Posts

ಕ.ವಿ.ನಿ.ನಿ. ಸಹಾಯಕ(ಆಡಳಿತ/ಲೆಕ್ಕ)ಹುದ್ದೆಗಳ ನೇಮಕಾತಿ:-ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಣೆ 16/1/17

Image

ಕಲಿಕೆಗೇನು ಬೇಕು:ಹೈಟೆಕ್ ಶಾಲೆಗಳೋ,ಏಕಾಗ್ರತೆಯೋ?--

Image
ಡಾ ll ಎ ಪಿ ಅವಲಮೂರ್ತಿ

ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಗಣಿತ ಸಪ್ತಾಹವನ್ನು ಆಚರಿಸುವ ಬಗ್ಗೆ

http://schooleducation.kar.nic.in/Secpdfs/circulars/MathsWeek171216.pdf

ಯಕೃತ್ ಆರೋಗ್ಯ ಸುಧಾರಣೆಗೆ ಒಣ ದ್ರಾಕ್ಷಿ ನೆನೆಸಿದ ನೀರು ಸೇವಿಸಿ.

Image
ಪ್ರಕೃತಿ ದತ್ತವಾಗಿ ದೊರೆಯುವ ಯಾವುದೇ ಹಣ್ಣು- ಹಂಪಲುಗಳನ್ನು ತಿಂದರೂ ನಮ್ಮ ಆರೋಗ್ಯವನ್ನು ಸುಧಾರಿಸುತ್ತವೆ ಎಂಬ ಮಾತನ್ನು ವೈದ್ಯಲೋಕದಲ್ಲಿ ಕೇಳಿ ಬರುತ್ತದೆ. ಇದನ್ನು ನಾವು ಕೇಳಿದ್ದೇವೆ, ನೀವೂ ಕೇಳಿರುತ್ತೀರಿ. ಪ್ರಕೃತಿ ನಮಗೆ ದಯಪಾಲಿಸುವ ಹಣ್ಣು- ಹಂಪಲುಗಳನ್ನು ಯಥವತ್ತಾಗಿ ಸೇವಿಸಲೂ ಬಹುದು ಅಥವಾ ಪೇಯಗಳನ್ನು ತಯಾರಿಸಿಕೊಂಡೂ ಸೇವಿಸಬಹುದಾಗಿದೆ. ಎಚ್ಚರ ವಹಿಸಬೇಕಾದ್ದೇನೆಂದರೆ, ಯಾವುದೇ ಹಣ್ಣು- ಹಂಪಲುಗಳ ಮೇಲೆ ರಸಾಯನಿಕಗಳನ್ನು ಸಿಂಪಡಿಸಿದೆಯೇ ಇಲ್ಲವೇ ಎಂಬುದನ್ನು ಗಮನಿಸುವುದು ಒಳ್ಳೆಯದು. ಹಣ್ಣಾಗುವ ಅವಧಿಗೆ ಮೊದಲೇ ಗಿಡಮರಗಳಿಂದ ಕಿತ್ತು ಅವುಗಳ ಮೇಲೆ ರಸಾಯನಿಕಗಳನ್ನು ಸಿಂಪಡಿಸಿ, ಬಲಾತ್ಕಾರದಿಂದ ಹಣ್ಣಾಗುವಂತೆ ಮಾಡಿದ್ದರೆ, ಅಂತಹ ಹಣ್ಣುಗಳು ಆರೋಗ್ಯಕ್ಕೆ ಹಾನಿಕರ. ಅವು ಹಸಿಯಾಗಿದ್ದರೂ ಸರಿಯೇ, ಒಣಗಿದ್ದರೂ ಸರಿಯೇ, ರಸಾಯನಿಕಗಳ ಲೇಪನ ಅಥವಾ ಸಿಂಪಡಿಕೆ ಇರಬಾರದು. ಉದಾಹರಣೆಗೆ ಒಣದ್ರಾಕ್ಷಿಯನ್ನೇ ತೆಗೆದುಕೊಳ್ಳಿ. ಒಮ್ಮೊಮ್ಮೆ ತುಂಬಾ ಹೊಳಪು ಇರುವ ದ್ರಾಕ್ಷಿ ಸಿಗಲಿದೆ. ಆದರೆ ಹೊಳಪು ಬರಲಿಕ್ಕೆ ಕೃತಕ ರಸಾಯನಿಕಗಳನ್ನು ಬಳಸಿರುವ ಸಾಧ್ಯತೆಗಳಿರುತ್ತವೆ. ಇದೀಗ ಒಣದ್ರಾಕ್ಷಿಯಿಂದಾಗುವ ಪ್ರಯೋಜನ ಕುರಿತು ಹೇಳಬೇಕೆನಿಸಿದೆ. ಒಣದ್ರಾಕ್ಷಿಯನ್ನು ಸಿಹಿ ತಿಂಡಿಯ ರುಚಿ ಹಾಗೂ ಸೊಗಡನ್ನು ಹೆಚ್ಚಿಸುವ ಪದಾರ್ಥವೆಂದೇ ಬಹುತೇಕ ಮಂದಿ ಪರಿಗಣಿಸಿದ್ದಾರೆ. ಆದರೆ, ಅದು ನಮ್ಮ ಆರೋಗ್ಯ ಸುಧಾರಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆಂಬ

