Posts

w.e.f. May 1, BSNL(Landline ) OFFER FREE TALKTIME to any phone/mobile(9pm to 7am)

Image
ಬಿಎಸ್ಸೆನ್ನೆಲ್‌ನಿಂದ ಫ್ರೀ ಟಾಕ್‌ಟೈಮ್: ಮೇ 1ರಿಂದ ಜಾರಿ ಏಜೆನ್ಸೀಸ್ | Apr 23, 2015, 03.45PM IST ಲೇಖನ ಅನಿಸಿಕೆಗಳು (2) 2 ಸ್ಥಿರ ದೂರವಾಣಿಯ ಕರೆ ರಾತ್ರಿ ಉಚಿತ/ ದೇಶಾದ್ಯಂತ ಮೇ 1ರಿಂದ ಜಾರಿ ಮುಖ್ಯಾಂಶಗಳು * ಬಿಸ್ಸೆನ್ನೆಲ್ ಸ್ಥಿರ ದೂರವಾಣಿ ಗ್ರಾಹಕರಿಗೆ ಬಂಪರ್ ಕೊಡುಗೆ * ಮೇ 1ರಿಂದ ರಾತ್ರಿ 9ರಿಂದ ಬೆಳಗ್ಗೆ 7 ಗಂಟೆ ತನಕ ಮಾತಿಗೆ ದುಡ್ಡಿಲ್ಲ * ಯಾವುದೇ ಸ್ಥಿರ ದೂರವಾಣಿ, ಮೊಬೈಲ್‌ಗೆ ಉಚಿತ ಕರೆ * ಬ್ರಾಡ್‌ಬಾಂಡ್ ಜತೆಗಿನ ಸ್ಥಿರ ದೂರವಾಣಿಗೂ ಅನ್ವಯ ಹೊಸದಿಲ್ಲಿ:  ನಾನಾ ಬಗೆಯ ಮೊಬೈಲ್, ಸ್ಮಾರ್ಟ್‌ಫೋನ್ ಜಮಾನ ಬಂದ ಮೇಲೆ ಜನರು ಗುಡ್‌ಬೈ ಹೇಳಿದ್ದ ಸ್ಥಿರ ದೂರವಾಣಿ ಮತ್ತೆ ಮನೆಯನ್ನು ಅಲಂಕರಿಸುವ ಕಾಲ ಬಂದಿದೆ! ಸಾರ್ವಜನಿಕ ವಲಯದ ಬಿಎಸ್ಸೆನ್ನೆಲ್ ತನ್ನ ಗ್ರಾಹಕರಿಗೆ ಉಚಿತ ಕರೆಯ ಬಂಪರ್ ಕೊಡುಗೆ ನೀಡಿದೆ. ಬಿಎಸ್ಸೆನ್ನೆಲ್ ಸ್ಥಿರ ದೂರವಾಣಿ ಗ್ರಾಹಕರು ಮೇ 1ರಿಂದ ರಾತ್ರಿ ಒಂಬತ್ತರಿಂದ ಬೆಳಗ್ಗೆ 7 ಗಂಟೆವರೆಗೆ ಅನಿಯಮಿತ ಉಚಿತ ಕರೆ ಮಾಡಬಹುದು. ಕರೆ ಸ್ವೀಕರಿಸುವಾತ ಯಾವ ಕಂಪನಿಯ ಯಾವ ಪೋನ್ ಬಳಸುತ್ತಿದ್ದಾನೆ ಎಂಬ ತಲೆಬಿಸಿಯಿಲ್ಲದೇ ಬಾಯಿತುಂಬಾ ಹರಟಬಹುದು. ಅಂದರೆ, ಬಿಎಸ್ಸೆನ್ನೆಲ್ ಸ್ಥಿರ ದೂರವಾಣಿಯಿಂದ ರಾತ್ರಿ ಒಂಬತ್ತರಿಂದ ಬೆಳಗ್ಗೆ 7 ಗಂಟೆ ಅವಧಿಯಲ್ಲಿ ಬಿಎಸ್ಸೆನ್ನೆಲ್ ಅಲ್ಲದೇ, ಇತರ ಯಾವುದೇ ಕಂಪನಿಯ ಸ್ಥಿರ ಅಥವಾ ಮೊಬೈಲ್ ದೂರವಾಣಿಗಳಿಗೆ ಮಾಡುವ ಕರೆ ಸಂಪೂರ್ಣ ಉಚಿತವಾಗಿ

KEY ANSWERS OF GAZETTED PROBATIONS' 2014 (Exam held on 19/4/2015)PRELIMS GENERAL STUDIES PAPER-I

Image
SmB

Pulitzer Award to Palani Kumanan (T.N)

