4000 ಪ್ರಾ. ಶಿಕ್ಷಕರ
ನೇಮಕ: ಮಾ 2 ಕೊನೆ ದಿನ
ಬೆಂಗಳೂರು, ಫೆ.5:
ರಾಜ್ಯದ ಪ್ರಾಥಮಿಕ
ಶಾಲೆಗಳಲ್ಲಿ
ಶಿಕ್ಷಕರಾಗಿ ಸೇವೆ
ಸಲ್ಲಿಸಲು ಹಾತೊರೆಯುತ್ತವರಿಗೆ
ಇಲ್ಲೊಂದು ಸಂತಸದ
ಸುದ್ದಿ. ರಾಜ್ಯ
ಸರಕಾರವು ಬರೋಬ್ಬರಿ
4,000 ಪ್ರಾಥಮಿಕ
ಶಾಲಾ ಶಿಕ್ಷಕರನ್ನು ನೇಮಿಸಿಕೊಳ್ಳಲು ಅಂಕಿತ
ಹಾಕಿದೆ. ಯಾದಗಿರಿ
ಶೈಕ್ಷಣಿಕ ಜಿಲ್ಲೆಯಲ್ಲಿ
ಅತಿ ಹೆಚ್ಚು 450
ಮತ್ತು ಧಾರವಾಡ
ಜಿಲ್ಲೆಯಲ್ಲಿ ಅತಿ ಕಡಿಮೆ
ಅಂದರೆ 15 ಶಿಕ್ಷಕರ
ನೇಮಕಾತಿ ನಡೆಯಲಿದೆ.
ಹೀಗೆ ನೂತನವಾಗಿ
ನೇಮಕಗೊಂಡ
ಶಿಕ್ಷಕರು 2013
-14ನೇ ಶೈಕ್ಷಣಿಕ
ವರ್ಷದಿಂದ ಸೇವೆಗೆ
ಸಿದ್ಧರಾಗಬೇಕಾಗುತ­
ತದೆ್. ರಾಜ್ಯದಲ್ಲಿ
ಪ್ರಾಥಮಿಕ ಶಿಕ್ಷಕರ
ಕೊರತೆಯಿರುವುದು 12,000
ಮಂದಿ. ಆದರೆ 4,000
ಮಂದಿಯನ್ನಷ್ಟೇ ನೇಮಕ
ಮಾಡಿಕೊಳ್ಳಲು ಶಕ್ತ್ಯವಾಗಿದೆ
ಎಂದು ಹಣಕಾಸು ಇಲಾಖೆ
ಸ್ಪಷ್ಟಪಡಿಸಿದೆ.
ಮುಖ್ಯಾಂಶಗಳು:
* ಜಿಲ್ಲಾ ಮಟ್ಟದಲ್ಲಿ
ಸಂಯುಕ್ತ
ಸ್ಪರ್ಧಾತ್ಮಕ ಪರೀಕ್ಷೆ
ಮೂಲಕ ನೇರ
ನೇಮಕಾತಿ.
* ರಾಜ್ಯದ ಎಲ್ಲ 30
ಜಿಲ್ಲೆಗಳಲ್ಲೂ ನೇಮಕಾತಿ
ನಡೆಯಲಿದೆ.
* ಅಂತರ್ಜಾಲದ
ಮೂಲಕವೇ ಅರ್ಜಿ
ಸಲ್ಲಿಸಬೇಕು.
* ಗಮನಿಸಿ,
ಖುದ್ದು ಅಥವಾ ಅಂಚೆ
ಮೂಲಕ ಅರ್ಜಿ ಸಲ್ಲಿಕೆಗೆ
ಅವಕಾಶವಿಲ್ಲ.
* ಇಲಾಖೆಯ ವೆಬ್ ಸೈಟ್
www.schooleducation.kar.nic.in
* ಅರ್ಜಿ ಸಲ್ಲಿಕೆ
ಪ್ರಕ್ರಿಯೆ ಫೆ. 4ರಿಂದ
ಆರಂಭ. ಮಾ. 2 ಅರ್ಜಿ
ಸಲ್ಲಿಕೆಗೆ ಕೊನೆ ದಿನ.
* ಮಾರ್ಚ್
24ರಂದು ಆಯಾ ಜಿಲ್ಲಾ ಕೇಂದ್ರಗಳಲ್ಲಿ
ಪರೀಕ್ಷೆ ನಡೆಯಲಿದೆ.
ಜಿಲ್ಲಾವಾರು ನೇಮಕಗೊಳ್ಳುವ
ಶಿಕ್ಷಕರ ಸಂಖ್ಯೆ:
ರಾಮನಗರ - 160
ಮಧುಗಿರಿ - 90
ಬೆಳಗಾವಿ - 110
ಬಾಗಲಕೋಟೆ - 120
ಬಿಜಾಪುರ - 130
ಗುಲ್ಬರ್ಗಾ - 230
ಬೀದರ್ - 200
ರಾಯಚೂರು - 300
ಕೊಪ್ಪಳ - 225
ಧಾರವಾಡ - 15
ಕಾರವಾರ - 30
ಶಿರಸಿ - 210
ಬಳ್ಳಾರಿ - 270
ಶಿವಮೊಗ್ಗ - 150
ಕೊಡಗು - 20
ಚಿಕ್ಕೋಡಿ - 400
ಯಾದಗಿರಿ - 450
ಗದಗ, ದಾವಣಗೆರೆ
ತಲಾ - 40
ಹಾಸನ,
ಚಿಕ್ಕಮಗಳೂರು,
ಮೈಸೂರು ತಲಾ - 70
ತುಮಕೂರು, ಕೋಲಾರ,
ಮಂಡ್ಯ, ಹಾವೇರಿ,
ಚಿತ್ರದುರ್ಗ ತಲಾ - 60
ದಕ್ಷಿಣ ಕನ್ನಡ,
ಚಿಕ್ಕಬಳ್ಳಾಪುರ,
ಚಾಮರಾಜನಗರ ತಲಾ -
100

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

INCOME TAX CALCULATION 2022-23 IN A CLICK