ಮಾಣಿಕ್ ಸರ್ಕಾರ್​ಗೆ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ-2017

Image
ಕೂಡಲಸಂಗಮ: ವಚನ ಚಳವಳಿಯ ರೂವಾರಿ, ಕಾಯಕಯೋಗಿ ಅಣ್ಣ ಬಸವಣ್ಣನ ಲಿಂಗೈಕ್ಯ ಸ್ಥಳ ಕೂಡಲ ಸಂಗಮದಲ್ಲಿ ದೇಶದ ಬಡ ಮುಖ್ಯಮಂತ್ರಿಯೆಂದೇ ಹೆಸರಾಗಿರುವ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರಿಗೆ ಭಾನುವಾರ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದಿಂದ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಒಂದು ಲಕ್ಷ ರೂ. ನಗದು, ಸ್ಮರಣ ಫಲಕ, ಬಸವ ಭಾವಚಿತ್ರ ಒಳಗೊಂಡ ಪ್ರಶಸ್ತಿಯನ್ನು ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಚಿವೆ ಉಮಾಶ್ರೀ ವಿತರಿಸಿದರು. ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ ಮಾಣಿಕ್ ಸರ್ಕಾರ್ ಬಸವಣ್ಣನ ಐಕ್ಯ ಮಂಟಪಕ್ಕೆ ಹೂವು ಸಮರ್ಪಿಸಿದರು. ರೈತ ಗೀತೆಗೆ ಹಸಿರು ಟವೆಲ್ ಬೀಸುವ ಮೂಲಕ ರೈತರಲ್ಲಿ ಮಿಂಚು ಹರಿಸಿದರು. ಸಾಹಿತಿ ರಂಜಾನ್ ದರ್ಗಾ ಬರೆದಿರುವ ಶರಣರ ಸಮಗ್ರ ಕ್ರಾಂತಿ ಪುಸ್ತಕ ಲೋಕಾರ್ಪಣೆಗೊಳಿಸಿದರು. ಪ್ರಶಸ್ತಿ ಸ್ವೀಕರಿಸಿದ ನಂತರ ಮಾಣಿಕ್ ಸರ್ಕಾರ್ ಮಾತನಾಡಿ, ದೇವಾಲಯ, ಮಸೀದಿ, ಚರ್ಚ್ ಗಳಲ್ಲಿ ಪ್ರಾರ್ಥನೆ ಸಲ್ಲಿಸಿದರೆ ದೇವರು ಸಿಗುವುದಿಲ್ಲ. ದೀನ, ದರಿದ್ರರ, ದುರ್ಬಲರ ಸಮಸ್ಯೆಗಳಿಗೆ ಸ್ಪಂದಿಸಿ ಕಿಂಚಿತ್ ಪರಿಹಾರಕ್ಕೆ ಪ್ರಯತ್ನ ಮಾಡುವುದರಲ್ಲಿ ದೇವರನ್ನು ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಪಂಚಮಸಾಲಿ ಮಹಾಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.

