಯಾಗ್ಲೆವ್ ರೈಲು ಹಳಿಯಿಂದ ಸುಮಾರು 4 ಇಂಚು ಎತ್ತರದಲ್ಲಿ ತೇಲುತ್ತಾ ಸಂಚರಿಸುತ್ತದೆ. ರೈಲಿಗೆ ವಿದ್ಯುತ್​ಚ್ಛಕ್ತಿ ಆಧರಿತ ಅಯಸ್ಕಾಂತಗಳು ಚಲನ ಶಕ್ತಿ ನೀಡುತ್ತವೆ. ಕಂಪನಿಯು 2027ರ ವೇಳೆಗೆ ಟೋಕಿಯೋ ಮತ್ತು ನಗೋಯ ನಗರಗಳ ನಡುವಿನ 286 ಕಿ.ಮೀ. ದೂರದ ಹಳಿ ನಿರ್ಮಿಸಿ ರೈಲು ಸಂಚಾರ ಆರಂಭಿಸುವ ಯೋಜನೆ ಹೊಂದಿದೆ. ಜತೆಗೆ ತಂತ್ರಜ್ಞಾನವನ್ನು ಹೊರದೇಶಗಳಿಗೆ ಮಾರಾಟ ಮಾಡಲೂ ಸಹ ಕಂಪನಿ ಚಿಂತಿಸುತ್ತಿದೆ.

2015-16ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆಯ ಮಾರ್ಗಸೂಚಿಯ ಆದೇಶ.

Image
2015-16ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆಯ ಮಾರ್ಗಸೂಚಿಯ ಆದೇಶ.

SRI BASAVESHWAR:

★~~~ ಬಸವೇಶ್ವರ ~~~★         ಶ್ರೀ ಬಸವೇಶ್ವರ ಲಿಂಗಾಯತ ಧರ್ಮದ ಸ್ಥಾಪಕರು. ಬಸವಣ್ಣನವರು ೧೨ ನೆಯ ಶತಮಾನದ ಭಕ್ತಿ ಪಂಥದ ಪ್ರಮುಖರಲ್ಲಿ ಒಬ್ಬರು. ಬಸವಣ್ಣನವರು ಮತ್ತು ಶಿವಶರಣರಾದ ಅಲ್ಲಮಪ್ರಭು, ಅಕ್ಕಮಹಾದೇವಿ, ಚೆನ್ನಬಸವಣ್ಣ ಮೊದಲಾದ ನೂರಾರು ಶರಣರು ವಚನಗಳ ಮೂಲಕ ಭಕ್ತಿಪಥ ಮತ್ತು ಜೀವನದ ಬಗ್ಗೆ ಹೊಸ ದೃಷ್ಟಿ ಬೀರಿದರು. ಬಸವಣ್ಣನವರು೧೧೩೧ ರಲ್ಲಿ ಈಗಿನ ಬಿಜಾಪುರ ಜಿಲ್ಲೆಯಲ್ಲಿರುವ ಬಾಗೇವಾಡಿ ಗ್ರಾಮದಲ್ಲಿ, ಶ್ರೀ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳಿಗೆ ಜನಿಸಿದರು.ಬಸವಣ್ಣನವರ ಹುಟ್ಟು ಹಾಗೂ ಬಾಲ್ಯದ ಕುರಿತು ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ.ಬಸವಣ್ಣ ಚಿಕ್ಕಂದಿನಿಂದಲೂ ವೈದಿಕ ಸಂಸ್ಕೃತಿಯ ಕರ್ಮಾಚರಣೆರಳ ವಿರೋಧಿಯಾಗಿದ್ದರು. ಅಕ್ಕ ನಾಗಮ್ಮ ಮತ್ತು ಭಾವ ಶಿವಸ್ವಾಮಿಯ ಜೊತೆಯಲ್ಲಿ ಬಾಲ್ಯವನ್ನು ಕಳೆದ ಅವರು ವಿದ್ಯಾಭ್ಯಾಸಕ್ಕಾಗಿ ಕೂಡಲ ಸಂಗಮಕ್ಕೆ ಬಂದರು.ಬಸವೇಶ್ವರರು ಹನ್ನೆರಡು ವರ್ಷಗಳ ಕಾಲ ಕೂಡಲ ಸಂಗಮದಲ್ಲಿ ಅಧ್ಯಯನ ಮಾಡುತ್ತಾ ಕಳೆದರು.ಅವರ ದೃಷ್ಟಿಯಲ್ಲಿ ದೇವನು ಒಬ್ಬ ಮತ್ತು ಅವನು ಮಾನವಲ್ಲಿದ್ದಾನೆ ಹೊರತು ಗುಡಿ-ಗುಂಡಾರಗಳಲ್ಲಿ ಅಲ್ಲ. ಕೆಲಸ ಮಾಡಿ ಜೀವನ ನೆಡೆಸಬೇಕು, ಆಲಸಿ ಜೀವನ ಸಲ್ಲ. ಸುಳ್ಳು ಹೇಳುವುದು, ವಂಚಿಸುವುದು, ಕೊಲೆ-ಸುಲಿಗೆ ಮಾಡುವುದು,ಪ್ರಾಣಿಬಲಿ ನೀಡುವುದು,ಪರಧನ ಹರಣ, ಪರಸ್ತ್ರೀ ವ್ಯಾಮೋಹ ಹೊಂದುವುದು ಘೋರ ಅಪರಾಧ. ಕೆಲಸದಲ್ಲಿ ಮೇಲು ಅಥವಾ ಕೀಳು ಎಂಬುದಿಲ್ಲ. ಪುರುಷನಂತೆ ಮಹಿಳೆಗೂ ವಿದ್ಯಾಭ್ಯಾಸದ ಮ