ಕೊಯಮತ್ತೂರಿನ ಸಾಫ್ಟ್‌ವೇರ್‌ ಎಂಜಿನಿಯರ್‌ಗೆ 'ಪುಲಿಟ್ಜರ್‌' Thu, 04/23/2015 - 01:00 ನ್ಯೂಯಾರ್ಕ್‌ (ಐಎಎನ್ಎಸ್):   ವರದಿ­ಗಾರಿಕೆ ಹಾಗೂ ಅದನ್ನು ಪ್ರಸ್ತುತ­­ಪಡಿಸಲು ಮಾಹಿತಿ ತಂತ್ರ­ಜ್ಞಾನದ ಬಳಕೆಯ ಹೆಚ್ಚಳದ ಬಗ್ಗೆ ತನಿಖಾ ವರದಿ  ಮಾಡಿರುವ ತಮಿಳು­­ನಾಡು ರಾಜ್ಯದ ಕೊಯಮ­ತ್ತೂರಿನ ಸಾಫ್ಟ್‌ವೇರ್‌ ಎಂಜಿನಿಯರ್‌ ಪಳನಿ ಕುಮಾನನ್‌ ಅವರಿಗೆ 'ದಿ ವಾಲ್‌ ಸ್ಟ್ರೀಟ್‌ ಜರ್ನಲ್‌'ನ ಪ್ರತಿಷ್ಠಿತ 'ಪುಲಿಟ್ಜರ್‌' ಪ್ರಶಸ್ತಿ ಸಂದಿದೆ. ಸಾಫ್ಟ್‌ವೇರ್‌ ವಾಸ್ತುಶಾಸ್ತ್ರ ಮತ್ತು ತಾಂತ್ರಿಕ ಮುಖ್ಯಸ್ಥರಾಗಿರುವ ಕುಮಾನನ್‌,  'ಡೋವ್‌ ಜೋನ್ಸ್‌' ಜರ್ನಲ್‌ನ ಪ್ರಶಸ್ತಿ ಪುರಸ್ಕೃತ ವರದಿ 'ಮೆಡಿಕೇರ್‌ ಅನ್‌ಮಾಸ್ಕ್‌ಡ್‌'ಗೆ ಗ್ರಾಫಿಕ್ಸ್‌ ತಂಡದ ಸದಸ್ಯರಾಗಿ ದುಡಿದಿದ್ದರು ಎಂದು ಜರ್ನಲ್‌ನ ತನಿಖಾ ಸಂಪಾದಕ ಮಿಖಾಯಿಲ್‌ ಸಿಕೋನೊಲ್ಫಿ  ಹೇಳಿದ್ದಾರೆ. ಕೊಯಮತ್ತೂರಿನ ಪಿಎಸ್ಜಿ ತಾಂತ್ರಿಕ ಕಾಲೇಜಿನಲ್ಲಿ ಕುಮಾನನ್‌ ಪದವಿ ಪಡೆದಿದ್ದಾರೆ. ವೈದ್ಯರು, ಆಸ್ಪತ್ರೆಗಳು ಸೇರಿದಂತೆ ಸುಮಾರು 8.80 ಲಕ್ಷ ವೈದ್ಯಕೀಯ ಸೇವಾದಾರರ ಮೇಲೆ ಸರ್ಕಾರಿ ಪಾವತಿ ವಿಶ್ಲೇಷಣೆಗೆ ಬಳಸುವ ಆರೋಗ್ಯ ಸುರಕ್ಷಾ ಬಿಲ್ಲಿಂಗ್‌ನಲ್ಲಿ ಸಂವಹನ ದತ್ತಾಂಶವನ್ನು ಕುಮಾನನ್ ತಂಡ ಅಭಿವೃದ್ಧಿಪಡಿಸಿದೆ.