* ಸಿಯಾಚಿನ್ ಹೀರೋ ಹನುಮಂತಪ್ಪ ಕೊಪ್ಪದ್‌ಗೆ ಮರಣೋತ್ತರ ಶೌರ್ಯ ಪ್ರಶಸ್ತಿ.!!!*

Image
* ನವದೆಹಲಿ: ಸಿಯಾಚಿನ್ ಹೀರೋ, ಹುತಾತ್ಮ ಯೋಧ *ಲ್ಯಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ್*‌ ಅವರು ಮರಣೋತ್ತರ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. *ಇಂದು 'ಆರ್ಮಿ ಡೇ' ನಿಮಿತ್ತ ದೆಹಲಿಯಲ್ಲಿ ನಡೆದ ಸೇನೆಯ ಸಮಾರಂಭದಲ್ಲಿ ಭೂಸೇನೆ ಮುಖ್ಯಸ್ಥ ಬಿಪಿನ್‌ ರಾವತ್‌ ಅವರಿಂದ ಕೊಪ್ಪದ್‌ ಅವರ ಪತ್ನಿ ಮಹಾದೇವಿ ಶೌರ್ಯ ಪ್ರಶಸ್ತಿಯನ್ನು ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ 15 ವೀರ ಯೋಧರಿಗೂ ಶೌರ್ಯ ಪ್ರಶಸ್ತಿ ನೀಡಲಾಯಿತು.* ಕಳೆದ  ವರ್ಷದ ಫೆಬ್ರವರಿ 3 ರಂದು ಸಿಯಾಚಿನ್ ಗಡಿಯಲ್ಲಿ ಸಂಭವಿಸಿದ್ದ ಭೀಕರ ಹಿಮಪಾತದಲ್ಲಿ ಧಾರವಾಡ ಜಿಲ್ಲೆಯ ಹನುಮಂತಪ್ಪ ಕೊಪ್ಪದ್‌ ಅವರು ಕಣ್ಮರೆಯಾಗಿದ್ದರು. 6 ದಿನಗಳ ನಂತರ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದರಾದರೂ,  ಮಂಜುಗಡ್ಡೆಯಲ್ಲಿ 35 ಅಡಿ ಆಳದೊಳಗೆ ಹೂತು ಹೋಗಿದ್ದ ಹನುಮಂತಪ್ಪ ಅವರು ಫೆ.11ರಂದು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದರು.

*ಡಿಜಿಟಲ್ ಗ್ರಂಥ ಭಂಡಾರ*

dli.ernet.in ( digital library of  India) website ನಲ್ಲಿ ಸಿಗುವ ಕನ್ನಡ ಪಿಡಿಎಫ್ ಪುಸ್ತಕಗಳನ್ನು ಕೆಟಲಾಗ್ ಮಾಡಿ ಗೂಗಲ್ ಡ್ರೈವಿನಲ್ಲಿ save ಮಾಡಲಾಗಿದೆ. ಸಪ್ತಗಿರಿ ಮಾಸಪತ್ರಿಕೆಯ ಕೆಲವು ಫೈಲ್ಗಳನ್ನು ಬಿಟ್ಟರೆ ಬೇರೆಲ್ಲ ಲಭ್ಯವಿದೆ. ಆಸಕ್ತರು ಲಿಂಕಿನ ಮೇಲೆ ಕ್ಲಿಕ್ ಮಾಡಿ ನಂತರ ಬೇಕಾದ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದು..🙏🏼 *ಎಲ್ಲ ಸೇರಿ ಸುಮಾರು 2700 ಪುಸ್ತಕಗಳು ಲಭ್ಯ*.. ನೀವು ಇದರ ಪ್ರಯೋಜನ ಪಡೆದುಕೊಳ್ಳಿ. ಸ್ನೇಹಿತರಿಗೂ ತಲುಪಿಸಿ. ಮಾಹಿತಿ: https://drive.google.com/open?id=0B-Gs992hpdBZLUszempYaEhQdzg ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಇತ್ಯಾದಿ: https://drive.google.com/open?id=0B-Gs992hpdBZSlJBdzBtRHZndGc ಹಳಹನ್ನಡ ಲಿಪಿಯ ಗ್ರಂಥಗಳು: https://drive.google.com/open?id=0B-Gs992hpdBZSC1Da0NER1lYeDg ಪರಿಸರ ಕೃಷಿ: https://drive.google.com/open?id=0B-Gs992hpdBZZG1ZOU8xdmZDeVk ಪ್ರವಾಸ ಸಾಹಿತ್ಯ: https://drive.google.com/open?id=0B-Gs992hpdBZd21TZGFFSWhzUzA ರಾಷ್ಟೀಯ ವಿಚಾರಗಳು: https://drive.google.com/open?id=0B-Gs992hpdBZdUJHRUJxM0JnU0E ಸಾಹಿತ್ಯ ಪತ್ರಿಕೆ: https://drive.google.com/open?id=0B-Gs992hpdBZVW1uR25BNUxDWVU ಶೈಕ್ಷಣಿಕ: https://drive.google.com/open?id=0B