No P.E.Teachers in 47,000 Govt Primary Schools in Karnataka.

Image
 47 ಸಾವಿರ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಕರಿಲ್ಲ..! - ಎ. ಅಪ್ಪಾಜಿಗೌಡ ಮುಳಬಾಗಿಲು: ವಿದ್ಯಾರ್ಥಿಗಳ ಶಾರೀರಿಕ, ಬೌದ್ಧಿಕ, ಸಾಮಾಜಿಕ, ನೈತಿಕ ವಿಕಸನ ಹಾಗೂ ಸರ್ವತೋಮá-ಖ ಅಭಿವೃದ್ಧಿಹಿನ್ನೆಲೆಯಲ್ಲಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ರಾಜ್ಯಾದ್ಯಂತ ದೈಹಿಕ ಶಿಕ್ಷಣಪಠ್ಯಪುಸ್ತಕಗಳನ್ನು ಪೂರೈಸಿರುವ ಸರ್ಕಾರ, ಸುಮಾರು 47 ಸಾವಿರ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಲು ಮೀನಮೇಷ ಎಣಿಸುತ್ತಿದೆ. ರಾಜ್ಯ ಹಾಗೂ ರಾಷ್ಟ್ರೀಯ ಪಠ್ಯ ಚೌಕಟ್ಟಿನಲ್ಲಿ ದೈಹಿಕ ಶಿಕ್ಷಣ ಜಾರಿಗೆ ಸಂಬಂಧ ಹಲವು ಸಮಿತಿಗಳು ವರದಿ ಸಲ್ಲಿಸಿದ್ದವು. 2001-02ರಲ್ಲಿ ಕೆ.ಪಿ.ಸಿಂಗ್ ದೇವ್ ಸಮಿತಿ ಹೊಸ ರಾಷ್ಟ್ರೀಯ ನೀತಿ ಅನುಷ್ಠಾನಕ್ಕೆ ಶಿಫಾರಸು ಮಾಡಿತ್ತು. 2003-04ರಲ್ಲಿ ದೈಹಿಕ ಶಿಕ್ಷಣವನ್ನು ಎಲ್ಲ ಶಾಲೆಗಳಲ್ಲಿ ಕಡ್ಡಾಯ ವಿಷಯವನ್ನಾಗಿ ಪರಿಗಣಿಸಲಾಗಿತ್ತು. 2004-05ರಲ್ಲಿ ರಾಜ್ಯ ಸರ್ಕಾರ ತ್ರೖೆಮಾಸಿಕ ಶಿಕ್ಷಣ ಪದ್ಧತಿ ಜಾರಿಗೆ ತಂದು ದೈಹಿಕ ಶಿಕ್ಷಣವನ್ನು ಸಹಪಠ್ಯದಲ್ಲಿ ಸೇರಿಸಿ ಜೀವನ ವಿಜ್ಞಾನದ ಒಂದು ಅವಿಭಾಜ್ಯ ಅಂಗವಾಗಿ ಪರಿಗಣಿಸಿ ಯೋಗ ಶಿಕ್ಷಣಕ್ಕೆ ಮಹತ್ವ ನೀಡಿತ್ತು. 2005ರಲ್ಲಿ ರಾಷ್ಟ್ರೀಯ ಪಠ್ಯ ಚೌಕಟ್ಟು ಹಾಗೂ ಪ್ರೊ.ಎಲ್.ಆರ್.ವೈದ್ಯನಾಥನ್ ವರದಿ ಆಧರಿಸಿ ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಇಲಾಖೆ ರಚಿಸಿರುವ ಪಠ್ಯಪುಸ್