KEA's CET 2015 POSTPHONED to MAY 12 & 13

ಸಿ ಇಟಿ ಮುಂದೂಡಿಕೆ: ಮೇ 12, 13ಕ್ಕೆ ಪರೀಕ್ಷೆ ಗುರುವಾರ - ಏಪ್ರಿಲ್ -23-2015 ಬೆಂಗಳೂರು, ಎ.22: ವಿವಿಧ ಕಾರ್ಮಿಕ ಸಂಘಟನೆಗಳು ದಿನಾಂಕ 30.04.2015ರಂದು ಒಂದು ದಿನದ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ-2015 ಪ್ರವೇಶ ಪರೀಕ್ಷೆಯನ್ನು ಮುಂದೂಡಿದೆ. ಆದ್ದರಿಂದ, ಎಪ್ರಿಲ್ 29, 30 ಹಾಗೂ ಮೇ 1ರಂದು ನಡೆಯಬೇಕಾಗಿದ್ದ ಸಿಇಟಿ ಪರೀಕ್ಷೆಗಳನ್ನು ಮೇ 12 ಮತ್ತು 13ಕ್ಕೆ ಮುಂದೂಡಲಾಗಿದೆ.  ಪರೀಕ್ಷಾ ವೇಳಾಪಟ್ಟಿಯ ವಿವರಗಳನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು. ಹೆಚ್ಚಿನ ವಿವರಗಳಿಗೆ ಪ್ರಾಧಿಕಾರದ ವೆಬ್‌ಸೈಟ್: ಠಿಠಿ://ಛಿ.ಚ್ಟ.್ಞಜ್ಚಿ.ಜ್ಞಿಗೆ ಭೇಟಿ ನೀಡಿ. ಟ್ರೇಡ್ ಯೂನಿಯನ್ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿನ ಕಾರ್ಮಿಕ ಸಂಘಗಳ ಒಕ್ಕೂಟ ಮತ್ತು ಸೆಂಟ್ರಲ್ ಟ್ರೇಡ್ ಯೂನಿಯನ್ನುಗಳು ಎ.30ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅಡಚಣೆಯಾಗುವ ಸಂಭವವಿರುವ ಕಾರಣ ಸರಕಾರವು ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟು ಆದೇಶ ನೀಡಿದ ಹಿನ್ನೆಲೆಯಲ್ಲಿ ಸಿಇಟಿ-2015 ಪ್ರವೇಶ ಪರೀಕ್ಷೆಯನ್ನು ಮುಂದೂಡಿದೆ.

All India Radio goes online...

Image
ಆನ್ ಲೈನ್ ನಲ್ಲಿ "ಆಲ್ ಇಂಡಿಯಾ ರೆಡಿಯೋ' Published: 22 Apr 2015 04:45 PM IST ಸಾಂದರ್ಭಿಕ ಚಿತ್ರ ನವದೆಹಲಿ:  ಆಲ್ ಇಂಡಿಯಾ ರೇಡಿಯೋ ಅಂತರ್ಜಾಲ ಕ್ಷೇತ್ರಕ್ಕೆ ಕಾಲಿರಿಸಿದೆ, ಈಗ 4 ಪ್ರಾದೇಶಿಕ ಚಾನಲ್‌ಗಳನ್ನು ವೆಬ್‌ಸೈಟ್ ಮೂಲಕ ಪ್ರಸಾರ ಮಾಡುವ ಹೊಸ ಪ್ರಯತ್ನಕ್ಕೆ ಆಲ್ ಇಂಡಿಯಾ ರೇಡಿಯೋ ಮುಂದಾಗಿದೆ. ಈಗಾಗಲೇ ಆಲ್ ಇಂಡಿಯಾ ರೇಡಿಯೋದ ವೆಬ್‌ಸೈಟ್‌ನಲ್ಲಿ ‌ದೆಹಲಿಯ ಎಫ್ ಎಂ ಗೋಲ್ಡ್, ಎಫ್ ಎಂ ರೈಂಬೋ ಮತ್ತು ಎಫ್ ಎಂ ಉರ್ದು ಚಾನಲ್‌ಗಳು ಹಾಗೂ ಮುಂಬೈನ ವಿವಿಧ ಭಾರತಿ ಚಾನೆಲ್‌ನಲ್ಲಿ ಲಭ್ಯವಿದೆ. ಕೇಳುಗರು ವೆಬ್‌ಸೈಟ್‌ನಲ್ಲಿ ಚಾನಲ್ ಕೇಳಬಹುದಾಗಿದೆ. ಆಲ್ ಇಂಡಿಯಾ ರೇಡಿಯೋ ಮತ್ತಷ್ಟು ಚಾನಲ್‌ಗಳನ್ನು ಸೇರ್ಪಡೆ ಮಾಡಲು ನಿರ್ಧರಿಸಿದ್ದು, ಪ್ರಾರಂಭಿಕ ಹಂತದಲ್ಲಿ ಗುಜರಾತಿ, ಮರಾಠಿ, ಪಂಜಾಬಿ ಮತ್ತು ಮಲಯಾಳಿ ಪ್ರಾದೇಶಿಕ ಚಾನಲ್‌ಗಳನ್ನು ಅಂತರ್ಜಲಕ್ಕೆ ಸೇರ್ಪಡೆ ಮಾಡಿದೆ. ಕೇಳುಗರು www.allindiaradio.gov.in ನಲ್ಲಿ ರೇಡಿಯೋ ಕೇಳಬಹುದು. ಮುಂದಿನ ದಿನಗಳಲ್ಲಿ ಎಲ್ಲಾ ಪ್ರಾದೇಶಿಕ ಚಾನಲ್‌‌ಗಳನ್ನೂ ಅಂತರ್ಜಾಲಕ್ಕೆ ಸೇರ್ಪಡೆ ಮಾಡುತ್ತಿದೆ. ಇದರಿಂದ ಪ್ರಪಂಚದ ಯಾವುದೇ ಮೂಲೆಯಲ್ಲಿ ಪ್ರಾದೇಶಿಕ ಚಾನಲ್‌ಗಳನ್ನು ಕೇಳಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

"KALASHREE AWARD" to JAYAPRADA

Image
ಜಯಪ್ರದಾಗೆ ಕಲಾಶ್ರೀ ಪ್ರಶಸ್ತಿ ಗೌರವ Published: 22 Apr 2015 01:17 PM IST | Updated: 22 Apr 2015 06:39 PM IST ಜಯಪ್ರದಾ ಮುಂಬೈ : ನಟನೆ ಹಿಂದಕ್ಕೆ ಸರಿಸಿ ರಾಜಕಾರಿಣಿಯಾದ ಜಯಪ್ರದಾ ಅವರು ಕಲೆ ಮತ್ತು ಮನರಂಜನಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಪರಿಗಣಿಸಿ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರ ಫೌಂಡೇಶನ್ ಮಂಗಳವಾರ ಕಲಾಶ್ರೀ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದೆ. ಈ ಗೌರವದಿಂದ ಸಂತಸಗೊಂಡಿರುವ ೫೩ ವರ್ಷದ ಜಯಪ್ರದ "ಇಂತಹ ಪ್ರತಿಷ್ಟಿತ ಗೌರವನ್ನು ಅತಿ ವಿನಯದಿಂದ ಸ್ವೀಕರಿಸುತ್ತೇನೆ. ಅದಕ್ಕಾಗಿ ಫೌಂಡೇಶನ್ ಮತ್ತು ನನ್ನ ಹಿತೈಶಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಮನರಂಜನಾ ಕ್ಷೇತ್ರಕ್ಕೆ ಹೀಗೆಯೇ ನನ್ನ ಸೇವೆಯನ್ನು ಮುಂದುವರೆಸುತ್ತೇನೆ" ಎಂದು ಜಯಪ್ರದಾ ತಿಳಿಸಿದ್ದಾರೆ. ಜಯಪ್ರದಾ ತನ್ನ ಸರಳ ನೋಟ ಮತ್ತು ಸಮರ್ಥ ನಟನೆಯಿಂದ ಸಿನೆಮಾರಂಗದಲ್ಲಿ ಹಲವು ವರ್ಷಗಳ ಮಿಂಚಿದ್ದರು. 'ತ್ಹೊಫಾ', 'ಔಲಾದ್', 'ಸರ್ಗಮ್' ಮತ್ತು 'ಶರಾಭಿ' ಜಯಪ್ರದಾ ಅವರಿಗೆ ಮನ್ನಣೆ ತಂದುಕೊಟ್ಟ ಹಿಂದಿ ಚಿತ್ರಗಳು. ೨೦೦ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ಈ ನಟಿ ಹಿಂದಿ ಅಲ್ಲದೆ, ತಮಿಳು, ಮಲಯಾಳಮ್, ತೆಲುಗು, ಕನ್ನಡ ಸಿನೆಮಾಗಳಲ್ಲು ನಟಿಸಿದ್ದಾರೆ. ಧೀಮಂತ ನಟರಾದ ಕಮಲ ಹಾಸ್ಸನ್, ರಜನಿಕಾಂತ್, ಅಮಿತಾಬ್ ಬಚ್ಚನ್ ಮತ್ತು ಜಿತೇಂದ್ರ ಜೊತೆಗಿದ್ದ ಸಿನೆಮಾ ಕೆಮಿಸ್ಟ್ರಿಗೆ ಜಯಪ್ರ

👆BRP ಮತ್ತು CRP ಗಳ ಪರೀಕ್ಷೆ ದಿನಾಂಕ ಮುಂದೂಡಿದ ತಿದ್ದುಪಡಿ ಆದೇಶ. (26/04/15ರ ಬದಲು03/05/15)

Image
👆BRP ಮತ್ತು CRP ಗಳ ಪರೀಕ್ಷೆ ದಿನಾಂಕ ಮುಂದೂಡಿದ ತಿದ್ದುಪಡಿ ಆದೇಶ. (26/04/15ರ ಬದಲು03/05/15)